Pathaan: ‘ಸಿನಿಮಾ ಬೇರೆ, ಧರ್ಮ ಬೇರೆ; ಬಾಲಿವುಡ್​ ಬಾಯ್ಕಾಟ್​ ಆಗಲ್ಲ’: ಹಿರಿಯ ಪ್ರದರ್ಶಕ ಮನೋಜ್​ ದೇಸಾಯಿ

Manoj Desai | Boycott Bollywood: ಸಿನಿಮಾ ಕ್ಷೇತ್ರದಲ್ಲಿ ಮನೋಜ್​ ದೇಸಾಯಿ ಅವರಿಗೆ ಸಾಕಷ್ಟು ಅನುಭವ ಇದೆ. ಹಲವು ವರ್ಷಗಳಿಂದ ಅವರು ಚಿತ್ರಮಂದಿರ ನಡೆಸುತ್ತಿದ್ದಾರೆ.

Pathaan: ‘ಸಿನಿಮಾ ಬೇರೆ, ಧರ್ಮ ಬೇರೆ; ಬಾಲಿವುಡ್​ ಬಾಯ್ಕಾಟ್​ ಆಗಲ್ಲ’: ಹಿರಿಯ ಪ್ರದರ್ಶಕ ಮನೋಜ್​ ದೇಸಾಯಿ
ಮನೋಜ್ ದೇಸಾಯಿ Image Credit source: Bollywood Hungama
Follow us
TV9 Web
| Updated By: ಮದನ್​ ಕುಮಾರ್​

Updated on:Jan 16, 2023 | 5:40 PM

ಸಿನಿಮಾಗಳನ್ನು ಕೇವಲ ಸಿನಿಮಾವಾಗಿ ನೋಡುವ ಕಾಲ ಈಗ ಉಳಿದಿಲ್ಲ. ಅದರಲ್ಲಿ ರಾಜಕೀಯ ಬೆರೆತಿದೆ. ಜಾತಿ-ಧರ್ಮದ ಕಣ್ಣಿನಿಂದ ಎಲ್ಲವನ್ನೂ ನೋಡುವ ಟ್ರೆಂಡ್​ ಚಾಲ್ತಿಯಲ್ಲಿದೆ. ಇದರಿಂದ ಸಿನಿಮಾ ಮೇಲೆ ಪರಿಣಾಮ ಬೀರುತ್ತದೆ. ವಿವಾದಗಳೂ ಹುಟ್ಟಿಕೊಳ್ಳುತ್ತಿವೆ. ಶಾರುಖ್​ ಖಾನ್​ ನಟನೆಯ ‘ಪಠಾಣ್​’ ಸಿನಿಮಾ (Pathaan Movie) ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾವನ್ನು ಒಂದು ವರ್ಗದ ಜನರು ವಿರೋಧಿಸುತ್ತಿದ್ದಾರೆ. ಈ ಟ್ರೆಂಡ್​ ಬಗ್ಗೆ ಮುಂಬೈನ ಹಿರಿಯ ಪ್ರದರ್ಶಕ, ‘ಮರಾಠ ಮಂದಿರ್​’ ಚಿತ್ರಮಂದಿರದ ಮಾಲಿಕ ಮನೋಜ್​ ದೇಸಾಯಿ (Manoj Desai) ಅವರು ಮಾತನಾಡಿದ್ದಾರೆ. ‘ಬಾಲಿವುಡ್​ ಹಂಗಾಮಾ’ ನಡೆಸಿದ ಸಂದರ್ಶನದಲ್ಲಿ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸಿನಿಮಾ ಕ್ಷೇತ್ರದಲ್ಲಿ ಮನೋಜ್​ ದೇಸಾಯಿ ಅವರಿಗೆ ಸಖತ್​ ಅನುಭವ ಇದೆ. ಹಲವು ವರ್ಷಗಳಿಂದ ಅವರು ಚಿತ್ರಮಂದಿರ ನಡೆಸುತ್ತಿದ್ದಾರೆ. ಸಿನಿಮಾ ವಿಚಾರದಲ್ಲಿ ಹಿಂದೂ-ಮುಸ್ಲಿಂ ಎಂಬ ಭೇದ ಇರಬಾರದು ಎಂದು ಅವರು ಹೇಳಿದ್ದಾರೆ. ‘ನನಗೆ ಈ ಭೇದ ಇಲ್ಲ. ಎಲ್ಲರೂ ನನ್ನ ಗ್ರಾಹಕರು. ಅವರಿಗೆ ನಾನು ಸೆಲ್ಯೂಟ್​ ಮಾಡುತ್ತೇನೆ. ಪಠಾಣ್​ ಸಿನಿಮಾವನ್ನು ಬಾಯ್ಕಾಟ್​ ಮಾಡುವ ಹಿಂದೆ ಹುನ್ನಾರ ಇರಬಹುದು. ಆದರೆ ಎಲ್ಲ ಧರ್ಮದವರು ಈ ಸಿನಿಮಾ ನೋಡುತ್ತಾರೆ ಅಂತ ನನಗೆ ಅನಿಸುತ್ತಿದೆ’ ಎಂಬುದು ಮನೋಜ್​ ದೇಸಾಯಿ ಅಭಿಪ್ರಾಯ.

ಇದನ್ನೂ ಓದಿ: Pooja Bhatt: ‘ಪ್ರತಿಭಟನೆಗೂ ಗಲಭೆಗೂ ವ್ಯತ್ಯಾಸವಿದೆ’: ‘ಪಠಾಣ್​’ ವಿರುದ್ಧ ಭಜರಂಗ ದಳದ ವರ್ತನೆಗೆ ಪೂಜಾ ಭಟ್​ ಖಂಡನೆ

ಇದನ್ನೂ ಓದಿ
Image
Vivek Agnihotri: ಶಾರುಖ್​​ ನಟನೆಯ ‘ಬೇಷರಂ ರಂಗ್​’ ಹಾಡು ನೋಡಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ವಿವೇಕ್​ ಅಗ್ನಿಹೋತ್ರಿ
Image
Deepika Padukone: ‘ಬೇಷರಂ​ ರಂಗ್​’ ಹಾಡಿನ ವಿವಾದ; ದೀಪಿಕಾ ಕೇಸರಿ ಬಿಕಿನಿ ಧರಿಸಿದ್ದಕ್ಕೂ ನೆಟ್ಟಿಗರ ತಕರಾರು
Image
Besharam Rang: ಹೊಸ ಹಾಡಿನಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ದೀಪಿಕಾ; ‘ಪಠಾಣ್​’ ಚಿತ್ರದ ಮೇಲೆ ಹೆಚ್ಚಿತು ನಿರೀಕ್ಷೆ
Image
Besharam Rang: ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್​ ವೀಕ್ಷಣೆ ಕಂಡ ‘ಪಠಾಣ್​’ ಸಿನಿಮಾ ಹಾಡು​

‘ಧರ್ಮದ ವಿಚಾರವನ್ನು ಸಿನಿಮಾದಲ್ಲಿ ತರಬಾರದು. ಹಾಗೆ ತಂದಿದ್ದರೆ ‘ಮೊಘಲ್​-ಏ-ಆಝಮ್​’ ಸಿನಿಮಾ ಇಲ್ಲಿ 17 ವರ್ಷ ಪ್ರದರ್ಶನ ಆಗುತ್ತಿರಲಿಲ್ಲ. ಶಾರುಖ್​ ಖಾನ್​ ಅವರ ‘ಡಿಡಿಎಲ್​ಜೆ’ ಚಿತ್ರ ಕೂಡ 28 ವರ್ಷ ಓಡುತ್ತಿರಲಿಲ್ಲ. ಅದರಲ್ಲಿ ಜಾತಿ ನೋಡಬಾರದು’ ಎಂದಿದ್ದಾರೆ ಮನೋಜ್​ ದೇಸಾಯಿ.

ಇದನ್ನೂ ಓದಿ: Shah Rukh Khan: ಭಾರತದಲ್ಲಿ ‘ಪಠಾಣ್​’ ಚಿತ್ರಕ್ಕೆ ವಿರೋಧ; ದುಬೈಗೆ ಹೋಗಿ ಸಿನಿಮಾ ಪ್ರಚಾರ ಮಾಡಿದ ಶಾರುಖ್​ ಖಾನ್​

ಬಾಲಿವುಡ್​ ಸಿನಿಮಾಗಳನ್ನು ಬಹಿಷ್ಕಾರ​ ಮಾಡಬೇಕು ಎಂಬ ಅಭಿಯಾನ ಸೋಶಿಯಲ್​ ಮೀಡಿಯಾದಲ್ಲಿ ನಡೆಯುತ್ತಿದೆ. ಆ ಕುರಿತಾಗಿಯೂ ಮನೋಜ್​ ದೇಸಾಯಿ ಮಾತನಾಡಿದ್ದಾರೆ. ‘ಬಾಯ್ಕಾಟ್​ ಎಂಬುದು ದೊಡ್ಡ ರಾಜಕೀಯ. ಅದನ್ನು ನಾನು ಒಪ್ಪುವುದಿಲ್ಲ. ಬಾಲಿವುಡ್​ ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ನೋಡಲು ಬನ್ನಿ ಅಂತ ಪ್ರೇಕ್ಷಕರಲ್ಲಿ ನಾನು ಮನವಿ ಮಾಡುತ್ತೇನೆ. ಪಠಾಣ್​ ರೀತಿಯ ಬ್ಯಾಕ್​ ಟು ಬ್ಯಾಕ್​ ಸಿನಿಮಾ ಬರಬೇಕು. ಆಗ ಬಾಲಿವುಡ್​ನ ಚಾರ್ಮ್​ ಮರಳಿ ಬರಲಿದೆ’ ಎಂದು ಮನೋಜ್​ ದೇಸಾಯಿ ಹೇಳಿದ್ದಾರೆ.

2022ರಲ್ಲಿ ಬಾಲಿವುಡ್​ ಸಿನಿಮಾಗಳು ಒಳ್ಳೆಯ ರಿಸಲ್ಟ್​ ಪಡೆಯಲಿಲ್ಲ. ಆದರೆ 2023ರಲ್ಲಿ ಹಿಂದಿ ಚಿತ್ರರಂಗಕ್ಕೆ ಉತ್ತಮ ಕಮಾಯಿ ಆಗಲಿದೆ ಎಂದು ಮನೋಜ್​ ದೇಸಾಯಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಒಳ್ಳೆಯ ಗುಣಮಟ್ಟದ ಸಿನಿಮಾಗಳು ಬರಬೇಕು ಎಂದು ಅವರು ಆಶಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:40 pm, Mon, 16 January 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ