‘ಪ್ಲ್ಯಾನ್ ಮಾಡಿ ಜೀವನ ನಡೆಸಲು ಸಾಧ್ಯವಿಲ್ಲ’; ಬೇಡಿಕೆ ಇರುವಾಗಲೇ ಮಗು ಪಡೆದ ಬಗ್ಗೆ ಆಲಿಯಾ ಮಾತು
Alia Bhattt: ಬೇಡಿಕೆ ಇರುವಾಗ ಹೀರೋಯಿನ್ಗಳು ಸಾಮಾನ್ಯವಾಗಿ ಯಾರೂ ಮದುವೆ ಆಗಿ, ಮಗು ಪಡೆಯೋಕೆ ಮುಂದಾಗುವುದಿಲ್ಲ. ಹೀಗಾದರೆ ಬೇಡಿಕೆ ಕಡಿಮೆ ಆಗುತ್ತದೆ ಎನ್ನುವ ನಂಬಿಕೆ ಅನೇಕರಲ್ಲಿದೆ.
ನಟಿ ಆಲಿಯಾ ಭಟ್ (Alia Bhattt) ಹಾಗೂ ರಣಬೀರ್ ಕಪೂರ್ ಅವರು ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಈ ವಿಚಾರವನ್ನು ಈ ಜೋಡಿ ಮುಚ್ಚಿಟ್ಟಿಲ್ಲ. 2022 ಅವರಿಗೆ ವಿಶೇಷವಾಗಿತ್ತು. ಏಪ್ರಿಲ್ನಲ್ಲಿ ರಣಬೀರ್ ಕಪೂರ್ (Ranbir Kapoor) ಅವರನ್ನು ಮದುವೆ ಆದ ಆಲಿಯಾ ಭಟ್, ಅದೇ ವರ್ಷ ನವೆಂಬರ್ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಬಣ್ಣದ ಲೋಕದಲ್ಲಿ ಸಾಕಷ್ಟು ಬೇಡಿಕೆ ಇರುವಾಗಲೇ ನಟಿ ಮಗು ಹೊಂದಿದ್ದು ಅನೇಕರಲ್ಲಿ ಅಚ್ಚರಿ ಮೂಡಿಸಿತ್ತು. ಈಗ ಈ ಬಗ್ಗೆ ಆಲಿಯಾ ಮಾತನಾಡಿದ್ದಾರೆ.
ಆಲಿಯಾ ಸ್ಟಾರ್ ಕಿಡ್. ಅವರಿಗೆ ಚಿತ್ರರಂಗದಲ್ಲಿ ಸುಲಭವಾಗಿ ಅವಕಾಶ ಸಿಕ್ಕಿತು. ಹಾಗಂತ ಅವರು ಸ್ಟಾರ್ ಕಿಡ್ ಆಗಿ ಚಿತ್ರರಂಗದಲ್ಲಿ ಬೆಳೆಯಲಿಲ್ಲ. ನಟನೆಯ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಬೇಡಿಕೆ ಇರುವಾಗ ಹೀರೋಯಿನ್ಗಳು ಸಾಮಾನ್ಯವಾಗಿ ಯಾರೂ ಮದುವೆ ಆಗಿ, ಮಗು ಪಡೆಯೋಕೆ ಮುಂದಾಗುವುದಿಲ್ಲ. ಹೀಗಾದರೆ ಬೇಡಿಕೆ ಕಡಿಮೆ ಆಗುತ್ತದೆ ಎನ್ನುವ ನಂಬಿಕೆ ಅನೇಕರಲ್ಲಿದೆ. ಆದಾಗ್ಯೂ ಆಲಿಯಾ ಮಗು ಪಡೆದರು. ಅವರ ಈ ನಿರ್ಧಾರ ಅನೇಕರಿಗೆ ಅಚ್ಚರಿ ತಂದಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಲಿಯಾ, ‘ಪ್ಲ್ಯಾನ್ ಮಾಡಿ ಜೀವನ ನಡೆಸಲು ಸಾಧ್ಯವಿಲ್ಲ’ ಎಂದಿದ್ದಾರೆ.
‘ಜೀವನದಲ್ಲಿ ಸರಿ ಅಥವಾ ತಪ್ಪು ಎಂಬುದಿಲ್ಲ. ನಾನು ಯಾವಾಗಲೂ ನನ್ನ ಹೃದಯದ ಮಾತನ್ನು ಕೇಳುವ ವ್ಯಕ್ತಿ. ಜೀವನವನ್ನು ಪ್ಲ್ಯಾನ್ ಮಾಡಲು ಸಾಧ್ಯವಿಲ್ಲ. ಜೀವನವೇ ಪ್ಲ್ಯಾನ್ ಮಾಡುತ್ತದೆ. ಜೀವನ ಆಯ್ಕೆ ಮಾಡಿದ ಮಾರ್ಗವನ್ನು ಅನುಸರಿಸಬೇಕು. ನಾನು ಯಾವಾಗಲೂ ಹೃದಯಕ್ಕೆ ನಿರ್ಧರಿಸುವ ಆಯ್ಕೆ ನೀಡುತ್ತೇನೆ’ ಎಂದಿದ್ದಾರೆ ಆಲಿಯಾ.
‘ವೃತ್ತಿಜೀವನದಲ್ಲಿ ಉತ್ತುಂಗದಲ್ಲಿದ್ದಾಗ ನಾನು ಮದುವೆಯಾಗಲು ಮತ್ತು ಮಗುವನ್ನು ಪಡೆಯಲು ನಿರ್ಧರಿಸಿದೆ. ಇದೆಲ್ಲವೂ ನನ್ನ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂದು ಯಾರು ಹೇಳುತ್ತಾರೆ? ಒಂದೊಮ್ಮೆ ಪ್ರಭಾವ ಬೀರಿದರೂ ನಾನು ಹೆದರುವುದಿಲ್ಲ. ನನ್ನ ನಿರ್ಧಾರದಲ್ಲಿ ನಾನು ಎಂದಿಗೂ ವಿಷಾದಿಸುವುದಿಲ್ಲ. ಮಗು ಹೊಂದುವುದು ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ’ ಎಂದಿದ್ದಾರೆ ಅವರು.
ಇದನ್ನೂ ಓದಿ: Raha: ‘ರಾಹಾ’ ಎಂದು ಮಗಳಿಗೆ ಹೆಸರಿಟ್ಟ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್
ಆಲಿಯಾ ಭಟ್ ನಟನೆಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರುತ್ತಿದೆ. ಆಲಿಯಾ ಭಟ್ ಅವರು ಈ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:32 am, Mon, 2 January 23