ಗೋವಾದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋ ಹಂಚಿಕೊಂಡ ತಮನ್ನಾ; ಅಭಿಮಾನಿಗಳು ಕೇಳಿದ್ದು ಒಂದೇ ಪ್ರಶ್ನೆ
ತಮನ್ನಾ ಅವರು ಹೊಸ ವರ್ಷ ಆಚರಣೆಗೆ ಗೋವಾಗೆ ತೆರಳಿದ್ದರು. ಅವರ ಜತೆ ಬಾಲಿವುಡ್ ನಟ ವಿಜಯ್ ವರ್ಮಾ ಕೂಡ ಇದ್ದರು. ಇಬ್ಬರೂ ಸೇರಿ ಹೊಸವರ್ಷ ಆಚರಿಸಿಕೊಂಡಿದ್ದಾರೆ. ಇಬ್ಬರೂ ಕಿಸ್ ಮಾಡಿಕೊಳ್ಳುತ್ತಿರುವ ವಿಡಿಯೋ ಒಂದು ವೈರಲ್ ಆಗಿತ್ತು.

ಹೀರೋ ಅಥವಾ ಹೀರೋಯಿನ್ ಕುರಿತು ಡೇಟಿಂಗ್ ಮಾಹಿತಿ ಹೊರಬಿದ್ದರೆ ಸಾಕು ಸೋಶಿಯಲ್ ಮೀಡಿಯಾದಲ್ಲಿ (Social Media) ಅವರು ಹಾಕುವ ಎಲ್ಲಾ ಪೋಸ್ಟ್ಗಳಿಗೆ ಫ್ಯಾನ್ಸ್ ಆ ಬಗ್ಗೆಯೇ ಪ್ರಶ್ನೆ ಮಾಡುತ್ತಾರೆ. ಸೆಲೆಬ್ರಿಟಿಗಳಿಗೆ ಇದು ಕಾಮನ್ ಎಂಬಂತಾಗಿದೆ. ಹೀಗಾಗಿ, ಈ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಈಗ ನಟಿ ತಮನ್ನಾಗೂ (Tamannaah) ಇದೇ ಮಾದರಿಯ ಪ್ರಶ್ನೆ ಎದುರಾಗಿದೆ. ಆದರೆ, ಅವರು ಇದಕ್ಕೆ ಉತ್ತರಿಸುವ ಗೋಜಿಗೆ ಹೋಗಿಲ್ಲ.
ತಮನ್ನಾ ಅವರು ಹೊಸ ವರ್ಷ ಆಚರಣೆಗೆ ಗೋವಾಗೆ ತೆರಳಿದ್ದರು. ಅವರ ಜತೆ ಬಾಲಿವುಡ್ ನಟ ವಿಜಯ್ ವರ್ಮಾ ಕೂಡ ಇದ್ದರು. ಇಬ್ಬರೂ ಸೇರಿ ಹೊಸವರ್ಷ ಆಚರಿಸಿಕೊಂಡಿದ್ದಾರೆ. ಇಬ್ಬರೂ ಕಿಸ್ ಮಾಡಿಕೊಳ್ಳುತ್ತಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಖಚಿತವಾಗಿತ್ತು. ಈಗ ನಟಿ ತಮನ್ನಾ ಅವರು ಗೋವಾದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋ ಹಂಚಿಕೊಂಡಿದ್ದಾರೆ.
ಬೀಚ್ನಲ್ಲಿ ಇರುವ ಫೋಟೋ, ಹೋಟೆಲ್ನಲ್ಲಿ ಊಟ ಮಾಡುತ್ತಿರುವ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಈ ಫೋಟೋ ನೋಡುತ್ತಿದ್ದಂತೆ ಫ್ಯಾನ್ಸ್ ವಿಜಯ್ ವರ್ಮಾ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ‘ಈ ಫೋಟೋಗಳನ್ನು ಕ್ಲಿಕ್ಕಿಸಿದ್ದು ವಿಜಯ್ ವರ್ಮಾ ಅಲ್ಲವೇ? ಅವರಿಗೆ ಕ್ರೆಡಿಟ್ ಕೊಡಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ತಮನ್ನಾ ಹಾಗೂ ವಿಜಯ್ ಜೋಡಿ ಹೇಗೆ ಕಾಣುತ್ತದೆ ಎಂಬ ಬಗ್ಗೆ ಬರೆದುಕೊಂಡಿದ್ದಾರೆ.
View this post on Instagram
ಇದನ್ನೂ ಓದಿ: ಗೋವಾದಲ್ಲಿ ವಿಜಯ್ ವರ್ಮಾ ಜತೆ ತಮನ್ನಾ ಕಿಸ್ಸಿಂಗ್? ಹೊಸ ವರ್ಷಾಚರಣೆಯ ವಿಡಿಯೋ ವೈರಲ್
ವಿಜಯ್ ವರ್ಮಾ ಹಾಗೂ ತಮನ್ನಾ ಇಬ್ಬರೂ ಒಟ್ಟಾಗಿ ನಟಿಸಿದ ಮೊದಲ ಪ್ರಾಜೆಕ್ಟ್ ‘ಲಸ್ಟ್ ಸ್ಟೋರಿಸ್ 2’. ಸದ್ಯ ಇದರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಸಿನಿಮಾದ ಸೆಟ್ನಲ್ಲಿ ವಿಜಯ್ ವರ್ಮಾ ಹಾಗೂ ತಮನ್ನಾ ಮಧ್ಯೆ ಪ್ರೀತಿ ಮೂಡಿದೆ ಎನ್ನಲಾಗಿದೆ. ಈ ಪ್ರಾಜೆಕ್ಟ್ ಬಗ್ಗೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಹೊಸ ವರ್ಷಕ್ಕೆ ವೈರಲ್ ಆಗಿತ್ತು ವಿಡಿಯೋ
ಗೋವಾದಲ್ಲಿ ಹೊಸವರ್ಷದ ಸಂಭ್ರಮಾಚರಣೆಯಲ್ಲಿ ವಿಜಯ್ ಹಾಗೂ ತಮನ್ನಾ ಭಾಗಿ ಆಗಿದ್ದರು. ಹೊಸ ವರ್ಷವನ್ನು ಸ್ವಾಗತಿಸುವಾಗ ಇಬ್ಬರೂ ಖುಷಿಯಲ್ಲಿ ಕಿಸ್ ಮಾಡಿಕೊಂಡಿದ್ದರು. ಲಿಪ್ಲಾಕ್ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ವಿಡಿಯೋ ನೋಡಿ ಫ್ಯಾನ್ಸ್ ಅಚ್ಚರಿಹೊರಹಾಕಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:55 pm, Sat, 7 January 23