ನಟಿ ತಮನ್ನಾ ಭಾಟಿಯಾ ಅವರು ಇಂದು (ಡಿಸೆಂಬರ್ 21) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಭಿಮಾನಿಗಳ ಕಡೆಯಿಂದ ಶುಭಾಶಯ ಬರುತ್ತಿದೆ.
1 / 5
ಹಲವು ಸಿನಿಮಾಗಳನ್ನು ಒಪ್ಪಿಕೊಂಡು ತಮನ್ನಾ ನಟಿಸುತ್ತಿದ್ದಾರೆ. ‘ಕೆಜಿಎಫ್’ ವಿಶೇಷ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಕನ್ನಡಕ್ಕೂ ಅವರು ಕಾಲಿಟ್ಟರು.
2 / 5
ತಮನ್ನಾಗೆ ‘ಮಿಲ್ಕಿ ಬ್ಯೂಟಿ’ ಎಂಬ ಹೆಸರು ಇದೆ. ಇದಕ್ಕೆ ಕಾರಣ ಅವರ ಚರ್ಮದ ಬಣ್ಣ. ಹಾಲಿನಷ್ಟೇ ಅವರು ಬೆಳ್ಳಗೆ ಇರುವುದರಿಂದ ತಮನ್ನಾಗೆ ಈ ಹೆಸರನ್ನು ಇಡಲಾಗಿದೆ.
3 / 5
ಅಚ್ಚರಿಯ ವಿಚಾರ ಏನೆಂದರೆ ಯಾರಾದರೂ ‘ಮಿಲ್ಕಿ ಬ್ಯೂಟಿ’ ಎಂದು ಕರೆದರೆ ತಮನ್ನಾಗೆ ಕೋಪ ಬರುತ್ತದೆ. ಇದಕ್ಕೆ ಕಾರಣವನ್ನೂ ಅವರು ಈ ಮೊದಲು ನೀಡಿದ್ದರು.
4 / 5
‘ಚರ್ಮದ ಬಣ್ಣದ ಮೇಲೆ ನನ್ನನ್ನು ಮಿಲ್ಕಿ ಬ್ಯೂಟಿ ಎಂದು ಕರೆದರೆ ನನಗೆ ಕೋಪ ಬರುತ್ತದೆ. ಸಿನಿಮಾ ರಂಗದಲ್ಲಿ ವರ್ಣಭೇದ ಕೊನೆಯಾಗಬೇಕು. ನಮ್ಮ ದೇಶದವರಿಗೆ ಚರ್ಮದ ಬಣ್ಣದ ಮೇಲೆ ಯಾಕಿಷ್ಟು ಗೀಳು ಎಂಬುದು ಗೊತ್ತಿಲ್ಲ’ ಎಂದು ತಮನ್ನಾ ಹೇಳಿದ್ದರು.