AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಹುಬಲಿ’ ಸುಂದರಿ ತಮನ್ನಾಳಿಂದ ತೊಟ್ಟ ಉಡುಗೆಯ ಸೊಬಗು ಹೆಚ್ಚುತ್ತದೆ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು!

‘ಬಾಹುಬಲಿ’ ಸುಂದರಿ ತಮನ್ನಾಳಿಂದ ತೊಟ್ಟ ಉಡುಗೆಯ ಸೊಬಗು ಹೆಚ್ಚುತ್ತದೆ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Aug 28, 2021 | 6:00 PM

ಬಾಹುಬಲಿ ಚಿತ್ರದಲ್ಲಿ ತನ್ನ ಅಭಿನಯ ಮತ್ತು ಸುಂದರ ಲುಕ್ಸ್​​ನಿಂದ ಮನೆಮಾತಾಗಿದ್ದ ತಮನ್ನಾ ಫಿಟ್ನೆಸ್ ಬಗ್ಗೆ ಬಹಳ ಕಟ್ಟುನಿಟ್ಟು. ಊಟ ತಪ್ಪಿಸಿದರೂ ಜಿಮ್ನಲ್ಲಿ ವರ್ಕ್ ಔಟ್ ಮಾಡುವುದನ್ನು ತಪ್ಪಿಸಲಾರರು.

‘ಬಾಹುಬಲಿ’ ಚಿತ್ರದ ಬೆಡಗಿ ತಮನ್ನಾ ಭಾಟಿಯಾ ಏನನ್ನೂ ಮಾಡದೆ ಸಹ ಸುದ್ದಿಯಲ್ಲಿರುತ್ತಾರೆ. ಆಕೆ ಸೌಂದರ್ಯ ದೇವತೆ ಅನ್ನೋದರಲ್ಲಿ ದೂಸ್ರಾ ಮಾತಿಲ್ಲ. ಎತ್ತರದ ನಿಲುವು, ಶಿಲ್ಪಿಯೊಬ್ಬ ಕಟೆದಂಥ ಮೈಮಾಟ, ಆಕರ್ಷಕ ರೂಪ ಮತ್ತು ಎಲ್ಲಕ್ಕೂ ಮಿಗಿಲಾಗಿ ಡೌನ್ ಟು ಅರ್ಥ್ ಸ್ವಭಾವ. ಯಾರೊಂದಿಗೂ ಹೆಚ್ಚು ಮಾತಿಲ್ಲ, ಗಾಸಿಪ್ಗಳಿಂದ ಗಾವುದ ದೂರ ಮತ್ತು ಶೂಟಿಂಗ್ ನಡೆಯುವಾಗ ಲೈಟ್ಬಾಯ್ಗಳೊಂದಿಗೂ ಆತ್ಮೀಯತೆಯಿಂದ ಮಾತಾಡುವ ಆಕೆ ಎಲ್ಲರಿಗೂ ಅಚ್ಚುಮೆಚ್ಚು. ಹಾಗೆ ನೋಡಿದರೆ, ಆಕೆ ದಕ್ಷಿಣದ ಚಿತ್ರಗಳಲ್ಲಿ ಜಾಸ್ತಿ ತೊಡಗಿಸಿಕೊಂಡಿದ್ದು, ಕೆಲವೇ ಕೆಲವು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಮಾಡ್ ಉಡುಗೆ ಮತ್ತು ಸೀರೆ ಎರಡರಲ್ಲೂ ಬಹಳ ಸುಂದರಳಾಗಿ ಕಾಣುವ ತಮನ್ನಾ ಸೋಷಿಯಲ್ ಮೀಡಿಯಾನಲ್ಲಿ ತನ್ನ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇಲ್ಲಿರುವ ವಿಡಿಯೋ ನೋಡಿ. ತಿಳಿ ನೇರಳೆ ಬಣ್ಣದ ಸೀರೆಯಲ್ಲಿ ಆಕೆ ಅಪ್ಸರೆಯಂತೆ ಕಾಣುತ್ತಿದ್ದಾರೆ. ಈ ಸೀರೆಯ ಬೆಲೆ ರೂ 62,000 ಅಂತೆ. ಸರಿ, ಸೀರೆ ಬಿಡಿ, ಮೈಗೆ ಬಿಗಿದಪ್ಪಿರುವ ಡ್ರೆಸ್ನಲ್ಲಿ ಆಕೆಯನ್ನು ನೋಡಿ. ಪ್ರಾಯ ಮೀರಿದವರೂ ವ್ಹಾವ್ ಅನ್ನದಿರಲಾರರು!

ಬಾಹುಬಲಿ ಚಿತ್ರದಲ್ಲಿ ತನ್ನ ಅಭಿನಯ ಮತ್ತು ಸುಂದರ ಲುಕ್ಸ್​​ನಿಂದ ಮನೆಮಾತಾಗಿದ್ದ ತಮನ್ನಾ ಫಿಟ್ನೆಸ್ ಬಗ್ಗೆ ಬಹಳ ಕಟ್ಟುನಿಟ್ಟು. ಊಟ ತಪ್ಪಿಸಿದರೂ ಜಿಮ್ನಲ್ಲಿ ವರ್ಕ್ ಔಟ್ ಮಾಡುವುದನ್ನು ತಪ್ಪಿಸಲಾರರು. ನಿಮಗೆ ನೆನಪಿರಬಹುದು, ಕಳೆದ ಅಕ್ಟೋಬರ್ನಲ್ಲಿ ತಮನ್ನಾಗೆ ಕೊವಿಡ್-19 ಸೋಂಕು ತಾಕಿತ್ತು. ಚೇತರಿಸಿಕೊಂಡ ನಂತರ ಆಯಾಸ ಮತ್ತು ಬಳಲಿಕೆ ಬಹಳ ದಿನಗಳವರಗೆ ಕಾಡಿತ್ತು ಅಂತ ಆಕೆ ಹೇಳಿದ್ದರು. ತನ್ನಂಥ ಪಿಟ್ನೆಸ್ ಫ್ರೀಕ್ಗೆ ಸೋಂಕು ಆ ಪರಿ ಕಾಡಿತ್ತೆಂದರೆ, ಜಾಗಿಂಗ್ ಅಥವಾ ಫಿಟ್ನೆಸ್ ಕಡೆ ಗಮನ ನೀಡದವರ ಪಾಡೇನು ಎಂದು ತಮನ್ನಾ ಹೇಳಿದ್ದರು.

ತಮನ್ನಾ ಪಂಜಾಬಿನವರಾದರೂ ಬೆಳಗ್ಗೆ ತಿಂಡಿಗೆ ಇಡ್ಲಿ, ವಡೆ, ದೋಸೆ ಮತ್ತು ಅಪ್ಪಮ್ ಗಳೇ ಬೇಕು. ಆಕೆ, ದಕ್ಷಿಣದ ಆಹಾರ ತಿನ್ನಲಿ ಅಥವಾ ಉತ್ತರ ಭಾರತದ್ದು, ನಮ್ಮ ಕಣ್ಣುಗಳಿಗೆ ಮಾತ್ರ ಸದಾ ಹೀಗೆ ಸುಂದರವಾಗಿ ಕಾಣುತ್ತಿರಲಿ.

ಇದನ್ನೂ ಓದಿ:  Viral Video: ಇಷ್ಟವಾದ ತಿಂಡಿಯನ್ನು ಎಗರಿಸಲು ಈ ನಾಯಿ ಮಾಡಿದ ಖತರ್ನಾಕ್ ಪ್ಲಾನ್ ಏನು?; ವಿಡಿಯೊ ನೋಡಿ 

Published on: Aug 28, 2021 05:58 PM