Sign In

By signing in or creating an account, you agree with Associated Broadcasting Company's Terms & Conditions and Privacy Policy.

Salman Khan: ಸಲ್ಮಾನ್​ ಖಾನ್​ ಭೇಟಿಗಾಗಿ 1,100 ಕಿ.ಮೀ. ಸೈಕಲ್​ ಸವಾರಿ ಮಾಡಿದ ಅಭಿಮಾನಿ; ಕಡೆಗೂ ಸಿಕ್ತು ದರ್ಶನ

Salman Khan Viral Photo: ಸಲ್ಮಾನ್​ ಖಾನ್​ ಅವರನ್ನು ಸಮೀರ್​ ಭೇಟಿ ಮಾಡಿರುವ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದಕ್ಕೆ ಸಾವಿರಾರು ಜನರು ಕಮೆಂಟ್​ ಮಾಡಿದ್ದಾರೆ.

Salman Khan: ಸಲ್ಮಾನ್​ ಖಾನ್​ ಭೇಟಿಗಾಗಿ 1,100 ಕಿ.ಮೀ. ಸೈಕಲ್​ ಸವಾರಿ ಮಾಡಿದ ಅಭಿಮಾನಿ; ಕಡೆಗೂ ಸಿಕ್ತು ದರ್ಶನ
ಅಭಿಮಾನಿ ಸಮೀರ್​ ಜೊತೆ ಸಲ್ಮಾನ್​ ಖಾನ್​
Follow us
TV9 Web
| Updated By: ಮದನ್​ ಕುಮಾರ್​

Updated on: Jan 03, 2023 | 4:22 PM

ನಟ ಸಲ್ಮಾನ್​ ಖಾನ್​ (Salman Khan) ಅವರನ್ನು ಭೇಟಿ ಮಾಡಬೇಕು ಎಂಬುದು ಕೋಟ್ಯಂತರ ಅಭಿಮಾನಿಗಳ ಆಸೆ. ಆದರೆ ಎಲ್ಲರಿಗೂ ಆ ಆಸೆ ಈಡೇರುವುದಿಲ್ಲ. ತಮ್ಮ ನೆಚ್ಚಿನ ನಟನನ್ನು ಮೀಟ್​ ಮಾಡಬೇಕು ಹಾಗೂ ಅವರ ಜೊತೆ ಒಂದು ಫೋಟೋ ತೆಗೆಸಿಕೊಳ್ಳಬೇಕು ಅಂತ ಜನರು ಬಗೆಬಗೆಯ ಕಸರತ್ತುಗಳನ್ನು ಮಾಡುತ್ತಾರೆ. ಅದೇ ರೀತಿ, ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ಸಲ್ಮಾನ್​ ಖಾನ್​ ಮೇಲಿನ ಅಭಿಮಾನದಿಂದ ಬರೋಬ್ಬರಿ 1,100 ಕಿಲೋಮೀಟರ್​ ಸೈಕಲ್​ ತುಳಿದುಕೊಂಡು ಮುಂಬೈಗೆ ಬಂದಿದ್ದಾರೆ. ಸಲ್ಲು ಅವರನ್ನು ಭೇಟಿ ಮಾಡಬೇಕು ಎಂಬ ಅವರ ಆಸೆ ಈಡೇರಿದೆ. ಭಾಯಿಜಾನ್​ ಜೊತೆ ಕ್ಲಿಕ್ಕಿಸಿಕೊಂಡ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಹೀಗೆ ಸಾವಿರಾರು ಕಿಲೋಮೀಟರ್​ ಸೈಕಲ್​ ಸವಾರಿ ಮಾಡಿಕೊಂಡು ಬಂದ ಅಭಿಮಾನಿಯ ಹೆಸರು ಸಮೀರ್​. ತಮ್ಮನ್ನು ತಾವು ‘ಸಲ್ಮಾನ್​ ಖಾನ್​ರ ದೀವಾನಾ’ ಎಂದು ಕರೆದುಕೊಂಡಿರುವ ಸಮೀರ್​ ಅವರು ಈ ಸಾಹಸ ಮಾಡಿದ್ದಾರೆ. ಸಲ್ಲು ಅವರದ್ದೇ ಬ್ರ್ಯಾಂಡ್​ ಆದಂತಹ ‘ಬೀಯಿಂಗ್​ ಹ್ಯೂಮನ್​’ ಸೈಕಲ್​ ತುಳಿದುಕೊಂಡು ಅವರು ಮುಂಬೈ ತನಕ ಬಂದಿದ್ದಾರೆ. ಸಮೀರ್​ ಬಂದು ಮುಂಬೈ ತಲುಪಿದಾಗ ಅವರ ಅದೃಷ್ಟಕ್ಕೆ ಸಲ್ಮಾನ್​ ಖಾನ್​ ಮನೆಯಲ್ಲೇ ಇದ್ದರು. ಹಾಗಾಗಿ ಭೇಟಿ ಮಾಡಲು ಸಾಧ್ಯವಾಯ್ತು.

ಇದನ್ನೂ ಓದಿ
Image
ಸೆಟ್​​ನಲ್ಲಿ ಸಲ್ಲುನ ಭೇಟಿ ಮಾಡೋಕೆ ಬಂದ ರಾಮ್​ ಚರಣ್​ಗೆ ಸಿಕ್ತು ಹಿಂದಿ ಸಿನಿಮಾ ಆಫರ್
Image
ತಂಗಿ ಗಂಡನ ಜೊತೆಗೆ ಸಲ್ಮಾನ್​ ಖಾನ್​ ಕಿರಿಕ್​; ಭಾವನ ಸಿನಿಮಾದಿಂದಲೇ ಹೊರನಡೆದ ಆಯುಷ್​ ಶರ್ಮಾ?
Image
ಬಹಿರಂಗ ವೇದಿಕೆಯಲ್ಲಿ ಸಲ್ಲು ಇದೆಂಥಾ ಕೆಲಸ; ಪೂಜಾ ಹೆಗ್ಡೆ ವಿಚಾರದಲ್ಲಿ ಸಿಕ್ಕಾಪಟ್ಟೆ ಮುಜುಗರ
Image
ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?

ಇದನ್ನೂ ಓದಿ: Salman Khan: ಸಲ್ಮಾನ್​ ಖಾನ್​-ಪೂಜಾ ಹೆಗ್ಡೆ ಪ್ರೀತಿಸ್ತಾರೆ ಅಂತ ಗಾಸಿಪ್​ ಹಬ್ಬಿಸಿದವರಿಗೆ ತಿರುಗೇಟು ನೀಡಿದ ಸಲ್ಲು ಆಪ್ತರು

ಸಮೀರ್​ ಅವರ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಸಾವಿರಾರು ಜನರು ಕಮೆಂಟ್​ ಮಾಡಿದ್ದಾರೆ. ಸಲ್ಮಾನ್​ ಖಾನ್​ ಅವರಿಗೆ ಎಂಥ ಅಪ್ಪಟ ಅಭಿಮಾನಿಗಳು ಇದ್ದಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಎಂದು ಹಲವರು ಕಮೆಂಟ್​ ಮಾಡಿದ್ದಾರೆ. ಸಲ್ಮಾನ್​ ಖಾನ್​ ಫ್ಯಾನ್ಸ್​ ಈ ಫೋಟೋ ಕಂಡು ಖುಷಿ ಆಗಿದ್ದಾರೆ.

ಇದನ್ನೂ ಓದಿ: Salman Khan Birthday: ಸಲ್ಮಾನ್​ ಖಾನ್​ಗೆ ಈಗ 57 ವರ್ಷ ವಯಸ್ಸು; ಡೇಟಿಂಗ್​ ಇತಿಹಾಸ ದೊಡ್ಡದಿದೆ; ಶಾದಿ ಬಗ್ಗೆ ಮಾತೇ ಇಲ್ಲ

ಸಿನಿಮಾ ವಿಚಾರಕ್ಕೆ ಬರುವುದಾದರೆ, ಸಲ್ಮಾನ್​ ಖಾನ್​ ಅವರು ಈಗ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಹಾಗೂ ‘ಟೈಗರ್​ 3’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಗಳ ಮೇಲೆ ಅಭಿಮಾನಿಗಳಿಗೆ ತುಂಬ ನಿರೀಕ್ಷೆ ಇದೆ. ಈ ಸಿನಿಮಾಗಳ ಬಿಡುಗಡೆಗಾಗಿ ಸಿನಿಪ್ರಿಯರು ಕಾದಿದ್ದಾರೆ. ಹಿಂದಿಯ ಬಿಗ್​ ಬಾಸ್​ ಶೋ ನಡೆಸಿಕೊಡುವುದರಲ್ಲಿ ಸಲ್ಮಾನ್​ ಖಾನ್​ ಬ್ಯುಸಿ ಆಗಿದ್ದಾರೆ.

ಇತ್ತೀಚೆಗೆ ಸಲ್ಮಾನ್​ ಖಾನ್​ ಅವರು ಅದ್ದೂರಿಯಾಗಿ ಹುಟ್ಟುಹಬ್ಬ (ಡಿ.27) ಆಚರಿಸಿಕೊಂಡರು. ಬಾಲಿವುಡ್​ ಮಂದಿಗೆ ಅವರು ಭರ್ಜರಿ ಪಾರ್ಟಿ ನೀಡಿದರು. ನಿಧಾನವಾಗಿ ಕೊರೊನಾ ಆತಂಕ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ಎಲ್ಲರನ್ನೂ ಸೇರಿಸಿಕೊಂಡು ಪಾರ್ಟಿ ಮಾಡಿದ್ದು ಸೂಕ್ತವಲ್ಲ ಎಂದು ಕೆಲವರು ಕೊಂಕು ನುಡಿದಿದ್ದಾರೆ. ಅದಕ್ಕೆಲ್ಲ ಸಲ್ಲು ತಲೆ ಕೆಡಿಸಿಕೊಂಡಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​