ಅಂದು ಮೊಮ್ಮಗಳಲ್ಲ ಅಂದ್ರು, ಇಂದು ಆಸ್ತಿಯಲ್ಲಿ ಪಾಲು ಕೇಳಿದ್ರು; ಜಾವೇದ್​ ಅಖ್ತರ್​ ಜತೆ ಉರ್ಫಿ ಫನ್ನಿ ಪ್ರಸಂಗ

Urfi Javed | Javed Akhtar: ಒಂದೇ ವಿಮಾನದಲ್ಲಿ ಉರ್ಫಿ ಜಾವೇದ್​ ಮತ್ತು ಜಾವೇದ್​ ಅಖ್ತರ್​ ಪ್ರಯಾಣ ಮಾಡಿದ್ದಾರೆ. ಈ ವೇಳೆ ಪರಸ್ಪರ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಅಂದು ಮೊಮ್ಮಗಳಲ್ಲ ಅಂದ್ರು, ಇಂದು ಆಸ್ತಿಯಲ್ಲಿ ಪಾಲು ಕೇಳಿದ್ರು; ಜಾವೇದ್​ ಅಖ್ತರ್​ ಜತೆ ಉರ್ಫಿ ಫನ್ನಿ ಪ್ರಸಂಗ
ಉರ್ಫಿ ಜಾವೇದ್, ಜಾವೇದ್ ಅಖ್ತರ್
Follow us
TV9 Web
| Updated By: ಮದನ್​ ಕುಮಾರ್​

Updated on:Jan 09, 2023 | 4:22 PM

ನಟಿ ಉರ್ಫಿ ಜಾವೇದ್​ (Urfi Javed) ಅವರ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಬೋಲ್ಡ್​ ಬಟ್ಟೆಗಳನ್ನು ಧರಿಸುವ ಮೂಲಕ ಅವರು ಸೋಶಿಯಲ್​ ಮೀಡಿಯಾದಲ್ಲಿ ಸೆನ್ಸೇಷನ್​ ಸೃಷ್ಟಿ ಮಾಡಿದ್ದಾರೆ. ಅವರ ಕುಟುಂಬದ ಹಿನ್ನೆಲೆ ಬಗ್ಗೆ ಕೆಲವರಿಗೆ ಅನುಮಾನ ಇದೆ. ಖ್ಯಾತ ಗೀತಸಾಹಿತಿ ಜಾವೇದ್​ ಅಖ್ತರ್​ (Javed Akhtar) ಅವರ ಮೊಮ್ಮಗಳು ಈ ಉರ್ಫಿ ಜಾವೇದ್​ ಎಂದು ಒಂದಷ್ಟು ಮಂದಿ ಭಾವಿಸಿದ್ದಾರೆ. ಆದರೆ ಅದು ಸತ್ಯವಲ್ಲ. ಉರ್ಫಿ ಜಾವೇದ್​ ಅವರಿಗೂ ಜಾವೇದ್​ ಅಖ್ತರ್​ ಅವರಿಗೂ ಯಾವುದೇ ಸಂಬಂಧ ಇಲ್ಲ. ಆದರೂ ಕೂಡ ಜಾವೇದ್​ ಅಖ್ತರ್​ ಬಳಿ ಹೋಗಿ ಉರ್ಫಿ ಜಾವೇದ್​ ಅವರು ಆಸ್ತಿಯಲ್ಲಿ ಪಾಲು ಕೇಳಿದ್ದಾರೆ! ಆದರೆ ಇದು ತಮಾಷೆಗೆ ಅಷ್ಟೇ. ಈ ಫನ್ನಿ ಪ್ರಸಂಗವನ್ನು ಸ್ವತಃ ಉರ್ಫಿ ಜಾವೇದ್​ ವಿವರಿಸಿದ್ದಾರೆ.

ಇತ್ತೀಚೆಗೆ ಒಂದೇ ವಿಮಾನದಲ್ಲಿ ಉರ್ಫಿ ಜಾವೇದ್​ ಮತ್ತು ಜಾವೇದ್​ ಅಖ್ತರ್​ ಪ್ರಯಾಣ ಮಾಡಿದ್ದಾರೆ. ಈ ವೇಳೆ ಪರಸ್ಪರ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಆ ಘಟನೆಯ ಬಗ್ಗೆ ಪಾಪರಾಜಿಗಳು ಪ್ರಶ್ನೆ ಮಾಡಿದಾಗ ಉರ್ಫಿ ಜಾವೇದ್​ ಅವರು ಈ ರೀತಿ ಉತ್ತರಿಸಿದ್ದಾರೆ. ‘ಅವರು ತುಂಬ ಒಳ್ಳೆಯ ವ್ಯಕ್ತಿ. ನಾನು ಅವರ ಮೊಮ್ಮಗಳಾದ್ದರಿಂದ ಆಸ್ತಿಯಲ್ಲಿ ಮೂರು ಪಾಲು ಆಗಬೇಕು ಅಂತ ಹೇಳಿದ್ದೇನೆ’ ಎಂದು ಉರ್ಫಿ ತಮಾಷೆ ಮಾಡಿದ್ದಾರೆ. ಜಾವೇದ್​ ಅಖ್ತರ್​ ಅವರಿಗೆ ಇಬ್ಬರು ಮೊಮ್ಮಕ್ಕಳು ಇದ್ದಾರೆ.

ಇದನ್ನೂ ಓದಿ: Urfi Javed: ‘ಬಟ್ಟೆಯಲ್ಲಿ ನೀವು ನನಗೆ ಪೈಪೋಟಿ ನೀಡೋಕೆ ಆಗಲ್ಲ’: ಸನ್ನಿ ಲಿಯೋನ್​ಗೆ ಉರ್ಫಿ​ ಜಾವೇದ್​ ಸವಾಲು

ಇದನ್ನೂ ಓದಿ
Image
ಅಶ್ಲೀಲ​ ವೆಬ್​ಸೈಟ್​ನಲ್ಲಿ ಉರ್ಫಿ ಜಾವೇದ್​ ಫೋಟೋ; ಪ್ರತಿ ದಿನ ರೇಪ್​ ಬೆದರಿಕೆ: ಶಾಕಿಂಗ್​ ವಿಚಾರ ತೆರೆದಿಟ್ಟ ನಟಿ
Image
ಪ್ಯಾಂಟ್​ ಮೇಲೆ ಪ್ಯಾಂಟ್​ ಅಂಟಿಸಿಕೊಂಡು ಬಂದ ಉರ್ಫಿ ಜಾವೇದ್​; ಇಲ್ಲಿದೆ ವಿಚಿತ್ರ ಅವತಾರದ ವಿಡಿಯೋ
Image
‘ನಂಗೆ ಮರ್ಯಾದೆ ಕೊಡಲ್ಲ, ಸೆಲೆಬ್ರಿಟಿಗಳೇ ಕೆಟ್ಟ ಕಮೆಂಟ್​​ ಮಾಡ್ತಾರೆ’: ಎಲ್ಲವನ್ನೂ ಹೇಳಿಕೊಂಡ ಉರ್ಫಿ ಜಾವೇದ್​
Image
‘ಮುಸ್ಲಿಂ ಹುಡುಗನನ್ನು ಮದುವೆ ಆಗಲ್ಲ’: ಬಲವಾದ ಕಾರಣ ನೀಡಿದ ಮುಸ್ಲಿಂ ನಟಿ ಉರ್ಫಿ ಜಾವೇದ್​

ಉರ್ಫಿ ಅವರು ಜಾವೇದ್​ ಅಖ್ತರ್​ ಮೊಮ್ಮಗಳು ಎಂದು ತಪ್ಪಾಗಿ ತಿಳಿದುಕೊಂಡಿದ್ದ ಅನೇಕರು ಸೋಶಿಯಲ್​ ಮೀಡಿಯಾದಲ್ಲಿ ವಿಚಿತ್ರ ಕಮೆಂಟ್​ಗಳನ್ನು ಮಾಡಿದ್ದರು. ‘ನಿಮ್ಮ ಮೊಮ್ಮಗಳಿಗೆ ಸ್ವಲ್ಪ ಬುದ್ಧಿ ಹೇಳಿ’ ಎಂದು ಜಾವೇದ್​ ಅಖ್ತರ್​ ಅವರನ್ನು ಟ್ಯಾಗ್​ ಮಾಡಿದ ಘಟನೆಯೂ ನಡೆದಿತ್ತು. ಅದರಿಂದ ಬೇಸತ್ತುಹೋಗಿದ್ದ ಉರ್ಫಿ ಜಾವೇದ್​ ಅವರು ಒಂದಿನ, ‘ನಾನು ಜಾವೇದ್ ಅಖ್ತರ್​ ಮೊಮ್ಮಗಳಲ್ಲ’ ಎಂದು ಬರೆದುಕೊಂಡಿರುವ ಟಿ-ಶರ್ಟ್​ ಧರಿಸಿ ಬಂದಿದ್ದರು!

ಇದನ್ನೂ ಓದಿ: Urfi Javed: ಟಾಪ್​ಲೆಸ್​ ಆಗಿ ಉಪಹಾರ ಸವಿದ ಉರ್ಫಿ ಜಾವೇದ್​; ತಿಂಡಿ ಪ್ಲೇಟ್​, ಜ್ಯೂಸ್​ ಲೋಟ ಇಲ್ಲದಿದ್ರೆ ದೇವರೇ ಗತಿ

ಒಟ್ಟಿನಲ್ಲಿ ಉರ್ಫಿ ಜಾವೇದ್​ ಅವರು ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಅವರ ಫೋಟೋಗಳು ಆಗಾಗ ವೈರಲ್​ ಆಗುತ್ತವೆ. ಪ್ರತಿ ದಿನ ಅವರನ್ನು ಟ್ರೋಲ್​ ಮಾಡಲಾಗುತ್ತದೆ. ಆದರೆ ಅದಕ್ಕೆಲ್ಲ ಅವರು ತಲೆ ಕೆಡಿಸಿಕೊಂಡಿಲ್ಲ. ತಮಗೆ ಇಷ್ಟಬಂದ ರೀತಿಯಲ್ಲಿ ಅವರು ನಡೆದುಕೊಳ್ಳುತ್ತಿದ್ದಾರೆ.

ಉರ್ಫಿ ಜಾವೇದ್​ಗೆ ಯೋ ಯೋ ಹನಿ ಸಿಂಗ್ ಮೆಚ್ಚುಗೆ:

‘ಉರ್ಫಿ ಜಾವೇದ್​ ನನಗೆ ತುಂಬ ಇಷ್ಟ. ಆಕೆ ಬಹಳ ಧೈರ್ಯವಂತೆ. ತನ್ನದೇ ರೀತಿಯಲ್ಲಿ ಆಕೆ ಬದುಕಲು ಬಯಸುತ್ತಾಳೆ. ನಮ್ಮ ದೇಶದ ಎಲ್ಲ ಹುಡುಗಿಯರು ಉರ್ಫಿಯನ್ನು ನೋಡಿ ಕಲಿಯಬೇಕು. ಯಾರ ಭಯವೂ ಇಲ್ಲದೇ, ಯಾವ ಹಿಂಜರಿಕೆಯೂ ಇಲ್ಲದೇ ನಿಮಗೆ ಅನಿಸಿದ್ದನ್ನು ಮಾಡಬೇಕು’ ಎಂದು ಗಾಯಕ ಹನಿ ಸಿಂಗ್​ ಇತ್ತೀಚೆಗೆ ಹೇಳಿದ್ದರು. ಅವರ ಈ ಮಾತಿಗೆ ಕೆಲವರಿಂದ ವಿರೋಧ ವ್ಯಕ್ತವಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:22 pm, Mon, 9 January 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ