AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Urfi Javed: ಚಿಕ್ಕ ಹುಡುಗರ ವಿರುದ್ಧ ಪೊಲೀಸರಿಗೆ​ ದೂರು ನೀಡಲು ಮುಂದಾದ ಉರ್ಫಿ ಜಾವೇದ್​; ಬಾಲಕರ ತಪ್ಪೇನು?

Urfi Javed Controversy: ಬಾಲಕರ ವರ್ತನೆ ಕಂಡು ಉರ್ಫಿ ಜಾವೇದ್​ ಸಿಟ್ಟಾಗಿದ್ದಾರೆ. ‘ಈ ಹುಡುಗರ ಪಾಲಕರು ಯಾರೆಂದು ಗೊತ್ತಿದ್ದರೆ ನನಗೆ ತಿಳಿಸಿ’ ಎಂದು ಅವರು ಕೇಳಿಕೊಂಡಿದ್ದಾರೆ.

Urfi Javed: ಚಿಕ್ಕ ಹುಡುಗರ ವಿರುದ್ಧ ಪೊಲೀಸರಿಗೆ​ ದೂರು ನೀಡಲು ಮುಂದಾದ ಉರ್ಫಿ ಜಾವೇದ್​; ಬಾಲಕರ ತಪ್ಪೇನು?
ಉರ್ಫಿ ಜಾವೇದ್
TV9 Web
| Edited By: |

Updated on:Dec 05, 2022 | 9:11 AM

Share

ನಟಿ ಉರ್ಫಿ ಜಾವೇದ್​ (Urfi Javed) ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಅನೇಕ ಕಾರಣಗಳಿಂದ ಅವರು ಕಿರಿಕ್​ ಮಾಡಿಕೊಳ್ಳುತ್ತಾರೆ. ಸಾಕಷ್ಟು ಫೇಮಸ್​ ವ್ಯಕ್ತಿಗಳನ್ನು ಉರ್ಫಿ ಎದುರು ಹಾಕಿಕೊಂಡ ಉದಾಹರಣೆ ಇದೆ. ಅಚ್ಚರಿ ಎಂದರೆ, ಈಗ ಅವರು ಚಿಕ್ಕ ಹುಡುಗರ ವಿರುದ್ಧ ಗರಂ ಆಗಿದ್ದಾರೆ. 10 ಬಾಲಕರ ವಿರುದ್ಧ ಪೊಲೀಸರಿಗೆ ದೂರು (Police Complaint) ನೀಡಲು ಉರ್ಫಿ ಜಾವೇದ್​ ಮುಂದಾಗಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಸ್ಪಷ್ಟವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​ ಆಗುವ ಈ ನಟಿಗೆ ಬಾಲಕರು ಕಿರುಕುಳ (Harassment) ನೀಡಿದ್ದಾರೆ. ಮುಂದಿನ ಪೀಳಿಗೆಯ ಮಕ್ಕಳು ಈ ರೀತಿ ಆಗಿದ್ದರ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಉರ್ಫಿ ಜಾವೇದ್​ ಬಗ್ಗೆ ಹೊಸದಾಗಿ ಹೇಳುವಂಥದ್ದು ಏನೂ ಇಲ್ಲ. ಬಟ್ಟೆಗಳ ಕಾರಣದಿಂದಲೇ ಅವರು ಸಾಕಷ್ಟು ಖ್ಯಾತಿ-ಕುಖ್ಯಾತಿ ಗಳಿಸಿದ್ದಾರೆ. ಚಿತ್ರ-ವಿಚಿತ್ರ ಬಟ್ಟೆ ಧರಿಸಿ ಅವರು ಆಗಾಗ ಟ್ರೋಲ್​ ಆಗುತ್ತಾರೆ. ಈ ನಟಿಗೆ 10 ಬಾಲಕರು ಪದೇ ಪದೇ ಫೋನ್​ ಮಾಡಿ ಕಿರುಕುಳ ನೀಡಿದ್ದಾರೆ. ‘ಇವರಿಗೆ ನನ್ನ ನಂಬರ್​ ಹೇಗೆ ಸಿಕ್ಕಿತೋ ತಿಳಿದಿಲ್ಲ. ಈ ಮಕ್ಕಳಿಗೆಲ್ಲ ಏನಾಗಿದೆ? ಕಾರಣ ಇಲ್ಲದೇ ಕಿರುಕುಳ ನೀಡುತ್ತಾ ಇದ್ದಾರೆ. ನಾನು ಪೊಲೀಸರಿಗೆ ದೂರು ನೀಡುತ್ತೇನೆ. ಈ ಹುಡುಗರ ಪಾಲಕರು ಯಾರೆಂದು ಗೊತ್ತಿದ್ದರೆ ನನಗೆ ತಿಳಿಸಿ, ನಾನು ನಿಮಗೆ ಬಹುಮಾನ ಕೊಡುತ್ತೇನೆ’ ಎಂದು ಉರ್ಫಿ ಜಾವೇದ್​ ಬರೆದುಕೊಂಡಿದ್ದಾರೆ.

ತಮಗೆ ಕಿರುಕುಳ ನೀಡಿದ ಹುಡುಗನ ಇನ್​ಸ್ಟಾಗ್ರಾಮ್​ ಖಾತೆಯ ವಿವರನ್ನು ಉರ್ಫಿ ಜಾವೇದ್​ ಅವರು ತಮ್ಮ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅದನ್ನು ಆ ಹುಡುಗ ತನ್ನ ಖಾತೆಯಲ್ಲಿ ಹೆಮ್ಮೆಯಿಂದ ಪೋಸ್ಟ್​ ಮಾಡಿಕೊಂಡಿದ್ದಾನೆ. ಇದು ಉರ್ಫಿ ಜಾವೇದ್​ ಅವರಿಗೆ ಅಚ್ಚರಿ ಮೂಡಿಸಿದೆ. ‘ಮುಂದಿನ ಪೀಳಿಗೆ ಕೆಟ್ಟು ಹೋಗಿದೆ’ ಎಂದು ಅವರು ಟೀಕಿಸಿದ್ದಾರೆ.

ಇದನ್ನೂ ಓದಿ
Image
ಅಶ್ಲೀಲ​ ವೆಬ್​ಸೈಟ್​ನಲ್ಲಿ ಉರ್ಫಿ ಜಾವೇದ್​ ಫೋಟೋ; ಪ್ರತಿ ದಿನ ರೇಪ್​ ಬೆದರಿಕೆ: ಶಾಕಿಂಗ್​ ವಿಚಾರ ತೆರೆದಿಟ್ಟ ನಟಿ
Image
ಪ್ಯಾಂಟ್​ ಮೇಲೆ ಪ್ಯಾಂಟ್​ ಅಂಟಿಸಿಕೊಂಡು ಬಂದ ಉರ್ಫಿ ಜಾವೇದ್​; ಇಲ್ಲಿದೆ ವಿಚಿತ್ರ ಅವತಾರದ ವಿಡಿಯೋ
Image
‘ನಂಗೆ ಮರ್ಯಾದೆ ಕೊಡಲ್ಲ, ಸೆಲೆಬ್ರಿಟಿಗಳೇ ಕೆಟ್ಟ ಕಮೆಂಟ್​​ ಮಾಡ್ತಾರೆ’: ಎಲ್ಲವನ್ನೂ ಹೇಳಿಕೊಂಡ ಉರ್ಫಿ ಜಾವೇದ್​
Image
‘ಮುಸ್ಲಿಂ ಹುಡುಗನನ್ನು ಮದುವೆ ಆಗಲ್ಲ’: ಬಲವಾದ ಕಾರಣ ನೀಡಿದ ಮುಸ್ಲಿಂ ನಟಿ ಉರ್ಫಿ ಜಾವೇದ್​

ಹಿಂದಿ ಕಿರುತೆರೆಯಲ್ಲಿ ಉರ್ಫಿ ಜಾವೇದ್​ ಅವರು ಗುರುತಿಸಿಕೊಂಡಿದ್ದರು. ಆದರೆ ಅವರಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿದ್ದು ‘ಬಿಗ್​ ಬಾಸ್​ ಒಟಿಟಿ’ ಮೊದಲ ಸೀಸನ್​ ಮೂಲಕ. ಅಲ್ಲಿಂದ ಹೊರಬಂದ ಬಳಿಕ ಅವರು ಬೋಲ್ಡ್​ ಆಗಿ ಬಟ್ಟೆ ಧರಿಸಿ ಫೋಟೋಶೂಟ್​ ಮಾಡಿಸುವ ಮೂಲಕ ಫೇಮಸ್​ ಆದರು. ಸೋಶಿಯಲ್​ ಮೀಡಿಯಾದಲ್ಲಿ ಪ್ರತಿ ದಿನವೂ ಅವರನ್ನು ಟ್ರೋಲ್​ ಮಾಡಲಾಗುತ್ತದೆ. ಅಶ್ಲೀಲವಾಗಿ ಬಟ್ಟೆ ಹಾಕಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಅನೇಕರು ದೂರು ನೀಡಿದ್ದೂ ಇದೆ. ಆದರೆ ಅದಕ್ಕೆಲ್ಲ ಉರ್ಫಿ ಜಾವೇದ್​ ತಲೆ ಕೆಡಿಸಿಕೊಂಡಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:11 am, Mon, 5 December 22

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ