ಹುಟ್ಟಿದ ದಿನವೇ ಮಗಳಿಗೆ ‘ದೇವಿ ಬಸು ಸಿಂಗ್​ ಗ್ರೋವರ್’​ ಎಂದು ನಾಮಕರಣ ಮಾಡಿದ ಬಿಪಾಶಾ ಬಸು

TV9kannada Web Team

TV9kannada Web Team | Edited By: Kiran Hanumant Madar

Updated on: Nov 13, 2022 | 6:21 PM

ಬಿಪಾಶಾ ಬಸು ತಮ್ಮ ಮಗಳ ಪಾದಗಳ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಮಗಳಿಗೆ ‘ದೇವಿ ಬಸು ಸಿಂಗ್​ ಗ್ರೋವರ್'​ ಎಂದು ಹೆಸರಿಟ್ಟಿರುವುದಾಗಿ ಹೇಳಿದ್ದಾರೆ.

ಹುಟ್ಟಿದ ದಿನವೇ ಮಗಳಿಗೆ ‘ದೇವಿ ಬಸು ಸಿಂಗ್​ ಗ್ರೋವರ್'​ ಎಂದು ನಾಮಕರಣ ಮಾಡಿದ ಬಿಪಾಶಾ ಬಸು
ಬಿಪಾಶಾ ಬಸು

ಆಲಿಯಾ ಭಟ್​ ಅವರು ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇದಾದ ಕೆಲವೇ ದಿನಗಳಲ್ಲಿ ‘ಬಿಪಾಶಾ ಬಸು'(Bipasha Basu) ಕೂಡ ಮುದ್ದಾದ ಹೆಣ್ಣು ಮಗುವಿಗೆ ತಾಯಿಯಾದರು. ​ ಈ ವರ್ಷದ ಆಗಸ್ಟ್​ನಲ್ಲಿ ಬಿಪಾಶಾ ಬಸು ಅವರು ಪತಿ ಕರಣ್ ಸಿಂಗ್​ ಗ್ರೋವರ್​ ಅವರೊಂದಿಗೆ ಪ್ರೆಗ್ನೆಂಟ್​ ಇರುವ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಶನಿವಾರ (ನವೆಂಬರ್12 ) ಬಿಪಾಶಾ ಬಸು ಅವರು ಮಗಳಿಗೆ ಜನ್ಮ ನೀಡಿದ್ದು, ಅದೇ ದಿನವೇ ಮಗಳ ಪಾದಗಳ ಫೋಟೋವನ್ನ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುವ ಮೂಲಕ ಮಗಳಿಗೆ ‘ದೇವಿ ಬಸು ಸಿಂಗ್ ಗ್ರೋವರ್ಎಂದು ನಾಮಕರಣ ಮಾಡಿರುವುದಾಗಿ ಹೇಳಿದ್ದಾರೆ.

ಬಿಪಾಶಾ ಬಸು ಹಾಗೂ ಕರಣ್ ಸಿಂಗ್​ ಗ್ರೋವರ್ 2015ರ ‘ಅಲೋನ್ಸಿನಿಮಾದ ಸೆಟ್​ನಿಂದ ಇಬ್ಬರು ಪ್ರೀತಿಸುತ್ತಿದ್ದರು. 2016 ರ ಏಪ್ರಿಲ್​ 30ರಂದು ಇಬ್ಬರು ​ ಮದುವೆಯಾಗಿದ್ದರು, . ಇದಾದ 6 ವರ್ಷಗಳ ಬಳಿಕ ಅವರು ತಾಯಿಯಾಗಿದ್ದಾರೆ. ಇತ್ತೀಚೆಗೆ ಬಿಪಾಶಾ ಬಸು ಒಂದು ಸಂದರ್ಶನಲ್ಲಿ ಮಾತನಾಡುವಾಗ ಪ್ರೆಗ್ನೆಂಟ್ ಸಮಯದಲ್ಲಿ ಅನುಭವಿಸಿದ ನೋವನ್ನು ಹಂಚಿಕೊಂಡಿದ್ದರು,‘ಸರಿಯಾಗಿ ಊಟ ಸೇರುತ್ತಿರಲಿಲ್ಲ, ಇದರಿಂದಾಗಿ ನಾನು ನನ್ನ ತೂಕವನ್ನ ಕಳೆದುಕೊಂಡೆಎಂದಿದ್ದಾರೆ.

View this post on Instagram

A post shared by Bipasha Basu (@bipashabasu)

ಬಿಪಾಶಾ ಬಸು ದೇವಿ ಭಕ್ತೆಯಾಗಿದ್ದು ಮಗುವಿಗೆ ಕೂಡ ಅದೇ ಹೆಸರನ್ನು ಇಟ್ಟಿದ್ದಾರೆ. ಮಗಳ ಪಾದಗಳ ಫೋಟೋ ವೈರಲ್​ ಆಗುತ್ತಿದ್ದಂತೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು, ‘ನಿಮ್ಮ ಆಸೆಯಂತೆಯೇ ಹೆಣ್ಣು ಮಗು ಆಗಿದೆ, ದೇವಿ ನಿಮಗೆ ಒಳ್ಳೆಯದು ಮಾಡಲಿ ಎಂದು ಕಾಮೆಂಟ್​ಗಳ ಮೂಲಕ ಶುಭ ಕೋರುತ್ತಿದ್ದಾರೆ.

ಇದನ್ನೂ ಓದಿ:Bipasha Basu: ಪ್ರೆಗ್ನೆನ್ಸಿ ಫೋಟೋ ಹಂಚಿಕೊಂಡ ಬಿಪಾಶಾ ಬಸು; ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್​ ನಟಿ

ಬಿಪಾಶಾ ಬಸು 2001ರಲ್ಲಿ ‘ಅಜನಬಿಸಿನಿಮಾದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟರು, ಇದಾದ ಬಳಿಕ ರಾಜ್​, ಫಿರ್​ ಹೇರಾ ಪೇರಿ, ಓಂ ಶಾಂತಿ ಓಂ, ರೇಸ್,ಅಲಗ್​​ ಮುಂತಾದ ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ, ಬಿಪಾಶಾ ಬಸು ಕೊನೆಯದಾಗಿ 2020 ರಲ್ಲಿ ಡೇಂಜರಸ್​ ವೆಬ್​ ಸೀರೀಸ್​ನಲ್ಲಿ ನಟಿಸಿದ್ದಾರೆ. ಅದಾದ ಬಳಿಕ ಯಾವುದೇ ಸಿನಿಮಾಗಳಲ್ಲಿ ನಟಿಸದೇ ದೂರ ಉಳಿದಿದ್ದರು.

ಇನ್ನಷ್ಟು ಮನರಂಜನಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada