- Kannada News Photo gallery Rakhi Sawant reportedly converted to Islam and changed her name as Fatima
Rakhi Sawant: ಫಾತಿಮಾ ಅಂತ ಹೆಸರು ಬದಲಿಸಿಕೊಂಡ ರಾಖಿ ಸಾವಂತ್; ಆದಿಲ್ ಜತೆಗಿನ ಶಾದಿ ರಹಸ್ಯ ಬಹಿರಂಗ
Rakhi Sawant Marriage Photo: ರಾಖಿ ಸಾವಂತ್ ಅವರು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎನ್ನಲಾಗುತ್ತಿದೆ. ಅದಕ್ಕೆ ಸಾಕ್ಷಿ ಒದಗಿಸುವಂತಹ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ.
Updated on: Jan 12, 2023 | 9:05 PM

ನಟಿ ರಾಖಿ ಸಾವಂತ್ ಅವರು ವೈಯಕ್ತಿಕ ಜೀವನದ ಕಾರಣದಿಂದ ಆಗಾಗ ಸುದ್ದಿ ಆಗುತ್ತಾರೆ. ಈಗ ಅವರ ಸೀಕ್ರೆಟ್ ಮದುವೆಯ ವಿಚಾರ ಬಹಿರಂಗ ಆಗಿದೆ. ಇದರಿಂದ ವಿವಾದ ಕೂಡ ಸೃಷ್ಟಿ ಆಗಿದೆ.

ಪ್ರಿಯಕರ ಆದಿಲ್ ಖಾನ್ ಅವರ ಜೊತೆ 2022ರಲ್ಲಿ ತಮ್ಮ ಮದುವೆ ನೆರವೇರಿತ್ತು ಎಂದು ರಾಖಿ ಸಾವಂತ್ ಹೇಳಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಕೆಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

ರಾಖಿ ಸಾವಂತ್ ಮತ್ತು ಆದಿಲ್ ಖಾನ್ ಅವರ ಮದುವೆ ನೋಂದಣಿ ಪತ್ರ ವೈರಲ್ ಆಗಿದೆ. ಅದರಲ್ಲಿ ‘ರಾಖಿ ಸಾವಂತ್ ಫಾತಿಮಾ’ ಎಂದು ರಾಖಿ ಸಹಿ ಮಾಡಿರುವುದು ಎಲ್ಲರ ಕಣ್ಣು ಕುಕ್ಕುತ್ತಿದೆ.

ಮದುವೆ ನೋಂದಣಿ ಪತ್ರದಲ್ಲಿ ಹೆಸರು ಬದಲಾಗಿರುವುದರಿಂದ ರಾಖಿ ಸಾವಂತ್ ಅವರು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತಮಗೆ ಏನೂ ತಿಳಿದಿಲ್ಲ ಎಂದು ರಾಖಿ ಅವರ ಸಹೋದರ ರಾಕೇಶ್ ಹೇಳಿದ್ದಾರೆ.

‘ಕೊನೆಗೂ ನಾನು ತುಂಬ ಖುಷಿ ಆಗಿದ್ದೇನೆ. ಸಖತ್ ಎಗ್ಸೈಟ್ ಆಗಿದ್ದೇನೆ. ಪ್ರಿಯಕರನ ಜೊತೆ ಮದುವೆ ನೆರವೇರಿದೆ. ಈ ಪ್ರೀತಿ ಯಾವಾಗಲೂ ಅಪರಿಮಿತವಾದದ್ದು. ಲವ್ ಯೂ ಆದಿಲ್’ ಎಂದು ರಾಖಿ ಸಾವಂತ್ ಪೋಸ್ಟ್ ಮಾಡಿದ್ದಾರೆ.



















