ಗೋವಾದಲ್ಲಿ ವಿಜಯ್ ವರ್ಮಾ ಜತೆ ತಮನ್ನಾ ಕಿಸ್ಸಿಂಗ್? ಹೊಸ ವರ್ಷಾಚರಣೆಯ ವಿಡಿಯೋ ವೈರಲ್

Tamannaah: ಹೊಸ ವರ್ಷ ಆಚರಿಸಿಕೊಳ್ಳಲು ಅನೇಕ ಸೆಲೆಬ್ರಿಟಿಗಳು ಬೇರೆ ಬೇರೆ ಕಡೆಗಳಿಗೆ ತೆರಳಿದ್ದರು. ಅದೇ ರೀತಿ ತಮನ್ನಾ ಈ ವರ್ಷ ಗೋವಾದಲ್ಲಿ ಹೊಸ ವರ್ಷವನ್ನು ವೆಲ್​ಕಮ್ ಮಾಡಿದ್ದಾರೆ.

ಗೋವಾದಲ್ಲಿ ವಿಜಯ್ ವರ್ಮಾ ಜತೆ ತಮನ್ನಾ ಕಿಸ್ಸಿಂಗ್? ಹೊಸ ವರ್ಷಾಚರಣೆಯ ವಿಡಿಯೋ ವೈರಲ್
ತಮನ್ನಾ-ವಿಜಯ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 03, 2023 | 7:48 AM

ನಟಿ ತಮನ್ನಾ (Tamannaah) ಅವರು ವೈಯಕ್ತಿಕ ವಿಚಾರಗಳನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಲು ಹೆಚ್ಚು ಇಷ್ಟಪಡುವುದಿಲ್ಲ. ಲವ್​ ಲೈಫ್ ವಿಚಾರದಲ್ಲಂತೂ ಗೌಪ್ಯತೆ ಕಾಪಾಡಿಕೊಳ್ಳಲು ಆದ್ಯತೆ ನೀಡುತ್ತಾರೆ. ಇತ್ತೀಚೆಗೆ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಇದನ್ನು ತಮನ್ನಾ ಅಲ್ಲಗಳೆದಿದ್ದರು. ಆದರೆ, ಈಗ ಅವರ ಫ್ಯಾನ್​ ಪೇಜ್​​ಗಳಲ್ಲಿ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹಿಂದಿ ನಟ ವಿಜಯ್ ವರ್ಮಾಗೆ (Vijay Varma) ಅವರು ಕಿಸ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ವಿಚಾರ ಸಾಕಷ್ಟು ಅಚ್ಚರಿ ಮೂಡಿಸಿದೆ.

ಹೊಸ ವರ್ಷ ಆಚರಿಸಿಕೊಳ್ಳಲು ಅನೇಕ ಸೆಲೆಬ್ರಿಟಿಗಳು ಬೇರೆ ಬೇರೆ ಕಡೆಗಳಿಗೆ ತೆರಳಿದ್ದರು. ಅದೇ ರೀತಿ ತಮನ್ನಾ ಈ ವರ್ಷ ಗೋವಾದಲ್ಲಿ ಹೊಸ ವರ್ಷವನ್ನು ವೆಲ್​ಕಮ್ ಮಾಡಿದ್ದಾರೆ. ತಮನ್ನಾ ಜತೆ ವಿಜಯ್ ವರ್ಮಾ ಕೂಡ ಇದ್ದರು ಎನ್ನಲಾಗಿದೆ. ಇಬ್ಬರೂ ಒಟ್ಟಾಗಿ ಸಮಯ ಕಳೆದ ಫೋಟೋಗಳು ವೈರಲ್ ಆಗಿವೆ. ಇದರ ಜತೆಗೆ ವಿಡಿಯೋ ಒಂದು ಸಾಕಷ್ಟು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ
Image
 Tamannaah Birthday: ‘ಮಿಲ್ಕಿ ಬ್ಯೂಟಿ’ ಎಂದು ಕರೆದರೆ ತಮನ್ನಾಗೆ ಬರುತ್ತೆ ಬಲು ಕೋಪ
Image
ಕಾನ್ ಚಿತ್ರೋತ್ಸವದಲ್ಲಿ ಮಿಂಚಿದ ತಮನ್ನಾ, ಊರ್ವಶಿ ರೌಟೇಲಾ; ಇಲ್ಲಿವೆ ಕಲರ್​ಫುಲ್​ ಫೋಟೋಗಳು
Image
‘ಬಾಹುಬಲಿ’ ಸುಂದರಿ ತಮನ್ನಾಳಿಂದ ತೊಟ್ಟ ಉಡುಗೆಯ ಸೊಬಗು ಹೆಚ್ಚುತ್ತದೆ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು!

ಈ ವಿಡಿಯೋದಲ್ಲಿ ತಮನ್ನಾ ಹಾಗೂ ವಿಜಯ್ ಒಟ್ಟಿಗೆ ನಿಂತಿದ್ದು, ಕಿಸ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ವಿಡಿಯೋದಲ್ಲಿ ಇದರ ಸ್ಪಷ್ಟ ಚಿತ್ರಣ ಇಲ್ಲ. ಫ್ಯಾನ್​ಪೇಜ್​ಗಳು ಮಾತ್ರ ಇದು ತಮನ್ನಾ ಹಾಗೂ ವಿಜಯ್ ವರ್ಮಾ ಎಂದೇ ಹೇಳುತ್ತಿವೆ. ಈ ವಿಡಿಯೋದ ಅಸಲಿ ವಿಚಾರ ಇನ್ನಷ್ಟೇ ತಿಳಿಯಬೇಕಿದೆ. ವಿಜಯ್ ಬಿಳಿ ಬಣ್ಣದ ಬಟ್ಟೆ ಧರಿಸಿದ್ದಾರೆ. ತಮನ್ನಾ ಅವರು ಪಿಂಕ್ ಬಣ್ಣದ ಡ್ರೆಸ್ ಹಾಕಿದ್ದಾರೆ.

ಇದನ್ನೂ ಓದಿ:  Tamannaah Birthday: ‘ಮಿಲ್ಕಿ ಬ್ಯೂಟಿ’ ಎಂದು ಕರೆದರೆ ತಮನ್ನಾಗೆ ಬರುತ್ತೆ ಬಲು ಕೋಪ

ವಿಜಯ್ ವರ್ಮಾ ಅವರಿಗೆ ಬಾಲಿವುಡ್​ನಲ್ಲಿ ಸಾಕಷ್ಟು ಬೇಡಿಕೆ ಇದೆ. 2016ರ ಸೂಪರ್ ಹಿಟ್ ಚಿತ್ರ ‘ಪಿಂಕ್​’, ‘ಗಲ್ಲಿ ಬಾಯ್​’ ಮೊದಲಾದ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ‘ಲಸ್ಟ್​​ ಸ್ಟೋರಿಸ್​ 2’ನಲ್ಲಿ ಈ ಜೋಡಿ ಒಟ್ಟಾಗಿ ನಟಿಸಿದೆ ಎನ್ನಲಾಗಿದೆ. ಈ ವೇಳೆ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿರಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ. ಈಗ ವೈರಲ್ ಆಗಿರುವ ವಿಡಿಯೋಗೆ ಸಂಬಂಧಿಸಿ ತಮನ್ನಾ ಕಡೆಯಿಂದ ಸ್ಪಷ್ಟನೆ ಸಿಗಬೇಕಿದೆ. ತಮನ್ನಾ ಅವರು ಹಲವು ಪ್ರಾಜೆಕ್ಟ್​​ಗಳಲ್ಲಿ ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?