AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದ್ದಕ್ಕಿದ್ದಂತೆ ಆ್ಯಕ್ಟೀವ್​ ಆಯ್ತು ಸುಶಾಂತ್​ ಸಿಂಗ್​ ಫೇಸ್​ಬುಕ್​ ಖಾತೆ; ಗಾಬರಿಗೊಂಡ ಅಭಿಮಾನಿಗಳು

Sushant Singh Rajput: 2022ರ ಹೊಸ ವರ್ಷದ ಪ್ರಯುಕ್ತ ಸುಶಾಂತ್​ ಸಿಂಗ್​ ರಜಪೂತ್​ ಅವರ ಅಧಿಕೃತ ಫೇಸ್​ಬುಕ್​ ಖಾತೆಯಿಂದ ಎಲ್ಲರಿಗೂ ಶುಭಾಶಯ ಕೋರಲಾಗಿದೆ. ಒಮ್ಮೆಲೇ ಆ ಪೋಸ್ಟ್​​ ನೋಡಿದ ಅಭಿಮಾನಿಗಳು ಶಾಕ್​ ಆದರು.

ಇದ್ದಕ್ಕಿದ್ದಂತೆ ಆ್ಯಕ್ಟೀವ್​ ಆಯ್ತು ಸುಶಾಂತ್​ ಸಿಂಗ್​ ಫೇಸ್​ಬುಕ್​ ಖಾತೆ; ಗಾಬರಿಗೊಂಡ ಅಭಿಮಾನಿಗಳು
ಸುಶಾಂತ್​ ಸಿಂಗ್​ ರಜಪೂತ್
TV9 Web
| Edited By: |

Updated on: Jan 02, 2022 | 5:21 PM

Share

ನಟ ಸುಶಾಂತ್​ ಸಿಂಗ್​ ರಜಪೂತ್ (Sushant Singh Rajput)​ ಅವರು ಅಕಾಲಿಕ ಮರಣ ಹೊಂದಿದ್ದು ನೋವಿನ ಸಂಗತಿ. ಬಾಲಿವುಡ್​ನಲ್ಲಿ ಅನೇಕ ವರ್ಷಗಳ ಕಾಲ ಮಿಂಚಬೇಕಾಗಿದ್ದ ಅವರು ಕೇವಲ 34ನೇ ವಯಸ್ಸಿಗೆ ತಮ್ಮ ಜೀವನ ಅಂತ್ಯ ಮಾಡಿಕೊಂಡರು. ಅವರದ್ದು ಆತ್ಮಹತ್ಯೆಯೋ ಕೊಲೆಯೋ ಎಂಬ ಬಗ್ಗೆ ಇನ್ನೂ ನಿಖರವಾದ ಮಾಹಿತಿ ಸಿಕ್ಕಿಲ್ಲ. ಒಟ್ಟಿನಲ್ಲಿ ಸುಶಾಂತ್​ ಸಾವಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಅವರ ಕುಟುಂಬದವರು ಮತ್ತು ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಅಭಿಯಾನ ಮಾಡುತ್ತಲೇ ಇದ್ದಾರೆ. ಈ ನಡುವೆ ಸುಶಾಂತ್​ ಸಿಂಗ್​ ರಜಪೂತ್​ ಅಭಿಮಾನಿಗಳಿಗೆ ಒಮ್ಮೆಲೇ ಗಾಬರಿ ಆಗುವಂತಹ ಘಟನೆ ನಡೆಯಿತು. ಅವರ ಫೇಸ್​ಬುಕ್​ (Sushant Singh Rajput Facebook) ಖಾತೆ ಇದ್ದಕ್ಕಿದ್ದಂತೆ ಆ್ಯಕ್ಟೀವ್​ ಆಯಿತು!

ಹೌದು, 2022ರ ಹೊಸ ವರ್ಷದ ಪ್ರಯುಕ್ತ ಸುಶಾಂತ್​ ಸಿಂಗ್​ ರಜಪೂತ್​ ಅವರ ಅಧಿಕೃತ ಫೇಸ್​ಬುಕ್​ ಖಾತೆಯಿಂದ ಎಲ್ಲರಿಗೂ ಶುಭಾಶಯ ಕೋರಲಾಗಿದೆ. ಒಮ್ಮೆಲೇ ಆ ಪೋಸ್ಟ್​​ ನೋಡಿದ ಅಭಿಮಾನಿಗಳು ಶಾಕ್​ ಆದರು. ನಿಧನರಾಗಿರುವ ಸುಶಾಂತ್​ ಸಿಂಗ್​ ರಜಪೂತ್​ ಅವರ ಫೇಸ್​ಬುಕ್​ ಖಾತೆ ಹೇಗೆ ಆ್ಯಕ್ಟೀವ್​ ಆಯಿತು ಎಂದು ಅಚ್ಚರಿ ಪಟ್ಟರು. ಸ್ವಲ್ಪ ಸುಧಾರಿಸಿಕೊಂಡು ಗಮನಿಸಿದಾಗ ಅಸಲಿ ವಿಷಯ ಗೊತ್ತಾಯಿತು.

ಸುಶಾಂತ್​ ಸಿಂಗ್​ ರಜಪೂತ್​ ಪರವಾಗಿ ಅವರ ಸಹೋದರಿ ಶ್ವೇತಾ ಸಿಂಗ್​ ಕೀರ್ತಿ ಅವರು ಈ ಪೋಸ್ಟ್​ ಮಾಡಿದ್ದಾರೆ. ಅದಕ್ಕೆ ಅಭಿಮಾನಿಗಳು ಹಲವು ರೀತಿಯಲ್ಲಿ ಕಮೆಂಟ್​ ಮಾಡಿದ್ದಾರೆ. ‘ಈ ಪೋಸ್ಟ್​ ನೋಡಿ ಒಮ್ಮೆಲೇ ಎದೆಬಡಿತ ನಿಂತಂಗಾಯಿತು’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಒಟ್ಟಾರೆ ಈ ಸಂದರ್ಭದಲ್ಲಿ ಸುಶಾಂತ್ ಅವರನ್ನು ಅಭಿಮಾನಿಗಳು ಸಖತ್​ ಮಿಸ್​ ಮಾಡಿಕೊಳ್ಳುತ್ತಿದ್ದಾರೆ.

ಟ್ರೋಲ್​ ಆಗಿದ್ದ ಸುಶಾಂತ್​ ಸಹೋದರಿ:

ಕೆಲವೇ ದಿನಗಳ ಹಿಂದೆ ಸೋಶಿಯಲ್​ ಮೀಡಿಯಾದಲ್ಲಿ ಬೋಲ್ಡ್​ ಫೋಟೋ ಶೇರ್​ ಮಾಡಿಕೊಂಡಿದ್ದ ಶ್ವೇತಾ ಸಿಂಗ್​ ಕೀರ್ತಿ ಅವರು ಟ್ರೋಲ್​ಗೆ ಒಳಗಾಗಿದ್ದರು. ಸುಶಾಂತ್​ ನಿಧನರಾದ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ಒಂದು ಆಂದೋಲನ ಶುರು ಆಯಿತು. #JusticeForSSR ಎಂಬ ಹ್ಯಾಶ್​ಟ್ಯಾಗ್​ ಮೂಲಕ ಲಕ್ಷಾಂತರ ಜನರು ಧ್ವನಿ ಎತ್ತಿದರು. ಸುಶಾಂತ್​ ಸಾವಿಗೆ ನ್ಯಾಯ ಒದಗಿಸಿಕೊಡಬೇಕು ಎಂಬ ಉದ್ದೇಶ ಈ ಆಂದೋಲನದ ಹಿಂದಿದೆ. ಅದರಲ್ಲಿ ಸುಶಾಂತ್​ ಅಭಿಮಾನಿಗಳು ಇಂದಿಗೂ ಭಾಗಿ ಆಗುತ್ತಲೇ ಇದ್ದಾರೆ. ಈ ನಡುವೆ ತಮ್ಮ ನಿಜವಾದ ಉದ್ದೇಶ ಮರೆತು, ಹಾಟ್​ ಫೋಟೋಗಳನ್ನು ಪೋಸ್ಟ್​ ಮಾಡುತ್ತಿರುವ ಸುಶಾಂತ್​ ಸಹೋದರಿ ಶ್ವೇತಾ ಸಿಂಗ್​ ಕೀರ್ತಿ ಅವರನ್ನು ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದರು.

#JusticeForSSR ಎಂಬ ಅಂದೋಲನ ಎಲ್ಲಿಗೆ ಹೋಯಿತು? ಸುಶಾಂತ್​ ಸಾವಿಗೆ ನ್ಯಾಯ ಕೊಡಿಸುವಲ್ಲಿ ನಿಮ್ಮ ಪ್ರಯತ್ನ ಎತ್ತ ಸಾಗಿದೆ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ‘ಅಭಿಮಾನಿಗಳೆಲ್ಲ ಸುಶಾಂತ್​ ನಿಧನಕ್ಕೆ ನ್ಯಾಯ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಸಹೋದರಿ ತನ್ನದೇ ಲೋಕದಲ್ಲಿ ಮುಳುಗಿದ್ದಾರೆ’ ಎಂದು ಜನರು ಕಮೆಂಟ್​ ಮಾಡಿದ್ದರು.

ಇದನ್ನೂ ಓದಿ:

ರಸ್ತೆ ಅಪಘಾತದಲ್ಲಿ ಸುಶಾಂತ್​ ಕುಟುಂಬದ 6 ಮಂದಿ ನಿಧನ; ಇನ್ನೂ 4 ಜನರ ಸ್ಥಿತಿ ಗಂಭೀರ

ಸುಶಾಂತ್​ ಪ್ರೇಯಸಿ ರಿಯಾ ಚಕ್ರವರ್ತಿ ಧರಿಸಿದ ಈ ಲೆಹೆಂಗಾ ಬೆಲೆ ಕೇಳಿ ಕಣ್ಣರಳಿಸಿದ ಫ್ಯಾನ್ಸ್​

Follow Us
TV9 Web
TV9 Web

TV9 Kannada

Read More
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ