Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ

Pathaan Movie Review: ನಿರ್ದೇಶಕ ಸಿದ್ದಾರ್ಥ್​ ಆನಂದ್​ ಅವರು ‘ಪಠಾಣ್​’ ಚಿತ್ರದಲ್ಲಿ ಸಾಹಸ ಸನ್ನಿವೇಶಗಳಿಗೆ ಹೆಚ್ಚು ಮಹತ್ವ ನೀಡಿದ್ದಾರೆ. ಇದು ಶಾರುಖ್​ ಖಾನ್​ ಅಭಿಮಾನಿಗಳಿಗೆ ಖುಷಿ ನೀಡುತ್ತದೆ.

Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
ಶಾರುಖ್ ಖಾನ್
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on:Jan 25, 2023 | 11:08 AM

ಸಿನಿಮಾ: ಪಠಾಣ್​

ನಿರ್ಮಾಣ: ಯಶ್​ ರಾಜ್​ ಫಿಲ್ಮ್ಸ್​

ನಿರ್ದೇಶನ: ಸಿದ್ದಾರ್ಥ್​ ಆನಂದ್​

ಇದನ್ನೂ ಓದಿ
Image
Triple Riding Movie Review: ‘ತ್ರಿಬಲ್​ ರೈಡಿಂಗ್​’ ರೇಸ್​ನಲ್ಲಿ ಓವರ್​ಟೇಕ್​ ಮಾಡಿದ ಸಾಧುಕೋಕಿಲ, ರಂಗಾಯಣ ರಘು
Image
Shubhamangala: ‘ಶುಭಮಂಗಳ’ ಸಿನಿಮಾ ವಿಮರ್ಶೆ; ಇದು ಆರು ಪ್ರೇಮಕಥೆಗಳ ಸುಂದರ ಸಂಕಲನ
Image
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Image
Guru Shishyaru Review: ರೋಚಕ ಖೊಖೊ ಪಂದ್ಯದ ಜೊತೆ ಹಿತ-ಮಿತವಾದ ಕಾಮಿಡಿ

ಪಾತ್ರವರ್ಗ: ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ಜಾನ್​ ಅಬ್ರಾಹಂ, ಡಿಂಪಲ್​ ಕಪಾಡಿಯಾ, ಸಲ್ಮಾನ್​ ಖಾನ್​ ಮುಂತಾದವರು.

ಸ್ಟಾರ್​: 3.5/5

ನಟ ಶಾರುಖ್​ ಖಾನ್​ ಅವರು ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡಿದ್ದಾರೆ. 2018ರಲ್ಲಿ ತೆರೆಕಂಡ ‘ಜೀರೋ’ ಸಿನಿಮಾ ನೀರಸ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆ ಬಳಿಕ 4 ವರ್ಷ ಗ್ಯಾಪ್​ ತೆಗೆದುಕೊಂಡ ಶಾರುಖ್​ ಖಾನ್​ ಈಗ ‘ಪಠಾಣ್​’ ಸಿನಿಮಾದ ಮೂಲಕ ಮತ್ತೆ ತಮ್ಮ ಅಭಿಮಾನಿಗಳಿಗೆ ದೊಡ್ಡ ಪರದೆ ಮೇಲೆ ದರ್ಶನ ನೀಡಿದ್ದಾರೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ನಿರೀಕ್ಷೆ ಮೂಡಿಸಿತ್ತು. ದೀಪಿಕಾ ಪಡುಕೋಣೆ ಮತ್ತು ಶಾರುಖ್​ ಖಾನ್​ ಅವರ ಕಾಂಬಿನೇಷನ್​ನಲ್ಲಿ ಮೂಡಿಬಂದ ನಾಲ್ಕನೇ ಚಿತ್ರ ಇದು. ನಿರ್ದೇಶಕ ಸಿದ್ದಾರ್ಥ್​ ಆನಂದ್​ ಅವರು ಈ ಬಾರಿ ಸಾಹಸಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ವಿಲನ್​ ಆಗಿ ಜಾನ್​ ಅಬ್ರಾಹಂ ಅಬ್ಬರಿಸಿದ್ದಾರೆ. ಒಟ್ಟಾರೆ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

‘ಪಠಾಣ್​’ ಚಿತ್ರದಲ್ಲಿ ಗಾಯಗೊಂಡ ಸೈನಿಕನ ಕಥೆ:

ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡಿರುವ ‘ಪಠಾಣ್​’ ಸಿನಿಮಾದ ಕಥೆಯ ಕ್ಯಾನ್ವಾಸ್​ ಬಹಳ ವಿಸ್ತಾರವಾಗಿದೆ. ಭಾರತ, ರಷ್ಯಾ, ಆಫ್ರಿಕಾ, ಅಫ್ಘಾನಿಸ್ತಾನ್​, ಪಾಕಿಸ್ತಾನ ಮುಂತಾದ ಕಡೆಗಳಲ್ಲಿ ಈ ಚಿತ್ರದ ಕಥೆ ಸಾಗುತ್ತದೆ. ಭಾರತದ ವಿರುದ್ಧ ಬಯೋಲಾಜಿಕಲ್​ ಸಮರ ಸಾರಲು ಪಾಕಿಸ್ತಾನ ಪ್ಲ್ಯಾನ್​ ಮಾಡುತ್ತದೆ. ಅದನ್ನು ತಡೆಯಲು ಭಾರತದ ಮಾಜಿ ಸೈನಿಕ ಪಠಾಣ್​ (ಶಾರುಖ್​ ಖಾನ್​) ಸಜ್ಜಾಗುತ್ತಾನೆ. ಆದರೆ ಅವನು ಈಗಾಗಲೇ ಯುದ್ಧದಲ್ಲಿ ಗಾಯಗೊಂಡು ಸೇನೆಯಿಂದ ಹೊರಗೆ ಇರುವವನು. ಅವನ ರೀತಿಯೇ ಇರುವ ಹಲವು ಮಾಜಿ ಸೈನಿಕರನ್ನು ಕಟ್ಟಿಕೊಂಡು ಆತ ಈ ಕಾರ್ಯಚರಣೆ ಶುರು ಮಾಡುತ್ತಾನೆ. ಅದರಲ್ಲಿ ಆತ ಹೇಗೆ ಯಶಸ್ವಿ ಆಗುತ್ತಾನೆ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ಜಾನ್​ ಅಬ್ರಾಹಂ-ಶಾರುಖ್​ ಖಾನ್​ ಮುಖಾಮುಖಿ:

ಇಡೀ ಸಿನಿಮಾದಲ್ಲಿ ಹೆಚ್ಚು ಹೈಲೈಟ್​ ಆಗಿರುವುದು ಜಾನ್​ ಅಬ್ರಾಹಂ-ಶಾರುಖ್​ ಖಾನ್​ ಮುಖಾಮುಖಿ. ಜಿಮ್​ ಎಂಬ ಪಾತ್ರದಲ್ಲಿ ಜಾನ್​ ಅಬ್ರಾಹಂ ಕಾಣಿಸಿಕೊಂಡಿದ್ದಾರೆ. ಜಿಮ್​ ಕೂಡ ಒಂದು ಕಾಲದಲ್ಲಿ ಭಾರತದ ಸೇನೆಯಲ್ಲಿ ಇದ್ದವನು. ಆದರೆ ಈಗ ಆತ ಭಯೋತ್ಪಾದಕ! ದೇಶದ ಮೇಲೆ ಸಿಕ್ಕಾಪಟ್ಟೆ ಪ್ರೀತಿ-ಗೌರವ ಇಟ್ಟುಕೊಂಡಿದ್ದ ಇಂಥ ಸೈನಿಕ ನಂತರ ಟೆರರಿಸ್ಟ್​ ಆಗಿದ್ದು ಹೇಗೆ ಎಂಬ ಕುತೂಹಲದೊಂದಿಗೆ ಸಿನಿಮಾ ಸಾಗುತ್ತದೆ.

ಇದನ್ನೂ ಓದಿ: Pathaan Review: ‘ಪಠಾಣ್​’ ಚಿತ್ರದ ನಕಲಿ ವಿಮರ್ಶೆ ಹಂಚಿಕೊಂಡ ಉಮೈರ್​ ಸಂಧು; ಸಾಕ್ಷಿ ಸಮೇತ ಬಯಲಿಗೆಳೆದ ತರಣ್​ ಆದರ್ಶ್​

ಹಲವು ದೇಶಗಳಲ್ಲಿ ‘ಪಠಾಣ್​’ ಚಿತ್ರವನ್ನು ಚಿತ್ರೀಕರಿಸಲಾಗಿದೆ. ವಿದೇಶಿ ಲೊಕೇಷನ್​ಗಳಲ್ಲಿ ನಡೆಯುವ ಫೈಟಿಂಗ್​ ದೃಶ್ಯಗಳಲ್ಲಿ ಜಾನ್​ ಅಬ್ರಹಾಂ ಮತ್ತು ಶಾರುಖ್ ಖಾನ್​ ಮೈನವಿರೇಳಿಸುವಂತಹ ಪರ್ಫಾರ್ಮೆನ್ಸ್​ ನೀಡಿದ್ದಾರೆ. ಪ್ರತಿ ಆ್ಯಕ್ಷನ್ ಸನ್ನಿವೇಶ ಕೂಡ ಅಭಿಮಾನಿಗಳಿಗೆ ಮಸ್ತ್​ ಮನರಂಜನೆ ನೀಡುವಂತಿದೆ.

ಬಿಕಿನಿಯಲ್ಲಿ ಪೋಸ್​ ನೀಡಲು ಮಾತ್ರ ದೀಪಿಕಾ ಸೀಮಿತವಲ್ಲ:

‘ಬೇರಷಂ ರಂಗ್​..’ ಹಾಡು ರಿಲೀಸ್​ ಆದಾಗಿನಿಂದ ದೀಪಿಕಾ ಪಡುಕೋಣೆ ಅವರ ಕೇಸರಿ ಬಣ್ಣದ ಬಿಕಿನಿ ಬಗ್ಗೆಯೇ ಹೆಚ್ಚು ಸುದ್ದಿ ಆಗಿತ್ತು. ಆದರೆ ಈ ಸಿನಿಮಾದಲ್ಲಿ ಅವರು ಕೇವಲ ಬಿಕಿನಿ ಧರಿಸಿ ಪೋಸ್​ ನೀಡೋಕಷ್ಟೇ ಸೀಮಿತವಾಗಿಲ್ಲ. ಶಾರುಖ್​ ರೀತಿಯೇ ದೀಪಿಕಾ ಕೂಡ ಆ್ಯಕ್ಷನ್​ ಸನ್ನಿವೇಶಗಳಲ್ಲಿ ಭರ್ಜರಿಯಾಗಿ ನಟಿಸಿದ್ದಾರೆ. ಅಭಿಮಾನಿಗಳಿಂದ ಅವರಿಗೆ ಭಾರಿ ಚಪ್ಪಾಳೆ ಸಿಗುತ್ತದೆ.

ಇದನ್ನೂ ಓದಿ: Pathaan Movie Twitter Review: ‘ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾ’; ‘ಪಠಾಣ್​’ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು

ದೇಶಭಕ್ತಿಯ ಸೂತ್ರ ಹಿಡಿದ ಶಾರುಖ್​ ಖಾನ್​:

ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೇಶಭಕ್ತಿ ಕಥಾಹಂದರ ಇರುವ ಸಿನಿಮಾ ಬಿಡುಗಡೆ ಆದರೆ ಪ್ರೇಕ್ಷಕರಿಗೆ ಒಳ್ಳೆಯ ಟ್ರೀಟ್​ ಸಿಕ್ಕಂತಾಗುತ್ತದೆ. ‘ಪಠಾಣ್​’ ಸಿನಿಮಾದಿಂದ ಅಂಥ ಟ್ರೀಟ್​ ಸಿಕ್ಕಿದೆ. ಆ್ಯಕ್ಷನ್ ಪ್ರಧಾನವಾಗಿರುವ ದೇಶಭಕ್ತಿ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ವಿಶೇಷ ಕಾರ್ಯಾಚರಣೆಗೆ ನಿಯೋಜನೆಗೊಂಡ ಮಾಜಿ ಸೈನಿಕನಾಗಿ ಶಾರುಖ್​ ಖಾನ್​ ಇಷ್ಟವಾಗುತ್ತಾರೆ. ತಮಗೆ ಇರುವ ರೊಮ್ಯಾಂಟಿಕ್​ ಹೀರೋ ಇಮೇಜ್​ ಅನ್ನು ಅವರು ಸಾಧ್ಯವಾದಷ್ಟು ಬದಿಗೊತ್ತಿದ್ದಾರೆ. ಅವರ ಲವರ್​ ಬಾಯ್​ ಮ್ಯಾನರಿಸಂ ಈ ಸಿನಿಮಾದಲ್ಲಿ ತುಂಬ ತೆಳುವಾಗಿದೆ.

ಇದನ್ನೂ ಓದಿ: Pathaan: ‘ಸಿನಿಮಾ ಬೇರೆ, ಧರ್ಮ ಬೇರೆ; ಬಾಲಿವುಡ್​ ಬಾಯ್ಕಾಟ್​ ಆಗಲ್ಲ’: ಹಿರಿಯ ಪ್ರದರ್ಶಕ ಮನೋಜ್​ ದೇಸಾಯಿ

ಆ್ಯಕ್ಷನ್ ವೈಭವಕ್ಕೆ ಹೆಚ್ಚು ಬೆಲೆಕೊಟ್ಟ ​ಸಿದ್ದಾರ್ಥ್​ ಆನಂದ್​:

ನಿರ್ದೇಶಕ ಸಿದ್ದಾರ್ಥ್​ ಆನಂದ್​ ಅವರು ‘ಪಠಾಣ್​’ ಚಿತ್ರದಲ್ಲಿ ಸಾಹಸ ಸನ್ನಿವೇಶಗಳಿಗೆ ಹೆಚ್ಚು ಮಹತ್ವ ನೀಡಿದ್ದಾರೆ. ಬಹುಕೋಟಿ ರೂಪಾಯಿ ಬಜೆಟ್​ನಲ್ಲಿ ಎಲ್ಲ ಫೈಟಿಂಗ್​ ದೃಶ್ಯಗಳನ್ನು ತುಂಬ ಅದ್ದೂರಿಯಾಗಿ ಕಟ್ಟಿಕೊಟ್ಟಿದ್ದಾರೆ. ಆದರೆ ಕಥೆಯ ಲಾಜಿಕ್​ ವಿಚಾರದಲ್ಲಿ ಅವರು ಸಿಕ್ಕಾಪಟ್ಟೆ ಎಡವಿದ್ದಾರೆ. ಆ ಬಗ್ಗೆ ತುಸು ಗಮನ ಹರಿಸಿದ್ದರೆ, ಕಥೆಯನ್ನು ಇನ್ನಷ್ಟು ಮೊನಚಾಗಿಸಿದ್ದರೆ ‘ಪಠಾಣ್​’ ಚಿತ್ರದ ಮೆರುಗು ಹೆಚ್ಚುತ್ತಿತ್ತು. ಸಂಗೀತ, ಛಾಯಾಗ್ರಹಣ, ವಿಎಫ್​ಎಕ್ಸ್​ ಸೇರಿದಂತೆ ಯಾವುದೇ ವಿಭಾಗದಲ್ಲೂ ಚಿತ್ರ ರಾಜಿ ಆಗಿಲ್ಲ. ಎಲ್ಲವನ್ನೂ ಶ್ರೀಮಂತವಾಗಿಯೇ ಕಟ್ಟಿಕೊಡಲಾಗಿದೆ.

ಇದನ್ನೂ ಓದಿ: Pathaan Movie: ‘ಪಠಾಣ್​’ ಚಿತ್ರಕ್ಕೆ ಬೆಂಗಳೂರಲ್ಲಿ ಹೇಗಿದೆ ಪ್ರತಿಕ್ರಿಯೆ? ಇಲ್ಲಿದೆ ವಿಡಿಯೋ

ಸಲ್ಮಾನ್​-ಶಾರುಖ್​ ಜುಗಲ್​ಬಂಧಿ:

‘ಪಠಾಣ್​’ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಅವರ ಅಭಿಮಾನಿಗಳಿಗೂ ಖುಷಿ ನೀಡುವಂತಹ ದೃಶ್ಯವಿದೆ. ‘ಟೈಗರ್​’ ಪಾತ್ರದಲ್ಲಿ ಸಲ್ಲು ಎಂಟ್ರಿ ನೀಡುತ್ತಾರೆ. ಕಷ್ಟದಲ್ಲಿ ಇರುವ ಪಠಾಣ್​ಗೆ ಸಹಾಯ ಮಾಡಲು ಟೈಗರ್​ ಬರುತ್ತಾನೆ. ಈ ಗೆಸ್ಟ್​ ಅಪಿಯರೆನ್ಸ್​ ದೃಶ್ಯವನ್ನು ಸಲ್ಮಾನ್​ ಫ್ಯಾನ್ಸ್ ಸಖತ್​ ಎಂಜಾಯ್​ ಮಾಡುತ್ತಾರೆ.

ಹಿರಿಯ ನಟಿ ಡಿಂಪಲ್​ ಕಪಾಡಿಯಾ ಅವರು ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಕೂಡ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ವಿಜ್ಞಾನಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕನ್ನಡದ ನಟ ಪ್ರಕಾಶ್​ ಬೆಳವಾಡಿ ಕೂಡ ಗಮನ ಸೆಳೆಯುತ್ತಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:58 am, Wed, 25 January 23

ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ