Tamannaah: ತಮನ್ನಾ-ವಿಜಯ್ ವರ್ಮಾ ಲವ್ ಸ್ಟೋರಿ ಆರಂಭವಾಗಿದ್ದು ಹೇಗೆ? ಇಲ್ಲಿದೆ ಪ್ರೇಮ ಕಥೆ
Tamannaah Love Story: ಇತ್ತೀಚೆಗೆ ಈ ಜೋಡಿ ಗೋವಾಗೆ ತೆರಳಿತ್ತು. ಅಲ್ಲಿ ಇವರು ಹೊಸವರ್ಷವನ್ನು ಸ್ವಾಗತಿಸಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಈ ವೇಳೆ ಅವರು ಪರಸ್ಪರ ಕಿಸ್ ಮಾಡಿಕೊಂಡಿದ್ದರು. ಈ ಮೂಲಕ ಇಬ್ಬರೂ ಪ್ರೀತಿಯಲ್ಲಿರುವ ವಿಚಾರ ಅಧಿಕೃತ ಆಗಿತ್ತು.
ನಟಿ ತಮನ್ನಾ (Tamannaah) ಹಾಗೂ ವಿಜಯ್ ವರ್ಮಾ (Vijay Varma) ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಇದಕ್ಕೆ ಸಾಕ್ಷ್ಯ ಎಂಬಂತೆ ಇತ್ತೀಚೆಗೆ ತಮನ್ನಾ ಹಾಗೂ ವಿಜಯ್ ಹೊಸ ವರ್ಷದ ಸಂದರ್ಭದಲ್ಲಿ ಪರಸ್ಪರ ತುಟಿಗೆ ಮುತ್ತಿಟ್ಟಿದ್ದರು. ಈ ವಿಡಿಯೋ ನೋಡಿ ಫ್ಯಾನ್ಸ್ ಅಚ್ಚರಿ ಹೊರಹಾಕಿದ್ದರು. ಇವರ ಮಧ್ಯೆ ಪ್ರೀತಿ ಮೂಡಿದ್ದು ಹೇಗೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ನಟಿ ತಮನ್ನಾ ಅವರು ದಕ್ಷಿಣ ಭಾರತದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಇದರ ಜತೆಗೆ ಅವರು ಬಾಲಿವುಡ್ನಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಕೆಲವು ಹಿಂದಿ ಚಿತ್ರಗಳಲ್ಲಿ ಅವರು ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ತಮನ್ನಾ ಅವರು ಸುಜೋಯ್ ಘೋಷ್ ನಿರ್ದೇಶನದ ‘ಲಸ್ಟ್ ಸ್ಟೋರಿಸ್ 2’ನಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ವಿಜಯ್ ವರ್ಮಾ ಕೂಡ ನಟಿಸಿದ್ದಾರೆ. ಇಬ್ಬರೂ ಮೊದಲ ಬಾರಿಗೆ ಭೇಟಿ ಆಗಿದ್ದು ‘ಲಸ್ಟ್ ಸ್ಟೋರಿಸ್ 2’ ಚಿತ್ರದ ಸೆಟ್ನಲ್ಲಿ ಎನ್ನಲಾಗಿದೆ.
‘ಇಬ್ಬರೂ ಸೆಟ್ನಲ್ಲಿ ಭೇಟಿ ಆದರು. ಒಬ್ಬರ ಕೆಲಸವನ್ನು ಮತ್ತೊಬ್ಬರು ಮೆಚ್ಚಿಕೊಂಡಿದ್ದಾರೆ. ಇವರ ಮಧ್ಯೆ ಮೂಡಿದ್ದ ಗೆಳೆತನ ಈಗ ಪ್ರೀತಿಗೆ ತಿರುಗಿದೆ’ ಎಂದು ಮೂಲಗಳು ಹೇಳಿರುವುದಾಗಿ ನ್ಯೂಸ್18 ವರದಿ ಮಾಡಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಇತ್ತೀಚೆಗೆ ಈ ಜೋಡಿ ಗೋವಾಗೆ ತೆರಳಿತ್ತು. ಅಲ್ಲಿ ಇವರು ಹೊಸವರ್ಷವನ್ನು ಸ್ವಾಗತಿಸಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಈ ವೇಳೆ ಅವರು ಪರಸ್ಪರ ಕಿಸ್ ಮಾಡಿಕೊಂಡಿದ್ದರು. ಈ ಮೂಲಕ ಇಬ್ಬರೂ ಪ್ರೀತಿಯಲ್ಲಿರುವ ವಿಚಾರ ಅಧಿಕೃತ ಆಗಿತ್ತು. ಹೀಗಿರುವಾಗಲೇ ತಮನ್ನಾ ಹಾಗೂ ವಿಜಯ್ ಒಂದೇ ವಿಮಾನದಲ್ಲಿ ಮುಂಬೈಗೆ ಬಂದಿದ್ದಾರೆ. ಪಾಪರಾಜಿಗಳ ಕ್ಯಾಮೆರಾಗೆ ಇವರು ಪೋಸ್ ನೀಡಿದ್ದಾರೆ.
ಇದನ್ನೂ ಓದಿ: ಗೋವಾದಲ್ಲಿ ವಿಜಯ್ ವರ್ಮಾ ಜತೆ ತಮನ್ನಾ ಕಿಸ್ಸಿಂಗ್? ಹೊಸ ವರ್ಷಾಚರಣೆಯ ವಿಡಿಯೋ ವೈರಲ್
ವಿಜಯ್ ವರ್ಮಾ ಜತೆ ತಮನ್ನಾ ಡೇಟ್ ಮಾಡುತ್ತಿರುವ ವಿಚಾರ ಅನೇಕರಿಗೆ ಅಚ್ಚರಿ ಮೂಡಿಸಿದೆ. ಇದು ಹೇಗೆ ಸಾಧ್ಯ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಈ ಸುದ್ದಿ ಫೇಕ್ ಆಗಿರಲಿ ಎಂದು ಕೋರಿಕೊಂಡಿದ್ದಾರೆ. ತಮನ್ನಾ ಮದುವೆ ಆಗಲಿದ್ದಾರೆ ಎಂದು ಈ ಮೊದಲು ಸುದ್ದಿ ಹರಿದಾಡಿತ್ತು. ಇದನ್ನು ಅವರು ಅಲ್ಲಗಳೆದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ