Sidharth Malhotra Birthday: ಸಿದ್ದಾರ್ಥ್ ಮಲ್ಹೋತ್ರಾ ಹುಟ್ಟುಹಬ್ಬ; ಅವರ ನಟನೆಯ ಈ ಸಿನಿಮಾಗಳನ್ನು ಮಿಸ್ ಮಾಡಿಕೊಳ್ಳಲೇಬಾರದು
ಈ ವಾರ ಅವರ ನಟನೆಯ ‘ಮಿಷನ್ ಮಜ್ನು’ ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ, ಹುಟ್ಟುಹಬ್ಬ ಮತ್ತಷ್ಟು ವಿಶೇಷ ಎನಿಸಿಕೊಂಡಿದೆ.
ಸಿದ್ದಾರ್ಥ್ ಮಲ್ಹೋತ್ರಾ (Sidharth Malhotra) ಅವರು ಇಂದು (ಜನವರಿ 16) 38ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಬರ್ತ್ಡೇ ಶುಭಾಶಯ ಬರುತ್ತಿದೆ. ಈ ವಾರ ಅವರ ನಟನೆಯ ‘ಮಿಷನ್ ಮಜ್ನು’ ಸಿನಿಮಾ (Mission Majnu) ರಿಲೀಸ್ ಆಗುತ್ತಿದೆ. ಹೀಗಾಗಿ, ಹುಟ್ಟುಹಬ್ಬ ಮತ್ತಷ್ಟು ವಿಶೇಷ ಎನಿಸಿಕೊಂಡಿದೆ. ಸಿದ್ದಾರ್ಥ್ ನಟನೆ ಆರಂಭಿಸಿದ್ದು 2012ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಅನೇಕ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ
ಸ್ಟುಡೆಂಟ್ ಆಫ್ ದಿ ಇಯರ್ (2012)
ಆಲಿಯಾ ಭಟ್, ಸಿದ್ದಾರ್ಥ್ ಮಲ್ಹೋತ್ರಾ, ವರುಣ್ ಧವನ್ ಮೊದಲಾದವರು ನಟಿಸಿದ ‘ಸ್ಟುಡೆಂಟ್ ಆಫ್ ದಿ ಇಯರ್’ ಸಿನಿಮಾ ಸೂಪಟ್ ಹಿಟ್ ಆಯಿತು. ಈ ಚಿತ್ರದ ಮೂಲಕ ಸಿದ್ದಾರ್ಥ್ಗೆ ಭದ್ರಬುನಾದಿ ಸಿಕ್ಕಿತು. ಕರಣ್ ಜೋಹರ್ ಅವರು ಸಿದ್ದಾರ್ಥ್ಗೆ ಗಾಡ್ ಫಾದರ್ ಆದರು. ತಮ್ಮ ನಟನೆ ಮೂಲಕ ಚಿತ್ರರಂಗದಲ್ಲಿ ಅವರು ಹೆಸರು ಮಾಡಿದ್ದಾರೆ.
Happy to present the CDP for #SidharthMalhotra’s Birthday. | @SidMalhotra
All eyes on #MissionMajnu 🙂
Designed by @sidmalhotafans | @SidharthFC_#HappyBirthdaySidharthMalhotra pic.twitter.com/luwQufM8oR
— Nishit Shaw (@NishitShawHere) January 15, 2023
‘ಹಸೀ ತೋ ಫಸೀ’ (2014)
ಪರಿಣಿತಿ ಚೋಪ್ರಾ-ಸಿದ್ದಾರ್ಥ್ ಮಲ್ಹೋತ್ರ ನಟನೆಯ ‘ಹಸೀ ತೋ ಫಸೀ’ ಚಿತ್ರವನ್ನು ಒಂದು ವರ್ಗದ ಜನರು ಇಷ್ಟಪಟ್ಟರು. 20 ಕೋಟಿ ರೂ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 63 ಕೋಟಿ ರೂಪಾಯಿ ಬಾಚಿಕೊಂಡಿತ್ತು.
ಏಕ್ ವಿಲನ್ (2014)
ಏಕ್ ವಿಲನ್ ಚಿತ್ರ ಸಿದ್ದಾರ್ಥ್ ಅವರ ವೃತ್ತಿಜೀವನವನ್ನೇ ಬದಲಿಸಿತು. ಈ ಸಿನಿಮಾದಲ್ಲಿ ಅವರ ಪಾತ್ರ ಗಮನ ಸೆಳೆಯಿತು. ರಿತೇಷ್ ದೇಶ್ಮುಖ್ ವಿಲನ್ ಆಗಿ ಗಮನ ಸೆಳೆದರು. ಈ ಚಿತ್ರದಲ್ಲಿ ಸಿದ್ದಾರ್ಥ್ ತಾವೋರ್ವ ಅತ್ಯುತ್ತಮ ನಟ ಎಂಬುದನ್ನು ಸಾಬೀತು ಮಾಡಿದರು.
ಶೇರ್ಷಾ (2021)
ಕಿಯಾರಾ ಅಡ್ವಾಣಿ ಜತೆಗಿನ ‘ಶೇರ್ಷಾ’ ಸಿನಿಮಾ ಸೂಪರ್ ಹಿಟ್ ಆಯಿತು. ನೇರವಾಗಿ ಒಟಿಟಿಯಲ್ಲಿ ಈ ಚಿತ್ರ ರಿಲೀಸ್ ಆದ ಹೊರತಾಗಿಯೂ ಈ ಸಿನಿಮಾಗೆ ಭರಪೂರ ಮೆಚ್ಚುಗೆ ಸಿಕ್ಕಿತು. ಜನರು ಚಿತ್ರವನ್ನು ಇಷ್ಟಪಟ್ಟರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ