Suniel Shetty: ‘ನಾವು ದಿನವಿಡೀ ಡ್ರಗ್ಸ್​ ತಗೊಳಲ್ಲ’: ಬಾಲಿವುಡ್​ ಉಳಿಸಲು ಯೋಗಿ, ಮೋದಿಗೆ ಸುನೀಲ್​ ಶೆಟ್ಟಿ ಮನವಿ

Yogi Adityanath | Boycott Bollywood: ಯೋಗಿ ಆದಿತ್ಯನಾಥ್​ ಅವರನ್ನು ಸುನೀಲ್​ ಶೆಟ್ಟಿ ಮುಂಬೈನಲ್ಲಿ ಭೇಟಿ ಮಾಡಿದ್ದಾರೆ. ಈ ವೇಳೆ ಹಲವು ಮಹತ್ವದ ವಿಚಾರಗಳು ಚರ್ಚೆ ಆಗಿವೆ.

Suniel Shetty: ‘ನಾವು ದಿನವಿಡೀ ಡ್ರಗ್ಸ್​ ತಗೊಳಲ್ಲ’: ಬಾಲಿವುಡ್​ ಉಳಿಸಲು ಯೋಗಿ, ಮೋದಿಗೆ ಸುನೀಲ್​ ಶೆಟ್ಟಿ ಮನವಿ
ಸುನೀಲ್ ಶೆಟ್ಟಿ, ಯೋಗಿ ಆದಿತ್ಯನಾಥ್
Follow us
TV9 Web
| Updated By: ಮದನ್​ ಕುಮಾರ್​

Updated on: Jan 06, 2023 | 4:34 PM

ಬಾಲಿವುಡ್​ ನಟ ಸುನೀಲ್​ ಶೆಟ್ಟಿ (Sunil Shetty) ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು ಭೇಟಿ ಮಾಡಿದ್ದಾರೆ. ಪ್ರಸ್ತುತ ಹಿಂದಿ ಚಿತ್ರರಂಗದ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಅವರು ಚರ್ಚೆ ಮಾಡಿದ್ದಾರೆ. ಶಾರುಖ್​ ಖಾನ್​ ನಟನೆಯ ‘ಪಠಾಣ್​’, ಆಮಿರ್​ ಖಾನ್​ ನಟನೆಯ ‘ಲಾಲ್​ ಸಿಂಗ್​ ಚಡ್ಡಾ’ ಸೇರಿದಂತೆ ಹಲವು ಸಿನಿಮಾಗಳ ಬಹಿಷ್ಕಾರಕ್ಕೆ ಕರೆ ನೀಡುವ ಮೂಲಕ ಬಾಲಿವುಡ್​ (Bollywood) ವ್ಯವಹಾರಕ್ಕೆ ಪೆಟ್ಟುಕೊಡುವ ಪ್ರಯತ್ನ ಕೆಲವರಿಂದ ನಡೆದಿದೆ. ಇದನ್ನು ತಪ್ಪಿಸಲು ಸುನೀಲ್​ ಶೆಟ್ಟಿ ಅವರು ಯೋಗಿ ಆದಿತ್ಯನಾಥ್​ (Yogi Adityanath) ಬಳಿ ಸಹಾಯ ಕೇಳಿದ್ದಾರೆ. ‘ನೀವು ಹೇಳಿದರೆ ಬಾಯ್ಕಾಟ್​ ಬಾಲಿವುಡ್​ ಎಂಬ ಟ್ರೆಂಡ್ ಅಂತ್ಯವಾಗುತ್ತದೆ’ ಎಂದು ಸುನೀಲ್​ ಶೆಟ್ಟಿ ಹೇಳಿದ್ದಾರೆ. ಚಿತ್ರರಂಗಕ್ಕೆ ಅಂಟಿರುವ ಡ್ರಗ್ಸ್​ ಕಳಂಕದ ಕುರಿತಾಗಿಯೂ ಅವರು ​ಮಾತನಾಡಿದ್ದಾರೆ.

ಸುನೀಲ್​ ಶೆಟ್ಟಿ, ಜಾಕಿ ಶ್ರಾಫ್​, ಸೋನು ನಿಗಮ್​, ಕೈಲಾಶ್​ ಖೇರ್​ ಸೇರಿದಂತೆ ಅನೇಕರು ಯೋಗಿ ಆದಿತ್ಯನಾಥ್​ ಅವರನ್ನು ಮುಂಬೈನಲ್ಲಿ ಭೇಟಿ ಮಾಡಿದ್ದಾರೆ. ಈ ವೇಳೆ ಹಲವು ಮಹತ್ವದ ವಿಚಾರಗಳು ಚರ್ಚೆ ಆಗಿವೆ. ಸುನೀಲ್​ ಶೆಟ್ಟಿ ಅವರ ಮಾತು ಗಮನ ಸೆಳೆದಿದೆ. ‘ನಾವು ಒಳ್ಳೆಯ ಕೆಲಸ ಮಾಡುತ್ತಿದ್ದೇವೆ ಎಂಬ ಸತ್ಯವನ್ನು ಎಲ್ಲರಿಗೂ ತಿಳಿಸಬೇಕಿದೆ. ಕೆಲವರು ಕೆಟ್ಟವರು ಇರಬಹುದು. ಆದರೆ ಇಡೀ ಚಿತ್ರರಂಗ ಕೆಟ್ಟದ್ದಲ್ಲ. ನಾವು ಒಳ್ಳೆಯ ಸಿನಿಮಾ ಮಾಡಿದ್ದೇವೆ. ಎಲ್ಲರೂ ಜೊತೆಯಾಗಿ ಬಾಯ್ಕಾಟ್​ ಬಾಲಿವುಡ್​ ಎಂಬ ಟ್ರೆಂಡ್​ ನಿಲ್ಲಿಸಬೇಕಿದೆ’ ಎಂದು ಸುನೀಲ್​ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ಸುನೀಲ್​ ಶೆಟ್ಟಿ ಮಕ್ಕಳ ಮದುವೆ ಬಗ್ಗೆ ಸುಳ್ಳು ಸುದ್ದಿ; ಗಾಸಿಪ್ ಹಬ್ಬಿಸಿದವರಿಗೆ ಕ್ಲಾಸ್​ ತೆಗೆದುಕೊಂಡ ಸ್ಟಾರ್​ ನಟ

ಇದನ್ನೂ ಓದಿ
Image
ಬಾಲಿವುಡ್​ನವರೂ ಕೆಟ್ಟ ಸಿನಿಮಾ ಮಾಡ್ತಾರೆ, ನಾವ್ಯಾಕೆ ಅವರಿಗೆ ರೇಂಜ್​ ಕೊಡಬೇಕು? ಸುದೀಪ್ ನೇರ ಪ್ರಶ್ನೆ
Image
ಬಾಲಿವುಡ್​ಗಿತ್ತು ಅಂಡರ್​​ವರ್ಲ್ಡ್​​ ಸಂಪರ್ಕ; ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ
Image
ಬಾಲಿವುಡ್​ vs ಸೌತ್ ಎಂದರೆ ನನಗೆ ಸಿಟ್ಟೇ ಬರುತ್ತದೆ; ಅಕ್ಷಯ್ ಕುಮಾರ್ ನೇರ ನುಡಿ
Image
ಸೌತ್​ ಚಿತ್ರಗಳ ಎದುರು ಬಾಲಿವುಡ್​ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್​ 2’ ಅಧೀರ ಸಂಜಯ್​ ದತ್​

‘ಇಂದು ನಾನು ಸುನೀಲ್​ ಶೆಟ್ಟಿ ಅಂತ ಜನಪ್ರಿಯವಾಗಿದ್ದರೆ ಅದಕ್ಕೆ ಉತ್ತರ ಪ್ರದೇಶದ ಜನರು ಕಾರಣ. ನೀವು ಮುಂದಾಳತ್ವ ವಹಿಸಿದರೆ ಇದೆಲ್ಲ ಸಾಧ್ಯವಾಗುತ್ತದೆ. ನಮ್ಮ ಮೇಲೆ ಕಳಂಕ ಇದೆ ಅಂತ ಹೇಳಲು ನೋವಾಗುತ್ತದೆ. ನಮ್ಮಲ್ಲಿ ಶೇಕಡ 99ರಷ್ಟು ಮಂದಿ ಹಾಗಿಲ್ಲ. ನಾವು ದಿನವಿಡೀ ಡ್ರಗ್ಸ್​ ಸೇವಿಸಲ್ಲ, ಕೆಟ್ಟ ಕೆಲಸ ಮಾಡಲ್ಲ’ ಎಂದು ಸುನೀಲ್​ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ಹೋಟೆಲ್​ ಕ್ಲೀನರ್​ ಆಗಿದ್ದ ಸುನೀಲ್​ ಶೆಟ್ಟಿ ತಂದೆ ವೀರಪ್ಪ ಶೆಟ್ಟಿ; ‘ಅಪ್ಪನೇ ನನ್ನ ಹೀರೋ’ ಎಂದ ಕನ್ನಡಿಗ

‘ನಮ್ಮ ಸಿನಿಮಾ ಸಂಗೀತವು ಭಾರತವನ್ನು ಜಗತ್ತಿನ ಜೊತೆ ಬೆಸೆಯುವಂತೆ ಮಾಡಿದೆ. ಯೋಗಿ ಅವರೇ.. ನೀವು ಮುಂದಾಳತ್ವ ವಹಿಸಿಕೊಂಡು ಪ್ರಧಾನ ಮಂತ್ರಿಗಳ ಬಳಿ ಮಾತನಾಡಿದರೆ ಅದರಿಂದ ತುಂಬ ಬದಲಾವಣೆ ಆಗಲಿದೆ’ ಎಂದು ಸುನೀಲ್​ ಶೆಟ್ಟಿ ಹೇಳಿದ್ದಾರೆ. ಅವರ ಮಾತಿಗೆ ಇನ್ನುಳಿದ ಸೆಲೆಬ್ರಿಟಿಗಳು ಕೂಡ ಚಪ್ಪಾಳೆ ಮೂಲಕ ಸಹಮತ ಸೂಚಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಸಿನಿಮಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಯೋಗಿ ಆದಿತ್ಯನಾಥ್​ ಪ್ರಯತ್ನಿಸುತ್ತಿದ್ದಾರೆ. ಅದರ ಭಾಗವಾಗಿ ಅವರು ಬಾಲಿವುಡ್​ ಸೆಲೆಬ್ರಿಟಿಗಳನ್ನು ಭೇಟಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ