Sanjay Raut: ‘ಶಾರುಖ್​ ಚಿತ್ರ ಎಂಬ ಕಾರಣಕ್ಕೆ ವಿರೋಧ ಮಾಡೋದು ತಪ್ಪು’: ಶಿವಸೇನಾ ಮುಖಂಡ ಸಂಜಯ್​ ರಾವತ್​

Shah Rukh Khan | Pathaan Movie: ‘ದೇಶದಲ್ಲಿ ದೊಡ್ಡ ಸಮಸ್ಯೆಗಳಿವೆ. ಆ ಬಗ್ಗೆ ಎದುರಾಗುವ ಪ್ರಶ್ನೆಯಿಂದ ತಪ್ಪಿಸಿಕೊಳ್ಳಲು ನೀವು ಇಂಥ ವಿಷಯ ಚರ್ಚೆ ಮಾಡುತ್ತೀರಿ’ ಎಂದು ಸಂಜಯ್​ ರಾವತ್​ ಹೇಳಿದ್ದಾರೆ.

Sanjay Raut: ‘ಶಾರುಖ್​ ಚಿತ್ರ ಎಂಬ ಕಾರಣಕ್ಕೆ ವಿರೋಧ ಮಾಡೋದು ತಪ್ಪು’: ಶಿವಸೇನಾ ಮುಖಂಡ ಸಂಜಯ್​ ರಾವತ್​
ಸಂಜಯ್ ರಾವತ್, ಶಾರುಖ್ ಖಾನ್, ದೀಪಿಕಾ ಪಡುಕೋಣೆ
Follow us
TV9 Web
| Updated By: ಮದನ್​ ಕುಮಾರ್​

Updated on: Jan 16, 2023 | 9:53 AM

ಬಿಡುಗಡೆಗೆ ಸಜ್ಜಾಗಿರುವ ‘ಪಠಾಣ್​’ ಸಿನಿಮಾ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಶಾರುಖ್​ ಖಾನ್​ (Shah Rukh Khan) ನಟನೆಯ ಈ ಸಿನಿಮಾಗೆ ಸಂಬಂಧಿಸಿದಂತೆ ಹಲವು ವಿವಾದ ಹುಟ್ಟಿಕೊಂಡಿವೆ. ‘ಪಠಾಣ್​’ (Pathaan Movie) ಸಿನಿಮಾದ ನಾಯಕಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಿಕಿಸಿ ಧರಿಸಿದ್ದು ಸರಿಯಲ್ಲ ಎಂದು ಕೆಲವು ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಆದರೆ ಇದನ್ನು ಶಿವಸೇನಾ ಎಂಪಿ ಸಂಜಯ್​ ರಾವತ್​ (Sanjay Raut) ಅವರು ಖಂಡಿಸಿದ್ದಾರೆ. ‘ಇದು ಶಾರುಖ್​ ಖಾನ್​ ಸಿನಿಮಾ ಎಂಬ ಕಾರಣಕ್ಕೆ ವಿರೋಧಿಸೋದು ತಪ್ಪು’ ಎಂದು ಅವರು ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

‘ಪಠಾಣ್​’ ಪರ ಸಂಜತ್​ ರಾವತ್​ ಹೇಳಿಕೆ:

‘ಪಠಾಣ್ ಸಿನಿಮಾ ವಿರುದ್ಧ ಈ ರೀತಿ ವಿವಾದ ಮಾಡುವ ಅಗತ್ಯ ಇಲ್ಲ. ಬಿಜೆಪಿಯ ಓರ್ವ ಮುಖಂಡರು ಉರ್ಫಿ ಜಾವೇದ್​ ಧರಿಸಿದ ಬಟ್ಟೆ ಬಗ್ಗೆಯೂ ಆಕ್ಷೇಪ ಎತ್ತಿದ್ದಾರೆ. ದೇಶದಲ್ಲಿ ಅದಕ್ಕಿಂತಲೂ ದೊಡ್ಡ ಸಮಸ್ಯೆಗಳಿವೆ. ಆ ಬಗ್ಗೆ ಎದುರಾಗುವ ಪ್ರಶ್ನೆಯಿಂದ ತಪ್ಪಿಸಿಕೊಳ್ಳಲು ನೀವು ಇಂಥ ವಿಷಯ ಚರ್ಚೆ ಮಾಡುತ್ತೀರಿ’ ಎಂದು ಸಂಜಯ್​ ರಾವತ್​ ಹೇಳಿದ್ದಾರೆ.

ಶಾರುಖ್​ ಖಾನ್​ ಸಿನಿಮಾ ಎಂಬ ಕಾರಣಕ್ಕೆ ವಿರೋಧ:

‘ಬಿಜೆಪಿ ಜೊತೆ ನಂಟು ಹೊಂದಿರುವ ಕಲಾವಿದರು ಕೂಡ ಕೇಸರಿ ಬಟ್ಟೆ ಧರಿಸಿದ್ದುಂಟು. ಸೆನ್ಸಾರ್ ಮಂಡಳಿಯು ಸರ್ಕಾರದ ಕೈಗೊಂಬೆ ಆಗಿದೆ. ಇದು ಶಾರುಖ್​ ಖಾನ್​ ಸಿನಿಮಾ ಎಂಬ ಕಾರಣಕ್ಕೆ ಆ ದೃಶ್ಯಕ್ಕೆ ಕತ್ತರಿ ಹಾಕಲಾಯಿತು. ದೊಡ್ಡ ಪರದೆಯಲ್ಲಿ ನಗ್ನತೆ ತೋರಿಸಿದರೆ, ಅದನ್ನು ಯಾರಾದರೂ ವಿರೋಧಿಸುವುದು ಸರಿ. ಆದರೆ ಕೇಸರಿ ಬಣ್ಣದ ಬಟ್ಟೆ ಎಂಬ ಕಾರಣಕ್ಕೆ ಆ ದೃಶ್ಯ ತೆಗೆದುಹಾಕುವುದು ತಪ್ಪು’ ಎಂದು ಸಂಜಯ್ ರಾವತ್​ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Pooja Bhatt: ‘ಪ್ರತಿಭಟನೆಗೂ ಗಲಭೆಗೂ ವ್ಯತ್ಯಾಸವಿದೆ’: ‘ಪಠಾಣ್​’ ವಿರುದ್ಧ ಭಜರಂಗ ದಳದ ವರ್ತನೆಗೆ ಪೂಜಾ ಭಟ್​ ಖಂಡನೆ

‘ಪಠಾಣ್​’ ಸಿನಿಮಾಗೆ ಸಿದ್ದಾರ್ಥ್​ ಆನಂದ್​ ಅವರು ನಿರ್ದೇಶನ ಮಾಡಿದ್ದಾರೆ. ಹಲವು ದೇಶಗಳಲ್ಲಿ ಈ ಚಿತ್ರದ ಶೂಟಿಂಗ್​ ಮಾಡಲಾಗಿದೆ. ಶಾರುಖ್​ ಖಾನ್​ ಅವರು ಈ ಸಿನಿಮಾಗಾಗಿ ಸಿಕ್ಸ್​ ಪ್ಯಾಕ್​ ಮಾಡಿಕೊಂಡು ಕಷ್ಟಪಟ್ಟಿದ್ದಾರೆ. ಭರ್ಜರಿ ಆ್ಯಕ್ಷನ್​ ದೃಶ್ಯಗಳಲ್ಲಿ ಅವರು ನಟಿಸಿದ್ದಾರೆ. ‘ಪಠಾಣ್​’ ಟ್ರೇಲರ್​ ಮತ್ತು ಹಾಡುಗಳಿಂದಾಗಿ ಸಿನಿಮಾ ಮೇಲಿನ ಹೈಪ್​ ಹೆಚ್ಚಾಗಿದೆ.

ಇದನ್ನೂ ಓದಿ: Shah Rukh Khan: ಭಾರತದಲ್ಲಿ ‘ಪಠಾಣ್​’ ಚಿತ್ರಕ್ಕೆ ವಿರೋಧ; ದುಬೈಗೆ ಹೋಗಿ ಸಿನಿಮಾ ಪ್ರಚಾರ ಮಾಡಿದ ಶಾರುಖ್​ ಖಾನ್​

ಈ ಸಿನಿಮಾದಲ್ಲಿ ದೇಶಭಕ್ತಿ ಕಥಾಹಂದರ ಇದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ‘ಪಠಾಣ್​’ ರಿಲೀಸ್​ ಆಗುತ್ತಿರುವುದರಿಂದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ಇದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್​ ಖಾನ್ ಅವರು ಜೋಡಿಯಾಗಿ ನಟಿಸಿರುವ ನಾಲ್ಕನೇ ಸಿನಿಮಾ ಇದು. ಆ ಕಾರಣದಿಂದಲೂ ‘ಪಠಾಣ್​’ ಹೈಪ್​ ಪಡೆದುಕೊಂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ