IPL 2023: ಈ ಬಾರಿ ಐಪಿಎಲ್ ಉಚಿತ ಪ್ರಸಾರ: ವರದಿ

IPL 2023 Kannada: ಈ ಬಾರಿಯ ಐಪಿಎಲ್ ಡಿಜಿಟಲ್ ಲೈವ್ ಸ್ಟ್ರೀಮ್ ಹಕ್ಕನ್ನು ಜಿಯೋ ಕಂಪೆನಿ ಹೊಂದಿದೆ. ಇದೇ ಮೊದಲ ಬಾರಿಗೆ ಐಪಿಎಲ್ ಪ್ರಸಾರ ಮಾಡಲಿರುವ ಜಿಯೋ ಇಡೀ ಸೀಸನ್​ ಅನ್ನು ಉಚಿತವಾಗಿ ಲೈವ್ ಸ್ಟ್ರೀಮ್ ಮಾಡಲು ಯೋಚಿಸುತ್ತಿದೆ.

| Updated By: ಝಾಹಿರ್ ಯೂಸುಫ್

Updated on: Jan 12, 2023 | 9:23 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್ ಅಂತ್ಯದಲ್ಲಿ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಐಪಿಎಲ್ ಶುರುವಾಗುವುದು ಖಚಿತ. ಆದರೆ ಅದಕ್ಕೂ ಮುನ್ನವೇ ಐಪಿಎಲ್ ಟೆಲಿಕಾಸ್ಟ್​ಗಾಗಿ ರಿಲಯನ್ಸ್​ ಜಿಯೋ ಭರ್ಜರಿ ಪ್ಲ್ಯಾನ್ ರೂಪಿಸುತ್ತಿದೆ.

1 / 6
ಈ ಬಾರಿಯ ಐಪಿಎಲ್ ಡಿಜಿಟಲ್ ಲೈವ್ ಸ್ಟ್ರೀಮ್ ಹಕ್ಕನ್ನು ಜಿಯೋ ಕಂಪೆನಿ ಹೊಂದಿದೆ. ಇದೇ ಮೊದಲ ಬಾರಿಗೆ ಐಪಿಎಲ್ ಪ್ರಸಾರ ಮಾಡಲಿರುವ ಜಿಯೋ ಇಡೀ ಸೀಸನ್​ ಅನ್ನು ಉಚಿತವಾಗಿ ಲೈವ್ ಸ್ಟ್ರೀಮ್ ಮಾಡಲು ಯೋಚಿಸುತ್ತಿದೆ ಎಂದು ವರದಿಯಾಗಿದೆ.

2 / 6
ವರದಿಗಳ ಪ್ರಕಾರ, ಫಿಫಾ ವಿಶ್ವಕಪ್‌ನ ಮೆಗಾ ಯಶಸ್ಸಿನ ನಂತರ , ರಿಲಯನ್ಸ್ ಈಗ IPL 2023 ಗಾಗಿ ಇದೇ ರೀತಿಯ ತಂತ್ರವನ್ನು ಮುಂದುವರೆಸಲು ಪ್ಲ್ಯಾನ್ ರೂಪಿಸಿದೆ. ಅದರಂತೆ ಐಪಿಎಲ್ ಸೀಸನ್ 16 ಅನ್ನು ಜಿಯೋ ಆ್ಯಪ್​ನಲ್ಲಿ ಉಚಿತವಾಗಿ ಪ್ರಸಾರವಾಗುವ ಸಾಧ್ಯತೆ ಹೆಚ್ಚಿದೆ.

3 / 6
ಇತ್ತೀಚಿನ ವರದಿಯ ಪ್ರಕಾರ, IPL 2023 ರ ಡಿಜಿಟಲ್ ಹಕ್ಕುದಾರರಾದ Viacom18, IPL ಸೀಸನ್​ ಅನ್ನು ಉಚಿತವಾಗಿ ಪ್ರಸಾರ ಮಾಡುವ ಬಗ್ಗೆ ಚರ್ಚಿಸಿದೆ. ರಿಲಯನ್ಸ್ ಕಂಪೆನಿಯು ಜಿಯೋ ಸಿನೆಮಾ/ಸ್ಪೋರ್ಟ್ಸ್​ ಆ್ಯಪ್​ ಮೂಲಕ ಲೈವ್ ಸ್ಪೋರ್ಟ್ಸ್ ಸ್ಟ್ರೀಮಿಂಗ್ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ಮುಂದಾಗಿದೆ. ಹೀಗಾಗಿ ಈ ಬಾರಿ ಐಪಿಎಲ್ ಅನ್ನು ಉಚಿತವಾಗಿ ಪ್ರಸಾರ ಮಾಡಲು ಯೋಜನೆ ರೂಪಿಸಿದೆ ಎಂದು ವರದಿಯಾಗಿದೆ.

4 / 6
ರಿಲಯನ್ಸ್ ಜಿಯೋ ಐಪಿಎಲ್​ 2023-2027 ನಡುವಣ ಡಿಜಿಟಲ್ ಮಾಧ್ಯಮ ಹಕ್ಕುಗಳನ್ನು 23,758 ಕೋಟಿ ರೂ.ಗೆ ಖರೀದಿಸಿದೆ. ಅಂದರೆ ಪ್ರತಿ ಪಂದ್ಯಕ್ಕೆ 50 ಕೋಟಿ ರೂ. ನೀಡಿದೆ. ಇದಾಗ್ಯೂ ಉಚಿತವಾಗಿ ಪ್ರಸಾರ ಮಾಡಲಿದೆಯಾ ಎಂಬ ಪ್ರಶ್ನೆಗೆ ಸಿಗುವ ಉತ್ತರ ಫಿಫಾ ವಿಶ್ವಕಪ್​ನ ಉಚಿತ ನೇರ ಪ್ರಸಾರ.

5 / 6
ಕಳೆದ ವರ್ಷ ನಡೆದ ಫಿಫಾ ವಿಶ್ವಕಪ್ ಫುಟ್​ಬಾಲ್ ಪಂದ್ಯಗಳನ್ನು ಜಿಯೋ ಆ್ಯಪ್​ನಲ್ಲಿ ಉಚಿತವಾಗಿ ಪ್ರಸಾರ ಮಾಡಲಾಗಿತ್ತು. ಈ ಮೂಲಕ ಜಿಯೋ 300 ಕೋಟಿಗೂ ಹೆಚ್ಚು ಜಾಹೀರಾತು ಆದಾಯವನ್ನು ಗಳಿಸಿದೆ. ಹೀಗಾಗಿ ಐಪಿಎಲ್ ಅನ್ನು ಕೂಡ ಉಚಿತವಾಗಿ ಪ್ರದರ್ಶಿಸಿ ವೀಕ್ಷಕರನ್ನು ಸೆಳೆಯಲು ಮಾಸ್ಟರ್​​ ಪ್ಲ್ಯಾನ್ ರೂಪಿಸಿದೆ. ಏಕೆಂದರೆ ಐಪಿಎಲ್ ಟಿವಿ ರೈಟ್ಸ್​ ಡಿಸ್ನಿ ಹಾಟ್​ಸ್ಟಾರ್​ (ಸ್ಟಾರ್​ ಸ್ಪೋರ್ಟ್ಸ್​) ಬಳಿಯಿದ್ದು, ಇತ್ತ ಡಿಜಿಟಲ್ ಫ್ರೀ ಲೈವ್ ಸ್ಟ್ರೀಮಿಂಗ್​ ಮೂಲಕ ಸ್ಟಾರ್ ಸ್ಪೋರ್ಟ್ಸ್​ಗೆ ಪೈಪೋಟಿ ನೀಡಲು ರಿಲಯನ್ಸ್ ಕಂಪೆನಿ ಯೋಜನೆ ರೂಪಿಸಿದೆ. ಅದರಂತೆ ಈ ಸಲ ಜಿಯೋ ಆ್ಯಪ್​ನಲ್ಲಿ ಐಪಿಎಲ್​ ಉಚಿತವಾಗಿ ಪ್ರಸಾರವಾಗುವುದು ಖಚಿತ ಎನ್ನಲಾಗಿದೆ.

6 / 6
Follow us