Women Health: ಸಂತಾನೋತ್ಪತ್ತಿಗೆ ಸಹಾಯಕವಾಗುವ ಯೋಗಾಸನದ ಭಂಗಿಗಳು ಇಲ್ಲಿವೆ
ಬಂಜೆತನವು ಇಂದಿನ ಒತ್ತಡದ ಜೀವನಶೈಲಿಯಿಂದಾಗಿ ಅನೇಕರಲ್ಲಿ ಕಂಡುಬರುತ್ತಿರುವ ಸಮಸ್ಯೆಯಾಗಿದೆ. ಇದಕ್ಕೆ ವೈದ್ಯಕೀಯ ಸಹಾಯದ ಹೊರತಾಗಿಯೂ, ಯೋಗಾಸನದ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
Updated on: Dec 20, 2022 | 8:00 PM

ಬಂಜೆತನವು ಇಂದಿನ ಬದಲಾದ ಒತ್ತಡದ ಜೀವನಶೈಲಿಯಿಂದಾಗಿ ಅನೇಕರಲ್ಲಿ ಕಂಡುಬರುತ್ತಿರುವ ಸಮಸ್ಯೆಯಾಗಿದೆ. ಇದಕ್ಕೆ ವೈದ್ಯಕೀಯ ಸಹಾಯದ ಹೊರತಾಗಿಯೂ, ಯೋಗಾಸನದ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಯೋಗಾಸನದ ಮೂಲಕ ನಿಮ್ಮ ದೇಹ, ಮನಸ್ಸು ಮತ್ತು ಚೈತನ್ಯದಿಂದ ಇಡಲು ಸಹಾಯ ಮಾಡುತ್ತದೆ. ಈ ಕೆಳಗಿನ ಯೋಗಾಸನದ ಭಂಗಿಗಳು ನಿಮ್ಮನ್ನು ಒತ್ತಡದಿಂದ ಹೊರ ಬರುವಂತೆ ಮಾಡುತ್ತದೆ ಎಂದು ಸ್ತ್ರೀರೋಗತಜ್ಞರಾದ ಡಾ. ಮಾಧುರಿ ರಾಯ್ ತಿಳಿಸಿದ್ದಾರೆ.

ಉತ್ಥಾನ ಶಿಶೋಷನ: ಚಿತ್ರದಲ್ಲಿ ತೋರಿಸಿರುವಂತೆ ಕಾಲುಗಳನ್ನು ಮಡಚಿ, ಕೈಗಳನ್ನು ಮುಂದೆ ಚಾಚಿ ಈ ರೀತಿಯಾಗಿ ಯೋಗಾಸನದ ಭಂಗಿಯನ್ನು ಪ್ರಯತ್ನಿಸಿ. 30-60 ಸೆಕೆಂಡುಗಳ ಈ ಭಂಗಿಯಲ್ಲಿಯೇ ಇರಿ. ಮೂರರಿಂದ ಐದು ಬಾರಿ ಈ ಆಸನವನ್ನು ಪ್ರಯತ್ನಿಸಿ.

ಸೂರ್ಯ ನಮಸ್ಕಾರ: ಸೂರ್ಯ ನಮಸ್ಕಾರ ಮುಟ್ಟಿನ ಸೆಳೆತಕ್ಕೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಸೂರ್ಯ ನಮಸ್ಕಾರ ಯೋಗದ ಅಭ್ಯಾಸದಿಂದ ಮಹಿಳೆಯ ಗರ್ಭಾಶಯವು ಬಲಗೊಳ್ಳುತ್ತದೆ, ಹೆರಿಗೆ ಸುಲಭವಾಗುತ್ತದೆ. ಜೊತೆಗೆ ಇದು ದೇಹದ ಸಂತಾನೋತ್ಪತ್ತಿ ಕಾರ್ಯಗಳನ್ನು ಸುಧಾರಿಸುತ್ತದೆ.

ಕಪ್ಪೆ ಭಂಗಿ: ಕಪ್ಪೆ ಭಂಗಿಯು ಸಂತಾನೋತ್ಪತ್ತಿ ಅಂಗಗಳನ್ನು ಉತ್ತೇಜಿಸುತ್ತದೆ. ನಿಮ್ಮ ಒಳ ತೊಡೆಗಳು ನೆಲವನ್ನು ಸ್ಪರ್ಶಿಸಿದಾಗ, ನಿಧಾನವಾಗಿ ನಿಮ್ಮ ಪಾದಗಳನ್ನು ತಿರುಗಿಸಿ. ಇದು ಮಹಿಳೆಯ ಮುಟ್ಟಿನ ನೋವಿನ ಸಮಯದಲ್ಲೂ ನೋವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

ಬಾಲಾಸನ: ಬಾಲಾಸನವು ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಫಲವತ್ತತೆಯನ್ನು ಹೆಚ್ಚಿಸುತ್ತದೆ. ಊಟವಾದ ನಂತರ ನಾಲ್ಕರಿಂದ ಆರು ಗಂಟೆಗಳ ಈ ಆಸನವನ್ನು ಮಾಡಬೇಕು.

ಭ್ರಮರಿ ಪ್ರಾಣಾಯಾಮ: ಸಾಮಾನ್ಯವಾಗಿ ಬೀ ಬ್ರೀತ್ ಎಂದು ಕರೆಯಲ್ಪಡುವ ಭ್ರಮರಿ ಪ್ರಾಣಾಯಾಮವು ಒತ್ತಡವನ್ನು ನಿವಾರಿಸುತ್ತದೆ. ಮಾನಸಿಕ ಒತ್ತಡವು ಬಂಜೆತನವನ್ನು ಉತ್ತೇಜಿಸುತ್ತದೆ. ಈ ಪ್ರಾಣಾಯಾಮವು ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸಬಹುದು.
























