AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರ್ಫಾನ್​ ಖಾನ್​ ಜನ್ಮದಿನ: ‘ತಂದೆ ನಿಧನರಾದಾಗ 45 ದಿನ ಮನೆಯಿಂದ ನಾನು ಹೊರಬರಲಿಲ್ಲ’: ಪುತ್ರ ಬಬಿಲ್​ ಖಾನ್​

Irrfan Khan | Babil Khan: ಇಂದು (ಜ.7) ಖ್ಯಾತ ನಟ ಇರ್ಫಾನ್​ ಖಾನ್​ ಅವರ ಹುಟ್ಟುಹಬ್ಬ. ಆ ಸಲುವಾಗಿ ಅವರನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ಸ್ಮರಿಸಿಕೊಳ್ಳುತ್ತಿದ್ದಾರೆ.

ಇರ್ಫಾನ್​ ಖಾನ್​ ಜನ್ಮದಿನ: ‘ತಂದೆ ನಿಧನರಾದಾಗ 45 ದಿನ ಮನೆಯಿಂದ ನಾನು ಹೊರಬರಲಿಲ್ಲ’: ಪುತ್ರ ಬಬಿಲ್​ ಖಾನ್​
ಇರ್ಫಾನ್ ಖಾನ್, ಬಬಿಲ್ ಖಾನ್
TV9 Web
| Edited By: |

Updated on: Jan 07, 2023 | 7:30 AM

Share

ಭಾರತೀಯ ಚಿತ್ರರಂಗ ಕಂಡ ಅಪರೂಪದ ನಟ ಇರ್ಫಾನ್​ ಖಾನ್​ (Irrfan Khan). ಹಿಂದಿ ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದಿದ್ದ ಅವರು ಹಾಲಿವುಡ್​ ಮಂದಿಗೂ ಅಚ್ಚುಮೆಚ್ಚು ಆಗಿದ್ದರು. ಟಾಮ್​ ಹ್ಯಾಂಕ್ಸ್​ ಅವರಂತಹ ದಿಗ್ಗಜ ನಟರ ಜೊತೆ ತೆರೆಹಂಚಿಕೊಳ್ಳುವ ಅವಕಾಶವನ್ನು ಇರ್ಫಾನ್​ ಖಾನ್​ ಪಡೆದಿದ್ದರು. ಆದರೆ ಅಂಥ ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡಿದ್ದು ನೋವಿನ ಸಂಗತಿ. ಇಂದು (ಜ.7) ಅವರ ಜನ್ಮದಿನ (Irrfan Khan Birth Anniversary). ಒಂದು ವೇಳೆ ಅವರು ಬದುಕಿದ್ದರೆ 56ನೇ ವರ್ಷಕ್ಕೆ ಕಾಲಿಡಬೇಕಿತ್ತು. ಅಭಿಮಾನಿಗಳು ಅವರನ್ನು ಎಂದೆಂದಿಗೂ ಮಿಸ್​ ಮಾಡಿಕೊಳ್ಳುತ್ತಾರೆ. ಈಗ ಇರ್ಫಾನ್​ ಖಾನ್​ ಪುತ್ರ ಬಬಿಲ್​ ಖಾನ್​ (Irrfan Khan son Babil Khan) ಕೂಡ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೂ ಸಿನಿಪ್ರಿಯರಿಂದ ಪ್ರೋತ್ಸಾಹ ದೊರೆಯುತ್ತಿದೆ.

ಇರ್ಫಾನ್​ ಖಾನ್​ ನಿಧನದ ಬಳಿಕ ಬಬಿಲ್​ ಖಾನ್​ ಅವರು ಸಖತ್​ ಕುಗ್ಗಿ ಹೋಗಿದ್ದರು. ತಂದೆ ಆ ರೀತಿ ಬಿಟ್ಟು ಹೋಗುತ್ತಾರೆ ಎಂದು ಅವರು ನಿರೀಕ್ಷಿಸಿರಲಿಲ್ಲ. ಆ ಸಮಯದ ಕಹಿ ಅನುಭವನ್ನು ಬಬಿಲ್​ ಅವರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದುಂಟು. ಇರ್ಫಾನ್ ಖಾನ್​ ನಿಧನರಾದಾಗ ಬಬಿಲ್​ ಅವರು 45 ದಿನಗಳ ಕಾಲ ಮನೆಯಿಂದ ಹೊರಗೆ ಬಂದಿರಲಿಲ್ಲ. ತಂದೆ ಸಾವು ಅವರನ್ನು ಅಷ್ಟರಮಟ್ಟಿಗೆ ವಿಚಲಿತಗೊಳಿಸಿತ್ತು.

ಇದನ್ನೂ ಓದಿ: ಇರ್ಫಾನ್​ ಖಾನ್​ ಜನ್ಮದಿನ: ಅಪ್ರತಿಮ ಕಲಾವಿದನ 5 ಅತಿ ಮುಖ್ಯ ಸಿನಿಮಾಗಳು

ಇದನ್ನೂ ಓದಿ
Image
ಬಾಲಿವುಡ್​ನವರೂ ಕೆಟ್ಟ ಸಿನಿಮಾ ಮಾಡ್ತಾರೆ, ನಾವ್ಯಾಕೆ ಅವರಿಗೆ ರೇಂಜ್​ ಕೊಡಬೇಕು? ಸುದೀಪ್ ನೇರ ಪ್ರಶ್ನೆ
Image
ಬಾಲಿವುಡ್​ಗಿತ್ತು ಅಂಡರ್​​ವರ್ಲ್ಡ್​​ ಸಂಪರ್ಕ; ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ
Image
ಬಾಲಿವುಡ್​ vs ಸೌತ್ ಎಂದರೆ ನನಗೆ ಸಿಟ್ಟೇ ಬರುತ್ತದೆ; ಅಕ್ಷಯ್ ಕುಮಾರ್ ನೇರ ನುಡಿ
Image
ಸೌತ್​ ಚಿತ್ರಗಳ ಎದುರು ಬಾಲಿವುಡ್​ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್​ 2’ ಅಧೀರ ಸಂಜಯ್​ ದತ್​

ತಂದೆಯ ನಿಧನದ ನಂತರ ಬಬಿಲ್​ ಖಾನ್ ಅವರು ಬಣ್ಣ ಹಚ್ಚಲು ಆರಂಭಿಸಿದರು. ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್​ ಆದ ‘ಕಲಾ’ ಸಿನಿಮಾದಲ್ಲಿ ​ಅವರು ನಟಿಸಿದ್ದಾರೆ. ಈ ಚಿತ್ರದ ಪ್ರಮೋಷನ್​ ವೇಳೆ ತಂದೆಯ ಬಗ್ಗೆ ಬಬಿಲ್​ ಹೇಳಿಕೊಂಡರು. ‘ಮೊದಲ ದಿನ ನಾನು ನಂಬಲೇ ಇಲ್ಲ. ಒಂದು ವಾರ ಕಳೆಯಿತು. ಆ ನೋವು ನನ್ನನ್ನು ಘಾಸಿಗೊಳಿಸಿತು. ಕೆಟ್ಟ ಸುಳಿಯೊಳಗೆ ನಾನು ಸಿಲುಕಿದೆ. ರೂಮ್​ ಸೇರಿಕೊಂಡ ನಾನು ಒಂದೂವರೆ ತಿಂಗಳು ಹೊರಗೆ ಬರಲಿಲ್ಲ’ ಎಂದಿದ್ದಾರೆ ಬಬಿಲ್​ ಖಾನ್​.

ಇದನ್ನೂ ಓದಿ: ತಂದೆಯ ಬಟ್ಟೆಯನ್ನೇ ತೊಟ್ಟು ಫಿಲ್ಮ್​ ಫೇರ್​ ಸ್ವೀಕರಿಸಿದ ಇರ್ಫಾನ್​ ಖಾನ್​ ಪುತ್ರ

2018ರಲ್ಲಿ ಇರ್ಫಾನ್​ ಖಾನ್ ಅವರಿಗೆ ಕ್ಯಾನ್ಸರ್​ ಇರುವ ವಿಷಯ ತಿಳಿಯಿತು. ಆ ಸುದ್ದಿ ಹೊರಬಿದ್ದಾಗ ಅಭಿಮಾನಿಗಳಿಗೆ ಆಘಾತ ಆಯಿತು. ಬಳಿಕ ಅವರು ಚಿಕಿತ್ಸೆಗಾಗಿ ಇಂಗ್ಲೆಂಡ್​ಗೆ ತೆರಳಿದರು. 2019ರ ಫೆಬ್ರವರಿಯಲ್ಲಿ ಭಾರತಕ್ಕೆ ಮರಳಿದರು. ಇನ್ನೇನು ಗುಣಮುಖರಾಗುತ್ತಾರೆ ಎಂದೇ ಅಭಿಮಾನಿಗಳು ಭಾವಿಸಿದ್ದರು. ಆದರೆ ಆಗಿದ್ದೇ ಬೇರೆ. ಅಂತಿಮವಾಗಿ ಇರ್ಫಾನ್​ ಖಾನ್​ ಅವರನ್ನು ಕಳೆದುಕೊಳ್ಳಬೇಕಾಯಿತು.

ಇದನ್ನೂ ಓದಿ: ನಟ ಇರ್ಫಾನ್​ ಖಾನ್​ ಮತ್ತು ರಂಗಕರ್ಮಿ ಪ್ರಸನ್ನ ಒಡನಾಟದ ಇಣುಕು ನೋಟ..!

ಬಬಿಲ್​ ಖಾನ್​ ಅವರಿಗೆ ತಂದೆಯ ಸಾಧನೆಗಳೇ ಈಗ ಸ್ಫೂರ್ತಿ. ಚಿತ್ರರಂಗದಲ್ಲಿ ಅವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತಿವೆ. 1984ರ ಭೋಪಾಲ್​ ಅನಿಲ ದುರಂತದ ಘಟನೆಯನ್ನು ಆಧರಿಸಿದ ‘ದಿ ರೈಲ್ವೆ ಮೆನ್​’ ವೆಬ್​ ಸರಣಿಯಲ್ಲಿ ಬಬಿಲ್​ ಖಾನ್​ ನಟಿಸಲಿದ್ದಾರೆ. ಈ ಸೀರಿಸ್​ಗೆ ಯಶ್​ ರಾಜ್​ ಫಿಲ್ಮ್ಸ್​ ಬಂಡವಾಳ ಹೂಡಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು