ಸುನೀಲ್ ಶೆಟ್ಟಿ ಪುತ್ರಿ ಆಥಿಯಾಗೂ ಎದುರಾಗಿತ್ತು ಬಾಡಿ ಶೇಮಿಂಗ್; ಅನುಭವಿಸಿದ ಕಷ್ಟಗಳನ್ನು ಎಳೆಎಳೆಯಾಗಿ ತೆರೆದಿಟ್ಟ ನಟಿ

Athiya Shetty: ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಕೂಡ ಬಾಡಿ ಶೇಮಿಂಗ್​ಗೆ ತುತ್ತಾಗಿದ್ದರು. ಈ ಕುರಿತು ನಟಿ ಮುಕ್ತವಾಗಿ ಮಾತನಾಡಿದ್ದಾರೆ.

ಸುನೀಲ್ ಶೆಟ್ಟಿ ಪುತ್ರಿ ಆಥಿಯಾಗೂ ಎದುರಾಗಿತ್ತು ಬಾಡಿ ಶೇಮಿಂಗ್; ಅನುಭವಿಸಿದ ಕಷ್ಟಗಳನ್ನು ಎಳೆಎಳೆಯಾಗಿ ತೆರೆದಿಟ್ಟ ನಟಿ
ಆಥಿಯಾ ಶೆಟ್ಟಿ (ಸಂಗ್ರಹ ಚಿತ್ರ)
Follow us
TV9 Web
| Updated By: shivaprasad.hs

Updated on: Dec 22, 2021 | 9:31 AM

ಖ್ಯಾತ ತಾರೆಯರು ಕೂಡ ಬಾಡಿ ಶೇಮಿಂಗ್​ಗೆ ಹೊರತಾಗಿರುವುದಿಲ್ಲ. ಈ ಬಗ್ಗೆ ಹಲವು ನಟಿಯರು ಆಗಾಗ ಮಾತನಾಡಿ, ಜನರಲ್ಲಿ ಜಾಗೃತಿ ಮೂಡಿಸುತ್ತಲೇ ಇರುತ್ತಾರೆ. ಇತ್ತೀಚೆಗೆ ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel Shetty) ಪುತ್ರಿ, ನಟಿ ಆಥಿಯಾ ಶೆಟ್ಟಿ (Athiya Shetty) ಈ ಕುರಿತು ಮಾತನಾಡಿದ್ದು, ಅವರ ಜೀವನದ ಅನುಭವಗಳನ್ನು ತೆರೆದಿಟ್ಟಿದ್ದಾರೆ. ಆಥಿಯಾ ಪ್ರಕಾರ ಬಾಡಿ ಶೇಮಿಂಗ್ (Body Shaming) ಅನ್ನುವುದು ಕೇವಲ ತೂಕ ಹೆಚ್ಚಿರುವವರನ್ನು ಕುರಿತು ಅಪಹಾಸ್ಯ ಮಾಡಿದರೆ ಬಳಸುವ ಪದ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಅದು ಹಾಗಲ್ಲ. ಹಲವು ವಿಧದ ಬಾಡಿ ಶೇಮಿಂಗ್​ಗಳಿವೆ. ತಾನು ತೆಳ್ಳಗಿದ್ದುದಕ್ಕಾಗಿ ಬಾಡಿ ಶೇಮಿಂಗ್​ಗೆ ಒಳಗಾಗಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ. ಎಎನ್​ಐ ಜತೆ ಮಾತನಾಡಿದ ಆಥಿಯಾ ಶೆಟ್ಟಿ, ‘‘ಸಣ್ಣ ವಯಸ್ಸಿನಲ್ಲಿ ನನಗೂ ಬಾಡಿ ಶೇಮಿಂಗ್​ ಅನುಭವಗಳಾಗಿದೆ. ತೂಕ ಹೆಚ್ಚಿದ್ದರೆ ಮಾತ್ರವಲ್ಲ, ತೆಳ್ಳಗಿದ್ದರೂ ಕೂಡ ಬಾಡಿ ಶೇಮಿಂಗ್​ಗೆ ತುತ್ತಾಗಬೇಕಾಗುತ್ತದೆ. ಮತ್ತೊಬ್ಬರ ತೂಕ, ನೋಟ, ಕೆಲಸಗಳಿಗೆ ಕಾಮೆಂಟ್ ಮಾಡುವುದು ಒಳ್ಳೆಯದಲ್ಲ ಎಂದು ನಾನು ಯಾವಾಗಲೂ ನಂಬುತ್ತೇನೆ’’ ಎಂದು ಅವರು ಹೇಳಿದ್ದಾರೆ.

ಆಥಿಯಾ ಬಾಡಿ ಶೇಮಿಂಗ್​ನಿಂದ ಆದ ಪರಿಣಾಮಗಳು ಮತ್ತು ಅದನ್ನು ಎದುರಿಸಿದ ಬಗೆಯನ್ನೂ ಹೇಳಿದ್ದಾರೆ. ‘‘ಕಡಿಮೆ ಆತ್ಮವಿಶ್ವಾಸದಲ್ಲಿ ತನಗೆ ನಂಬಿಕೆಯಿಲ್ಲ. ನಾನು ಇದನ್ನು ಬಹಳ ಆತ್ಮವಿಶ್ವಾಸದಿಂದ ಎದುರಿಸಿದೆ. ಬಾಲ್ಯದಲ್ಲಿ ಇಂತಹ ಟೀಕೆಗಳಿಂದ ಬೇಸತ್ತು ನಾನು ನನ್ನ ದೇಹದ ಬಗ್ಗೆ ಬಹಳ ಜಾಗರೂಕಳಾಗಿದ್ದೆ. ಈಗಲೂ ಹಾಗೆಯೇ ಇದ್ದೇನೆ. ಆದರೆ ಅಂದಿಗಿಂತ ಇಂದು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದೇನೆ’’ ಎಂದು ಅವರು ಹೇಳಿದ್ದಾರೆ.

ಅಲ್ಲದೇ ತಿಳಿದೋ ತಿಳಿಯದೆಯೋ ಎಲ್ಲರೂ ಬಾಡಿ ಶೇಮಿಂಗ್ ಹೇಳಿಕೆಗಳನ್ನು ಇತರರಿಗೆ ಹೇಳುತ್ತಾರೆ, ಅದರ ಬಗ್ಗೆ ಎಚ್ಚರಿಕೆ ವಹಿಸಿ, ಮಾತನ್ನು ಕಡಿಮೆ ಮಾಡಿ ಎಂದು ಆಥಿಯಾ ಸಲಹೆ ನೀಡಿದ್ದಾರೆ. ‘‘ಯಾರಿಗಾದರೂ ಒಳ್ಳೆಯದು ಹೇಳಲು ಸಾಧ್ಯವಾದರೆ ಹೇಳಿ. ದಯವಿಟ್ಟು ಬೇರೆಯವರ ಬಗ್ಗೆ ಋಣಾತ್ಮಕ ಮಾತುಗಳನ್ನಾಡಬೇಡಿ. ಅದು ಅವರ ಜೀವನದ ಮೇಲೆ ಬಹಳ ಪರಿಣಾಮ ಬೀರುತ್ತದೆ’’ ಎಂದು ಆಥಿಯಾ ತಿಳಿಸಿದ್ದಾರೆ.

ಬಾಡಿ ಶೇಮಿಂಗ್​ಗೆ ಚಲನಚಿತ್ರಗಳು, ನಿಯತಕಾಲಿಕೆಗಳು ಹಾಗೂ ಸೋಷಿಯಲ್ ಮೀಡಿಯಾಗಳು ಕೂಡ ಕಾರಣವಾಗುತ್ತದೆ ಎಂದು ಆಥಿಯಾ ಅಭಿಪ್ರಾಯಪಟ್ಟಿದ್ದಾರೆ. ಈ ಮಾಧ್ಯಮಗಳಲ್ಲಿ ತಾರೆಯರನ್ನು ನೋಡಿ ಎಲ್ಲರೂ ಅವರಂತಾಗಲು ಬಯಸುತ್ತಾರೆ. ಆದರೆ ನಿಜ ಜೀವನ ಹಾಗಿರುವುದಿಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಂಡಿರುವುದಿಲ್ಲ ಎಂದು ಅವರು ಬೇಸರ ಹೊರಹಾಕಿದ್ದಾರೆ.

ಸಾಮಾಜಿಕ ಮಾಧ್ಯಮಗಳು ಬಹಳ ಚಿಕ್ಕ ವಯಸ್ಸಿನಿಂದಲೇ ಎಲ್ಲರನ್ನೂ ಪ್ರಭಾವಿಸುತ್ತಿರುವುದು ಅಪಾಯಕಾರಿ ಎಂದ ಆಥಿಯಾ ಜನರಿಗೆ ಬಾಡಿ ಶೇಮಿಂಗ್​ನಿಂದ ಹೊರ ಬರುವ ದಾರಿಯನ್ನೂ ತಿಳಿಸಿದ್ದಾರೆ. ಎಲ್ಲರೂ ಅಪರಿಪೂರ್ಣರು. ಆದರೆ ಅಪರಿಪೂರ್ಣವಾಗಿರುವುದೇ ಪರಿಪೂರ್ಣತೆ. ಎಲ್ಲರೂ ಒಂದೇ ರೀತಿ ಕಾಣುವುದಿಲ್ಲ ಮತ್ತು ಹಾಗಿರಲು ಸಾಧ್ಯವೂ ಇಲ್ಲ. ಆದ್ದರಿಂದ ಇದ್ದಂತೆ ಎಲ್ಲವನ್ನೂ ಸ್ವೀಕರಿಸಿ ಎಂದು ಆಥಿಯಾ ಕಿವಿಮಾತು ಹೇಳಿದ್ದಾರೆ.

ಆಥಿಯಾ ಕೊನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿದ್ದು 2019ರಲ್ಲಿ. ನಂತರ ಅವರು ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ಇತ್ತೀಚೆಗೆ ಅವರು ತಮ್ಮ ಗೆಳೆಯ ಕೆ.ಎಲ್ ರಾಹುಲ್ ಅವರೊಂದಿಗೆ ಸಹೋದರ ಅಹಾನ್ ಶೆಟ್ಟಿ ಚಿತ್ರವೊಂದರ ಪ್ರೀಮಿಯರ್​ ಒಂದರಲ್ಲಿ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ:

R Madhavan: ನೆಟ್​​ಫ್ಲಿಕ್ಸ್​ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ಮಾಧವನ್ ನಟನೆಯ ವೆಬ್ ಸೀರೀಸ್; ಏನಿದು ಸಮಾಚಾರ?

ರೆಡ್​ ಕಾರ್ಪೆಟ್​ನಲ್ಲಿ ಒಟ್ಟಾಗಿ ಹೆಜ್ಜೆಹಾಕಿದ ರಾಹುಲ್- ಆಥಿಯಾ; ಈ ಹಿಂದಿನ ಬಾಲಿವುಡ್- ಕ್ರಿಕೆಟ್ ತಾರಾ ಜೋಡಿಗಳ ಚಿತ್ರಗಳು ಇಲ್ಲಿವೆ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ