AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ ಏಪ್ರಿಲ್​ನಿಂದ ಚಾಲನೆ ಸಾಧ್ಯತೆ; ಓಮನ್, ಬ್ರಿಟನ್ ಒಪ್ಪಂದಗಳೂ ಏಪ್ರಿಲ್​ನಲ್ಲೇ?

India US interim trade deal to be implemented from 2026 April: ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವು ಏಪ್ರಿಲ್​ನಲ್ಲಿ ಚಾಲನೆಗೆ ಬರಲಿದೆ ಎಂದು ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ. ಮಾರ್ಚ್ 23ರಿಂದ ಮೂರು ದಿನಗಳ ಕಾಲ ಎರಡೂ ದೇಶಗಳ ಸಂಧಾನಕಾರರ ತಂಡಗಳು ಲೀಗಲ್ ಟರ್ಮ್​ಗಳನ್ನು ಅಂತಿಮಗೊಳಿಸಲು ಮಾತಕತೆ ನಡೆಸಲಿವೆ ಎನ್ನಲಾಗಿದೆ. ಏಪ್ರಿಲ್ ತಿಂಗಳಲ್ಲೇ ಬ್ರಿಟನ್ ಹಾಗೂ ಓಮನ್ ದೇಶಗಳ ನಡುವೆ ಭಾರತದ ವ್ಯಾಪಾರ ಒಪ್ಪಂದಗಳು ಜಾರಿಗೆ ಬರಬಹುದು.

ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ ಏಪ್ರಿಲ್​ನಿಂದ ಚಾಲನೆ ಸಾಧ್ಯತೆ; ಓಮನ್, ಬ್ರಿಟನ್ ಒಪ್ಪಂದಗಳೂ ಏಪ್ರಿಲ್​ನಲ್ಲೇ?
ಪೀಯೂಶ್ ಗೋಯಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 20, 2026 | 3:30 PM

Share

ನವದೆಹಲಿ, ಫೆಬ್ರುವರಿ 20: ಏಪ್ರಿಲ್ ತಿಂಗಳಲ್ಲಿ ಮೂರು ವ್ಯಾಪಾರ ಒಪ್ಪಂದಗಳು ಚಾಲನೆಗೆ ಬರುವ ಸಾಧ್ಯತೆ ಇದೆ. ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ನೀಡಿರುವ ಮಾಹಿತಿ ಪ್ರಕಾರ, ಭಾರತ ಹಾಗೂ ಅಮೆರಿಕ ಮಧ್ಯೆ ಏರ್ಪಟ್ಟಿರುವ ಮಧ್ಯಂತರ ವ್ಯಾಪಾರ ಒಪ್ಪಂದ (India US Interim Trade Deal) ಏಪ್ರಿಲ್​ನಲ್ಲಿ ಜಾರಿಗೆ ಬರಬಹುದು. ಬ್ರಿಟನ್ ಮತ್ತು ಓಮನ್ ಜೊತೆಗೆ ಏರ್ಪಟ್ಟಿರುವ ಭಾರತದ ಟ್ರೇಡ್ ಡೀಲ್​ಗಳು ಕೂಡ ಏಪ್ರಿಲ್ ತಿಂಗಳಲ್ಲೇ ಚಾಲನೆಗೆ ಬರಬಹುದು. ಇನ್ನು, ನ್ಯೂಜಿಲೆಂಡ್ ಜೊತೆಗಿನ ವ್ಯಾಪಾರ ಒಪ್ಪಂದವು ಸೆಪ್ಟೆಂಬರ್ ತಿಂಗಳಲ್ಲಿ ಅನುಷ್ಠಾನಕ್ಕೆ ಬರಲಿದೆ ಎಂದು ಹೇಳಲಾಗುತ್ತಿದೆ.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ರೂಪಿಸಲಾಗುವ ನಿಯಮಗಳು…

ಭಾರತ ಮತ್ತು ಅಮೆರಿಕ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಫ್ರೇಮ್​ವರ್ಕ್ (Framework for Interim Trade deal) ಅಂತಿಮಗೊಳಿಸಲಾಗಿದೆ ಎಂದು ಕೆಲ ವಾರಗಳ ಹಿಂದೆ ಜಂಟಿ ಹೇಳಿಕೆಯಲ್ಲಿ ಘೋಷಣೆ ಮಾಡಲಾಗಿದೆ. ಈ ಒಪ್ಪಂದದ ಕಾನೂನು ನಿಯಮಗಳನ್ನು ಅಂತಿಮಗೊಳಿಸಲು ಎರಡೂ ದೇಶಗಳ ತಂಡಗಳು ಮೂರು ದಿನಗಳ ಮಾತುಕತೆ ನಡೆಸಲಿವೆ. ಇದು ಫೆಬ್ರುವರಿ 23, ಸೋಮವಾರ ಆರಂಭವಾಗುತ್ತದೆ.

ಇದನ್ನೂ ಓದಿ: ಕರ್ನಾಟಕದ ಕೈತಪ್ಪಿತಾ ಏರೋಸ್ಪೇಸ್ ಘಟಕ ಯೋಜನೆ?; ಬೆಳಗಾವಿ ಮೂಲದ ಏಕಸ್ ಗ್ರೂಪ್​ನಿಂದ ತಮಿಳುನಾಡಿನಲ್ಲಿ ಕ್ಲಸ್ಟರ್ ನಿರ್ಮಾಣ

ಒಪ್ಪಂದದ ಚೌಕಟ್ಟನ್ನು ಆಧಾರವಾಗಿಟ್ಟುಕೊಂಡು ಲೀಗಲ್ ಅಗ್ರೀಮೆಂಟ್ ಅನ್ನು ರೂಪಿಸಲಾಗುತ್ತಿದೆ. ಮಾರ್ಚ್​ನಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಬಹುದು. ಹೊಸ ಹಣಕಾಸು ವರ್ಷದ ಆರಂಭವಾದ ಏಪ್ರಿಲ್ 1ರಿಂದ ಮಧ್ಯಂತರ ಒಪ್ಪಂದ ಅಧಿಕೃತವಾಗಿ ಜಾರಿಗೆ ಬರಬಹುದು.

ಭಾರತದ ಮೇಲೆ ಅಮೆರಿಕ ಶೇ. 25ರಷ್ಟು ಪ್ರತಿಸುಂಕ ವಿಧಿಸುತ್ತಿದೆ. ತೀರಾ ಇತ್ತೀಚಿನವರೆಗೂ ರಷ್ಯನ್ ತೈಲ ಖರೀದಿಗೆ ದಂಡವಾಗಿ ಹೆಚ್ಚುವರಿ ಶೇ. 25 ಟ್ಯಾರಿಫ್ ಹಾಕುತಿತ್ತು. ಒಟ್ಟು ಟ್ಯಾರಿಫ್ ಶೇ. 25 ಇತ್ತು. ಆದರೆ, ರಷ್ಯನ್ ತೈಲ ಖರೀದಿಗೆ ಹಾಕುತ್ತಿದ್ದ ಶೇ. 25 ಟ್ಯಾರಿಫ್ ದಂಡವನ್ನು ಹಿಂಪಡೆದುಕೊಂಡಿದೆ. ಈಗ ಶೇ. 25 ಟ್ಯಾರಿಫ್ ಮಾತ್ರವೇ ಜಾರಿಯಲ್ಲಿ ಇರುವುದು.

ಇದನ್ನೂ ಓದಿ: ಪ್ಯಾಕ್ಸ್ ಸಿಲಿಕಾಗೆ ಭಾರತ ಸೇರ್ಪಡೆ; ಅಮೆರಿಕ ಸಂತಸ; ಏನಿದು ಹೊಸ ಒಪ್ಪಂದ?

ಏಪ್ರಿಲ್ 1ರಿಂದ ಈ ಶೇ. 25 ಪ್ರತಿಸುಂಕವನ್ನು ಶೇ. 18ಕ್ಕೆ ಇಳಿಸಲಾಗುತ್ತದೆ. ಭಾರತವು ಅಮೆರಿಕದ ಕೃಷಿ, ಡೈರಿ ಮತ್ತಿತರ ಕೆಲ ಸೂಕ್ಷ್ಮ ಸೆಕ್ಟರ್ ಹೊರತುಪಡಿಸಿ ಉಳಿದ ಆಮದುಗಳ ಮೇಲೆ ಟ್ಯಾರಿಫ್ ಅನ್ನು ತೆಗೆದುಹಾಕಲಿದೆ ಅಥವಾ ಕಡಿಮೆ ಮಾಡಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
SIR ಬಗ್ಗೆ ಭಯ ಬೇಡ: ಧೈರ್ಯ ಹೇಳಿದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್
SIR ಬಗ್ಗೆ ಭಯ ಬೇಡ: ಧೈರ್ಯ ಹೇಳಿದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಹೆಚ್.ಕೆ ಸುರೇಶ್ ಪ್ರಮಾಣ!
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಹೆಚ್.ಕೆ ಸುರೇಶ್ ಪ್ರಮಾಣ!
ಎಲ್ಲರೂ ಮತಪಟ್ಟಿಯಲ್ಲಿ ತಮ್ಮ ಹೆಸರು ಇರುವಂತೆ ನೋಡಿಕೊಳ್ಳಿ ಎಂದ ಡಿಕೆಶಿ!
ಎಲ್ಲರೂ ಮತಪಟ್ಟಿಯಲ್ಲಿ ತಮ್ಮ ಹೆಸರು ಇರುವಂತೆ ನೋಡಿಕೊಳ್ಳಿ ಎಂದ ಡಿಕೆಶಿ!
ಬೆಂಗಳೂರಿನಲ್ಲಿ ಫುಟ್​ಪಾತ್ ಅತಿಕ್ರಮಣ ತೆರವಿಗೆ ಇಂದೇ ಗಡುವು
ಬೆಂಗಳೂರಿನಲ್ಲಿ ಫುಟ್​ಪಾತ್ ಅತಿಕ್ರಮಣ ತೆರವಿಗೆ ಇಂದೇ ಗಡುವು
ಮತದಾರರ ಪಟ್ಟಿ ಪರಿಷ್ಕರಣೆ: ಸಿಎಂ ಮನೆಯಿಂದಲೇ ಎಸ್​ಐಆರ್​ಗೆ ಚಾಲನೆ!
ಮತದಾರರ ಪಟ್ಟಿ ಪರಿಷ್ಕರಣೆ: ಸಿಎಂ ಮನೆಯಿಂದಲೇ ಎಸ್​ಐಆರ್​ಗೆ ಚಾಲನೆ!
ವಿವಾಹಿತೆ ಜೊತೆ ಪರಾರಿಯಾದ ಯುವಕನ ಮನೆ ಧ್ವಂಸ: ಕಮಿಷನರ್​​ ಏನಂದ್ರು?
ವಿವಾಹಿತೆ ಜೊತೆ ಪರಾರಿಯಾದ ಯುವಕನ ಮನೆ ಧ್ವಂಸ: ಕಮಿಷನರ್​​ ಏನಂದ್ರು?
ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ
ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ
ನೋಡಿ, ಎಂಥಾ ಅದ್ಭುತ ದೃಶ್ಯ! ಒಂದೇ ಮರದ ಮೇಲೆ ಕುಳಿತ ಎರಡು ಚಿರತೆಗಳು
ನೋಡಿ, ಎಂಥಾ ಅದ್ಭುತ ದೃಶ್ಯ! ಒಂದೇ ಮರದ ಮೇಲೆ ಕುಳಿತ ಎರಡು ಚಿರತೆಗಳು
ಅಡ್ಡಮತದಾನ ಮಾಡಿಲ್ಲ: ಬೇಲೂರು ಬಿಜೆಪಿ ಶಾಸಕ ಸುರೇಶ್ ಆಣೆ-ಪ್ರಮಾಣ
ಅಡ್ಡಮತದಾನ ಮಾಡಿಲ್ಲ: ಬೇಲೂರು ಬಿಜೆಪಿ ಶಾಸಕ ಸುರೇಶ್ ಆಣೆ-ಪ್ರಮಾಣ
ಕಾರವಾರದಲ್ಲಿ ಅಬ್ಬರಿಸಿದ ಮಳೆರಾಯ; ಹಲವೆಡೆ ರಸ್ತೆಗಳು ಜಲಾವೃತ!
ಕಾರವಾರದಲ್ಲಿ ಅಬ್ಬರಿಸಿದ ಮಳೆರಾಯ; ಹಲವೆಡೆ ರಸ್ತೆಗಳು ಜಲಾವೃತ!