Urfi Javed: ‘ಇಂಥ ಬಟ್ಟೆ ಹಾಕಿದ್ದಕ್ಕೆ ಮುಸ್ಲಿಮರು ಮನೆ ಕೊಡ್ತಿಲ್ಲ, ನಾನು ಮುಸ್ಲಿಂ ಅಂತ ಹಿಂದೂಗಳು ಮನೆ ಕೊಡಲ್ಲ’: ಉರ್ಫಿ
Urfi Javed Dress: ಬಟ್ಟೆಗೆ ಸಂಬಂಧಿಸಿದಂತೆಯೇ ಉರ್ಫಿ ಜಾವೇದ್ ಅನೇಕ ಬಾರಿ ಕಿರಿಕ್ ಮಾಡಿಕೊಂಡಿದ್ದುಂಟು. ಇದರಿಂದ ಅವರಿಗೆ ಈಗ ಮುಂಬೈನಲ್ಲಿ ಬಾಡಿಗೆ ಮನೆ ಹುಡುಕುವುದು ಕಷ್ಟವಾಗಿದೆ.
ಬೋಲ್ಡ್ ಬೆಡಗಿ ಉರ್ಫಿ ಜಾವೇದ್ (Urfi Javed) ಅವರಿಗೆ ಹೊಸ ಸಮಸ್ಯೆ ಶುರುವಾಗಿದೆ. ಮುಂಬೈನಲ್ಲಿ ವಾಸಿಸಲು ಅವರಿಗೆ ಜಾಗವೇ ಸಿಗುತ್ತಿಲ್ಲ! ಹಾಗಂತ ಇದು ಗಾಸಿಪ್ ಅಲ್ಲ, ಸ್ವತಃ ಉರ್ಫಿ ಜಾವೇದ್ ಅವರೇ ಈ ಬಗ್ಗೆ ಬಹಿರಂಗವಾಗಿ ಬರೆದುಕೊಂಡಿದ್ದಾರೆ. ಚಿತ್ರ ವಿಚಿತ್ರವಾಗಿ ಉರ್ಫಿ ಜಾವೇದ್ ಅವರು ಡ್ರೆಸ್ (Urfi Javed Dress) ಮಾಡಿಕೊಳ್ಳುತ್ತಾರೆ. ಇದರಿಂದ ಅವರಿಗೆ ಸಾಕಷ್ಟು ಪ್ರಚಾರ ಸಿಕ್ಕಿದೆ. ಅದರ ಜೊತೆಗೆ ಅನೇಕ ತೊಂದರೆಗಳು ಕೂಡ ಎದುರಾಗಿವೆ. ಇಂಥ ಬಟ್ಟೆ ಹಾಕಿದ್ದಕ್ಕಾಗಿ ಯಾವುದೇ ಮುಸ್ಲಿಮರು ಕೂಡ ಉರ್ಫಿ ಜಾವೇದ್ ಅವರಿಗೆ ಬಾಡಿಗೆ ಮನೆ ನೀಡುತ್ತಿಲ್ಲ. ಅವರು ಮುಸ್ಲಿಂ ಎಂಬ ಕಾರಣಕ್ಕೆ ಹಿಂದೂಗಳು (Hindus) ಕೂಡ ಉರ್ಫಿಗೆ ಮನೆ ನೀಡುತ್ತಿಲ್ಲ! ಈ ಕುರಿತು ಉರ್ಫಿ ಜಾವೇದ್ ಮಾಡಿರುವ ಟ್ವೀಟ್ ವೈರಲ್ ಆಗಿದೆ.
ಬಟ್ಟೆಗಳಿಗೆ ಸಂಬಂಧಿಸಿದಂತೆಯೇ ಉರ್ಫಿ ಜಾವೇದ್ ಅವರು ಈಗಾಗಲೇ ಅನೇಕ ಕಿರಿಕ್ಗಳನ್ನು ಮಾಡಿಕೊಂಡಿದ್ದಾರೆ. ಇದರಿಂದ ಅವರಿಗೆ ಈಗ ಮುಂಬೈನಲ್ಲಿ ಬಾಡಿಗೆ ಮನೆ ಹುಡುಕುವುದು ಕಷ್ಟವಾಗಿದೆ. ‘ನಾನು ಈ ರೀತಿ ಡ್ರೆಸ್ ಮಾಡಿಕೊಳ್ಳುತ್ತೇನೆ ಅಂತ ಮುಸ್ಲಿಮರು ನನಗೆ ಬಾಡಿಗೆ ಮನೆ ಕೊಡುತ್ತಿಲ್ಲ. ನಾನು ಮುಸ್ಲಿಂ ಆಗಿರುವುದರಿಂದ ಹಿಂದೂಗಳು ಕೂಡ ನನಗೆ ಮನೆ ಕೊಡುತ್ತಿಲ್ಲ. ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂಬುದು ಇನ್ನೂ ಕೆಲವು ಮನೆಗಳ ಮಾಲೀಕರ ಚಿಂತೆಗೆ ಕಾರಣ ಆಗಿದೆ. ಮುಂಬೈನಲ್ಲಿ ಬಾಡಿಗೆಗೆ ಅಪಾರ್ಟ್ಮೆಂಟ್ ಪಡೆಯುವುದು ತುಂಬ ಕಷ್ಟವಾಗಿದೆ’ ಎಂದು ಉರ್ಫಿ ಜಾವೇದ್ ಟ್ವೀಟ್ ಮಾಡಿದ್ದಾರೆ.
Muslim owners don’t want to rent me house cause of the way I dress, Hindi owners don’t want to rent me cause I’m Muslim. Some owners have an issue with the political threats I get . Finding a rental apartment in mumbai is so tuff
— Uorfi (@uorfi_) January 24, 2023
ಮಾಜಿ ಬಿಗ್ ಬಾಸ್ ಸ್ಪರ್ಧಿ ಆಗಿರುವ ಉರ್ಫಿ ಜಾವೇದ್ ಅವರು ಧರಿಸುವ ಬಟ್ಟೆಗಳ ಬಗ್ಗೆ ಈಗಾಗಲೇ ಅನೇಕರು ತಕರಾರು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಚಿತ್ರಾ ಕಿಶೋರ್ ವಾಘ್ ಅವರು ಉರ್ಫಿ ಜಾವೇದ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸಾರ್ವಜನಿಕ ಸ್ಥಳದಲ್ಲಿ ಅರೆ ಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಅದರ ಬೆನ್ನಲ್ಲೇ ಪೊಲೀಸರು ಉರ್ಫಿ ಜಾವೇದ್ಗೆ ನೋಟಿಸ್ ನೀಡಿ, ವಿಚಾರಣೆಗೆ ಬರುವಂತೆ ಸೂಚಿಸಿದರು.
ಇದನ್ನೂ ಓದಿ: Honey Singh: ‘ದೇಶದ ಹೆಣ್ಮಕ್ಕಳು ಉರ್ಫಿ ಜಾವೇದ್ ರೀತಿ ಇರಬೇಕು’: ಅಚ್ಚರಿಯ ಹೇಳಿಕೆ ನೀಡಿದ ಹನಿ ಸಿಂಗ್
ನೋಟಿಸ್ ಬಂದ ಬಳಿಕ ಉರ್ಫಿ ಜಾವೇದ್ ಅವರು ಪೊಲೀಸ್ ಠಾಣೆ ಮೆಟ್ಟಿಲೇರುವಂತಾಯಿತು. 2 ಗಂಟೆಗಳ ಕಾಲ ವಿಚಾರಣೆ ಮಾಡಲಾಯಿತು. ಪೊಲೀಸರು ಕೇಳಿದ ಅನೇಕ ಪ್ರಶ್ನೆಗಳಿಗೆ ಉರ್ಫಿ ಜಾವೇದ್ ಉತ್ತರ ನೀಡಿದರು. ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಮುಂಬೈನ ಅಂಬೋಲಿ ಠಾಣೆಯ ಪೊಲೀಸರು ಉರ್ಫಿ ಜಾವೇದ್ ಅವರನ್ನು ವಿಚಾರಣೆಗೆ ಒಳಪಡಿಸಿದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:45 pm, Wed, 25 January 23