Pathaan Review: ‘ಪಠಾಣ್​’ ಚಿತ್ರದ ನಕಲಿ ವಿಮರ್ಶೆ ಹಂಚಿಕೊಂಡ ಉಮೈರ್​ ಸಂಧು; ಸಾಕ್ಷಿ ಸಮೇತ ಬಯಲಿಗೆಳೆದ ತರಣ್​ ಆದರ್ಶ್​

Pathaan Movie Review | Taran Adarsh: ಉಮೈರ್​ ಸಂಧು ಅವರು ವಿದೇಶಿ ಸೆನ್ಸಾರ್​ ಮಂಡಳಿಯ ಸದಸ್ಯ ಎಂದು ತಮ್ಮನ್ನು ತಾವು ಕರೆದುಕೊಂಡಿದ್ದಾರೆ. ತಾವೊಬ್ಬ ವಿಮರ್ಶಕ ಎಂಬುದಾಗಿಯೂ ಹೇಳಿಕೊಂಡಿದ್ದಾರೆ.

Pathaan Review: ‘ಪಠಾಣ್​’ ಚಿತ್ರದ ನಕಲಿ ವಿಮರ್ಶೆ ಹಂಚಿಕೊಂಡ ಉಮೈರ್​ ಸಂಧು; ಸಾಕ್ಷಿ ಸಮೇತ ಬಯಲಿಗೆಳೆದ ತರಣ್​ ಆದರ್ಶ್​
ಶಾರುಖ್ ಖಾನ್
Follow us
ಮದನ್​ ಕುಮಾರ್​
|

Updated on: Jan 22, 2023 | 8:30 AM

ಭಾರಿ ಹೈಪ್​ ಸೃಷ್ಟಿ ಮಾಡಿರುವ ‘ಪಠಾಣ್​’ ಸಿನಿಮಾವನ್ನು (Pathaan Movie) ಮೊದಲ ದಿನವೇ ನೋಡಲು ಶಾರುಖ್​ ಖಾನ್​ ಅಭಿಮಾನಿಗಳು ಕಾದಿದ್ದಾರೆ. ಈ ಸಿನಿಮಾ ಹೇಗಿದೆ ಎಂಬುದನ್ನು ತಿಳಿಯುವ ಕೌತುಕ ಸಿನಿಪ್ರಿಯರಲ್ಲಿದೆ. ಈ ಚಿತ್ರಕ್ಕೆ ಒಳ್ಳೆಯ ವಿಮರ್ಶೆ ಸಿಕ್ಕರೆ ಬಾಕ್ಸ್​ ಆಫೀಸ್​ ಗಳಿಕೆಗೆ ಸಹಕಾರಿ ಆಗಲಿದೆ. ಮೊದಲ ದಿನವೇ ಕೆಟ್ಟ ವಿಮರ್ಶೆ ಕೇಳಿಬಂದರೆ ಸಿನಿಮಾ ನೋಡುವವರ ಸಂಖ್ಯೆ ಇಳಿಮುಖ ಆಗುತ್ತದೆ. ಆ ದೃಷ್ಟಿಯಿಂದ ಮೊದಲ ವಿಮರ್ಶೆ ತುಂಬ ಮುಖ್ಯವಾಗುತ್ತದೆ. ಹೀಗಿರುವಾಗ ಉಮೈರ್​ ಸಂಧು (Umair Sandhu) ಅವರು ಫೇಕ್​ ವಿಮರ್ಶೆ ಹಂಚಿಕೊಂಡಿದ್ದಾರೆ. ಅವರು ಟ್ವಿಟರ್​ನಲ್ಲಿ ಬರೆದುಕೊಂಡಿರುವ ‘ಪಠಾಣ್​’ ಸಿನಿಮಾದ ವಿಮರ್ಶೆ ಸಂಪೂರ್ಣ ಕಾಪಿ ಪೇಸ್ಟ್​ ಎಂಬುದನ್ನು ಟ್ರೇಡ್​ ವಿಶ್ಲೇಷಕ ತರಣ್​ ಆದರ್ಶ್​ (Taran Adarsh)​ ಅವರು ಬಯಲು ಮಾಡಿದ್ದಾರೆ.

ಉಮೈರ್​ ಸಂಧು ಅವರು ವಿದೇಶಿ ಸೆನ್ಸಾರ್​ ಮಂಡಳಿಯ ಸದಸ್ಯ ಎಂದು ತಮ್ಮನ್ನು ತಾವು ಕರೆದುಕೊಂಡಿದ್ದಾರೆ. ವಿಮರ್ಶಕ ಎಂಬುದಾಗಿಯೂ ಹೇಳಿಕೊಂಡಿದ್ದಾರೆ. ಈ ಹಿಂದೆ ಅನೇಕ ಸಿನಿಮಾಗಳ ವಿಮರ್ಶೆಯನ್ನು ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದುಂಟು. ಭಾರತದಲ್ಲಿ ಸಿನಿಮಾಗಳು ಬಿಡುಗಡೆ ಆಗುವುದಕ್ಕೂ ಮುನ್ನವೇ ಅವರು ಅವುಗಳ ವಿಮರ್ಶೆ ತಿಳಿಸಿದ್ದರು. ಆದರೆ ಈ ಬಾರಿ ಅವರು ನಗೆಪಾಟಲಿಗೆ ಒಳಗಾಗುವಂತೆ ಆಗಿದೆ.

ಇದನ್ನೂ ಓದಿ
Image
Pathaan: ವಿಕಲಚೇತನ ಪ್ರೇಕ್ಷಕರಿಗಾಗಿ ‘ಪಠಾಣ್​’ ಚಿತ್ರಕ್ಕೆ ಆಡಿಯೋ ವಿವರಣೆ, ಸಬ್​ಟೈಟಲ್​ ಅಳವಡಿಸಲು ಕೋರ್ಟ್​ ಸೂಚನೆ
Image
Shah Rukh Khan: ಭಾರತದಲ್ಲಿ ‘ಪಠಾಣ್​’ ಚಿತ್ರಕ್ಕೆ ವಿರೋಧ; ದುಬೈಗೆ ಹೋಗಿ ಸಿನಿಮಾ ಪ್ರಚಾರ ಮಾಡಿದ ಶಾರುಖ್​ ಖಾನ್​
Image
Pooja Bhatt: ‘ಪ್ರತಿಭಟನೆಗೂ ಗಲಭೆಗೂ ವ್ಯತ್ಯಾಸವಿದೆ’: ‘ಪಠಾಣ್​’ ವಿರುದ್ಧ ಭಜರಂಗ ದಳದ ವರ್ತನೆಗೆ ಪೂಜಾ ಭಟ್​ ಖಂಡನೆ
Image
Shah Rukh Khan: ‘ಪಠಾಣ್​’ ಚಿತ್ರದಲ್ಲಿ ‘ಪ್ರಧಾನ ಮಂತ್ರಿ’ ಪದಕ್ಕೆ ಕತ್ತರಿ ಹಾಕಿದ ಸೆನ್ಸಾರ್​ ಮಂಡಳಿ; 13 ಕಡೆಗಳಲ್ಲಿ ಬದಲಾವಣೆ

Shah Rukh Khan: ಭಾರತದಲ್ಲಿ ‘ಪಠಾಣ್​’ ಚಿತ್ರಕ್ಕೆ ವಿರೋಧ; ದುಬೈಗೆ ಹೋಗಿ ಸಿನಿಮಾ ಪ್ರಚಾರ ಮಾಡಿದ ಶಾರುಖ್​ ಖಾನ್​

‘ಪಠಾಣ್​’ ಸಿನಿಮಾ ಹಾಗಿದೆ.. ಹೀಗಿದೆ.. ಎಂದು ಪುಂಕಾನುಪುಂಕವಾಗಿ ಉಮೈರ್​ ಸಂಧು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದರು. ಆದರೆ ಆ ಸಾಲುಗಳ ಮೂಲವನ್ನು ತರಣ್​ ಆದರ್ಶ್​ ಅವರು ಪತ್ತೆ ಹಚ್ಚಿದ್ದಾರೆ. ಈ ಹಿಂದೆ ‘ಏಕ್​ ಥಾ ಟೈಗರ್​’ ಚಿತ್ರಕ್ಕೆ ತರಣ್​ ಆದರ್ಶ್​ ಬರೆದ ವಿಮರ್ಶೆಯನ್ನೇ ಈಗ ಉಮೈರ್​ ಸಂಧು ಕಾಪಿ ಪೇಸ್ಟ್​ ಮಾಡಿದ್ದಾರೆ. ಸಲ್ಮಾನ್​ ಖಾನ್​ ಹೆಸರಿನ ಬದಲು ಶಾರುಖ್​ ಖಾನ್​ ಹೆಸರನ್ನು ಸೇರಿಸಿದ್ದಾರೆ ಅಷ್ಟೇ!

ಇದನ್ನು ಪತ್ತೆ ಹಚ್ಚಿರುವ ತರಣ್​ ಆದರ್ಶ್​​ ಅವರು ಟ್ವಿಟರ್​ನಲ್ಲಿಯೇ ತಿರುಗೇಟು ಕೊಟ್ಟಿದ್ದಾರೆ. ‘ಇಂಥ ನಾನ್​ಸೆನ್ಸ್​ ನಿಲ್ಲಿಸಿ’ ಎಂದು ಅವರು ಖಡಕ್​ ವಾರ್ನಿಂಗ್​ ನೀಡಿದ್ದಾರೆ. ಒಟ್ಟಿನಲ್ಲಿ ಉಮೈರ್​ ಸಂಧು ಬರೆಯುವ ವಿಮರ್ಶೆಯಲ್ಲಿ ಅಸಲಿತನ ಇರುವುದಿಲ್ಲ ಎಂಬುದು ಈ ಮೂಲಕ ಸಾಬೀತಾದಂತೆ ಆಗಿದೆ. ಈಗ ಅವರು ತಮ್ಮ ಟ್ವೀಟ್​ ಡಿಲೀಟ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ