ರಾತ್ರಿ ಸುಶಾಂತ್​ ಜತೆ ವೈನ್​ ಕುಡಿಯುತ್ತ, ಸೋಲಿಗೆ ಕಾರಣ ಹುಡುಕಿದ್ದ ಘಟನೆ ನೆನಪಿಸಿಕೊಂಡ ಕೃತಿ ಸನೋನ್​

2017ರಲ್ಲಿ ‘ರಾಬ್ತಾ’ ಸಿನಿಮಾ ತೆರೆಕಂಡಿತ್ತು. ಕೃತಿ ಸನೋನ್​ ಮತ್ತು ಸುಶಾಂತ್​ ಸಿಂಗ್​ ರಜಪೂತ್​ ಎರಡು ಶೇಡ್​ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಚಿತ್ರಕ್ಕೆ ಜನಮೆಚ್ಚುಗೆ ಸಿಗಲಿಲ್ಲ.

ರಾತ್ರಿ ಸುಶಾಂತ್​ ಜತೆ ವೈನ್​ ಕುಡಿಯುತ್ತ, ಸೋಲಿಗೆ ಕಾರಣ ಹುಡುಕಿದ್ದ ಘಟನೆ ನೆನಪಿಸಿಕೊಂಡ ಕೃತಿ ಸನೋನ್​
ಕೃತಿ ಸನೋನ್​, ಸುಶಾಂತ್​ ಸಿಂಗ್​ ರಜಪೂತ್

ನಟಿ ಕೃತಿ ಸನೋನ್​ (Kriti Sanon) ಅವರು ಈಗ ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಲವು ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಕಳೆದ ವರ್ಷ ನೆಟ್​ಫ್ಲಿಕ್ಸ್​ ಮೂಲಕ ತೆರೆಕಂಡ ‘ಮಿಮಿ’ ಸಿನಿಮಾದಿಂದ ಅವರಿಗೆ ಭರ್ಜರಿ ಗೆಲುವು ಸಿಕ್ಕಿತು. ಚಿತ್ರರಂಗದಲ್ಲಿ ಅವರ ಕೆಲವು ಸಿನಿಮಾಗಳು ಹೀನಾಯವಾಗಿ ಸೋತ ಉದಾಹರಣೆಯೂ ಇದೆ. ನಟ ಸುಶಾಂತ್​ ಸಿಂಗ್​ ರಜಪೂತ್​ ಜೊತೆ ಅವರು ‘ರಾಬ್ತಾ’ (Raabta Movie) ಸಿನಿಮಾದಲ್ಲಿ ಅಭಿನಯಿಸಿದ್ದರು. ಪ್ರೇಕ್ಷಕರ ಮನಗೆಲ್ಲುವಲ್ಲಿ ಆ ಚಿತ್ರ ವಿಫಲವಾಗಿತ್ತು. ಆ ಬೇಸರವನ್ನು ತೋಡಿಕೊಳ್ಳಲು ಸುಶಾಂತ್​ ಸಿಂಗ್​ ರಜಪೂತ್​ (Sushant Singh Rajput), ಕೃತಿ ಸನೋನ್​ ಮತ್ತು ನಿರ್ದೇಶಕ ದಿನೇಶ್ ವಿಜನ್​ ಅವರು ರಾತ್ರಿ ವೇಳೆ ವೈನ್​ ಕುಡಿಯುತ್ತ ಚರ್ಚೆ ಮಾಡಿದ್ದರು ಎಂಬ ಸಂಗತಿಯನ್ನು ಕೃತಿ ಈಗ ನೆನಪಿಸಿಕೊಂಡಿದ್ದಾರೆ.

2017ರಲ್ಲಿ ‘ರಾಬ್ತಾ’ ಸಿನಿಮಾ ತೆರೆಕಂಡಿತ್ತು. ಕೃತಿ ಸನೋನ್​ ಮತ್ತು ಸುಶಾಂತ್​ ಸಿಂಗ್​ ರಜಪೂತ್​ ಅವರು ಎರಡು ಶೇಡ್​ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಚಿತ್ರಕ್ಕೆ ಜನಮೆಚ್ಚುಗೆ ಸಿಗಲಿಲ್ಲ. ಅದರಿಂದ ತೀವ್ರ ಬೇಸರಕ್ಕೆ ಒಳಗಾದ ನಿರ್ದೇಶಕ ದಿನೇಶ್​ ವಿಜನ್​ ಅವರು ಕೃತಿ ಮತ್ತು ಸುಶಾಂತ್​ಗೆ ಕರೆಮಾಡಿ ಮನೆಗೆ ಕರೆಸಿಕೊಂಡಿದ್ದರು. ಈ ಮೂವರೂ ವೈನ್​ ಕುಡಿಯುತ್ತ, ತಮ್ಮ ಸೋಲಿಗೆ ಕಾರಣ ಏನೆಂಬುದನ್ನು ಅವಲೋಕಿಸಿದ್ದರು.

ಸಿನಿಮಾದ ಕಥೆ ಬಗ್ಗೆ ಕೃತಿ ಕೆಲವು ಸಲಹೆಗಳನ್ನು ಮೊದಲೇ ನೀಡಿದ್ದರು. ಆದರೆ ಆ ಸಲಹೆಗಳನ್ನು ನಿರ್ದೇಶಕರು ಸ್ವೀಕರಿಸಿರಲಿಲ್ಲ. ಸಿನಿಮಾದ ಸೋಲಿಗೆ ಅದು ಕೂಡ ಒಂದು ಕಾರಣ ಇರಬಹುದು. ‘ಏನಾಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ಪ್ರೇಕ್ಷಕರಿಗಾಗಿಯೇ ಸಿನಿಮಾ ಮಾಡಿದ ಮೇಲೆ ಈ ಸಿನಿಮಾ ಪ್ರೇಕ್ಷಕರಿಗೆ ಅರ್ಥವಾಗಿಲ್ಲ ಅಂತ ಹೇಳಬಾರದು. ಜನರಿಗೆ ಸಿನಿಮಾ ಅರ್ಥ ಆಗಿಲ್ಲ ಎಂದರೆ ಅದು ಕೂಡ ನಮ್ಮದೇ ತಪ್ಪು. ಕಾಲಕ್ಕಿಂತ ನಾವು ಮುಂದಿದ್ದೇವೆ ಎಂದುಕೊಳ್ಳಬಾರದು. ಈ ಕಾಲದ ಪ್ರೇಕ್ಷಕರಿಗಾಗಿಯೇ ಸಿನಿಮಾ ಮಾಡಬೇಕು’ ಎಂಬುದು ಕೃತಿ ಸನೋನ್​ ಅಭಿಪ್ರಾಯ.

ಈ ಎಲ್ಲ ವಿಚಾರಗಳನ್ನು ಆ ರಾತ್ರಿ ಕೃತಿ ಸನೋನ್​, ಸುಶಾಂತ್​ ಸಿಂಗ್​ ರಜಪೂತ್​, ದಿನೇಶ್​ ವಿಜನ್​ ಚರ್ಚೆ ಮಾಡಿದ್ದರು. ಇಂದು ಸುಶಾಂತ್​ ನಮ್ಮೊಂದಿಗೆ ಇಲ್ಲ. 2020ರ ಜೂ.14ರಂದು ಸುಶಾಂತ್​ ಅನುಮಾನಾಸ್ಪದ ರೀತಿಯಲ್ಲಿ ನಿಧನರಾದರು. ಅವರ ಸಾವಿಗೆ ಸೂಕ್ತ ಕಾರಣ ಏನು ಎಂಬುದು ಈವರೆಗೂ ಸ್ಪಷ್ಟವಾಗಿಲ್ಲ. ಕೋರ್ಟ್​ಗೆ ಸಿಬಿಐ ನೀಡಲಿರುವ ಅಂತಿಮ ವರದಿಗಾಗಿ ಎಲ್ಲರೂ ನಿರೀಕ್ಷಿಸುತ್ತಿದ್ದಾರೆ.

ಚಿತ್ರರಂಗದಲ್ಲಿ ಕೃತಿ ಸನೋನ್​ ಅವರಿಗೆ ಅನೇಕ ಆಫರ್​ಗಳಿವೆ. ‘ಬಚ್ಚನ್​ ಪಾಂಡೆ’, ‘ಆದಿಪುರುಷ್​’ ಮುಂತಾದ ಹೈವೋಲ್ಟೇಜ್​ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ‘ಬೇಡಿಯಾ’, ‘ಗಣಪತ್​’ ಸೇರಿ ಅನೇಕ ಚಿತ್ರಗಳು ಅವರ ಕೈಯಲ್ಲಿವೆ.

ಇದನ್ನೂ ಓದಿ:

ಇದ್ದಕ್ಕಿದ್ದಂತೆ ಆ್ಯಕ್ಟೀವ್​ ಆಯ್ತು ಸುಶಾಂತ್​ ಸಿಂಗ್​ ಫೇಸ್​ಬುಕ್​ ಖಾತೆ; ಗಾಬರಿಗೊಂಡ ಅಭಿಮಾನಿಗಳು

‘ಪರಮ ಸುಂದರಿ’ ಮನೆ ಸೇರಿತು 2.4 ಕೋಟಿ ರೂ. ಕಾರು; ‘ಮಿಮಿ’ ಗೆದ್ದ ಬಳಿಕ ಬದಲಾಯ್ತು ಕೃತಿ ಬದುಕು

Click on your DTH Provider to Add TV9 Kannada