AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Urfi Javed: ಉರ್ಫಿ ಜಾವೇದ್​ ಜತೆ ಹಿಂದುಸ್ತಾನಿ ಭಾವು ಕಿರಿಕ್​; ಈ ರೀತಿ ಬಟ್ಟೆ ಧರಿಸಿದ್ದಕ್ಕೆ ನಟಿಗೆ ಬೆದರಿಕೆ

Urfi Javed Troll | Hindustani Bhau: ‘ನೀವು ನನಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದೀರಿ. ನಿಮ್ಮನ್ನು ನಾನು ಜೈಲಿಗೆ ಕಳಿಸಬಲ್ಲೆ’ ಎಂದು ಉರ್ಫಿ ಜಾವೇದ್​ ಅವರು ಎಚ್ಚರಿಕೆ ನೀಡಿದ್ದಾರೆ.

Urfi Javed: ಉರ್ಫಿ ಜಾವೇದ್​ ಜತೆ ಹಿಂದುಸ್ತಾನಿ ಭಾವು ಕಿರಿಕ್​; ಈ ರೀತಿ ಬಟ್ಟೆ ಧರಿಸಿದ್ದಕ್ಕೆ ನಟಿಗೆ ಬೆದರಿಕೆ
ಹಿಂದುಸ್ತಾನಿ ಭಾವು, ಉರ್ಫಿ ಜಾವೇದ್
Follow us
TV9 Web
| Updated By: ಮದನ್​ ಕುಮಾರ್​

Updated on:Nov 14, 2022 | 7:41 AM

ಹಿಂದಿ ‘ಬಿಗ್​ ಬಾಸ್​​ ಒಟಿಟಿ’ ಮೊದಲ ಸೀಸನ್​ನಲ್ಲಿ ಸ್ಪರ್ಧಿಸಿದ ಬಳಿಕ ನಟಿ ಉರ್ಫಿ ಜಾವೇದ್​ (Urfi Javed) ಅವರ ಖ್ಯಾತಿ ಹೆಚ್ಚಿತು. ಆದರೆ ಅವರು ಅದಕ್ಕಿಂತಲೂ ಹೆಚ್ಚು ಪ್ರಚಾರ ಪಡೆದಿದ್ದು ಚಿತ್ರ-ವಿಚಿತ್ರ ಬಟ್ಟೆ ಧರಿಸುವ ಮೂಲಕ. ಸಿಕ್ಕಾಪಟ್ಟೆ ಬೋಲ್ಡ್​ ಆಗಿ ಡ್ರೆಸ್​ ಹಾಕಿಕೊಂಡು ಫೋಟೋಗೆ ಪೋಸ್ ನೀಡುವುದನ್ನೇ ಉರ್ಫಿ ಜಾವೇದ್​ ಅವರು ಕಾಯಕ ಮಾಡಿಕೊಂಡಿದ್ದಾರೆ. ಪ್ರತಿದಿನ ಅವರ ಹಾಟ್​ ಫೋಟೋಗಳು (Urfi Javed Photos) ವೈರಲ್​ ಆಗುತ್ತವೆ. ಇದಕ್ಕಾಗಿ ಅವರು ಜನರಿಂದ ಕಟು ಟೀಕೆ ಎದುರಿಸುತ್ತಿದ್ದಾರೆ ಕೂಡ. ಯಾರು ಎಷ್ಟೇ ಟ್ರೋಲ್​ ಮಾಡಿದರೂ ಉರ್ಫಿ ಜಾವೇದ್​ ತಗ್ಗುತ್ತಿಲ್ಲ. ಈಗ ಅವರ ಜೊತೆ ಸೋಶಿಯಲ್​ ಮೀಡಿಯಾ ಸೆನ್ಸೇಷನ್​ ಹಿಂದುಸ್ತಾನಿ ಭಾವು (Hindustani Bhau) ಕಿರಿಕ್​ ಮಾಡಿಕೊಂಡಿದ್ದಾರೆ.

ಅನೇಕರನ್ನು ಟ್ರೋಲ್​ ಮಾಡುವ ಮೂಲಕ ಹಿಂದುಸ್ತಾನಿ ಭಾವು ಫೇಮಸ್​ ಆಗಿದ್ದಾರೆ. ಈಗ ಅವರು ಉರ್ಫಿ ಜಾವೇದ್​ ಬಗ್ಗೆ ಮಾತನಾಡಿದ್ದಾರೆ. ಉರ್ಫಿ ಈ ರೀತಿ ಬಟ್ಟೆ ಹಾಕುವುದನ್ನು ನಿಲ್ಲಿಸಬೇಕು. ಇದು ಭಾರತದ ಸಂಸ್ಕೃತಿಗೆ ವಿರುದ್ಧವಾಗಿದೆ. ಅವರು ಸುಧಾರಿಸದೇ ಇದ್ದರೆ ತಾವು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹಿಂದುಸ್ತಾನಿ ಭಾವು ವಿಡಿಯೋದಲ್ಲಿ ಹೇಳಿದ್ದಾರೆ. ಅದಕ್ಕೆ ಉರ್ಫಿ ಜಾವೇದ್​ ಪ್ರತಿಕ್ರಿಯೆ ನೀಡಿದ್ದಾರೆ.

‘ನೀವು ಬೈಯ್ಯುವುದು ಭಾರತದ ಸಂಸ್ಕೃತಿಯೇ? ನಿಮ್ಮ ಬೈಗುಳದಿಂದ ಎಷ್ಟು ಜನರು ಸುಧಾರಿಸಿದ್ದಾರೆ? ನೀವು ನನಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದೀರಿ. ನಿಮ್ಮನ್ನು ನಾನು ಜೈಲಿಗೆ ಕಳಿಸಬಲ್ಲೆ’ ಎಂದು ಉರ್ಫಿ ಜಾವೇದ್​ ಹೇಳಿದ್ದಾರೆ. ಹಿಂದುಸ್ತಾನಿ ಭಾವು ಮಾತ್ರಬಲ್ಲದೇ ಅನೇಕರು ಉರ್ಫಿ ವಿರುದ್ಧ ಗರಂ ಆಗಿದ್ದಾರೆ. ಕೆಲವು ಕಡೆಗಳಲ್ಲಿ ಅವರ ವಿರುದ್ಧ ಕೇಸ್​ ಕೂಡ ದಾಖಲಾಗಿದೆ. ಆ ಕುರಿತು ಇತ್ತೀಚೆಗೆ ಉರ್ಫಿ ಮಾತನಾಡಿದ್ದರು.

ಇದನ್ನೂ ಓದಿ
Image
ಅಶ್ಲೀಲ​ ವೆಬ್​ಸೈಟ್​ನಲ್ಲಿ ಉರ್ಫಿ ಜಾವೇದ್​ ಫೋಟೋ; ಪ್ರತಿ ದಿನ ರೇಪ್​ ಬೆದರಿಕೆ: ಶಾಕಿಂಗ್​ ವಿಚಾರ ತೆರೆದಿಟ್ಟ ನಟಿ
Image
ಪ್ಯಾಂಟ್​ ಮೇಲೆ ಪ್ಯಾಂಟ್​ ಅಂಟಿಸಿಕೊಂಡು ಬಂದ ಉರ್ಫಿ ಜಾವೇದ್​; ಇಲ್ಲಿದೆ ವಿಚಿತ್ರ ಅವತಾರದ ವಿಡಿಯೋ
Image
‘ನಂಗೆ ಮರ್ಯಾದೆ ಕೊಡಲ್ಲ, ಸೆಲೆಬ್ರಿಟಿಗಳೇ ಕೆಟ್ಟ ಕಮೆಂಟ್​​ ಮಾಡ್ತಾರೆ’: ಎಲ್ಲವನ್ನೂ ಹೇಳಿಕೊಂಡ ಉರ್ಫಿ ಜಾವೇದ್​
Image
‘ಮುಸ್ಲಿಂ ಹುಡುಗನನ್ನು ಮದುವೆ ಆಗಲ್ಲ’: ಬಲವಾದ ಕಾರಣ ನೀಡಿದ ಮುಸ್ಲಿಂ ನಟಿ ಉರ್ಫಿ ಜಾವೇದ್​

ಇದು ತಾಲಿಬಾನ್​ ಅಲ್ಲ ಎಂದ ನಟಿ:

ಉರ್ಫಿ ಜಾವೇದ್​ ಅವರು ಅಶ್ಲೀಲವಾಗಿ ಬಟ್ಟೆ ಹಾಕಿಕೊಳ್ಳುತ್ತಾರೆ ಎಂಬುದು ಕೆಲವರ ಆರೋಪ. ಹಾಗಾಗಿ ಅವರ ಮೇಲೆ ಕೇಸ್​ ಹಾಕಲಾಗುತ್ತಿದೆ. ಇದು ಉರ್ಫಿ ಕೋಪಕ್ಕೆ ಕಾರಣ ಆಗಿದೆ. ಈ ಕುರಿತು ಅವರು ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದರು. ‘ನಾನು ಇದನ್ನೆಲ್ಲ ಪ್ರಚಾರಕ್ಕೆ ಮಾಡ್ತೀನಿ ಅಂತ ಹೇಳುವ ಜನರೇ ನನ್ನ ಹೆಸರನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಅತ್ಯಾಚಾರಿಗಳಿಗಿಂತಲೂ ಹೆಚ್ಚಿನ ಎಫ್​ಐಆರ್​ಗಳು ನನ್ನ ಮೇಲೆ ಆಗುತ್ತಿವೆ. ಹುಡುಗಿಯರು ಏನು ಧರಿಸಬೇಕು ಅಂತ ನೀವು ನಿರ್ಧಾರ ಮಾಡೋಕೆ ಇದು ತಾಲಿಬಾನ್​ ಅಲ್ಲ. ಇದು ಅಫ್ಘಾನಿಸ್ತಾನ್​ ಅಲ್ಲ’ ಎಂದು ಉರ್ಫಿ ಜಾವೇದ್​ ಖಡಕ್​ ಆಗಿ ಹೇಳಿದ ವಿಡಿಯೋ ವೈರಲ್​ ಆಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:41 am, Mon, 14 November 22

ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ