Alia Bhatt: ಮದುವೆಯಲ್ಲಿ ಗೆಳತಿಯರೊಂದಿಗೆ ಕುಣಿದು ಕುಪ್ಪಳಿಸಿದ ಆಲಿಯಾ; ವಿಡಿಯೋ ನೋಡಿ

ಬಾಲಿವುಡ್ ಬೆಡಗಿ ಆಲಿಯಾ ಭಟ್ ತಮ್ಮ ಬೆಸ್ಟ್ ಫ್ರೆಂಡ್ ವಿವಾಹದ ಸಂದರ್ಭದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಈ ಸಂದರ್ಭದ ವಿಡಿಯೋಗಳು ವೈರಲ್ ಆಗಿವೆ.

Alia Bhatt: ಮದುವೆಯಲ್ಲಿ ಗೆಳತಿಯರೊಂದಿಗೆ ಕುಣಿದು ಕುಪ್ಪಳಿಸಿದ ಆಲಿಯಾ; ವಿಡಿಯೋ ನೋಡಿ
ಗೆಳತಿಯ ವಿವಾಹದ ಸಂದರ್ಭದಲ್ಲಿ ಸ್ನೇಹಿತೆಯರೊಂದಿಗೆ ಆಲಿಯಾ ಭಟ್
Follow us
TV9 Web
| Updated By: shivaprasad.hs

Updated on: Dec 22, 2021 | 2:03 PM

ಬಾಲಿವುಡ್ ತಾರೆ ಆಲಿಯಾ ಭಟ್ (Alia Bhatt) ಮದುವೆಯ ಸಂಭ್ರಮದಲ್ಲಿದ್ದಾರೆ. ಅರೇ, ಆಲಿಯಾ- ರಣಬೀರ್ (Ranbir Kapoor) ಮದುವೆ ಮುಂದೂಡಲ್ಪಟ್ಟಿತ್ತಲ್ಲಾ.. ಎಂದು ಯೋಚಿಸುತ್ತಿದ್ದೀರಾ? ಹೌದು. ನಿಮ್ಮ ಊಹೆ ಸರಿ. ಆಲಿಯಾ ಮದುವೆಯ ಸಂಭ್ರಮದಲ್ಲಿದ್ದಾರೆ ನಿಜ. ಆದರೆ ಅದು ಅವರ ಗೆಳತಿಯ ಕಲ್ಯಾಣದಲ್ಲಿ. ತಮ್ಮ ಬಾಲ್ಯದ ಗೆಳತಿ, ಆಪ್ತ ಸ್ನೇಹಿತೆ ಮೇಘನಾ ಗೋಯಲ್ (Meghana Goyal) ವಿವಾಹದಲ್ಲಿ ಆಲಿಯಾ ಕಾಣಿಸಿಕೊಂಡಿದ್ದಾರೆ. ಕಳೆದ ಕೆಲವು ದಿನದಿಂದ ವಿವಾಹದ ಚಿತ್ರಗಳು ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಕಣ್ಣರಳಿಸಿದ್ದಾರೆ. ಮದುವೆಯಲ್ಲಿ ಇಂಡೋ- ವೆಸ್ಟರ್ನ್ ಉಡುಪಿನಿಂದ ಕಂಗೊಳಿಸಿರುವ ಆಲಿಯಾ, ಗೆಳತಿಯರೊಂದಿಗಿರುವ ಚಿತ್ರಗಳು ವೈರಲ್ ಆಗಿವೆ.

ವಿವಾಹದ ಸಂದರ್ಭದಲ್ಲಿ ಆಲಿಯಾ ಕುಣಿದು ಕುಪ್ಪಳಿಸಿದ್ದಾರೆ. ಜಸ್ಟಿನ್ ಬೈಬರ್ ಅವರ ‘ಪೀಚಸ್’ ಮತ್ತು ‘ಬೇಬಿ’ ಹಾಡುಗಳಿಗೆ ಆಲಿಯಾ ಮತ್ತು ಗೆಳತಿಯರು ಸಖತ್ ಸ್ಟೆಪ್ ಹಾಕಿದ್ದಾರೆ. ಈ ಸಂದರ್ಭದ ವಿಡಿಯೋಗಳು ಸೋಷಿಯಲ್ ಮೀಡಿಯಾದ ಆಲಿಯಾ ಅಭಿಮಾನಿ ಖಾತೆಗಳಲ್ಲಿ ವೈರಲ್ ಆಗಿವೆ.

ಆಲಿಯಾ ಹಾಗೂ ಗೆಳತಿಯರ ಭರ್ಜರಿ ನೃತ್ಯದ ವಿಡಿಯೋ ಇಲ್ಲಿದೆ:

View this post on Instagram

A post shared by Pinkvilla (@pinkvilla)

ಆಲಿಯಾ ಹಾಗೂ ಗೆಳತಿಯರು ಗುಂಪಾಗಿ ಚಿತ್ರಗಳನ್ನು ತೆಗೆಸಿಕೊಂಡಿದ್ದು, ಅವೂ ಕೂಡ ವೈರಲ್ ಆಗಿವೆ. ಆಲಿಯಾ ತಮ್ಮ ಸ್ನೇಹಿತೆಯರೊಂದಿಗೆ ಫೋಟೋಶೂಟ್ ಮಾಡಿಸಿಕೊಂಡಿರುವ ಚಿತ್ರಗಳು ಇಲ್ಲಿವೆ.

ಚಿತ್ರಗಳ ವಿಷಯಕ್ಕೆ ಬಂದರೆ ಆಲಿಯಾ ಬತ್ತಳಿಕೆಯಲ್ಲಿ ಹಲವು ಚಿತ್ರಗಳಿವೆ. ಎಸ್ಎಸ್ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’, ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಗೆಳೆಯ ರಣಬೀರ್ ಕಪೂರ್ ಜತೆಗೆ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ‘ಬ್ರಹ್ಮಾಸ್ತ್ರ’ದ ಕೆಲಸಗಳೂ ಭರದಿಂದ ಸಾಗಿವೆ. ಇದಲ್ಲದೇ ರಣವೀರ್ ಸಿಂಗ್ ಜತೆಗೆ ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ಯಲ್ಲೂ ಆಲಿಯಾ ಕಾಣಿಸಿಕೊಳ್ಳುತ್ತಿದ್ದಾರೆ. ಕತ್ರಿನಾ ಕೈಫ್, ಪ್ರಿಯಾಂಕಾ ಚೋಪ್ರಾ ಹಾಗೂ ಆಲಿಯಾ ಮೂವರೂ ಕಾಣಿಸಿಕೊಳ್ಳುತ್ತಿರುವ ಟ್ರಾವೆಲ್ ಚಿತ್ರ ‘ಜೀ ಲೇ ಜರಾ’ದಲ್ಲೂ ಆಲಿಯಾ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಸ್ವಂತ ಬ್ಯಾನರ್​ ಮೂಲಕ ಚಿತ್ರ ನಿರ್ಮಾಣದಲ್ಲೂ ಆಲಿಯಾ ಸಕ್ರಿಯರಾಗಿದ್ದಾರೆ.

ಇದನ್ನೂ ಓದಿ:

ವಿಚ್ಛೇದನದಿಂದ ಸಮಂತಾ 50 ಕೋಟಿ ರೂ. ದರೋಡೆ ಮಾಡಿದ್ದಾರೆ ಎಂದ ನೆಟ್ಟಿಗ: ನಟಿಯ ಖಡಕ್​ ಉತ್ತರವೇನು?

Conman Sukesh: ತೆರೆಯ ಮೇಲೆ ಜಾಕ್ವೆಲಿನ್- ಸುಕೇಶ್ ಕಹಾನಿ?; ನೋರಾ- ಸುಕೇಶ್ ವೈಯಕ್ತಿಕ ಚಾಟ್ಸ್​​​​​ ಕೂಡ ಲೀಕ್

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ