Boman Irani: ಬೊಮನ್ ಇರಾನಿ ಜನ್ಮದಿನ; ಪೋಷಕ ಪಾತ್ರಗಳಲ್ಲಿ ಮಿಂಚಿದ ಖ್ಯಾತ ನಟನ 5 ಅತ್ಯುತ್ತಮ ಚಿತ್ರಗಳ ಪಟ್ಟಿ ಇಲ್ಲಿದೆ

Boman Irani Birthday: ಬಾಲಿವುಡ್​ನ ಖ್ಯಾತ ಪೋಷಕ ನಟ ಬೊಮನ್ ಇರಾನಿ ಜನ್ಮದಿನವಿಂದು. ಈ ಹಿನ್ನೆಲೆಯಲ್ಲಿ ಅವರ ನಟನೆಯ 5 ಅತ್ಯುತ್ತಮ ಚಿತ್ರಗಳ ಮೆಲುಕು ಇಲ್ಲಿದೆ.

Boman Irani: ಬೊಮನ್ ಇರಾನಿ ಜನ್ಮದಿನ; ಪೋಷಕ ಪಾತ್ರಗಳಲ್ಲಿ ಮಿಂಚಿದ ಖ್ಯಾತ ನಟನ 5 ಅತ್ಯುತ್ತಮ ಚಿತ್ರಗಳ ಪಟ್ಟಿ ಇಲ್ಲಿದೆ
ಬೊಮನ್ ಇರಾನಿ
Follow us
TV9 Web
| Updated By: shivaprasad.hs

Updated on:Dec 02, 2021 | 11:34 AM

ಬಾಲಿವುಡ್​ನ ಖ್ಯಾತ ಪೋಷಕ ನಟ ಬೊಮನ್ ಇರಾನಿ (Boman Irani) ಜನ್ಮದಿನವಿಂದು (ಡಿ.02). ಪ್ರತಿ ಬಾರಿ ತೆರೆ ಮೇಲೆ ಕಾಣಿಸಿಕೊಂಡಾಗಲೂ ಹೊಸ ಪಾತ್ರ, ಅದಕ್ಕೆ ವಿಶಿಷ್ಟವಾದ ಮ್ಯಾನರಿಸಂಗಳ ಮೂಲಕ ಇರಾನಿ ಗಮನ ಸೆಳೆಯುತ್ತಾರೆ. ಇಂದಿಗೆ 62 ವರ್ಷ ಪೂರೈಸಿದ ಅವರು, ‘3 ಇಡಿಯಟ್ಸ್’ (3 Idiots), ‘ಮುನ್ನಾಭಾಯಿ ಎಂಬಿಬಿಎಸ್’ (Munnabhai MBBS) ಸೇರಿದಂತೆ ಹಲವು ಖ್ಯಾತ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಬೊಮನ್ ಇರಾನಿ ಸಿನಿ ಪಯಣ ಸುಲಭದ ಹಾದಿಯಾಗಿರಲಿಲ್ಲ. ಬೇಕರಿಯಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 42ನೇ ವರ್ಷಕ್ಕೆ. ಅಲ್ಲಿಂದ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಖ್ಯಾತ ನಟರ ಚಿತ್ರಗಳಲ್ಲಿ ತಮ್ಮ ಉಪಸ್ಥಿತಿಯ ಮೂಲಕ ಚಿತ್ರವನ್ನು ಬೊಮನ್ ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಅವರ ವೃತ್ತಿ ಜೀವನದ ಅದ್ಭುತ ಐದು ಚಿತ್ರಗಳ ಪಟ್ಟಿ ಇಲ್ಲಿದೆ. ನೀವಿನ್ನೂ ಈ ಚಿತ್ರಗಳನ್ನು ನೋಡಿಲ್ಲವಾದರೆ ಮಿಸ್ ಮಾಡಲೇಬೇಡಿ.

3 ಇಡಿಯಟ್ಸ್: ಅಮೀರ್ ಖಾನ್, ಮಾಧವನ್, ಕತ್ರಿನಾ ಕೈಫ್ ಸೇರಿದಂತೆ ಹಲವು ಖ್ಯಾತ ನಾಮರು ನಟಿಸಿರುವ ಸೂಪರ್ ಹಿಟ್ ಚಿತ್ರ ‘3 ಇಡಿಯಟ್ಸ್’. ಇದರಲ್ಲಿನ ಬೊಮನ್ ಅವರ ಪಾತ್ರ ಎಲ್ಲರಿಂದ ಅಪಾರ ಮೆಚ್ಚುಗೆ ಗಳಿಸಿತು.ಅಲ್ಲದೇ ಈ ಚಿತ್ರಕ್ಕಾಗಿ ಅವರು ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ಪಡೆದರು.

ಮುನ್ನಾಭಾಯಿ ಸರಣಿ: ‘ಮುನ್ನಾಭಾಯ್ ಎಂಬಿಬಿಎಸ್​’ನಲ್ಲಿ ಡಾಕ್ಟರ್ ಒಬ್ಬರ ಪಾತ್ರವನ್ನು ಬೊಮನ್ ನಿರ್ವಹಸಿದ್ದರು. ರಾಜ್​ಕುಮಾರ್ ಹಿರಾನಿ ನಿರ್ದೇಶಿಸಿದ ಈ ಚಿತ್ರ ಸಖತ್ ಹಿಟ್ ಆಗಿತ್ತು. ಅಲ್ಲದೇ ಇದೇ ಸರಣಿಯ ‘ಲಗೇ ರಹೋ ಮುನ್ನಾಭಾಯಿ’ಯಲ್ಲೂ ಬೊಮನ್ ಕಾಣಿಸಿಕೊಂಡಿದ್ದರು. ಈ ಚಿತ್ರಗಳಲ್ಲಿನ ಬೊಮನ್ ಇರಾನಿ ಪಾತ್ರವನ್ನು ಈಗಲೂ ಜನ ನೆನಪಿಸಿಕೊಳ್ಳುತ್ತಾರೆ.

ಡಾನ್ ಸರಣಿಯ ಚಿತ್ರಗಳು: ಬೊಮನ್ ಇರಾನಿ ಡಾನ್ ಸರಣಿಯ ಚಿತ್ರಗಳಲ್ಲಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅವುಗಳನ್ನು ಲೀಲಾಜಾಲವಾಗಿ ನಿರ್ವಹಿಸಿದ್ದ ಬೊಮನ್ ಅವರ ಅಭಿನಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.

ಜಾಲಿ ಎಲ್​ಎಲ್​ಬಿ: ಲಾಯರ್ ಪಾತ್ರದಲ್ಲಿ ಬೊಮನ್ ಇರಾನಿ ‘ಜಾಲಿ ಎಲ್​ಎಲ್​ಬಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸಹಜವೆಂಬಂತೆ ನಟಿಸಿದ್ದ ಬೊಮನ್ ಹಾಗೂ ಜಡ್ಜ್ ಆಗಿ ಕಾಣಿಸಿಕೊಂಡಿದ್ದ ಸೌರಭ್ ಶುಕ್ಲಾ ಅವರ ಕೋರ್ಟ್ ರೂಮ್ ಮಾತುಕತೆಗಳು ಜನರಿಗೆ ಮೋಡಿ ಮಾಡಿತ್ತು.

ಖೋಸ್ಲಾ ಕಾ ಘೋಸ್ಲಾ: ದಿವಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದ ಈ ಚಿತ್ರ 2006ರಲ್ಲಿ ಬಿಡುಗಡೆಗೊಂಡಿತ್ತು. ಇದರಲ್ಲಿ ಬೊಮನ್ ಕಿಶನ್ ಖುರಾನಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಈ ಎಲ್ಲಾ ಚಿತ್ರಗಳಲ್ಲಿ ಬೊಮನ್ ಇರಾನಿ ಪಾತ್ರ ವೀಕ್ಷಕರಿಗೆ ಇಷ್ಟವಾಗಿತ್ತು. ಅಲ್ಲದೇ ಈಗಲೂ ಅವರ ಪಾತ್ರ ಪೋಷಣೆಯನ್ನು ನೆನಪಿಸಿಕೊಳ್ಳುತ್ತಾರೆ. 62 ತುಂಬಿದ ಈ ಖ್ಯಾತ ನಟನಿಗೆ ಇಂದು ಬಾಲಿವುಡ್ ಚಿತ್ರರಂಗ ಶುಭಕೋರುತ್ತಿದೆ. ಅಲ್ಲದೇ ನೆನಪಿನಲ್ಲಿ ಉಳಿಯುವ ಮತ್ತಷ್ಟು ಪಾತ್ರಗಳಲ್ಲಿ ಬಣ್ಣಹಚ್ಚಲಿ ಎಂದು ಹಾರೈಸಿದೆ.

ಇದನ್ನೂ ಓದಿ:

ತಾಯಿ ಆಗುತ್ತಿದ್ದಾರೆ ನಟಿ ಅಮೂಲ್ಯ; ವಿಶೇಷ ಫೋಟೋ ಮೂಲಕವೇ ಗುಡ್​ ನ್ಯೂಸ್​ ನೀಡಿದ ದಂಪತಿ

ಅಪ್ಪು ಇಲ್ಲದೇ ತಿಂಗಳು ಕಳೆದರೂ ನಿಂತಿಲ್ಲ ಕಣ್ಣೀರು; ಪುನೀತ್​ ಸಮಾಧಿ ಎದುರು ಬಿಕ್ಕಿ ಬಿಕ್ಕಿ ಅತ್ತ ಮಹಿಳೆ

Published On - 11:34 am, Thu, 2 December 21

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ