Urfi Javed: ಮಹಾರಾಷ್ಟ್ರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವಿರುದ್ಧ ದೂರು ದಾಖಲಿಸಿದ ನಟಿ ಉರ್ಫಿ ಜಾವೇದ್
BJP Mahila Morcha | Chitra Kishor Wagh: ಚಿತ್ರಾ ಕಿಶೋರ್ ವಾಘ್ ಅವರು ಬೆದರಿಕೆ ಹಾಕಿದ್ದಾರೆ ಎಂದು ಉರ್ಫಿ ಜಾವೇದ್ ಆರೋಪಿಸಿದ್ದಾರೆ. ಅವರಿಂದ ತಮಗೆ ಮಾನಹಾನಿ ಆಗಿದೆ ಎಂದು ಕೂಡ ಉರ್ಫಿ ಹೇಳಿದ್ದಾರೆ.
ನಟಿ ಉರ್ಫಿ ಜಾವೇದ್ (Urfi Javed) ಅವರು ಬಟ್ಟೆಯ ಕಾರಣದಿಂದಲೇ ಸಿಕ್ಕಾಪಟ್ಟೆ ಸುದ್ದಿ ಆಗುತ್ತಿದ್ದಾರೆ. ಮನಬಂದಂತೆ ಕಾಸ್ಟ್ಯೂಮ್ ಧರಿಸುವ ಅವರನ್ನು ಹಲವರು ವಿರೋಧಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಉರ್ಫಿ ಜಾವೇದ್ ಅವರ ಬೋಲ್ಡ್ ಅವತಾರ ಹೆಚ್ಚಾಗುತ್ತಿದೆ. ಹಾಗಾಗಿ ಅವರನ್ನು ಟೀಕಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಕೆಲವೇ ದಿನಗಳ ಹಿಂದೆ ಮಹಾರಾಷ್ಟ್ರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ಕಿಶೋರ್ ವಾಘ್ (Chitra Kishor Wagh) ಅವರು ಉರ್ಫಿ ಜಾವೇದ್ ಬಗ್ಗೆ ಒಂದಷ್ಟು ಹೇಳಿಕೆಗಳನ್ನು ನೀಡಿದ್ದರು. ಅದನ್ನು ಖಂಡಿಸಿ ಈಗ ಉರ್ಫಿ ಜಾವೇದ್ ಅವರು ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಇಬ್ಬರ ನಡುವೆ ಜಟಾಪಟಿ ಏರ್ಪಟ್ಟಿದೆ.
ಬಿಗ್ ಬಾಸ್ ಒಟಿಟಿ ಶೋನಲ್ಲಿ ಸ್ಪರ್ಧಿಸಿದ ಬಳಿಕ ಉರ್ಫಿ ಜಾವೇದ್ ಅವರ ಜನಪ್ರಿಯತೆ ಹೆಚ್ಚಿತು. ಆ ನಂತರ ಯಾವುದೇ ಸಿನಿಮಾ ಅಥವಾ ಧಾರಾವಾಹಿಯಲ್ಲಿ ನಟಿಸುವುದು ಬಿಟ್ಟು, ಚಿತ್ರ-ವಿಚಿತ್ರ ವಿನ್ಯಾಸದ ಬಟ್ಟೆ ಧರಿಸುವುದನ್ನೇ ಉರ್ಫಿ ಜಾವೇದ್ ಅವರು ಪೂರ್ಣಾವಧಿ ಉದ್ಯೋಗ ಮಾಡಿಕೊಂಡರು. ಸಾರ್ವಜನಿಕವಾಗಿ ಅವರು ಈ ರೀತಿ ಕಾಣಿಸಿಕೊಂಡಿದ್ದಕ್ಕೆ ಚಿತ್ರಾ ಕಿಶೋರ್ ವಾಘ್ ಖಂಡನೆ ವ್ಯಕ್ತಪಡಿಸಿದ್ದರು. ಅದೇ ಈಗ ವಿವಾದಕ್ಕೆ ಕಾರಣ ಆಗಿದೆ.
भाषा नको तर कृती हवी..
सार्वजनिक ठिकाणी उघडंनागडं फिरणं हि आपल्या महाराष्ट्राची संस्कृती आहे का ?
मुंबईतल्या भर रस्त्यात उर्फीच्या या शरीरप्रदर्शनाचं जे अतिशय बिभत्स आहे @Maha_MahilaAyog समर्थन करतंय का ?
आणि हो …कायदा कायद्याचं काम करणारंच महिला आयोग काही करणार की नाही ? pic.twitter.com/O0KSb9A5r7
— Chitra Kishor Wagh (@ChitraKWagh) January 4, 2023
ಚಿತ್ರಾ ಕಿಶೋರ್ ವಾಘ್ ಅವರು ಬೆದರಿಕೆ ಹಾಕಿದ್ದಾರೆ ಎಂದು ಉರ್ಫಿ ಜಾವೇದ್ ಆರೋಪಿಸಿದ್ದಾರೆ. ಅವರಿಂದ ತಮಗೆ ಮಾನಹಾನಿ ಆಗಿದೆ ಎಂದು ಕೂಡ ಅವರು ಹೇಳಿದ್ದಾರೆ. ಈ ಸಂಬಂಧ ತಮ್ಮ ವಕೀಲರ ಮೂಲಕ ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಅಲ್ಲದೇ, ತಮಗೆ ರಕ್ಷಣೆ ನೀಡುವಂತೆಯೂ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Honey Singh: ‘ದೇಶದ ಹೆಣ್ಮಕ್ಕಳು ಉರ್ಫಿ ಜಾವೇದ್ ರೀತಿ ಇರಬೇಕು’: ಅಚ್ಚರಿಯ ಹೇಳಿಕೆ ನೀಡಿದ ಹನಿ ಸಿಂಗ್
ಈ ಹಿಂದೆಯೂ ಉರ್ಫಿ ಜಾವೇದ್ಗೆ ಬೆದರಿಕೆ:
2022ಲ್ಲಿ ಮುಂಬೈ ನಿವಾಸಿ ನವೀನ್ ಗಿರಿ ಎಂಬಾತನು ಉರ್ಫಿ ಜಾವೇದ್ ಅವರಿಗೆ ವಾಟ್ಸಪ್ ಮೂಲಕ ಹಲವು ಸಂದೇಶಗಳನ್ನು ಕಳುಹಿಸಿ, ಕಿರುಕುಳ ನೀಡಿದ್ದಾನೆ ಎಂಬ ಆರೋಪ ಎದುರಾಗಿತ್ತು. ವಾಟ್ಸಪ್ ಮೂಲಕ ಕೊಲೆ ಮತ್ತು ಅತ್ಯಾಚಾರದ ಬೆದರಿಕೆ ಹಾಕಿದ್ದಾನೆ ಎಂದು ಉರ್ಫಿ ಜಾವೇದ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಅದರ ಅನ್ವಯ ಆರೋಪಿ ನವೀನ್ ಗಿರಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಆತನ ವಿರುದ್ಧ ಐಪಿಸಿ ಸೆಕ್ಷನ್ 354 (ಎ), 354 (ಡಿ), 506, 509 ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿತ್ತು.
ಇದನ್ನೂ ಓದಿ: Urfi Javed: ಬಟ್ಟೆ ಹಾಕಿಕೊಂಡಿದ್ದಕ್ಕೆ ಮೈತುಂಬ ಅಲರ್ಜಿ; ವಿಡಿಯೋ ಹಂಚಿಕೊಂಡ ಉರ್ಫಿ ಜಾವೇದ್
ಉರ್ಫಿ ಜಾವೇದ್ ಪರ ಹನಿ ಸಿಂಗ್ ಹೇಳಿಕೆ:
ಗಾಯಕ ಹನಿಸಿಂಗ್ ಅವರು ಇತ್ತೀಚೆಗೆ ಉರ್ಫಿ ಜಾವೇದ್ ಪರ ಹೇಳಿಕೆ ನೀಡಿದ್ದರು. ‘ಉರ್ಫಿ ಜಾವೇದ್ ನನಗೆ ತುಂಬ ಇಷ್ಟ. ಆಕೆ ಬಹಳ ಧೈರ್ಯವಂತೆ. ತನ್ನದೇ ರೀತಿಯಲ್ಲಿ ಆಕೆ ಬದುಕಲು ಬಯಸುತ್ತಾಳೆ. ನಮ್ಮ ದೇಶದ ಎಲ್ಲ ಹುಡುಗಿಯರು ಉರ್ಫಿಯನ್ನು ನೋಡಿ ಕಲಿಯಬೇಕು. ಯಾರ ಭಯವೂ ಇಲ್ಲದೇ, ಯಾವ ಹಿಂಜರಿಕೆಯೂ ಇಲ್ಲದೇ ನಿಮಗೆ ಅನಿಸಿದ್ದನ್ನು ಮಾಡಬೇಕು’ ಎಂದು ಹನಿ ಸಿಂಗ್ ಹೇಳಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:09 pm, Fri, 13 January 23