- Kannada News Photo gallery Cricket photos IPL 2023 Kannada Jio may live stream IPL 2023 for free kannada News zp
IPL 2023: ಈ ಬಾರಿ ಐಪಿಎಲ್ ಉಚಿತ ಪ್ರಸಾರ: ವರದಿ
IPL 2023 Kannada: ಈ ಬಾರಿಯ ಐಪಿಎಲ್ ಡಿಜಿಟಲ್ ಲೈವ್ ಸ್ಟ್ರೀಮ್ ಹಕ್ಕನ್ನು ಜಿಯೋ ಕಂಪೆನಿ ಹೊಂದಿದೆ. ಇದೇ ಮೊದಲ ಬಾರಿಗೆ ಐಪಿಎಲ್ ಪ್ರಸಾರ ಮಾಡಲಿರುವ ಜಿಯೋ ಇಡೀ ಸೀಸನ್ ಅನ್ನು ಉಚಿತವಾಗಿ ಲೈವ್ ಸ್ಟ್ರೀಮ್ ಮಾಡಲು ಯೋಚಿಸುತ್ತಿದೆ.
Updated on: Jan 12, 2023 | 9:23 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್ ಅಂತ್ಯದಲ್ಲಿ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಐಪಿಎಲ್ ಶುರುವಾಗುವುದು ಖಚಿತ. ಆದರೆ ಅದಕ್ಕೂ ಮುನ್ನವೇ ಐಪಿಎಲ್ ಟೆಲಿಕಾಸ್ಟ್ಗಾಗಿ ರಿಲಯನ್ಸ್ ಜಿಯೋ ಭರ್ಜರಿ ಪ್ಲ್ಯಾನ್ ರೂಪಿಸುತ್ತಿದೆ.

ಈ ಬಾರಿಯ ಐಪಿಎಲ್ ಡಿಜಿಟಲ್ ಲೈವ್ ಸ್ಟ್ರೀಮ್ ಹಕ್ಕನ್ನು ಜಿಯೋ ಕಂಪೆನಿ ಹೊಂದಿದೆ. ಇದೇ ಮೊದಲ ಬಾರಿಗೆ ಐಪಿಎಲ್ ಪ್ರಸಾರ ಮಾಡಲಿರುವ ಜಿಯೋ ಇಡೀ ಸೀಸನ್ ಅನ್ನು ಉಚಿತವಾಗಿ ಲೈವ್ ಸ್ಟ್ರೀಮ್ ಮಾಡಲು ಯೋಚಿಸುತ್ತಿದೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಫಿಫಾ ವಿಶ್ವಕಪ್‌ನ ಮೆಗಾ ಯಶಸ್ಸಿನ ನಂತರ , ರಿಲಯನ್ಸ್ ಈಗ IPL 2023 ಗಾಗಿ ಇದೇ ರೀತಿಯ ತಂತ್ರವನ್ನು ಮುಂದುವರೆಸಲು ಪ್ಲ್ಯಾನ್ ರೂಪಿಸಿದೆ. ಅದರಂತೆ ಐಪಿಎಲ್ ಸೀಸನ್ 16 ಅನ್ನು ಜಿಯೋ ಆ್ಯಪ್ನಲ್ಲಿ ಉಚಿತವಾಗಿ ಪ್ರಸಾರವಾಗುವ ಸಾಧ್ಯತೆ ಹೆಚ್ಚಿದೆ.

ಇತ್ತೀಚಿನ ವರದಿಯ ಪ್ರಕಾರ, IPL 2023 ರ ಡಿಜಿಟಲ್ ಹಕ್ಕುದಾರರಾದ Viacom18, IPL ಸೀಸನ್ ಅನ್ನು ಉಚಿತವಾಗಿ ಪ್ರಸಾರ ಮಾಡುವ ಬಗ್ಗೆ ಚರ್ಚಿಸಿದೆ. ರಿಲಯನ್ಸ್ ಕಂಪೆನಿಯು ಜಿಯೋ ಸಿನೆಮಾ/ಸ್ಪೋರ್ಟ್ಸ್ ಆ್ಯಪ್ ಮೂಲಕ ಲೈವ್ ಸ್ಪೋರ್ಟ್ಸ್ ಸ್ಟ್ರೀಮಿಂಗ್ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ಮುಂದಾಗಿದೆ. ಹೀಗಾಗಿ ಈ ಬಾರಿ ಐಪಿಎಲ್ ಅನ್ನು ಉಚಿತವಾಗಿ ಪ್ರಸಾರ ಮಾಡಲು ಯೋಜನೆ ರೂಪಿಸಿದೆ ಎಂದು ವರದಿಯಾಗಿದೆ.

ರಿಲಯನ್ಸ್ ಜಿಯೋ ಐಪಿಎಲ್ 2023-2027 ನಡುವಣ ಡಿಜಿಟಲ್ ಮಾಧ್ಯಮ ಹಕ್ಕುಗಳನ್ನು 23,758 ಕೋಟಿ ರೂ.ಗೆ ಖರೀದಿಸಿದೆ. ಅಂದರೆ ಪ್ರತಿ ಪಂದ್ಯಕ್ಕೆ 50 ಕೋಟಿ ರೂ. ನೀಡಿದೆ. ಇದಾಗ್ಯೂ ಉಚಿತವಾಗಿ ಪ್ರಸಾರ ಮಾಡಲಿದೆಯಾ ಎಂಬ ಪ್ರಶ್ನೆಗೆ ಸಿಗುವ ಉತ್ತರ ಫಿಫಾ ವಿಶ್ವಕಪ್‌ನ ಉಚಿತ ನೇರ ಪ್ರಸಾರ.

ಕಳೆದ ವರ್ಷ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಗಳನ್ನು ಜಿಯೋ ಆ್ಯಪ್ನಲ್ಲಿ ಉಚಿತವಾಗಿ ಪ್ರಸಾರ ಮಾಡಲಾಗಿತ್ತು. ಈ ಮೂಲಕ ಜಿಯೋ 300 ಕೋಟಿಗೂ ಹೆಚ್ಚು ಜಾಹೀರಾತು ಆದಾಯವನ್ನು ಗಳಿಸಿದೆ. ಹೀಗಾಗಿ ಐಪಿಎಲ್ ಅನ್ನು ಕೂಡ ಉಚಿತವಾಗಿ ಪ್ರದರ್ಶಿಸಿ ವೀಕ್ಷಕರನ್ನು ಸೆಳೆಯಲು ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಏಕೆಂದರೆ ಐಪಿಎಲ್ ಟಿವಿ ರೈಟ್ಸ್ ಡಿಸ್ನಿ ಹಾಟ್ಸ್ಟಾರ್ (ಸ್ಟಾರ್ ಸ್ಪೋರ್ಟ್ಸ್) ಬಳಿಯಿದ್ದು, ಇತ್ತ ಡಿಜಿಟಲ್ ಫ್ರೀ ಲೈವ್ ಸ್ಟ್ರೀಮಿಂಗ್ ಮೂಲಕ ಸ್ಟಾರ್ ಸ್ಪೋರ್ಟ್ಸ್ಗೆ ಪೈಪೋಟಿ ನೀಡಲು ರಿಲಯನ್ಸ್ ಕಂಪೆನಿ ಯೋಜನೆ ರೂಪಿಸಿದೆ. ಅದರಂತೆ ಈ ಸಲ ಜಿಯೋ ಆ್ಯಪ್ನಲ್ಲಿ ಐಪಿಎಲ್ ಉಚಿತವಾಗಿ ಪ್ರಸಾರವಾಗುವುದು ಖಚಿತ ಎನ್ನಲಾಗಿದೆ.



















