Deepika Padukone: ‘ಪಠಾಣ್’ ಚಿತ್ರದಲ್ಲಿ ಹಾಟೆಸ್ಟ್ ಮತ್ತು ಕೂಲೆಸ್ಟ್ ದೀಪಿಕಾ; ಪಾತ್ರದ ಬಗ್ಗೆ ಮಾಹಿತಿ ನೀಡಿದ ಸಿದ್ದಾರ್ಥ್ ಆನಂದ್
Siddharth Anand | Pathaan Movie: ‘ಭಾರತೀಯ ಚಿತ್ರರಂಗದಲ್ಲಿ ದೀಪಿಕಾ ಪಡುಕೋಣೆ ಅವರು ದೊಡ್ಡ ಸ್ಟಾರ್ ನಟಿ. ಅವರ ಸ್ಟಾರ್ಡಮ್ಗೆ ತಕ್ಕಂತೆಯೇ ಈ ಪಾತ್ರವನ್ನು ಚಿತ್ರಿಸಲಾಗಿದೆ’ ಎಂದಿದ್ದಾರೆ ಸಿದ್ದಾರ್ಥ್ ಆನಂದ್.
ನಟಿ ದೀಪಿಕಾ ಪಡುಕೋಣೆ (Deepika Padukone) ಅವರ ಪ್ರತಿಭೆ ಏನು ಎಂಬುದನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ಹಲವು ಸಿನಿಮಾಗಳ ಮೂಲಕ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಈಗ ಅವರು ‘ಪಠಾಣ್’ (Pathaan) ಸಿನಿಮಾದಲ್ಲಿ ನಾಲ್ಕನೇ ಬಾರಿಗೆ ನಟ ಶಾರುಖ್ ಖಾನ್ ಜೊತೆ ತೆರೆ ಹಂಚಿಕೊಂಡಿದ್ದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಇದು ಹೈವೋಲ್ಟೇಜ್ ಸಿನಿಮಾ. ಈ ಚಿತ್ರದಲ್ಲಿ ಶಾರುಖ್ ಖಾನ್ ಎದುರು ಜಾನ್ ಅಬ್ರಾಹಂ ಅವರು ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ದೀಪಿಕಾ ಪಡುಕೋಣೆ ಅವರು ಪಾತ್ರ ಹೇಗಿರಬಹುದು? ಈ ಪ್ರಶ್ನೆಗೆ ನಿರ್ದೇಶಕ ಸಿದ್ದಾರ್ಥ್ ಆನಂದ್ (Siddharth Anand) ಅವರೇ ಉತ್ತರ ನೀಡಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಅವರು ಹಾಟೆಸ್ಟ್ ಮತ್ತು ಕೂಲೆಸ್ಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕರು ಹೇಳಿದ್ದಾರೆ.
ಶಾರುಖ್ ಖಾನ್ ಜನ್ಮದಿನದ ಪ್ರಯುಕ್ತ ನವೆಂಬರ್ 2ರಂದು ‘ಪಠಾಣ್’ ಸಿನಿಮಾದ ಟೀಸರ್ ರಿಲೀಸ್ ಮಾಡಲಾಯಿತು. ಅದರಲ್ಲಿ ಶಾರುಖ್ ಅವರ ಆ್ಯಕ್ಷನ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೇ, ದೀಪಿಕಾ ಪಡುಕೋಣೆ ಅವರ ಹಾಟ್ ಲುಕ್ ಕೂಡ ಗಮನ ಸೆಳೆದಿದೆ. ಹಾಗಂತ ಈ ಸಿನಿಮಾದಲ್ಲಿ ಅವರು ಒಂದೇ ಶೇಡ್ನ ಪಾತ್ರವಿಲ್ಲ. ಹಾಟ್ ಆಗಿರುವುದರ ಜೊತೆಗೆ ಅವರು ಕೂಲೆಸ್ಟ್ ಆಗಿಯೂ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ಸಿದ್ದಾರ್ಥ್ ಆನಂದ್ ಹೇಳಿರುವುದರಿಂದ ಫ್ಯಾನ್ಸ್ ಮನದಲ್ಲಿನ ಕೌತುಕ ಡಬಲ್ ಆಗಿದೆ.
‘ಭಾರತೀಯ ಚಿತ್ರರಂಗದಲ್ಲಿ ದೀಪಿಕಾ ಪಡುಕೋಣೆ ಅವರು ದೊಡ್ಡ ಸ್ಟಾರ್ ನಟಿ. ಅವರ ಸ್ಟಾರ್ಡಮ್ಗೆ ತಕ್ಕಂತೆಯೇ ‘ಪಠಾಣ್’ ಚಿತ್ರದ ಪಾತ್ರವನ್ನು ಚಿತ್ರಿಸಲಾಗಿದೆ. ಬಾಲಿವುಡ್ ಇತಿಹಾಸದಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೋಡಿಯಾಗಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವರಿಬ್ಬರ ನಡುವಿನ ಕೆಮಿಸ್ಟ್ರಿ ಉತ್ತಮವಾಗಿದೆ. ಅವರ ಜೋಡಿಯೇ ನಮ್ಮ ‘ಪಠಾಣ್’ ಚಿತ್ರದಲ್ಲಿನ ಬಹುಮುಖ್ಯ ಆಕರ್ಷಣೆ’ ಎಂದು ಸಿದ್ದಾರ್ಥ್ ಆನಂದ್ ಹೇಳಿದ್ದಾರೆ.
‘ಪಠಾಣ್’ ಚಿತ್ರಕ್ಕೆ ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆ ಬಂಡವಾಳ ಹೂಡಿದೆ. ಅದ್ದೂರಿ ಬಜೆಟ್ನಲ್ಲಿ ಈ ಚಿತ್ರ ಸಿದ್ಧವಾಗುತ್ತಿದೆ ಎಂಬುದಕ್ಕೆ ಟೀಸರ್ನಲ್ಲಿ ಸಾಕ್ಷಿ ಸಿಕ್ಕಿದೆ. 2023ರ ಜನವರಿ 25ರಂದು ಈ ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಲಿದೆ. ಹಿಂದಿ ಜೊತೆಗೆ ತಮಿಳು ಮತ್ತು ತೆಲುಗಿಗೂ ಡಬ್ ಆಗಿ ತೆರೆ ಕಾಣಲಿದೆ. ಶಾರುಖ್ ಖಾನ್ ಅವರು 4 ವರ್ಷಗಳ ಬಳಿಕ ದೊಡ್ಡ ಪರದೆಮೇಲೆ ಕಾಣಿಸಿಕೊಳ್ಳುತ್ತಿರುವುದರಿಂದ ‘ಪಠಾಣ್’ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿದೆ. ಹಿಂದಿಯಲ್ಲಿ ಈ ಚಿತ್ರದ ಟೀಸರ್ ಈವರೆಗೂ 35 ಮಿಲಿಯನ್ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.