AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sapthami Gowda: ಬಾಲಿವುಡ್​ಗೆ ಕಾಲಿಟ್ಟ ಸಪ್ತಮಿ ಗೌಡ; ವಿವೇಕ್​ ಅಗ್ನಿಹೋತ್ರಿಯ ‘ದಿ ವ್ಯಾಕ್ಸಿನ್​ ವಾರ್​’ ಚಿತ್ರದಲ್ಲಿ ‘ಕಾಂತಾರ’ ನಟಿ

The Vaccine War: ‘ಕಾಂತಾರ’ ಸಿನಿಮಾದ ನಟಿ ಸಪ್ತಮಿ ಗೌಡ ಅವರಿಗೆ ಸಖತ್​ ಡಿಮ್ಯಾಂಡ್​ ಸೃಷ್ಟಿ ಆಗಿದೆ. ಈಗ ಅವರು ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್​ ವಾರ್​’ ಚಿತ್ರದಲ್ಲಿ ನಟಿಸುವ ಚಾನ್ಸ್​ ಪಡೆದುಕೊಂಡಿದ್ದಾರೆ.

Sapthami Gowda: ಬಾಲಿವುಡ್​ಗೆ ಕಾಲಿಟ್ಟ ಸಪ್ತಮಿ ಗೌಡ; ವಿವೇಕ್​ ಅಗ್ನಿಹೋತ್ರಿಯ ‘ದಿ ವ್ಯಾಕ್ಸಿನ್​ ವಾರ್​’ ಚಿತ್ರದಲ್ಲಿ ‘ಕಾಂತಾರ’ ನಟಿ
ಸಪ್ತಮಿ ಗೌಡ, ವಿವೇಕ್ ಅಗ್ನಿಹೋತ್ರಿ
TV9 Web
| Edited By: |

Updated on:Jan 13, 2023 | 2:58 PM

Share

ಕನ್ನಡದ ‘ಕಾಂತಾರ’ ಸಿನಿಮಾದಿಂದ ನಟಿ ಸಪ್ತಮಿ ಗೌಡ (Sapthami Gowda) ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅವರು ಖ್ಯಾತಿ ಗಳಿಸಿದ್ದಾರೆ. ಅವರು ಒಪ್ಪಿಕೊಳ್ಳಲಿರುವ ಮುಂದಿನ ಸಿನಿಮಾ ಬಗ್ಗೆ ಎಲ್ಲರಿಗೂ ಕುತೂಹಲವಿತ್ತು. ಅದಕ್ಕೀಗ ತೆರೆ ಬಿದ್ದಿದೆ. ಬಾಲಿವುಡ್​ ಅಂಗಳಕ್ಕೆ ಸಪ್ತಮಿ ಗೌಡ ಕಾಲಿಡುತ್ತಿದ್ದಾರೆ. ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ನಿರ್ದೇಶನ ಮಾಡಿದ್ದ ವಿವೇಕ್​ ಅಗ್ನಿಹೋತ್ರಿ (Vivek Agnihotri) ಅವರ ಹೊಸ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸಲಿದ್ದಾರೆ. ಈ ಚಿತ್ರಕ್ಕೆ ‘ದಿ ವ್ಯಾಕ್ಸಿನ್​ ವಾರ್​’ (The Vaccine War) ಎಂದು ಹೆಸರು ಇಡಲಾಗಿದೆ. ವಿವೇಕ್​ ಅಗ್ನಿಹೋತ್ರಿ ಅವರು ಈಗಾಗಲೇ ಈ ಚಿತ್ರಕ್ಕೆ ಶೂಟಿಂಗ್​ ಶುರು ಮಾಡಿದ್ದಾರೆ. ಹೈದರಾಬಾದ್​ನಲ್ಲಿ ನಡೆಯಲಿರುವ ಚಿತ್ರೀಕರಣದಲ್ಲಿ ಸಪ್ತಮಿ ಗೌಡ ಭಾಗಿ ಆಗಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಸಪ್ತಮಿ ಗೌಡ ನಟಿಸಿದ ಮೊದಲ ಸಿನಿಮಾ ‘ಪಾಪ್​ ಕಾರ್ನ್​ ಮಂಕಿ ಟೈಗರ್​’. ಆ ಸಿನಿಮಾದಲ್ಲಿ ಅವರು ಡಾಲಿ ಧನಂಜಯ್​ ಜೊತೆ ತೆರೆ ಹಂಚಿಕೊಂಡಿದ್ದರು. ಎರಡನೇ ಸಿನಿಮಾ ‘ಕಾಂತಾರ’ದಲ್ಲಿ ರಿಷಬ್​ ಶೆಟ್ಟಿ ಜೊತೆ ನಟಿಸುವ ಅವಕಾಶ ಅವರಿಗೆ ಸಿಕ್ಕಿತು. ಅಭಿಷೇಕ್​ ಅಂಬರೀಷ್​ ನಾಯಕತ್ವದ ‘ಕಾಳಿ’ ಸಿನಿಮಾ ಅವರ ಮೂರನೇ ಚಿತ್ರ ಆಗಲಿದೆ. 4ನೇ ಚಿತ್ರದ ಮೂಲಕ ಸಪ್ತಮಿ ಗೌಡ ನೇರವಾಗಿ ಬಾಲಿವುಡ್​ ಟಿಕೆಟ್​ ಪಡೆದುಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಇದನ್ನೂ ಓದಿ: The Vaccine War: ‘ದಿ ವ್ಯಾಕ್ಸಿನ್​ ವಾರ್​’ ಶೂಟಿಂಗ್​ ಶುರು; ವಿವೇಕ್​ ಅಗ್ನಿಹೋತ್ರಿ ಹೊಸ ಚಿತ್ರಕ್ಕೆ ಹೀರೋ ಯಾರು?

ಇದನ್ನೂ ಓದಿ
Image
‘ಇನ್ನೂ ರೊಮ್ಯಾನ್ಸ್ ಮಾಡ್ಬೇಕು ರಿಷಬ್​’; ಸೆಟ್​ನಲ್ಲಿ ಪ್ರಗತಿ ಹೇಳುತ್ತಿದ್ದ ಮಾತಿದು
Image
ಕರಾವಳಿ ಕನ್ನಡತಿ ಆದ ಪ್ರಕ್ರಿಯೆಯನ್ನು ವಿವರಿಸಿದ ನಟಿ ಸಪ್ತಮಿ ಗೌಡ
Image
Sapthami Gowda: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ಹೆಚ್ಚಿತು ನಟಿ ಸಪ್ತಮಿ ಗೌಡ ಡಿಮ್ಯಾಂಡ್​
Image
Sapthami Gowda: ಜನರ ಮಧ್ಯೆ ‘ಕಾಂತಾರ’ ನಾಯಕಿ ಸಪ್ತಮಿ ಗೌಡ ಬಿಂದಾಸ್​ ಡ್ಯಾನ್ಸ್​; ಇಲ್ಲಿದೆ ವಿಡಿಯೋ

ವಿವೇಕ್​ ಅಗ್ನಿಹೋತ್ರಿ ಅವರು ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದ ಯಶಸ್ಸಿನ ಬಳಿಕ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ಅವರೀಗ ಕೊರೊನಾ ವಾಕ್ಸಿನ್​ ಕುರಿತು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಾನಾ ಪಾಟೇಕರ್​, ಅನುಪಮ್​ ಖೇರ್​, ಪಲ್ಲವಿ ಜೋಶಿ ಮುಂತಾದವರು ಅಭಿನಯಿಸುತ್ತಿದ್ದಾರೆ. ಆ ಎಲ್ಲ ಕಲಾವಿದರ ಜೊತೆ ನಟಿಸುವ ಚಾನ್ಸ್​ ಸಪ್ತಮಿ ಗೌಡ ಅವರಿಗೆ ಸಿಕ್ಕಿದೆ.

ಇದನ್ನೂ ಓದಿ: ವಿವೇಕ್ ಅಗ್ನಿಹೋತ್ರಿ ಮುಂದಿನ ಚಿತ್ರ ‘ದಿ ವ್ಯಾಕ್ಸಿನ್ ವಾರ್’; ಕನ್ನಡ ಸೇರಿ 11 ಭಾಷೆಗಳಲ್ಲಿ ರಿಲೀಸ್

‘ಕಾಂತಾರ’ ಸಿನಿಮಾದಲ್ಲಿ ಸಪ್ತಮಿ ಗೌಡ ಅವರು ಲೀಲಾ ಎಂಬ ಪಾತ್ರ ಮಾಡಿದರು. ಪ್ರೇಕ್ಷಕರು ಆ ಪಾತ್ರವನ್ನು ತುಂಬ ಇಷ್ಟಪಟ್ಟರು. ಈ ಸಿನಿಮಾದ ಅಭೂತಪೂರ್ವ ಯಶಸ್ಸಿನ ಬಳಿಕ ಸಪ್ತಮಿ ಗೌಡ ಅವರಿಗೆ ಹಲವಾರು ಆಫರ್​ಗಳು ಹರಿದುಬರಲು ಆರಂಭಿಸಿವೆ. ಆದರೆ ಅವರು ಎಲ್ಲವನ್ನೂ ಒಪ್ಪಿಕೊಳ್ಳುತ್ತಿಲ್ಲ. ತಮಗೆ ಸರಿ ಎನಿಸುವ ಪ್ರಾಜೆಕ್ಟ್​ಗಳಿಗೆ ಮಾತ್ರ ಸಹಿ ಮಾಡುತ್ತಿದ್ದಾರೆ.

ಇದನ್ನೂ ಓದಿ: Vivek Agnihotri: ವಿವೇಕ್​ ಅಗ್ನಿಹೋತ್ರಿಗೆ ಅಶ್ಲೀಲ ಸಂದೇಶ: ಸ್ಕ್ರೀನ್​ ಶಾಟ್​ ಸಮೇತ ಬಯಲಿಗೆ ಎಳೆದ ನಿರ್ದೇಶಕ

‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾದ ಮೇಲೆ ಸಿನಿಪ್ರಿಯರಿಗೆ ಸಾಕಷ್ಟು ನಿರೀಕ್ಷೆ ಇದೆ. ಕೊವಿಡ್​ ಸಂದರ್ಭದಲ್ಲಿನ ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರ ತಯಾರಾಗುತ್ತಿದೆ. ಇದರಲ್ಲಿ ಸಪ್ತಮಿ ಗೌಡ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:49 pm, Fri, 13 January 23

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ