- Kannada News Photo gallery Kiara Advani bridal look photos and video go viral; Fans mention Sidharth Malhotra name in comment box
Kiara Advani: ಕಿಯಾರಾ ಅಡ್ವಾಣಿ ಮದುವೆ ಲುಕ್ ವೈರಲ್; ಹಲವು ಪ್ರಶ್ನೆ ಕೇಳಿದ ಅಭಿಮಾನಿಗಳು
Kiara Advani bridal look: ಮದುವೆಯ ಲುಕ್ನಲ್ಲಿ ಕಿಯಾರಾ ಅಡ್ವಾಣಿ ಅವರನ್ನು ನೋಡಿ ಫ್ಯಾನ್ಸ್ಗೆ ಅಚ್ಚರಿ ಆಗಿದೆ. ಕಮೆಂಟ್ ಬಾಕ್ಸ್ನಲ್ಲಿ ಅನೇಕರು ಸಿದ್ದಾರ್ಥ್ ಮಲ್ಹೋತ್ರ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ.
Updated on:Jan 10, 2023 | 6:34 AM

ನಟಿ ಕಿಯಾರಾ ಅಡ್ವಾಣಿ ಅವರು ಬಾಲಿವುಡ್ನಲ್ಲಿ ಬಹುಬೇಡಿಕೆಯ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದಾರೆ. ಅವರ ಹೊಸ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಮದುವೆಯ ಲುಕ್ನಲ್ಲಿ ಕಿಯಾರಾ ಅಡ್ವಾಣಿ ಅವರನ್ನು ನೋಡಿ ಫ್ಯಾನ್ಸ್ಗೆ ಅಚ್ಚರಿ ಆಗಿದೆ. ಹಾಗಂತ ಇವು ನಿಜವಾದ ಮದುವೆಯ ಫೋಟೋಗಳಲ್ಲ. ಖಾಸಗಿ ಸಂಸ್ಥೆಯ ಜಾಹೀರಾತಿನಲ್ಲಿ ಅವರು ಈ ರೀತಿ ಕಾಣಿಸಿಕೊಂಡಿದ್ದಾರೆ.

ಫೋಟೋ ಮತ್ತು ವಿಡಿಯೋ ವೈರಲ್ ಆದ ಬಳಿಕ ಕಿಯಾರಾ ಅಡ್ವಾಣಿ ಅವರಿಗೆ ಅಭಿಮಾನಿಗಳು ಹಲವು ಪ್ರಶ್ನೆ ಕೇಳಿದ್ದಾರೆ. ‘ಇದು ನಿಮ್ಮ ಮದುವೆಗೆ ತಯಾರಿಯೇ’ ಎಂದು ಫ್ಯಾನ್ಸ್ ಪ್ರಶ್ನಿಸಿದ್ದಾರೆ.

ನಟ ಸಿದ್ದಾರ್ಥ್ ಮಲ್ಹೋತ್ರ ಅವರನ್ನು ಕಿಯಾರಾ ಅಡ್ವಾಣಿ ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್ ಇದೆ. ಆ ಬಗ್ಗೆ ಈ ಜೋಡಿಯಿಂದ ಸೂಕ್ತ ಸ್ಪಷ್ಟನೆ ಸಿಕ್ಕಿಲ್ಲ. ಈಗ ವೈರಲ್ ಆಗಿರುವ ಜಾಹೀರಾತಿನ ಪೋಸ್ಟ್ನ ಕಮೆಂಟ್ ಬಾಕ್ಸ್ನಲ್ಲಿ ಅನೇಕರು ಸಿದ್ದಾರ್ಥ್ ಹೆಸರನ್ನು ಪ್ರಸ್ತಾಪಿಸಿದ್ದಾರೆ.

ಸಿನಿಮಾಗಳ ಜೊತೆಯಲ್ಲಿ ಜಾಹೀರಾತು ಕ್ಷೇತ್ರದಲ್ಲೂ ಕಿಯಾರಾ ಅಡ್ವಾಣಿ ಅವರಿಗೆ ತುಂಬ ಬೇಡಿಕೆ ಇದೆ. ಹಲವು ಬ್ರ್ಯಾಂಡ್ಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ.
Published On - 11:25 pm, Mon, 9 January 23




