Sushant Birthday: ಸುಶಾಂತ್​ ವಿಡಿಯೋ ಹಂಚಿಕೊಂಡು ಮಿಸ್​ ಯೂ ಎಂದ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ

ಸುಶಾಂತ್​ ನಿಧನದ ನಂತರದಲ್ಲಿ ರಿಯಾ ಹೆಸರು ಮುಂಚೂಣಿಗೆ ಬಂದಿತ್ತು. ‘ರಿಯಾ ಸುಶಾಂತ್​ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಸುಶಾಂತ್​ ಸಾವಿಗೆ ಅವರೇ ಕಾರಣ’ ಎನ್ನುವ ಆರೋಪಗಳನ್ನು ಮಾಡಲಾಯಿತು.

Sushant Birthday: ಸುಶಾಂತ್​ ವಿಡಿಯೋ ಹಂಚಿಕೊಂಡು ಮಿಸ್​ ಯೂ ಎಂದ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ
ಸುಶಾಂತ್​-ರಿಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 21, 2022 | 4:44 PM

ಸುಶಾಂತ್​ ಸಿಂಗ್​ (Sushant Singh Birthday ) ಬದುಕಿದ್ದರೆ ಇಂದು (ಜನವರಿ 21) 36ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುತ್ತಿದ್ದರು. ಆದರೆ, ಅವರಿಲ್ಲದೆ, ಎರಡನೇ ಬಾರಿಗೆ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಿದ್ದಾರೆ. ಆಪ್ತರು ಅವರ ಜತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸುಶಾಂತ್​ ಫೋಟೋ ಪೋಸ್ಟ್​ ಮಾಡಿ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಆದರೆ, ಅವರು ನಮ್ಮ ಜತೆಗಿಲ್ಲ ಎನ್ನುವ ಸತ್ಯವನ್ನು ಅನೇಕರ ಬಳಿ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸುಶಾಂತ್​ ಸಿಂಗ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ (Rhea Chakraborty) ಈ ವಿಶೇಷ ದಿನದಂದು ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ‘ಮಿಸ್​ ಯೂ​’ ಎಂದಿದ್ದಾರೆ.

ಸುಶಾಂತ್​ ನಿಧನದ ನಂತರದಲ್ಲಿ ರಿಯಾ ಹೆಸರು ಮುಂಚೂಣಿಗೆ ಬಂದಿತ್ತು. ‘ರಿಯಾ ಸುಶಾಂತ್​ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಸುಶಾಂತ್​ ಸಾವಿಗೆ ಅವರೇ ಕಾರಣ’ ಎನ್ನುವ ಆರೋಪಗಳನ್ನು ಮಾಡಲಾಯಿತು. ಈ ಮಧ್ಯೆ ಡ್ರಗ್​ ಕೇಸ್​ನಲ್ಲಿ ಅವರು ಜೈಲು ವಾಸ ಅನುಭವಿಸಿ ಬಂದರು. ಸುಶಾಂತ್​ ಅಭಿಮಾನಿಗಳು ರಿಯಾ ಅವರ ಬಗ್ಗೆ ಕೆಟ್ಟಕೆಟ್ಟ ಕಮೆಂಟ್​ ಮಾಡಿದರು. ಆದರೆ, ರಿಯಾ ಮಾತ್ರ ಇದಕ್ಕೆ ಕುಗ್ಗಲಿಲ್ಲ. ಅವರು ಸುಶಾಂತ್​ ಬಗ್ಗೆ ಈಗಲೂ ಗೌರವ ಇಟ್ಟುಕೊಂಡಿದ್ದಾರೆ.

ಸುಶಾಂತ್​ ಸಿಂಗ್ ಜತೆ ಜಿಮ್​ನಲ್ಲಿ ವರ್ಕೌಟ್​ ಮಾಡುವಾಗ ಸೆರೆಹಿಡಿದ ವಿಡಿಯೋವನ್ನು ರಿಯಾ ಹಂಚಿಕೊಂಡಿದ್ದಾರೆ. ಇದಕ್ಕೆ ‘ಮಿಸ್​ ಯೂ ಸೋ ಮಚ್’​ ಎನ್ನುವ ಕ್ಯಾಪ್ಶನ್​ ನೀಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ಸುಶಾಂತ್​ ಜನ್ಮದಿನದ ಪ್ರಯುಕ್ತ ಅನೇಕರು ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ.

ಹಿಂದಿ ಧಾರಾವಾಹಿಯ ಮೂಲಕ ಪರಿಚಿತರಾದ ಸುಶಾಂತ್ ಸಿಂಗ್ ನಂತರ ಬಾಲಿವುಡ್​ಗೆ ಕಾಲಿಟ್ಟರು. ಎಂ.ಎಸ್. ಧೋನಿ ಬಯೋಪಿಕ್ ಸಿನಿಮಾದ ಮೂಲಕ ಅವರು ಖ್ಯಾತಿ ಹೆಚ್ಚಿಸಿಕೊಂಡರು. ಅವರಿಗೆ ಬಾಲಿವುಡ್​ನಲ್ಲಿ ಸಾಕಷ್ಟು ಬೇಡಿಕೆ ಇತ್ತು. ಆದರೆ, 2020ರ ಜೂನ್ 14 ರಂದು ಅವರು ಆತ್ಮಹತ್ಯೆ ಮಾಡಿಕೊಂಡರು. ಇಂದಿಗೂ ಕೂಡ ಅವರದ್ದು ಸಾವೋ ಅಥವಾ ಆತ್ಮಹತ್ಯೆಯೋ ಎನ್ನುವುದು ನಿಗೂಢವಾಗಿಯೇ ಇದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ಅವರ ಜನ್ಮದಿನದಂದು ಕೆಲವರು ಸುಶಾಂತ್​ ಸಿಂಗ್​ಗೆ ನ್ಯಾಯ ಒದಗಿಸುವಂತೆ ಮನವಿ ಇಟ್ಟಿದ್ದಾರೆ.

ಇದನ್ನೂ ಓದಿ: ಅಮೇಜಾನ್​ ಪ್ರೈಮ್​ನಿಂದ ಬಂಪರ್​ ಆಫರ್​; ಈ ಸಿನಿಮಾಗಳು ಉಚಿತ ವೀಕ್ಷಣೆಗೆ ಲಭ್ಯ

ರಾತ್ರಿ ಸುಶಾಂತ್​ ಜತೆ ವೈನ್​ ಕುಡಿಯುತ್ತ, ಸೋಲಿಗೆ ಕಾರಣ ಹುಡುಕಿದ್ದ ಘಟನೆ ನೆನಪಿಸಿಕೊಂಡ ಕೃತಿ ಸನೋನ್​

Published On - 4:43 pm, Fri, 21 January 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್