AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ಸಲ್ಮಾನ್ ಖಾನ್ ಮತ್ತು ನಟಿ ಸೋಮಿ ಅಲಿ ನಡುವೆ ಏನಾಯ್ತು? ಎಂಟು ವರ್ಷಗಳ ಕಹಿ ಘಟನೆಗಳನ್ನು ನೆನಪಿಸಿಕೊಂಡ ಸಲ್ಲು ಮಾಜಿ ಪ್ರೇಯಸಿ

ಬುಲಂದ್ ಸಿನಿಮಾ ಮಾಡುವಾಗ ನಟ ಸಲ್ಮಾನ್ ಖಾನ್ ಮತ್ತು ಸೋಮಿ ಅಲಿ ಡೇಟಿಂಗ್ ಮಾಡುತ್ತಿದ್ದರು. ಕಾರಣಾಂತರಗಳಿಂದ ಸಿನಿಮಾ ನಿಂತುಹೋಯ್ತು, ಇವರ ಲವ್ ಕೂಡ ಬ್ರೇಕ್ ಆಗಿತ್ತು.

ನಟ ಸಲ್ಮಾನ್ ಖಾನ್ ಮತ್ತು ನಟಿ ಸೋಮಿ ಅಲಿ ನಡುವೆ ಏನಾಯ್ತು? ಎಂಟು ವರ್ಷಗಳ ಕಹಿ ಘಟನೆಗಳನ್ನು ನೆನಪಿಸಿಕೊಂಡ ಸಲ್ಲು ಮಾಜಿ ಪ್ರೇಯಸಿ
ನಟ ಸಲ್ಮಾನ್ ಖಾನ್ ಮತ್ತು ಪಾಕಿಸ್ತಾನಿ ನಟಿ ಸೋಮಿ ಅಲಿ
TV9 Web
| Edited By: |

Updated on:Jan 07, 2023 | 7:15 AM

Share

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಜೊತೆಗಿನ ಕಹಿ ನೆನಪುಗಳನ್ನು ಮೆಲುಕು ಹಾಕಿಕೊಳ್ಳುವ ಮೂಲಕ ಪಾಕಿಸ್ತಾನಿ ನಟಿ ಸೋಮಿ ಅಲಿ (Somy Ali) ಅವರು ಸಲ್ಲು ಅವರ ಮತ್ತೊಂದು ಮುಖವಾಡವನ್ನು ಕಳಚಿಹಾಕಿದ್ದಾರೆ. ಸಲ್ಮಾನ್ ಖಾನ್ ಒಬ್ಬ ಸ್ಯಾಡಿಸ್ಟ್ ವ್ಯಕ್ತಿಯಾಗಿದ್ದಾರೆ ಎಂದು ಆರೋಪಿಸಿದ ನಟಿ ಸೋಮಿ ಅಲಿ, ಸಿಗರೇಟ್‌ನಿಂದ ಸುಟ್ಟು ಖುಷಿಪಡುತ್ತಿದ್ದ ಬ್ಯಾಡ್ ಬಾಯ್ ಎಂದಿದ್ದಾರೆ. ದೈಹಿಕ, ಲೈಂಗಿಕ ಕಿರುಕುಳಕ್ಕೆ ಗುರಿಯಾಗಿದ್ದ ಬಾಲಿವುಡ್ ಮಾಜಿ ನಟಿ, 2018ರಲ್ಲಿ ಸೋಮಿ ಬೆನ್ನಿನ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬಂತು. ಇದಕ್ಕೆ ಸಲ್ಲು ಕಾರಣ ಎಂದು ನಟಿ ಹೇಳಿದ್ದರು.

ಸೋಮಿ ಅಲಿ ಮತ್ತು ಸಲ್ಮಾನ್ ಖಾನ್ ನಡುವೆ ಏನಾಯಿತು ಎಂದು ಎಲ್ಲರೂ ಕೇಳುತ್ತಾರೆ. ಈ ಇದಕ್ಕೆ ಉತ್ತರಿಸಿದ ನಟಿ ಸೋಮಿ, ಅವರೊಂದಿಗೆ ಕಳೆದ ಎಂಟು ವರ್ಷಗಳು ನನ್ನ ಇಡೀ ಜೀವನದ ಅತ್ಯಂತ ಕೆಟ್ಟ ವರ್ಷಗಳು ಎಂದು ಹೇಳಿಕೊಂಡಿದ್ದಾರೆ. ಅವರು ನನ್ನನ್ನು ಕುರೂಪಿ, ಮೂರ್ಖ ಮತ್ತು ಮೂಕ ಎಂದು ಕರೆಯುವ ಮೂಲಕ ನಿರಂತರವಾಗಿ ನನ್ನನ್ನು ಕೀಳಾಗಿ ಕಾಣುತ್ತಿದ್ದರು ಎಂದಿದ್ದಾರೆ.

ಇದನ್ನೂ ಓದಿ: ಅಮಿತಾಭ್​ ಬಚ್ಚನ್ ಮೊಮ್ಮೊಗನ ಜತೆ ಸುಹಾನಾ ಖಾನ್ ಡೇಟಿಂಗ್ ವಿಚಾರಕ್ಕೆ ಸಿಕ್ತು ಹೊಸ ಟ್ವಿಸ್ಟ್

ಸಲ್ಮಾನ್ ಜೊತೆಗಿದ್ದ ಕಹಿ ನೆನಪುಗಳು ಇನ್ನು ಕಾಡುತ್ತಿದೆ ಎಂದು ಹೇಳಿರುವ ಸೋಮಿ, ಆತ ಸಿಗರೇಟ್‌ನಿಂದ ಸುಟ್ಟು ಖುಷಿಪಡುತ್ತಿದ್ದ ಬ್ಯಾಡ್ ಬಾಯ್. ಸಲ್ಮಾನ್ ಖಾನ್ ನನ್ನ ಮೇಲೆ ಮದ್ಯವನ್ನು ಸುರಿದಿದ್ದ. ಮುಂಬೈನಲ್ಲಿದ್ದಾಗ ನನ್ನ ಮೇಲೆ ಸಲ್ಲು ಹಲ್ಲೆ ನಡೆಸಿದ್ದ. ಆತನ ಹೊಡೆತದಿಂದ ಗಾಯಗಳಾಗಿದ್ದವು. ಆದ ಗಾಯಗಳನ್ನು ಮೇಕಪ್‌ನಿಂದ ಮುಚ್ಚಿಕೊಳ್ಳುತಿದ್ದೆ. ನಾನು ಸ್ಟುಡಿಯೋಗೆ ಹೋದಾಗ ನಿರ್ಮಾಪಕರು ಗಮನಿಸಿ ಅದನ್ನು ಸರಿಪಡಿಸಲು ಮೇಕಲ್ ಕಲಾವಿದ ಅಜಯ್ ಶೆಲಾರ್​​ಗೆ ಸೂಚಿಸುತ್ತಿದ್ದರು ಎಂದಿದ್ದಾರೆ.

View this post on Instagram

A post shared by Somy Ali (@realsomyali)

ಸುಲ್ತಾನ್ ನಟ ಸಲ್ಮಾನ್ ಪುರುಷ ಕೋಮುವಾದಿ ಹಂದಿ, ಲೈಂಗಿಕ ಪರಭಕ್ಷಕ ಎಂದು ಆರೋಪಿಸಿರುವ ಸೋಮಿ, ಅವರನ್ನು ಬಾಲಿವುಡ್‌ನ ಹಾರ್ವೆ ವೈನ್‌ಸ್ಟೈನ್ ಎಂದು ಕರೆದಿದ್ದರು. ಇತ್ತೀಚಿಗೆ ತಮ್ಮ ‘ಫೈಟ್ ಅಂಡ್ ಫ್ಲೈಟ್’ ವೆಬ್‌ ಸೀರಿಸ್‌ನ ಬ್ಯಾನ್ ಮಾಡಲು ಸಲ್ಲಾನ್ ಖಾನ್ ಪ್ರಯತ್ನಿಸಿದ್ದಾರೆ. ನಾನು ಪಬ್ಲಿಸಿಟಿ ಗಿಮಿಕ್ ಮಾಡುತ್ತಿಲ್ಲ, ಸತ್ಯ ಜನರಿಗೆ ಗೊತ್ತಾಗಬೇಕು. ಸಲ್ಮಾನ್ ಬಹಿರಂಗವಾಗಿ ಕ್ಷಮೆ ಕೇಳಬೇಕು. ಆತ ಅಂಹಕಾರಿ, ಸಲ್ಮಾನ್ ಖಾನ್ ಇನ್ನು ಮುಂದೆ ನನ್ನನ್ನು ಭಯಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಇದು ಬ್ರೇಕಿಂಗ್ ನ್ಯೂಸ್ ಅಲ್ಲ, ಸಲ್ಮಾನ್ ಇಷ್ಟೆಲ್ಲಾ ಮಾಡಿದ್ದು ನನಗೊಬ್ಬಳಿಗೆ ಅಲ್ಲ, ಇಲ್ಲಿ ಹೇಳುತ್ತಿಲ್ಲ, ಆದರೆ ಹಲವರು ಅವರ ವಿರುದ್ಧ ಎಫ್​ಐಆರ್ ಕೂಡ ದಾಖಲಿಸಿದ್ದಾರೆ ಎಂದಿದ್ದಾರೆ.

ಸಿನಿಮಾದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:15 am, Sat, 7 January 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್