AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Urfi Javed: ‘ಬಟ್ಟೆಯಲ್ಲಿ ನೀವು ನನಗೆ ಪೈಪೋಟಿ ನೀಡೋಕೆ ಆಗಲ್ಲ’: ಸನ್ನಿ ಲಿಯೋನ್​ಗೆ ಉರ್ಫಿ​ ಜಾವೇದ್​ ಸವಾಲು

Urfi Javed | Splitsvilla 14: ಅನೇಕರಿಗೆ ಉರ್ಫಿ ಜಾವೇದ್​ ಅವರ ಫ್ಯಾಷನ್​ ಸೆನ್ಸ್​ ಕಿರಿಕಿರಿ ಉಂಟು ಮಾಡುತ್ತದೆ. ಆದರೆ ಎಷ್ಟೇ ಟ್ರೋಲ್ ಮಾಡಿದರೂ ಉರ್ಫಿ ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

Urfi Javed: ‘ಬಟ್ಟೆಯಲ್ಲಿ ನೀವು ನನಗೆ ಪೈಪೋಟಿ ನೀಡೋಕೆ ಆಗಲ್ಲ’: ಸನ್ನಿ ಲಿಯೋನ್​ಗೆ ಉರ್ಫಿ​ ಜಾವೇದ್​ ಸವಾಲು
ಉರ್ಫಿ ಜಾವೇದ್, ಸನ್ನಿ ಲಿಯೋನ್
TV9 Web
| Edited By: |

Updated on:Dec 06, 2022 | 8:13 AM

Share

ನಟಿ ಉರ್ಫಿ ಜಾವೇದ್​ (Urfi Javed) ಅವರು ಪ್ರತಿ ದಿನವೂ ಸುದ್ದಿ ಆಗುತ್ತಾರೆ. ಅದಕ್ಕೆ ಕಾರಣ ಅವರ ಬಟ್ಟೆ ಎಂಬುದನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ಯಾರೂ ಊಹಿಸಿದ ರೀತಿಯಲ್ಲಿ ಬಟ್ಟೆ ಧರಿಸುವುದು ಅವರು ಹವ್ಯಾಸ ಆಗಿಬಿಟ್ಟಿದೆ. ಅದರಿಂದಲೇ ಅವರಿಗೆ ಜನಪ್ರಿಯತೆ ಸಿಕ್ಕಿದೆ. ಈಗ ಅವರು ‘Splitsvilla 14’ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಈ ಶೋ ನಡೆಸಿಕೊಡುತ್ತಿರುವುದು ಮಾಜಿ ನೀಲಿ ತಾರೆ ಸನ್ನಿ ಲಿಯೋನ್​. ಕಾರ್ಯಕ್ರಮದ ಇತ್ತೀಚೆಗಿನ ಸಂಚಿಕೆಯಲ್ಲಿ ಉರ್ಫಿ ಜಾವೇದ್​ ಧರಿಸಿದ್ದ ಬಟ್ಟೆ ಬಗ್ಗೆ ಸನ್ನಿ (Sunny Leone) ಮಾತನಾಡಿದ್ದಾರೆ. ಈ ವೇಳೆ ಪ್ರತಿಕ್ರಿಯೆ ನೀಡಿದ ಉರ್ಫಿ ಅವರು ಸವಾಲು ಹಾಕಿದ್ದಾರೆ. ‘ಬಟ್ಟೆ ವಿಚಾರದಲ್ಲಿ ನನ್ನ ಜೊತೆ ನೀವು ಪೈಪೋಟಿ ನೀಡಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

ಚಿತ್ರ-ವಿಚಿತ್ರ ಬಟ್ಟೆಗಳ ಕಾರಣದಿಂದ ಉರ್ಫಿ ಜಾವೇದ್​ ಅವರು ಆಗಾಗ ಟ್ರೋಲ್​ ಆಗುತ್ತಾರೆ. ಎಷ್ಟೇ ಟ್ರೋಲ್ ಆದರೂ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಅನೇಕರಿಗೆ ಅವರ ಫ್ಯಾಷನ್​ ಸೆನ್ಸ್​ ಕಿರಿಕಿರಿ ಉಂಟು ಮಾಡುತ್ತದೆ. ಆದರೆ ಕೆಲವರು ಅದನ್ನು ಇಷ್ಟಪಡುತ್ತಾರೆ. ಉರ್ಫಿ ಧರಿಸಿದ್ದ ಬಟ್ಟೆಗಳ ಬಗ್ಗೆ ಈಗ ಸನ್ನಿ ಲಿಯೋನ್​ ಅವರು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: Urfi Javed: ಚಿಕ್ಕ ಹುಡುಗರ ವಿರುದ್ಧ ಪೊಲೀಸರಿಗೆ​ ದೂರು ನೀಡಲು ಮುಂದಾದ ಉರ್ಫಿ ಜಾವೇದ್​; ಬಾಲಕರ ತಪ್ಪೇನು?

ಇದನ್ನೂ ಓದಿ
Image
ಅಶ್ಲೀಲ​ ವೆಬ್​ಸೈಟ್​ನಲ್ಲಿ ಉರ್ಫಿ ಜಾವೇದ್​ ಫೋಟೋ; ಪ್ರತಿ ದಿನ ರೇಪ್​ ಬೆದರಿಕೆ: ಶಾಕಿಂಗ್​ ವಿಚಾರ ತೆರೆದಿಟ್ಟ ನಟಿ
Image
ಪ್ಯಾಂಟ್​ ಮೇಲೆ ಪ್ಯಾಂಟ್​ ಅಂಟಿಸಿಕೊಂಡು ಬಂದ ಉರ್ಫಿ ಜಾವೇದ್​; ಇಲ್ಲಿದೆ ವಿಚಿತ್ರ ಅವತಾರದ ವಿಡಿಯೋ
Image
‘ನಂಗೆ ಮರ್ಯಾದೆ ಕೊಡಲ್ಲ, ಸೆಲೆಬ್ರಿಟಿಗಳೇ ಕೆಟ್ಟ ಕಮೆಂಟ್​​ ಮಾಡ್ತಾರೆ’: ಎಲ್ಲವನ್ನೂ ಹೇಳಿಕೊಂಡ ಉರ್ಫಿ ಜಾವೇದ್​
Image
‘ಮುಸ್ಲಿಂ ಹುಡುಗನನ್ನು ಮದುವೆ ಆಗಲ್ಲ’: ಬಲವಾದ ಕಾರಣ ನೀಡಿದ ಮುಸ್ಲಿಂ ನಟಿ ಉರ್ಫಿ ಜಾವೇದ್​

‘ನಿಮ್ಮ ಬಟ್ಟೆ ತುಂಬಾ ಚೆನ್ನಾಗಿದೆ. ಸಮುದ್ರ ತೀರದಲ್ಲಿ ಧರಿಸಲು ಇದು ಪರ್ಫೆಕ್ಟ್​ ಆಗಿದೆ. ಬಟ್ಟೆಗಳ ವಿಚಾರದಲ್ಲಿ ನಿಮ್ಮ ಆಯ್ಕೆ ನನಗೆ ಇಷ್ಟ’ ಎಂದು ಸನ್ನಿ ಲಿಯೋನ್​ ಹೇಳಿದ್ದಾರೆ. ಈ ಹೊಗಳಿಕೆ ಮಾತುಗಳನ್ನು ಕೇಳಿ ಉರ್ಫಿ ಜಾವೇದ್​ ಹಿರಿಹಿರಿ ಹಿಗ್ಗಿದ್ದಾರೆ. ‘ನಾನು ಬಟ್ಟೆಗಳ ಕಾರಣದಿಂದಲೇ ಫೇಮಸ್​. ನೀವು ನನ್ನ ಜೊತೆ ಪೈಪೋಟಿ ನೀಡಬಹುದು. ಆದರೆ ನನ್ನ ಬಟ್ಟೆಗಳ ವಿಚಾರದಲ್ಲಿ ಪೈಪೋಟಿ ನೀಡಲು ಸಾಧ್ಯವಿಲ್ಲ. ಅದು ಎಲ್ಲರ ಕಲ್ಪನೆಯನ್ನೂ ಮೀರಿರುತ್ತದೆ’ ಎಂದು ಉರ್ಫಿ ಜಾವೇದ್​ ಹೇಳಿದ್ದಾರೆ.

ಇದನ್ನೂ ಓದಿ: Urfi Javed: ಉರ್ಫಿ ಜಾವೇದ್​ ಜತೆ ಹಿಂದುಸ್ತಾನಿ ಭಾವು ಕಿರಿಕ್​; ಈ ರೀತಿ ಬಟ್ಟೆ ಧರಿಸಿದ್ದಕ್ಕೆ ನಟಿಗೆ ಬೆದರಿಕೆ

ಯಾರೂ ಊಹಿಸದ ರೀತಿಯಲ್ಲಿ ಉರ್ಫಿ ಜಾವೇದ್​ ಪ್ರಯೋಗ ಮಾಡುತ್ತಾರೆ. ಗಮ್​ ಟೇಮ್​, ಎಲೆಕ್ಟ್ರಿಕ್​ ವೈರ್​, ಕಸದ ಚೀಲ, ಮುಂತಾದ ವಸ್ತುಗಳಿಂದ ಅವರು ಮಾನ ಮುಚ್ಚಿಕೊಂಡಿದ್ದೂ ಉಂಟು! ಇಂಥ ಅವತಾರ ನೋಡಿದ ಬಳಿಕ ನೆಟ್ಟಿಗರು ಅವರನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡಿದ್ದಾರೆ. ಹಾಗಿದ್ದರೂ ಕೂಡ ಉರ್ಫಿ ಜಾವೇದ್​ ವರ್ತನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕೆಲವರಂತೂ ಪೊಲೀಸರಿಗೆ ದೂರು ನೀಡಿದ ಉದಾಹರಣೆ ಕೂಡ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:52 am, Tue, 6 December 22

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು