Urfi Javed: ಪೊಲೀಸ್ ಠಾಣೆ ಮೆಟ್ಟಿಲೇರಿತು ಉರ್ಫಿ ಜಾವೇದ್ ಕೇಸ್; ಬಟ್ಟೆ ಬಗ್ಗೆ ಬೋಲ್ಡ್ ನಟಿಗೆ 2 ಗಂಟೆ ವಿಚಾರಣೆ
Urfi Javed Case: ಉರ್ಫಿ ಜಾವೇದ್ ಧರಿಸುವ ಬಟ್ಟೆಗಳ ಬಗ್ಗೆ ಈಗಾಗಲೇ ಅನೇಕರು ತಕರಾರು ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ನಟಿ ಉರ್ಫಿ ಜಾವೇದ್ (Urfi Javed) ಅವರಿಗೆ ಸಂಕಷ್ಟ ಎದುರಾಗಿದೆ. ಯಾವಾಗಲೂ ಬೋಲ್ಡ್ ಬಟ್ಟೆಗಳನ್ನು ಧರಿಸಿ ಪೋಸ್ ನೀಡುವ ಅವರು ಈಗ ಅದೇ ವಿಚಾರಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ. ಇತ್ತೀಚೆಗೆ ಉರ್ಫಿ ಜಾವೇದ್ ಅವರನ್ನು ಪೊಲೀಸರು (Mumbai Police) ವಿಚಾರಣೆಗೆ ಒಳಪಡಿಸಿದ್ದಾರೆ. 2 ಗಂಟೆಗಳ ಕಾಲ ವಿಚಾರಣೆ ಮಾಡಲಾಗಿದೆ. ಪೊಲೀಸರು ಕೇಳಿದ ಅನೇಕ ಪ್ರಶ್ನೆಗಳಿಗೆ ಉರ್ಫಿ ಜಾವೇದ್ ಉತ್ತರ ನೀಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ಬಟ್ಟೆ ಧರಿಸಿ ಓಡಾಡಿದ ಆರೋಪ ಅವರ ಮೇಲಿದೆ. ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಮುಂಬೈನ ಅಂಬೋಲಿ ಠಾಣೆಯ ಪೊಲೀಸರು ಉರ್ಫಿ ಜಾವೇದ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಮಾಜಿ ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ಅವರು ಧರಿಸುವ ಬಟ್ಟೆಗಳ ಬಗ್ಗೆ ಈಗಾಗಲೇ ಅನೇಕರು ತಕರಾರು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಚಿತ್ರಾ ಕಿಶೋರ್ ವಾಘ್ ಅವರು ಉರ್ಫಿ ಜಾವೇದ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸಾರ್ವಜನಿಕ ಸ್ಥಳದಲ್ಲಿ ಅರೆ ಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಅದರ ಬೆನ್ನಲ್ಲೇ ಪೊಲೀಸರು ಉರ್ಫಿ ಜಾವೇದ್ಗೆ ನೋಟಿಸ್ ನೀಡಿ, ವಿಚಾರಣೆಗೆ ಬರುವಂತೆ ಸೂಚಿಸಿದರು.
ಇದನ್ನೂ ಓದಿ: ಅಂದು ಮೊಮ್ಮಗಳಲ್ಲ ಅಂದ್ರು, ಇಂದು ಆಸ್ತಿಯಲ್ಲಿ ಪಾಲು ಕೇಳಿದ್ರು; ಜಾವೇದ್ ಅಖ್ತರ್ ಜತೆ ಉರ್ಫಿ ಫನ್ನಿ ಪ್ರಸಂಗ
‘ಮಹಿಳೆಯರು ಅರೆಬೆತ್ತಲಾಗಿ ಬೀದಿಯಲ್ಲಿ ತಿರುಗುತ್ತಿದ್ದಾರೆ. ಈ ಬಗ್ಗೆ ಮಹಿಳಾ ಆಯೋಗ ಯಾಕೆ ಗಮನ ಹರಿಸುತ್ತಿಲ್ಲ? ಉರ್ಫಿ ಅವರ ಬಗ್ಗೆ ವಿರೋಧವಿಲ್ಲ. ಆದರೆ ಅವರು ಈ ರೀತಿ ಬಹಿರಂಗವಾಗಿ ಓಡಾಡುತ್ತಿರುವುದಕ್ಕೆ ವಿರೋಧವಿದೆ. ಇದಕ್ಕೆ ಸಂಬಂಧಪಟ್ಟಂತೆ ಮಹಿಳಾ ಆಯೋಗ ಏನಾದರೂ ಕ್ರಮ ಕೈಗೊಳ್ಳುತ್ತೋ ಇಲ್ಲವೋ?’ ಎಂದು ಚಿತ್ರಾ ಕಿಶೋರ್ ವಾಘ್ ಅವರು ಟ್ವಿಟರ್ ಮೂಲಕ ಆಕ್ಷೇಪ ಎತ್ತಿದ್ದರು.
ಇದನ್ನೂ ಓದಿ: Honey Singh: ‘ದೇಶದ ಹೆಣ್ಮಕ್ಕಳು ಉರ್ಫಿ ಜಾವೇದ್ ರೀತಿ ಇರಬೇಕು’: ಅಚ್ಚರಿಯ ಹೇಳಿಕೆ ನೀಡಿದ ಹನಿ ಸಿಂಗ್
ಯಾರೂ ಊಹಿಸದ ರೀತಿಯಲ್ಲಿ ಉರ್ಫಿ ಜಾವೇದ್ ಪ್ರಯೋಗ ಮಾಡುತ್ತಾರೆ. ಗಮ್ ಟೇಮ್, ಎಲೆಕ್ಟ್ರಿಕ್ ವೈರ್, ಕಸದ ಚೀಲ, ಮುಂತಾದ ವಸ್ತುಗಳಿಂದ ಅವರು ಮಾನ ಮುಚ್ಚಿಕೊಂಡಿದ್ದೂ ಉಂಟು! ಇಂಥ ಅವತಾರ ನೋಡಿದ ಬಳಿಕ ನೆಟ್ಟಿಗರು ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಹಾಗಿದ್ದರೂ ಕೂಡ ಉರ್ಫಿ ಜಾವೇದ್ ವರ್ತನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಇದನ್ನೂ ಓದಿ: Urfi Javed: ಬಟ್ಟೆ ಹಾಕಿಕೊಂಡಿದ್ದಕ್ಕೆ ಮೈತುಂಬ ಅಲರ್ಜಿ; ವಿಡಿಯೋ ಹಂಚಿಕೊಂಡ ಉರ್ಫಿ ಜಾವೇದ್
ಸೋಶಿಯಲ್ ಮೀಡಿಯಾದಲ್ಲಿ ಉರ್ಫಿ ಜಾವೇದ್ ಅವರ ಹಲವು ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ. ಪ್ರತಿ ದಿನವೂ ಹೊಸ ಹೊಸ ಫೋಟೋಗಳನ್ನು ಉರ್ಫಿ ಹಂಚಿಕೊಳ್ಳುತ್ತಾರೆ. ಅವರ ವಿರುದ್ಧ ಅನೇಕ ಕಡೆಗಳಲ್ಲಿ ದೂರು ದಾಖಲಾಗುತ್ತಲೇ ಇವೆ. ಈ ಬಗ್ಗೆ ಅವರಿಗೆ ಬೇಸರವಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.