ಕೊನೆಗೂ ಸುನೀಲ್ ಶೆಟ್ಟಿ ಕುಟುಂಬದೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ರಾಹುಲ್; ಆಥಿಯಾ ಜತೆ ಭರ್ಜರಿ ಪೋಸ್

KL Rahul | Athiya Shetty: ಕ್ರಿಕೆಟಿಗ ಕೆ.ಎಲ್ ರಾಹುಲ್ ತಮ್ಮ ಗೆಳತಿ ಆಥಿಯಾ ಶೆಟ್ಟಿ ಕುಟುಂಬದೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಫೋಟೋಗಳಿಗೆ ಭರ್ಜರಿ ಪೋಸ್ ಕೂಡ ನೀಡಿದ್ದಾರೆ.

ಕೊನೆಗೂ ಸುನೀಲ್ ಶೆಟ್ಟಿ ಕುಟುಂಬದೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ರಾಹುಲ್; ಆಥಿಯಾ ಜತೆ ಭರ್ಜರಿ ಪೋಸ್
ಕೆ.ಎಲ್ ರಾಹುಲ್, ಆಥಿಯಾ ಶೆಟ್ಟಿ
Follow us
TV9 Web
| Updated By: shivaprasad.hs

Updated on: Dec 02, 2021 | 8:44 AM

ಖ್ಯಾತ ಕ್ರಿಕೆಟ್ ತಾರೆ ಕೆ.ಎಲ್ ರಾಹುಲ್ (KL Rahul) ಹಾಗೂ ಬಾಲಿವುಡ್ ನಟಿ ಆಥಿಯಾ ಶೆಟ್ಟಿ (Athiya Shetty) ಸಂಬಂಧ ಗುಟ್ಟಾಗಿಯೇನೂ ಉಳಿದಿಲ್ಲ. ಆದರೆ ಈರ್ವರೂ ಈ ಕುರಿತು ಅಧಿಕೃತವಾಗಿ ಮಾತನಾಡಿರಲಿಲ್ಲ. ಆದರೆ ಆಥಿಯಾ ತಂದೆ ನಟ ಸುನೀಲ್ ಶೆಟ್ಟಿ (Suniel Shetty) ಮಾತ್ರ ಈ ಜೋಡಿಯ ಕುರಿತು ಪರೋಕ್ಷವಾಗಿ ತಮಾಷೆ ಮಾಡುತ್ತಿದ್ದರು. ರಾಹುಲ್- ಆಥಿಯಾ ಜಾಹಿರಾತೊಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾಗ ‘‘ಬಹಳ ಒಳ್ಳೆಯ ಜೋಡಿ; ತೆರೆಯ ಮೇಲೆ!’’ ಎಂದು ತಮಾಷೆ ಮಾಡಿದ್ದರು. ರಾಹುಲ್ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದಾಗ ಆಥಿಯಾ ಕೂಡ ತೆರಳಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಕಾಲೆಳೆದುಕೊಳ್ಳುತ್ತಾ ಎಲ್ಲರೂ ಸಖತ್ ಸುದ್ದಿಯಲ್ಲಿರುತ್ತಿದ್ದರು. ಇದೀಗ ಅಭಿಮಾನಿಗಳ ಶಂಕೆಯೊಂದು ದೂರವಾಗಿದೆ. ಹೌದು. ಸುನೀಲ್ ಶೆಟ್ಟಿ, ಮನಾ ಶೆಟ್ಟಿ ಕುಟುಂಬದೊಂದಿಗೆ ರಾಹುಲ್ ಕಾಣಿಸಿಕೊಂಡಿದ್ದು, ಫೋಟೋಗಳಿಗೆ ಭರ್ಜರಿ ಪೋಸ್ ನೀಡಿದ್ದಾರೆ. ಆಥಿಯಾ ಶೆಟ್ಟಿ ಸಹೋದರ ಅಹಾನ್ ಶೆಟ್ಟಿ (Ahan Shetty) ನಟಿಸಿರುವ ‘ತಡಪ್’ (Tadap) ಚಿತ್ರದ ಪ್ರೀಮಿಯರ್​ನಲ್ಲಿ ಎಲ್ಲರೂ ಪಾಲ್ಗೊಂಡಿದ್ದಾರೆ. ಅಹಾನ್ ಶೆಟ್ಟಿ ಕೂಡ ತಮ್ಮ ಗೆಳತಿ ತಾನ್ಯಾ ಶ್ರಾಫ್ (Tanya Shroff) ಜೊತೆ ಕಾಣಿಸಿಕೊಂಡಿದ್ದಾರೆ.

KL Rahul Athiya Shetty

ಕೆ.ಎಲ್ ರಾಹುಲ್, ಆಥಿಯಾ ಶೆಟ್ಟಿ

ರಾಹುಲ್ ಹಾಗೂ ಆಥಿಯಾ ಸಾಮಾಜಿಕ ಜಾಲತಾಣಗಳಲ್ಲಿ ಜೊತೆಯಿರುವ ಚಿತ್ರಗಳನ್ನು ಹಂಚಿಕೊಂಡಿದ್ದರೂ ಕೂಡ, ಸಾರ್ವಜನಿಕವಾಗಿ ಎಲ್ಲೂ ಹೊರಗೆ ಕಾಣಿಸಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ಅವರು ಒಟ್ಟಾಗಿ ಕಾಣಿಸಿಕೊಂಡು, ಕ್ಯಾಮೆರಾಗಳಿಗೆ ಪೋಸ್ ನೀಡಿದ್ದಾರೆ. ಅಲ್ಲದೇ ರೆಡ್ ಕಾರ್ಪೆಟ್ ಮೇಲೆ ಈ ಜೋಡಿ ಇದೇ ಮೊದಲ ಬಾರಿಗೆ ಒಟ್ಟಾಗಿ ಹೆಜ್ಜೆ ಹಾಕಿದೆ. ಆಥಿಯಾ ಶೆಟ್ಟಿ ತಮ್ಮ ಗೆಳೆಯ, ಸಹೋದರ ಹಾಗೂ ಪೋಷಕರೊಂದಿಗೆ ಪೋಸ್ ನೀಡುತ್ತಿರುವುದರ ಕುರಿತು ಸಖತ್ ಖುಷಿಯಾಗಿದ್ದರು.

KL Rahul Athiya Shetty

ಕೆ.ಎಲ್ ರಾಹುಲ್, ಆಥಿಯಾ ಶೆಟ್ಟಿ

ಅಹಾನ್ ಶೆಟ್ಟಿ ತಮ್ಮ ಗೆಳತಿ ತಾನ್ಯಾ ಶ್ರಾಫ್ ಜೊತೆ ಹಲವು ಕಾಲದಿಂದ ಸುತ್ತುತ್ತಿದ್ದಾರೆ. ತಾನ್ಯಾ ಕೂಡ ಗೆಳೆಯನ ಮೊದಲ ಚಿತ್ರದ ಪ್ರೀಮಿಯರ್​ನಲ್ಲಿ ಭಾಗಿಯಾಗಿದ್ದಕ್ಕೆ ಸಂತಸದಲ್ಲಿದ್ದರು. ತಾನ್ಯಾ ಖ್ಯಾತ ಉದ್ಯಮಿ ಜೈದೇವ್ ಶ್ರಾಫ್ ಅವರ ಪುತ್ರಿಯಾಗಿದ್ದಾರೆ.

Ahan Shetty Tanya Shroff

ಅಹಾನ್ ಶೆಟ್ಟಿ, ತಾನ್ಯಾ ಶ್ರಾಫ್

ಅಹಾನ್ ಶೆಟ್ಟಿ ಹಾಗೂ ತಾರಾ ಸುತಾರಿಯಾ ಒಟ್ಟಾಗಿ ನಟಿಸಿರುವ ‘ತಡಪ್’ ಚಿತ್ರ ಡಿಸೆಂಬರ್ 3ರಂದು ತೆರೆಗೆ ಬರಲಿದೆ. ಚಿತ್ರವನ್ನು ಮಿಲನ್ ಲೂಥ್ರಿಯಾ ನಿರ್ದೇಶಿಸಿದ್ದು, ಸಾಜಿದ್ ನಾದಿಯಾದ್ವಾಲಾ ಹಾಗೂ ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ಬಂಡವಾಳ ಹೂಡಿದ್ದಾರೆ.ಥ್ರಿಲ್ಲರ್ ಹಾಗೂ ಡ್ರಾಮ್ ಮಾದರಿಯ ಚಿತ್ರ ಇದಾಗಿದೆ.

ಇದನ್ನೂ ಓದಿ:

ಡಾನ್​ ಆದ ರಘು ದೀಕ್ಷಿತ್​ಗೆ ಡ್ಯಾಡಿ ಅಂತಾರೆ; ‘ಬ್ಯಾಂಗ್​’ ಚಿತ್ರದಲ್ಲಿ ನಟಿ ಶಾನ್ವಿಗೆ ಹೊಸ ಅವತಾರ

ಸಮಂತಾಗೆ ಕಂಗನಾ ಮೆಚ್ಚುಗೆ ಮಾತು; ಎರಡೇ ಪದಗಳಲ್ಲಿ ಪ್ರಶಂಸೆ ವ್ಯಕ್ತಪಡಿಸಿದ ಕಾಂಟ್ರವರ್ಸಿ ನಟಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ