ನಟ ಇರ್ಫಾನ್​ ಖಾನ್​ ಮತ್ತು ರಂಗಕರ್ಮಿ ಪ್ರಸನ್ನ ಒಡನಾಟದ ಇಣುಕು ನೋಟ..!

ನಟ ಇರ್ಫಾನ್​ ಖಾನ್​ ಮತ್ತು ರಂಗಕರ್ಮಿ ಪ್ರಸನ್ನ ಒಡನಾಟದ ಇಣುಕು ನೋಟ..!

ಮೈಸೂರು: ಮಧ್ಯವಯಸ್ಸಿನ, ಇನ್ನೂ ಬಾಳಿಬದುಕಬೇಕಿದ್ದ ಅಪ್ಪಟ ಪ್ರತಿಭೆಯೊಂದು ಕಮರಿಹೋಗಿದೆ. ಇರ್ಫಾನ್​ ಖಾನ್​ ಹೆಸರಿನಲ್ಲಿ, ಅವರು ನೋಡುವ ನೋಟದಲ್ಲೇ ಏನೋ ಒಂದು ರೀತಿಯ ಸೆಳೆತವಿತ್ತು. ಮಾಯೆಯಿತ್ತು. ಮಾತ್ರಿಕನಂತೆ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರು. ಇರ್ಫಾನ್​ ಖಾನ್​ಗೆ ಕೇವಲ ಸಿನಿಮಾದಲ್ಲಷ್ಟೇ ಆಸಕ್ತಿಯಿರಲಿಲ್ಲ. ರಂಗಭೂಮಿಯ ನಂಟನ್ನೂ ಹೊಂದಿದ್ದರು. ಗ್ರಾಮೀಣ ಬದುಕಿಗೆ ಅವರ ಮನಸ್ಸು ಸದಾ ತುಡಿಯುತ್ತಿತ್ತು.

ಕರ್ನಾಟಕದ ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಅವರ ಬಗ್ಗೆ ಇರ್ಫಾನ್​ಗೆ ಅಪಾರ ಗೌರವ-ಪ್ರೀತಿಯಿತ್ತು. ರಂಗಕರ್ಮಿ ಪ್ರಸನ್ನ ಅವರ ಗುಡಿ ಕೈಗಾರಿಕೆಗಳ ಬಗ್ಗೆ ಇರ್ಫಾನ್​ಗೆ ಸೆಳೆತವಿತ್ತು. ಐದಾರು ವರ್ಷಗಳ ಹಿಂದೆ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ಪ್ರಸನ್ನ ಅವರನ್ನು ಭೇಟಿಯಾಗಿ, ಗ್ರಾಮ ಸೇವ ಸಂಘದ ಪರಿಸರ ನೋಡಿ ಇರ್ಫಾನ್​ ಉಲ್ಲಸಿತರಾಗಿದ್ದರು. ಈ ಸಂದರ್ಭದಲ್ಲಿ ನೇತ್ರ ರಾಜು ಅವರು ತೆಗೆದ ಒಂದಷ್ಟು ಚೇತೋಹಾರಿ ಫೋಟೋಗಳು ನಿಮಗಾಗಿ ಇಲ್ಲಿವೆ. ಈ ಚಿತ್ರಗಳೇ ನಟ ಇರ್ಫಾನ್ ಬಗ್ಗೆ ಎಲ್ಲವನ್ನೂ ಹೇಳುತ್ತಿವೆ. (ಫೋಟೋ ಕೃಪೆ: ನೇತ್ರ ರಾಜು/ Nethra Raju )

Published On - 1:24 pm, Wed, 29 April 20

Click on your DTH Provider to Add TV9 Kannada