AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pooja Bhatt: ‘ಪ್ರತಿಭಟನೆಗೂ ಗಲಭೆಗೂ ವ್ಯತ್ಯಾಸವಿದೆ’: ‘ಪಠಾಣ್​’ ವಿರುದ್ಧ ಭಜರಂಗ ದಳದ ವರ್ತನೆಗೆ ಪೂಜಾ ಭಟ್​ ಖಂಡನೆ

Pathaan Movie | Bajrang Dal: ಭಜರಂಗ ದಳದ ಕಾರ್ಯಕರ್ತರು ‘ಪಠಾಣ್​’ ಪ್ರಚಾರಕ್ಕೆ ಅಡ್ಡಿ ಪಡಿಸಿದ ಘಟನೆ ಗುಜರಾತ್​ನಲ್ಲಿ ಇತ್ತೀಚೆಗೆ ನಡೆದಿದೆ. ಆ ಕುರಿತ ಸುದ್ದಿಗೆ ನಟಿ ಪೂಜಾ ಭಟ್​ ಪ್ರತಿಕ್ರಿಯೆ ನೀಡಿದ್ದಾರೆ.

Pooja Bhatt: ‘ಪ್ರತಿಭಟನೆಗೂ ಗಲಭೆಗೂ ವ್ಯತ್ಯಾಸವಿದೆ’: ‘ಪಠಾಣ್​’ ವಿರುದ್ಧ ಭಜರಂಗ ದಳದ ವರ್ತನೆಗೆ ಪೂಜಾ ಭಟ್​ ಖಂಡನೆ
ಪೂಜಾ ಭಟ್ - ಭಜರಂಗ ದಳದ ಕಾರ್ಯಕರ್ತರ ದಾಂಧಲೆ
TV9 Web
| Edited By: |

Updated on:Jan 06, 2023 | 5:37 PM

Share

ನಟ ಶಾರುಖ್​ ಖಾನ್​ ಅಭಿನಯದ ‘ಪಠಾಣ್​’ (Pathaan Movie) ಚಿತ್ರಕ್ಕೆ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಗುಜರಾತ್​ನಲ್ಲಿ ಭಜರಂಗ ದಳದ (Bajrang Dal) ಕಾರ್ಯಕರ್ತರು ಈ ಸಿನಿಮಾದ ಪೋಸ್ಟರ್​ಗಳನ್ನು ಕಿತ್ತು ಹಾಕಿದ ಘಟನೆ ನಡೆದಿದೆ. ಅದರ ವಿಡಿಯೋ ವೈರಲ್​ ಆಗಿದ್ದು, ಆ ಬಗ್ಗೆ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಬಾಲಿವುಡ್​ ನಟಿ ಪೂಜಾ ಭಟ್​ ಅವರು ಈ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ಪಠಾಣ್​’ ಸಿನಿಮಾ ವಿರುದ್ಧ ಭಜರಂಗ ದಳದವರು ಪ್ರತಿಭಟನೆ ಮಾಡಿದ್ದಾರೆ ಎಂದು ಎಎನ್​ಐ ನ್ಯೂಸ್​ ಏಜೆನ್ಸಿ ವರದಿ ಮಾಡಿದ್ದಕ್ಕೆ ಪೂಜಾ ಭಟ್​ (Pooja Bhatt) ಪ್ರತಿಕ್ರಿಯೆ ನೀಡಿದ್ದು, ‘ಪ್ರತಿಭಟನೆಗೂ ಗಲಭೆಗೂ ವ್ಯತ್ಯಾಸ ಇದೆ’ ಎಂದು ಅವರು ಹೇಳಿದ್ದಾರೆ. ಅವರ ಟ್ವೀಟ್​ ವೈರಲ್​ ಆಗಿದೆ. ಜನರು ಕಮೆಂಟ್​ ಮೂಲಕ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ.

‘ಪಠಾಣ್​’ ಚಿತ್ರಕ್ಕೆ ಭಜರಂಗ ದಳ ವಿರೋಧ:

ಭಜರಂಗ ದಳ ಕಾರ್ಯಕರ್ತರು ‘ಪಠಾಣ್​’ ಪ್ರಚಾರಕ್ಕೆ ಅಡ್ಡಿ ಪಡಿಸಿದ ಘಟನೆ ಗುಜರಾತ್​ನಲ್ಲಿ ಇತ್ತೀಚೆಗೆ ನಡೆದಿದೆ. ಚಿತ್ರಮಂದಿರವೊಂದರಲ್ಲಿ ‘ಪಠಾಣ್​’ ಚಿತ್ರದ ಪೋಸ್ಟರ್​ ಮತ್ತು ಸ್ಟ್ಯಾಂಡಿಗಳನ್ನು ಹಾಕಲಾಗಿತ್ತು. ಅದನ್ನು ಕಿತ್ತು ಹಾಕುವ ಮೂಲಕ ಭಜರಂಗ ದಳದ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ. ‘ಜೈ ಶ್ರೀರಾಮ್​’ ಎಂದು ಘೋಷಣೆ ಕೂಗುತ್ತ ಗಲಾಟೆ ಮಾಡಲಾಗಿದೆ. ದಾಂಧಲೆ ತಡೆಯಲು ಮಲ್ಟಿಪ್ಲೆಕ್ಸ್​ ಸಿಬ್ಬಂದಿ ಪ್ರಯತ್ನ ನಡೆಸಿದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ. ಇದನ್ನು ಕೇವಲ ಪ್ರತಿಭಟನೆ ಎಂದು ಸುದ್ದಿ ಮಾಡಿರುವುದನ್ನು ಪೂಜಾ ಭಟ್​ ಖಂಡಿಸಿದ್ದಾರೆ.

ಇದನ್ನೂ ಓದಿ
Image
Vivek Agnihotri: ಶಾರುಖ್​​ ನಟನೆಯ ‘ಬೇಷರಂ ರಂಗ್​’ ಹಾಡು ನೋಡಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ವಿವೇಕ್​ ಅಗ್ನಿಹೋತ್ರಿ
Image
Deepika Padukone: ‘ಬೇಷರಂ​ ರಂಗ್​’ ಹಾಡಿನ ವಿವಾದ; ದೀಪಿಕಾ ಕೇಸರಿ ಬಿಕಿನಿ ಧರಿಸಿದ್ದಕ್ಕೂ ನೆಟ್ಟಿಗರ ತಕರಾರು
Image
Besharam Rang: ಹೊಸ ಹಾಡಿನಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ದೀಪಿಕಾ; ‘ಪಠಾಣ್​’ ಚಿತ್ರದ ಮೇಲೆ ಹೆಚ್ಚಿತು ನಿರೀಕ್ಷೆ
Image
Besharam Rang: ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್​ ವೀಕ್ಷಣೆ ಕಂಡ ‘ಪಠಾಣ್​’ ಸಿನಿಮಾ ಹಾಡು​

ಇದನ್ನೂ ಓದಿ: Shah Rukh Khan: ‘ಪಠಾಣ್​’ ಚಿತ್ರದಲ್ಲಿ ‘ಪ್ರಧಾನ ಮಂತ್ರಿ’ ಪದಕ್ಕೆ ಕತ್ತರಿ ಹಾಕಿದ ಸೆನ್ಸಾರ್​ ಮಂಡಳಿ; 13 ಕಡೆಗಳಲ್ಲಿ ಬದಲಾವಣೆ

ನಟಿ ಪೂಜಾ ಭಟ್​ ಟ್ವೀಟ್​ನಲ್ಲಿ ಏನಿದೆ?

‘ಭಜರಂಗ ದಳದ ಪ್ರತಿಭಟನೆ’ ಎಂದು ನ್ಯೂಸ್​ ಏಜೆನ್ಸಿ ಮಾಡಿದ ಟ್ವೀಟ್​ಗೆ ಪೂಜಾ ಭಟ್​ ಪ್ರತಿಕ್ರಿಯಿಸಿದ್ದಾರೆ. ‘ಪ್ರತಿಭಟನೆ ಎಂದರೆ ಸಂಘಟಿತ ರೀತಿಯಲ್ಲಿ ಸಾರ್ವಜನಿಕವಾಗಿ ಪ್ರತಿರೋಧ ವ್ಯಕ್ತಪಡಿಸುವುದು. ಗಲಭೆ ಎಂದರೆ ಜನರ ಗುಂಪೊಂದು ಹಿಂಸಾತ್ಮಕ ಮಾರ್ಗದಿಂದ ಶಾಂತಿ ಕದಡಿ ಭಯಗೊಳಿಸುವುದು’ ಎಂದು ಪೂಜಾ ಭಟ್​ ಟ್ವೀಟ್​ ಮಾಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಪರ-ವಿರೋಧದ ಚರ್ಚೆ ಮಾಡುತ್ತಿದ್ದಾರೆ.

ಭಜರಂಗ ದಳದ ಬೆದರಿಕೆ:

ಮಾಲ್​ನಲ್ಲಿ ಪೋಸ್ಟರ್​ ಕಿತ್ತುಹಾಕಿ ಗಲಭೆ ನಡೆಸಿದ ಬಳಿಕ ಭಜರಂಗ ದಳ ಕಾರ್ಯಕರ್ತರು ಟ್ವಿಟರ್​ ಮೂಲಕ ಬೆದರಿಕೆ ಹಾಕಿದ್ದಾರೆ. ‘ಸನಾತನ ಧರ್ಮ ವಿರೋಧಿ ಶಾರುಖ್​ ಖಾನ್ ಹಾಗೂ ಟುಕ್ಡೆ ಟುಕ್ಡೆ ಗ್ಯಾಂಗ್​ನ ದೀಪಿಕಾ ಪಡುಕೋಣೆ ನಟಿಸಿದ ಸಿನಿಮಾವನ್ನು ಪ್ರದರ್ಶನ ಮಾಡಲು ಬಿಡುವುದಿಲ್ಲ. ಮಲ್ಟಿಪ್ಲೆಕ್ಸ್​ನವರಿಗೆ ವಾರ್ನಿಂಗ್​ ನೀಡಿದ್ದೇವೆ. ಒಂದು ವೇಳೆ ಸಿನಿಮಾ ರಿಲೀಸ್​ ಮಾಡಿದರೆ ಭಜರಂಗ ದಳವು ತನ್ನ ವರಸೆ ತೋರಿಸಬೇಕಾಗುತ್ತದೆ’ ಎಂದು ಟ್ವೀಟ್​​ ಮಾಡಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:36 pm, Fri, 6 January 23

ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!
AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?
ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?
ವೇಗವಾಗಿ ಬಂದು ತಾಯಿ, ಮಗ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದ ಕಾರು
ವೇಗವಾಗಿ ಬಂದು ತಾಯಿ, ಮಗ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದ ಕಾರು
ಎಕ್ಸಾಂ ಹಾಲ್ ಟಿಕೆಟ್ ತೋರಿಸಿದ್ರೆ ಬಾಲಕರಿಗೂ ಉಚಿತ ಪ್ರಯಾಣ
ಎಕ್ಸಾಂ ಹಾಲ್ ಟಿಕೆಟ್ ತೋರಿಸಿದ್ರೆ ಬಾಲಕರಿಗೂ ಉಚಿತ ಪ್ರಯಾಣ
ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾದ್ದು ಏನು?
ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾದ್ದು ಏನು?
ಸಿಸಿಟಿವಿಯಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಸಿಸಿಟಿವಿಯಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಮಧುರ ಪ್ರೇಮಕ್ಕೆ 10 ವರ್ಷ; ಮೊದಲ ಭೇಟಿಯ ಫೋಟೋ ಹಂಚಿಕೊಂಡ ಚೈತ್ರಾ ಕುಂದಾಪುರ
ಮಧುರ ಪ್ರೇಮಕ್ಕೆ 10 ವರ್ಷ; ಮೊದಲ ಭೇಟಿಯ ಫೋಟೋ ಹಂಚಿಕೊಂಡ ಚೈತ್ರಾ ಕುಂದಾಪುರ
ಬೇಸಿಗೆಗೂ ಮುನ್ನ ಮಂತ್ರಾಲಯದಲ್ಲಿ ನೀರಿಗೆ ತತ್ವಾರ: ಪುಣ್ಯಸ್ನಾನಕ್ಕೂ ಪರದಾಟ
ಬೇಸಿಗೆಗೂ ಮುನ್ನ ಮಂತ್ರಾಲಯದಲ್ಲಿ ನೀರಿಗೆ ತತ್ವಾರ: ಪುಣ್ಯಸ್ನಾನಕ್ಕೂ ಪರದಾಟ