AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aryan Khan: 35 ವರ್ಷದ ಪಾಕಿಸ್ತಾನದ ನಟಿ ಜತೆ ಪಾರ್ಟಿ ಮಾಡಿದ ಆರ್ಯನ್ ಖಾನ್; ಫೋಟೋ ವೈರಲ್

ಈ ಪಾರ್ಟಿಯಲ್ಲಿ ಪಾಕಿಸ್ತಾನದ ನಟಿ ಸಾದಿಯಾ ಖಾನ್ ಕೂಡ ಭಾಗಿ ಆಗಿದ್ದರು. ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  

Aryan Khan: 35 ವರ್ಷದ ಪಾಕಿಸ್ತಾನದ ನಟಿ ಜತೆ ಪಾರ್ಟಿ ಮಾಡಿದ ಆರ್ಯನ್ ಖಾನ್; ಫೋಟೋ ವೈರಲ್
ಸಾದಿಯಾ-ಆರ್ಯನ್
TV9 Web
| Edited By: |

Updated on: Jan 07, 2023 | 2:17 PM

Share

ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರ ಮಗ ಆರ್ಯನ್ ಖಾನ್ ಅವರು ಸಾಕಷ್ಟು ಸುದ್ದಿಯಲ್ಲಿದ್ದಾರೆ. ಡ್ರಗ್​ ಕೇಸ್​ನಲ್ಲಿ ಅರೆಸ್ಟ್ ಆದ ನಂತರದಲ್ಲಿ ಅನೇಕರಿಗೆ ಅವರ ಬಗ್ಗೆ ತಿಳಿಯಿತು. ಈ ಕೇಸ್​ನಿಂದ ಅವರಿಗೆ ಒಂದಷ್ಟು ಜನಪ್ರಿಯತೆ ಸಿಕ್ಕಿದ್ದಂತೂ ಸುಳ್ಳಲ್ಲ. ಈಗ ಆರ್ಯನ್ ಖಾನ್ (Aryan Khan) ಅವರು ಡೇಟಿಂಗ್ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಅವರು ನಟಿ ಹಾಗೂ ಡ್ಯಾನ್ಸರ್ ನೋರಾ ಫತೇಹಿ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಹೀಗಿರುವಾಗಲೇ ಪಾಕಿಸ್ತಾನದ ನಟಿ ಜತೆಗೆ ಆರ್ಯನ್ ಖಾನ್ ಪಾರ್ಟಿ ಮಾಡಿದ್ದಾರೆ.

ಆರ್ಯನ್ ಖಾನ್ ಹಾಗೂ ಅವರ ಸಹೋದರಿ ಸುಹಾನಾ ಖಾನ್ ಹೊಸ ವರ್ಷ ಆಚರಣೆಗೆ ದುಬೈಗೆ ತೆರಳಿದ್ದರು. ಈ ಪಾರ್ಟಿಯಲ್ಲಿ ನೋರಾ ಕೂಡ ಇದ್ದರು. ಈ ಕಾರಣಕ್ಕೆ ಆರ್ಯನ್ ಹಾಗೂ ನೋರಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹುಟ್ಟಿಕೊಂಡಿತ್ತು. ಈ ಪಾರ್ಟಿಯಲ್ಲಿ ಪಾಕಿಸ್ತಾನದ ನಟಿ ಸಾದಿಯಾ ಖಾನ್ ಕೂಡ ಭಾಗಿ ಆಗಿದ್ದರು. ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಾದಿಯಾ ಅವರು ಇತ್ತೀಚೆಗೆ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಆರ್ಯನ್ ಖಾನ್ ಜತೆಗಿನ ಫೋಟೋ ಹಂಚಿಕೊಂಡಿದ್ದರು. ಈ ಫೋಟೋಗೆ ‘ಹೊಸವರ್ಷದ ಸಂದರ್ಭದಲ್ಲಿ ತೆಗೆದ ಫೋಟೋ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಸಾದಿಯಾ ಕಪ್ಪು ಬಣ್ಣದ ಬಟ್ಟೆಯಲ್ಲಿದ್ದಾರೆ. ಆರ್ಯನ್ ಖಾನ್ ಬಿಳಿ ಬಣ್ಣದ ಕೋಟ್​ ಧರಿಸಿದ್ದಾರೆ. ಈ ಪಾರ್ಟಿಯಲ್ಲಿ ಬಾಲಿವುಡ್​ನ ಹಲವರು ಭಾಗಿ ಆಗಿದ್ದರು. ಕರಣ್ ಜೋಹರ್, ನೋರಾ ಮೊದಲಾದವರು ಇದ್ದರು.

ಸಾದಿಯಾ ಅವರು ಹಲವು ಟಿವಿ ಶೋಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರಿಗೆ ಈಗ 35 ವರ್ಷ ವಯಸ್ಸು. ಅವರು 2019ರ ಸೀರಿಯಲ್​ ಒಂದರಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಅವರು ಯಾವುದೇ ಧಾರಾವಾಹಿಗಳಲ್ಲಿ ನಟಿಸಿಲ್ಲ.

ಆರ್ಯನ್ ಖಾನ್ ಅವರು ನಿರ್ದೇಶನಕ್ಕೆ ಇಳಿಯುತ್ತಿದ್ದಾರೆ. ವೆಬ್​ ಸೀರಿಸ್ ಇದಾಗಿದ್ದು, ಶಾರುಖ್ ಖಾನ್ ಒಡೆತನದ ರೆಡ್​ ಚಿಲ್ಲೀಸ್ ಎಂಟರ್​ಟೇನ್​ಮೆಂಟ್ ನಿರ್ಮಾಣ ಮಾಡುತ್ತಿದೆ. ಇನ್​ಸ್ಟಾಗ್ರಾಮ್​ನಲ್ಲಿ ಈ ಬಗ್ಗೆ ಅವರು ಬರೆದುಕೊಂಡಿದ್ದರು. ‘ಸ್ಕ್ರಿಪ್ಟ್ ಕೆಲಸ ಮುಗಿದಿದೆ. ಇನ್ನು ಆ್ಯಕ್ಷನ್​ ಕಟ್ ಹೇಳಬೇಕಿದೆ’ ಎಂದಿದ್ದರು ಅವರು.

ಇದನ್ನೂ ಓದಿ: Pathan Trailer: ಶಾರುಖ್ ಖಾನ್ ಚಿತ್ರಕ್ಕೆ ಮತ್ತೊಂದು ಪೆಟ್ಟು; ಆನ್​​ಲೈನ್​ನಲ್ಲಿ ‘ಪಠಾಣ್​’ ಚಿತ್ರದ ಟ್ರೇಲರ್ ಲೀಕ್​?

ಶಾರುಖ್ ಖಾನ್ ಅವರು ‘ಪಠಾಣ್​’ ಚಿತ್ರದ ಪ್ರಚಾರ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಜನವರಿ 25ರಂದು ರಿಲೀಸ್ ಆಗುತ್ತಿದೆ. ಶಾರುಖ್ ಖಾನ್ ಅವರು 4 ವರ್ಷಗಳ ಬಳಿಕ ದೊಡ್ಡ ಪರದೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ