Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾಕೆ ನೀನಿನ್ನೂ ಮದುವೆ ಆಗಿಲ್ಲ…ವಿಡಿಯೋ ಮೂಲಕ ಉತ್ತರ ಕೊಟ್ಟ ನಟಿ ರಮ್ಯಾ

Sandalwood ActressRamya: ಸ್ಯಾಂಡಲ್​ವುಡ್​ನಲ್ಲಿ ಕ್ವೀನ್​ ಆಗಿ ಮೆರೆದಿದ್ದ ನಟಿ ರಮ್ಯಾ ಮತ್ತೆ ಕಂಬ್ಯಾಕ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದನ್ನು ಪುಷ್ಠೀಕರಿಸುವಂತೆ ಇತ್ತೀಚಿನ ದಿನಗಳಲ್ಲಿ ಅವರು ಚಿತ್ರರಂಗದ ಪ್ರಮುಖರೊಂದಿಗೆ ಕಾಣಿಸಿಕೊಂಡಿದ್ದರು.

ಯಾಕೆ ನೀನಿನ್ನೂ ಮದುವೆ ಆಗಿಲ್ಲ...ವಿಡಿಯೋ ಮೂಲಕ ಉತ್ತರ ಕೊಟ್ಟ ನಟಿ ರಮ್ಯಾ
Actress Ramya
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 20, 2022 | 10:29 AM

ಸ್ಯಾಂಡಲ್​ವುಡ್ ಕ್ವೀನ್ ನಟಿ ರಮ್ಯಾ (Actress Ramya) ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಆಕ್ಟೀವ್ ಆಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಸಂಗಾತಿ ಕುರಿತಾದ ಹಾಡೊಂದನ್ನು ಇನ್​ಸ್ಟಾಗ್ರಾಮ್ ರೀಲ್ಸ್​ನಲ್ಲಿ ಹಂಚಿಕೊಂಡಿದ್ದ ಮೋಹಕತಾರೆ ಇದೀಗ ಅದೇ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಆದರೆ ಈ ಹಾಡು ಮುರಿದು ಬಿದ್ದ ಪ್ರೇಮಕಹಾನಿಗೆ ಹೇಳಿ ಮಾಡಿಸಿದ ಹಾಡು ಎಂಬುದು ವಿಶೇಷ. ಇದೀಗ ಹಳೆಯ ಸಂಗಾತಿಯನ್ನು ನೆನಪಿಸಿಕೊಳ್ಳುವಂತಹ ಹಾಡಿನ ರೀಲ್ಸ್​ನಲ್ಲಿ ರಮ್ಯಾ ಮತ್ತೆ ಕಾಣಿಸಿಕೊಂಡಿದ್ದಾರೆ. ಯಾಕೆ ನೀನಿನ್ನೂ ಮದುವೆಯಾಗಿಲ್ಲ… ಎಂಬ ಪ್ರಶ್ನಾರ್ಥಕ ಸಾಹಿತ್ಯ ಹೊಂದಿರುವ ಈ ಇಂಗ್ಲಿಷ್​ ಹಾಡು, ನನ್ನ ಸಂಗಾತಿ ಸತ್ತಿರಬಹುದು…ಇಲ್ಲ ನನಗೆ ಸಂಗಾತಿನೇ ಹುಟ್ಟಿಲ್ಲ ಎಂಬ ಸಾಹಿತ್ಯದೊಂದಿಗೆ ಮುಂದುವರೆಯುತ್ತದೆ. ಇದೇ ಹಾಡಿನ ರೀಲ್ಸ್​ನಲ್ಲಿ ಸ್ಯಾಂಡಲ್​ವುಡ್​ನ ಚೆಂದುಳ್ಳಿ ಚೆಲುವೆ ಕಾಣಿಸಿಕೊಂಡಿರುವುದು ವಿಶೇಷ.

ಯುವ ಗಾಯಕ ಐನಾಟ್​ಶೇನ್ ಹಾಡಿರುವ ಈ ಹಾಡು ಭಗ್ನ ಪ್ರೇಮಿಗಳಿಗೆ ಮಾಡಿಸಿದಂತಹ ಸಾಹಿತ್ಯವನ್ನು ಹೊಂದಿದೆ. ಇದೇ ಹಾಡಿಗೆ ಇದೀಗ ರಮ್ಯಾ ರೀಲ್ಸ್ ಮಾಡುವ ಮೂಲಕ ಮದುವೆ ಯಾವಾಗ ಎಂದು ಕೇಳುವವರಿಗೆ ಉತ್ತರ ನೀಡಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ತೆರೆಮೇಲೆ ಕಾಣಿಸಿಕೊಳ್ಳದ ಸ್ಯಾಂಡಲ್​ವುಡ್​ನ ಚೆಂದುಳ್ಳಿ ಚೆಲುವೆ ಇದೀಗ ರೀಲ್ಸ್​ ಮೂಲಕ ಭಾವನೆಗಳೊಂದಿಗೆ ಹಾವಭಾವ ತೋರಿಸಿ ಗಮನ ಸೆಳೆದಿದ್ದಾರೆ. ಈ ಇನ್​ಸ್ಟಾ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಭಿಮಾನಿಗಳು ರಮ್ಯಾ ಎಕ್ಸ್​ಪ್ರೆಷನ್​ಗೆ ಭಾರೀ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

2016 ರಲ್ಲಿ ಕೊನೆಯ ಬಾರಿ ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡ ರಮ್ಯಾ ಆ ಬಳಿಕ ಬಣ್ಣದಲೋಕದಿಂದ ದೂರವೇ ಉಳಿದಿದ್ದರು. ಇದರ ನಡುವೆ ಒಂದಷ್ಟು ರಾಜಕೀಯ ಮತ್ತು ಮತ್ತೊಂದಷ್ಟು ವೈಯುಕ್ತಿಕ ವಿಚಾರಗಳಿಂದ ಸುದ್ದಿಯಾಗಿದ್ದರು. ಈ ವೇಳೆ ಕೇಳಿ ಬಂದ ಪ್ರಮುಖ ಹೆಸರೆಂದರೆ ರಾಫೆಲ್. ಪೋರ್ಚುಗಲ್ ಉದ್ಯಮಿ ರಾಫೆಲ್ ಜೊತೆ ಸ್ಯಾಂಡಲ್​ವುಡ್ ಮೋಹಕ ತಾರೆ ಹಸೆಮಣೆ ಏರಲಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಕೂಡ ಹರಿದಾಡಿತ್ತು. ಆದರೆ ಆಮೇಲೆ ಏನಾಯ್ತೊ..ಇದಕ್ಕಿದ್ದಂತೆ ರಮ್ಯಾ ಒಂಟಿಯಾಗಿ ಕಾಣಿಸಿಕೊಂಡರು.

ಇದೀಗ ಇಂಗ್ಲಿಷ್​ನ ಸೂಪರ್ ಹಿಟ್ ಗೀತೆ Maybe My Soulmate Died ಬ್ರೇಕ್ ಅಪ್ ಹಾಡಿನಲ್ಲಿ ರಮ್ಯಾ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಭಗ್ನಪ್ರೇಮಿಗಳು ಮತ್ತು ಮದುವೆ ವಿಚಾರದಲ್ಲಿ ನಿರಾಸಕ್ತಿ ಹೊಂದಿರುವವರು ಕಾಣಿಸಿಕೊಳ್ಳುವ ಈ ಗೀತೆಯನ್ನೇ  ರಮ್ಯಾ ರೀಲ್ಸ್ ಮಾಡಿ, ವಿವಾಹ ಯಾವಾಗ ಎಂದು ಪ್ರಶ್ನಿಸುವವರಿಗೆ ಮದುವೆಯಾಗಲ್ಲ ಎಂಬ ಸಂದೇಶ ರವಾನಿಸಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ರಮ್ಯಾ ರಿಎಂಟ್ರಿ..?

ಸ್ಯಾಂಡಲ್​ವುಡ್​ನಲ್ಲಿ ಕ್ವೀನ್​ ಆಗಿ ಮೆರೆದಿದ್ದ ನಟಿ ರಮ್ಯಾ ಮತ್ತೆ ಕಂಬ್ಯಾಕ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದನ್ನು ಪುಷ್ಠೀಕರಿಸುವಂತೆ ಇತ್ತೀಚಿನ ದಿನಗಳಲ್ಲಿ ಅವರು ಚಿತ್ರರಂಗದ ಪ್ರಮುಖರೊಂದಿಗೆ ಕಾಣಿಸಿಕೊಂಡಿದ್ದರು. ಅದರಲ್ಲೂ ತಿಂಗಳ ಹಿಂದೆಯಷ್ಟೇ ಅವರು ಡಾಲಿ ಧನಂಜಯ್ ನಟನೆಯ ಹೊಯ್ಸಲ ಚಿತ್ರ ಸೆಟ್​ಗೆ ಭೇಟಿ ನೀಡಿದ್ದರು. ಹೀಗಾಗಿಯೇ ಹೊಯ್ಸಳ ಚಿತ್ರದ ವಿಶೇಷ ಪಾತ್ರವೊಂದರ ಮೂಲಕ ಸ್ಯಾಂಡಲ್​ವುಡ್ ಕ್ವೀನ್ ಮತ್ತೆ ಬಣ್ಣ ಹಚ್ಚಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಇದಾಗ್ಯೂ ಹೊಯ್ಸಳ ಚಿತ್ರತಂಡವಾಗಲಿ, ರಮ್ಯಾ ಆಗಲಿ ಈ ಬಗ್ಗೆ ಯಾವುದೇ ಗುಟ್ಟು ಬಿಟ್ಟು ಕೊಟ್ಟಿಲ್ಲ. ಅದಾಗ್ಯೂ ರಮ್ಯಾ ಅವರ ರಿಎಂಟ್ರಿಯನ್ನು ಸ್ವಾಗತಿಸಲು ಅಭಿಮಾನಿಗಳಂತು ತುದಿಗಾಲಲ್ಲಿ ನಿಂತಿದ್ದಾರೆ.

ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ