Rishabh Pant: ಬಿಟ್ಟೂ ಬಿಡದೆ ರಿಷಭ್ ಪಂತ್ ಹಿಂದೆ ಬಿದ್ದ ಊರ್ವಶಿ ರೌಟೇಲಾ; ನಟಿಗೆ ಛೀಮಾರಿ

ಕಳೆದ ಕೆಲ ದಿನಗಳಿಂದ ಇಬ್ಬರ ಮಧ್ಯೆ ಕಿತ್ತಾಟ ನಡೆದೇ ಇತ್ತು. ಈಗ ರಿಷಭ್ ಪಂತ್ ಅಪಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಚಿಕಿತ್ಸೆ ನೀಡುವ ಕೆಲಸ ಆಗುತ್ತಿದೆ. ಈಗಲೂ ಊರ್ವಶಿ ಅವರು ರಿಷಭ್ ಅವರನ್ನು ಹಿಂಬಾಲಿಸಿದಂತಿದೆ.

Rishabh Pant: ಬಿಟ್ಟೂ ಬಿಡದೆ ರಿಷಭ್ ಪಂತ್ ಹಿಂದೆ ಬಿದ್ದ ಊರ್ವಶಿ ರೌಟೇಲಾ; ನಟಿಗೆ ಛೀಮಾರಿ
ಊರ್ವಶಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 06, 2023 | 10:58 AM

ನಟಿ ಊರ್ವಶಿ ರೌಟೇಲಾ (Urvashi Rautela) ಅವರು ಸಿನಿಮಾಗಳ ಮೂಲಕ ಫೇಮಸ್ ಆದರು. ಅವರಿಗೆ ಈಗ ತಾವು ಮೂಲೆಗುಂಪು ಆಗುತ್ತಿದ್ದೇನೆ ಅನಿಸಿದೆಯೋ ಏನೋ. ಮತ್ತೆ ಫೇಮ್ ಪಡೆಯಲು ಕ್ರಿಕೆಟರ್ ರಿಷಭ್ ಪಂತ್ (Rishabh Pant) ಹಿಂದೆ ಬಿದ್ದಂತಿದೆ. ರಿಷಭ್ ಸುಮ್ಮನಿದ್ದರೂ ಇವರು ಮಾತ್ರ ಬಿಡುತ್ತಿಲ್ಲ. ಸದ್ಯ ರಿಷಭ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಮಯದಲ್ಲೂ ಊರ್ವಶಿ ಅವರು ರಿಷಭ್ ಹಿಂದೆ ಬಿದ್ದಿದ್ದಾರೆ. ಇದಕ್ಕೆ ಅನೇಕರು ಛೀಮಾರಿ ಹಾಕಿದ್ದಾರೆ.

ಊರ್ವಶಿ ಹಾಗೂ ರಿಷಭ್ ಪಂತ್ ಈ ಮೊದಲು ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿತ್ತು. ಆದರೆ, ಇದನ್ನು ಇಬ್ಬರೂ ಒಪ್ಪಿಕೊಂಡಿಲ್ಲ. ಈಗ ಇವರ ಮಧ್ಯೆ ಬ್ರೇಕಪ್ ಆಗಿದೆ ಎನ್ನಲಾಗಿದೆ. ಹೀಗಿರುವಾಗಲೇ ಊರ್ವಶಿ ರೌಟೇಲಾ ಅವರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡುವಾಗ ‘ರಿಷಭ್ ಪಂತ್ ನನ್ನ ಭೇಟಿ ಮಾಡಲು ಹಲವು ಗಂಟೆ ಕಾದಿದ್ದರು’ ಎಂದಿದ್ದರು. ಇದು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಇದಕ್ಕೆ ರಿಷಭ್ ಪಂತ್ ಖಡಕ್ ಆಗಿ ತಿರುಗೇಟು ನೀಡುವ ಕೆಲಸ ಮಾಡಿದ್ದರು.

ಕಳೆದ ಕೆಲ ದಿನಗಳಿಂದ ಇಬ್ಬರ ಮಧ್ಯೆ ಕಿತ್ತಾಟ ನಡೆದೇ ಇತ್ತು. ಈಗ ರಿಷಭ್ ಪಂತ್ ಅಪಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಚಿಕಿತ್ಸೆ ನೀಡುವ ಕೆಲಸ ಆಗುತ್ತಿದೆ. ಈಗಲೂ ಊರ್ವಶಿ ಅವರು ರಿಷಭ್ ಅವರನ್ನು ಹಿಂಬಾಲಿಸಿದಂತಿದೆ. ರಿಷಭ್​ಗೆ ಅಪಘಾತದ ವಿಚಾರ ತಿಳಿದಾಗ ‘ಪ್ರಾರ್ಥನೆ’ ಎಂದು ಬರೆದುಕೊಂಡಿದ್ದರು. ಇದು ರಿಷಭ್​​ಗಾಗಿ ಹೇಳಿದ ಮಾತು ಎನ್ನಲಾಗಿತ್ತು. ಊರ್ವಶಿ ತಾಯಿ ‘ರಿಷಭ್ ಬೇಗ ಚೇತರಿಕೆ ಕಾಣಲಿ’ ಎಂದು ಬರೆದುಕೊಂಡಿದ್ದರು. ಇದಕ್ಕಾಗಿ ಊರ್ವಶಿಯನ್ನು ಟೀಕೆ ಮಾಡಲಾಗಿತ್ತು.

ಇದನ್ನೂ ಓದಿ
Image
‘ಆರ್​​ಪಿ ಎಂದರೆ ರಿಷಬ್ ಪಂತ್ ಅಲ್ಲ’; ಬಹುದಿನಗಳ ವದಂತಿ ಬಗ್ಗೆ ಮೌನ ಮುರಿದ ನಟಿ ಊರ್ವಶಿ ರೌಟೇಲಾ
Image
‘ನಾನು ರಿಷಭ್ ಪಂತ್​ಗೆ ಕ್ಷಮೆ ಕೇಳಿದ್ದಲ್ಲ..’; ಮತ್ತೆ ಪ್ಲೇಟ್ ಬದಲಿಸಿದ ನಟಿ ಊರ್ವಶಿ ರೌಟೇಲಾ
Image
ಯಾರೀ ಊರ್ವಶಿ ಎಂದ ಪಾಕ್ ಬೌಲರ್; ಕೋಪಗೊಂಡ ಬಾಲಿವುಡ್ ನಟಿ ಮಾಡಿದ್ದೇನು ಗೊತ್ತಾ?
Image
Urvashi Rautela: ಪಾಕಿಸ್ತಾನ ಕ್ರಿಕೆಟಿಗನ ಜೊತೆ ರೊಮ್ಯಾಂಟಿಕ್ ವಿಡಿಯೋ ಹಂಚಿಕೊಂಡ ಊರ್ವಶಿ ರೌಟೇಲ

ಇದನ್ನೂ ಓದಿ: ರಿಷಭ್ ಪಂತ್ ಬೇಗ ಗುಣಮುಖರಾಗಲಿ ಎಂದು ಕೋರಿದ ಊರ್ವಶಿ ತಾಯಿ; ಫ್ಯಾನ್ಸ್ ಕೊಟ್ರು ಖಡಕ್ ತಿರುಗೇಟು

ಸದ್ಯ ರಿಷಭ್ ಅವರಿಗೆ ಮುಂಬೈನ ಕೋಕಿಲಾಬೇನ್ ಧೀರುಬಾಯ್ ಅಂಬಾನಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಈ ಆಸ್ಪತ್ರೆಯ ಫೋಟೋನ ಊರ್ವಶಿ ಇನ್​​ಸ್ಟಾಗ್ರಾಮ್ ಸ್ಟೇಟಸ್​ನಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ಊರ್ವಶಿಯನ್ನು ಟೀಕೆ ಮಾಡಿದ್ದಾರೆ. ಪ್ರಚಾರಕ್ಕಾಗಿ ಊರ್ವಶಿ ಈ ರೀತಿ ಮಾಡುತ್ತಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಆದರೆ, ಈ ಬಗ್ಗೆ ಊರ್ವಶಿ ತಲೆಕೆಡಿಸಿಕೊಂಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:48 am, Fri, 6 January 23

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್