AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pathan Collection: ಮಧ್ಯಾಹ್ನ 3 ಗಂಟೆ ಒಳಗೆ ಅಚ್ಚರಿ ರೀತಿಯಲ್ಲಿ ಕಲೆಕ್ಷನ್​ ಮಾಡಿದ ‘ಪಠಾಣ್​’; ಇಲ್ಲಿದೆ ಪಕ್ಕಾ ಲೆಕ್ಕ

Pathan Movie | Box Office Collection: ಬಾಯಿ ಮಾತಿನ ಪ್ರಚಾರದಿಂದಾಗಿ ‘ಪಠಾಣ್’ ಸಿನಿಮಾದ ಗಲ್ಲಾಪೆಟ್ಟಿಗೆ ಭದ್ರವಾಗುತ್ತಿದೆ. ಶಾರುಖ್​ ಖಾನ್​ ಅವರು ಭರ್ಜರಿಯಾಗಿಯೇ ಕಮ್​ಬ್ಯಾಕ್​ ಮಾಡಿದ್ದಾರೆ.

Pathan Collection: ಮಧ್ಯಾಹ್ನ 3 ಗಂಟೆ ಒಳಗೆ ಅಚ್ಚರಿ ರೀತಿಯಲ್ಲಿ ಕಲೆಕ್ಷನ್​ ಮಾಡಿದ ‘ಪಠಾಣ್​’; ಇಲ್ಲಿದೆ ಪಕ್ಕಾ ಲೆಕ್ಕ
ಶಾರುಖ್ ಖಾನ್
ಮದನ್​ ಕುಮಾರ್​
|

Updated on: Jan 25, 2023 | 5:00 PM

Share

ನಟ ಶಾರುಖ್​ ಖಾನ್​ (Shah Rukh Khan) ಅವರ ಹೊಸ ಇನ್ನಿಂಗ್ಸ್​ ಶುರು ಆಗಿದೆ. ಇಂದು (ಜ.25) ಅವರ ವೃತ್ತಿಜೀವನದ ಮೆರುಗು ಹೆಚ್ಚಿದೆ. ಹಲವು ವರ್ಷಗಳಿಂದ ಅವರು ಕಾಯುತ್ತಿದ್ದ ಮೆಗಾ ಹಿಟ್​ ಈಗ ಅವರಿಗೆ ಸಿಕ್ಕಿದೆ. ಕಿಂಗ್​ ಖಾನ್​ ಅಭಿಮಾನಿಗಳು ಎಲ್ಲ ಚಿತ್ರಮಂದಿರಗಳಲ್ಲಿ ಹಬ್ಬ ಮಾಡುತ್ತಿದ್ದಾರೆ. ‘ಪಠಾಣ್​’ ಸಿನಿಮಾ (Pathan Movie) ಭರ್ಜರಿ ಯಶಸ್ಸು ಕಂಡಿದ್ದು, ಬಾಕ್ಸ್​ ಆಫೀಸ್​ ಲೆಕ್ಕ ಕೂಡ ಸಿಕ್ಕಿದೆ. ಅಚ್ಚರಿ ಎಂದರೆ, ಬಿಡುಗಡೆಯಾಗಿ ಕೆಲವೇ ಶೋಗಳು ಪೂರ್ಣಗೊಳ್ಳುವ ಮುನ್ನ ಈ ಚಿತ್ರ ಬರೋಬ್ಬರಿ 20 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಟ್ರೇಡ್​ ವಿಶ್ಲೇಷಕ ತರಣ್​ ಆದರ್ಶ್​ (Taran Adarsh) ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಬಾಲಿವುಡ್​ನಲ್ಲಿ ಬಿಡುಗಡೆ ಆಗುವ ಎಲ್ಲ ಸಿನಿಮಾಗಳ ಕಲೆಕ್ಷನ್​ ಲೆಕ್ಕವನ್ನು ತರಣ್​ ಆದರ್ಶ್ ಬಹಿರಂಗಪಡಿಸುತ್ತಾರೆ. ಅವರು ನೀಡುವ ಅಪ್​ಡೇಟ್​ಗಾಗಿ ನೆಟ್ಟಿಗರು ಕಾದಿರುತ್ತಾರೆ. ಇಂದು ತರಣ್​ ಆದರ್ಶ್​ ಅವರು ‘ಪಠಾಣ್​’ ಸಿನಿಮಾದ ಮಧ್ಯಾಹ್ನದ ಮೂರು ಗಂಟೆವರೆಗಿನ ಬಾಕ್ಸ್​ ಆಫೀಸ್​ ಅಪ್​ಡೇಟ್​ ನೀಡಿದ್ದಾರೆ. ಅದರ ಅನ್ವಯ ಭಾರತದಲ್ಲಿ ಕೇವಲ ಮಲ್ಲಿಪ್ಲೆಕ್ಸ್​ನಿಂದ 20.35 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ.

ಇದನ್ನೂ ಓದಿ
Image
Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ
Image
Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
Image
Pathaan Movie Twitter Review: ‘ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾ’; ‘ಪಠಾಣ್​’ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು
Image
Pathaan First Half Review: ‘ಪಠಾಣ್’ ಚಿತ್ರದಲ್ಲಿ ಡಿಲೀಟ್ ಆಗಿಲ್ಲ ಕೇಸರಿ ಬಿಕಿನಿ ದೃಶ್ಯ: ಶಾರುಖ್ ಚಿತ್ರದ ಮೊದಲಾರ್ಧ ಹೇಗಿದೆ?

ಇದನ್ನೂ ಓದಿ: Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ

‘ಪಿವಿಆರ್​’ ಸ್ಕ್ರೀನ್​ಗಳಲ್ಲಿ 9.40 ಕೋಟಿ ರೂಪಾಯಿ, ಐನಾಕ್ಸ್​ನಲ್ಲಿ 7.05 ಕೋಟಿ ರೂಪಾಯಿ ಹಾಗೂ ಸಿನಿಪೊಲಿಸ್​ನಲ್ಲಿ 3.90 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ. ಇದು ಮಧ್ಯಾಹ್ನದವರೆಗಿನ ಲೆಕ್ಕ ಮಾತ್ರ. ಸಂಜೆಯ ಶೋಗಳು ಕೂಡ ಹೌಸ್​ ಪುಲ್​ ಆಗುತ್ತಿವೆ. ನೈಟ್​ ಶೋ ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿವೆ. ಇದರ ಜೊತೆ ಏಕಪರದೆ ಚಿತ್ರಮಂದಿರಗಳ ಕಲೆಕ್ಷನ್​ ಕೂಡ ಸೇರಿದರೆ ‘ಪಠಾಣ್​’ ಹೊಸ ದಾಖಲೆ ಬರೆಯುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ

ಈ ಚಿತ್ರಕ್ಕೆ ಸಿದ್ದಾರ್ಥ್​ ಆನಂದ್​ ಅವರು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಅವರು ಸೂಪರ್​ ಹಿಟ್​ ‘ವಾರ್​’ ಸಿನಿಮಾವನ್ನು ನಿರ್ದೇಶಿಸಿದ್ದರು. ಆ ಚಿತ್ರದ ದಾಖಲೆಯನ್ನು ‘ಪಠಾಣ್​’ ಅಳಿಸಿ ಹಾಕುತ್ತಿದೆ. ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಜೋಡಿಯ ನಾಲ್ಕನೇ ಸಿನಿಮಾ ಎಂಬ ಕಾರಣದಿಂದಲೂ ಅಭಿಮಾನಿಗಳು ಮುಗಿಬಿದ್ದು ನೋಡುತ್ತಿದ್ದಾರೆ. ಜಾನ್​ ಅಬ್ರಾಹಂ ಮಾಡಿರುವ ವಿಲನ್​ ಪಾತ್ರ ಕೂಡ ಪವರ್​ಫುಲ್​ ಆಗಿದೆ.

‘ಪಠಾಣ್​’ ಸಿನಿಮಾದಲ್ಲಿ ಅದ್ದೂರಿ ಸಾಹಸ ದೃಶ್ಯಗಳು ಗಮನ ಸೆಳೆಯುತ್ತಿವೆ. ಫಸ್ಟ್​ ಡೇ ಫಸ್ಟ್​ ಶೋ ನೋಡಿದ ಬಹುತೇಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಾಯಿ ಮಾತಿನ ಪ್ರಚಾರದಿಂದಾಗಿ ಸಿನಿಮಾದ ಗಲ್ಲಾಪೆಟ್ಟಿಗೆ ಭದ್ರವಾಗುತ್ತಿದೆ. ಒಟ್ಟಿನಲ್ಲಿ, ಶಾರುಖ್​ ಖಾನ್​ ಅವರು ಭರ್ಜರಿಯಾಗಿಯೇ ಕಮ್​ಬ್ಯಾಕ್​ ಮಾಡಿದ್ದು, ಗೆಲುವಿನ ನಗು ಬೀರಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ