ಸುನೀಲ್​ ಶೆಟ್ಟಿ ಮಕ್ಕಳ ಮದುವೆ ಬಗ್ಗೆ ಸುಳ್ಳು ಸುದ್ದಿ; ಗಾಸಿಪ್ ಹಬ್ಬಿಸಿದವರಿಗೆ ಕ್ಲಾಸ್​ ತೆಗೆದುಕೊಂಡ ಸ್ಟಾರ್​ ನಟ

ಸುನೀಲ್​ ಶೆಟ್ಟಿ ಮಕ್ಕಳ ಮದುವೆ ಬಗ್ಗೆ ಸುಳ್ಳು ಸುದ್ದಿ; ಗಾಸಿಪ್ ಹಬ್ಬಿಸಿದವರಿಗೆ ಕ್ಲಾಸ್​ ತೆಗೆದುಕೊಂಡ ಸ್ಟಾರ್​ ನಟ
ಸುನೀಲ್​ ಶೆಟ್ಟಿ ಫ್ಯಾಮಿಲಿ

ಮಕ್ಕಳ ಮದುವೆ ಕುರಿತು ಪ್ರಕಟವಾಗಿರುವ ಗಾಸಿಪ್​ ನೋಡಿ ಸುನೀಲ್​ ಶೆಟ್ಟಿಗೆ ಬೇಸರ ಆಗಿದೆ. ಆ ಬಗ್ಗೆ ಅವರು ಟ್ವಿಟರ್​ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

TV9kannada Web Team

| Edited By: Madan Kumar

Jan 22, 2022 | 12:05 PM

ನಟ ಸುನೀಲ್​ ಶೆಟ್ಟಿ (Suniel Shetty) ಅವರಿಗೆ ಚಿತ್ರರಂಗದಲ್ಲಿ ಈಗಲೂ ಸಖತ್​ ಬೇಡಿಕೆ ಇದೆ. ಸಿನಿಮಾಗಳ ಆಯ್ಕೆಯಲ್ಲಿ ಅವರು ತುಂಬ ಚ್ಯೂಸಿ ಆಗಿದ್ದಾರೆ. ಬಾಲಿವುಡ್​ ಚಿತ್ರಗಳ ಜೊತೆಜೊತೆಗೆ ಅವರು ದಕ್ಷಿಣ ಭಾರತದ ಸಿನಿಮಾಗಳ ಕಡೆಗೂ ಮುಖ ಮಾಡಿದ್ದಾರೆ. ಈ ನಡುವೆ ಅವರಿಗಿಂತಲೂ ಹೆಚ್ಚಾಗಿ ಅವರ ಮಕ್ಕಳು ಸದ್ದು ಮಾಡುತ್ತಿದ್ದಾರೆ. ಸುನೀಲ್​ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ (Athiya Shetty) ಈಗಾಗಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಪುತ್ರ ಅಹಾನ್​ ಶೆಟ್ಟಿ (Ahan Shetty) ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದಾರೆ. ಮಕ್ಕಳ ಸಿನಿ ಜರ್ನಿ ಬಗ್ಗೆ ಸುನೀಲ್​ ಶೆಟ್ಟಿ ಅವರಿಗೆ ಯಾವುದೇ ತಕರಾರು ಇಲ್ಲ. ಆದರೆ ಮಕ್ಕಳ ಖಾಸಗಿ ಜೀವನದ ಬಗ್ಗೆ ಅನೇಕ ಅಂಕೆ-ಕಂತೆಗಳು ಹರಿದಾಡುತ್ತಿವೆ. ಇದು ಸುನೀಲ್ ಶೆಟ್ಟಿ ಬೇಸರಕ್ಕೆ ಕಾರಣ ಆಗಿದೆ. ಅದರಲ್ಲೂ ಮಕ್ಕಳ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗಾಸಿಪ್​ಗಳು ಹಬ್ಬಿವೆ. ಆ ಕುರಿತು ಸುನೀಲ್​ ಶೆಟ್ಟಿ ಇತ್ತೀಚೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಗಾಸಿಪ್​ ಹಬ್ಬಿಸಿದವರ ವಿರುದ್ಧ ಅವರು ಗರಂ ಆಗಿದ್ದಾರೆ.

ಆಥಿಯಾ ಶೆಟ್ಟಿ ಅವರು ಕ್ರಿಕೆಟರ್​ ಕೆ.ಎಲ್​. ರಾಹುಲ್​ ಜೊತೆ ಡೇಟಿಂಗ್​ ಮಾಡುತ್ತಿರುವ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಅವರಿಬ್ಬರು ಜೊತೆಯಾಗಿರುವ ಅನೇಕ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅದೇ ರೀತಿ ಅಹಾನ್​ ಶೆಟ್ಟಿ ಅವರು ಮಾಡೆಲ್​ ಕಮ್​ ಫ್ಯಾಷನ್​ ಡಿಸೈನರ್​ ತಾನಿಯಾ ಶ್ರಾಫ್​ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ. ಇವರ ಮದುವೆ ಬಗ್ಗೆ ಇತ್ತೀಚೆಗೆ ಒಂದು ಸುದ್ದಿ ಜೋರಾಗಿ ಹಬ್ಬಿತ್ತು.

‘ಬಾಲಿವುಡ್​ ಹಂಗಾಮ’ ನ್ಯೂಸ್​ ಪೋರ್ಟಲ್​ನಲ್ಲಿ ಸುನೀಲ್​ ಶೆಟ್ಟಿ ಮಕ್ಕಳ ಮದುವೆಯ ಕುರಿತು ಒಂದು ವರದಿ ಪ್ರಕಟ ಆಗಿದೆ. 2022ರಲ್ಲಿಯೇ ಇಬ್ಬರೂ ಮಕ್ಕಳಿಗೆ ಸುನೀಲ್​ ಶೆಟ್ಟಿ ಮದುವೆ ಮಾಡಲಿದ್ದಾರೆ ಎಂಬ ಮಾಹಿತಿ ಅದರಲ್ಲಿ ಇದೆ. ಅದನ್ನು ಕಂಡು ಸುನೀಲ್​ ಶೆಟ್ಟಿಗೆ ಬೇಸರ ಆಗಿದೆ. ಆ ಬಗ್ಗೆ ಅವರು ಟ್ವಿಟರ್​ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

‘ಈ ಸುದ್ದಿ ನೋಡಿ ಅಚ್ಚರಿಪಡಬೇಕೋ ಅಥವಾ ನೊಂದುಕೊಳ್ಳಬೇಕೋ ತಿಳಿದಿಲ್ಲ. ಸತ್ಯವನ್ನು ತಿಳಿಯದೇ ಇಂಥ ಸುದ್ದಿ ಪ್ರಕಟಿಸುವ ಅವಶ್ಯಕತೆ ಏನು ಎಂಬುದು ಅರ್ಥವಾಗುತ್ತಿಲ್ಲ. ಇಂಥ ಬೇಜವಾಬ್ದಾರಿಯುತ ಲೇಖನಗಳಿಂದ ಪತ್ರಿಕೋದ್ಯಮದ ಮೇಲಿನ ವಿಶ್ವಾಸಾರ್ಹತೆಗೆ ಧಕ್ಕೆ ಆಗುತ್ತದೆ’ ಎಂದು ಸುನೀಲ್​ ಶೆಟ್ಟಿ ಟ್ವೀಟ್​ ಮಾಡಿದ್ದಾರೆ.

ಅದೇನೇ ಇರಲಿ, ಅವರ ಮಕ್ಕಳು ಮಾತ್ರ ತಮ್ಮ ಫೋಟೋಗಳನ್ನು ಮುಲಾಜಿಲ್ಲದೇ ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಅಹಾನ್​ ಶೆಟ್ಟಿ ನಟನೆಯ ‘ತಡಪ್​’ ಸಿನಿಮಾ ಇತ್ತೀಚೆಗೆ ತೆರೆಕಂಡಿತು. ಅದರ ಪ್ರೀಮಿಯರ್​ ಶೋಗೆ ತಾನಿಯಾ ಶ್ರಾಫ್​ ಕೂಡ ಆಗಮಿಸಿದ್ದರು.

ಇದನ್ನೂ ಓದಿ:

ಸುನೀಲ್ ಶೆಟ್ಟಿ ಪುತ್ರಿ ಆಥಿಯಾಗೂ ಎದುರಾಗಿತ್ತು ಬಾಡಿ ಶೇಮಿಂಗ್; ಅನುಭವಿಸಿದ ಕಷ್ಟಗಳನ್ನು ಎಳೆಎಳೆಯಾಗಿ ತೆರೆದಿಟ್ಟ ನಟಿ

ಕೊನೆಗೂ ಸುನೀಲ್ ಶೆಟ್ಟಿ ಕುಟುಂಬದೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ರಾಹುಲ್; ಆಥಿಯಾ ಜತೆ ಭರ್ಜರಿ ಪೋಸ್

Follow us on

Related Stories

Most Read Stories

Click on your DTH Provider to Add TV9 Kannada