ಬಿಪಾಶಾ ಬಸು ದುರ್ಗಾ ಪೂಜೆಗೆ ಎಥ್ನಿಕ್ ವೇರ್ನೊಂದಿಗೆ ರೆಡಿಯಾದರೆ, ಇನ್ಸ್ಸ್ಟಾಗ್ರಾಮ್ನಲ್ಲಿ ಅವರನ್ನು ನೋಡಿದವರು ಗರಬಡಿದವರಂತಾಗಿದ್ದಾರೆ!
ದುರ್ಗಾ ಪೂಜೆಗೆಂದೇ ತಯಾರು ಮಾಡಿಕೊಂಡಿರುವ ಈ ಎಥ್ನಿಕ್ ಡ್ರೆಸ್ ನಲ್ಲಿ ಬಿಪಾಶಾ ಮಿಂಚುತ್ತಿದ್ದಾರೆ. ಖ್ಯಾತ ಫ್ಯಾಶನ್ ಡಿಸೈನರ್ ಇಶಾ ಅಮೀನ್ ವಿನ್ಯಾಸಗೊಳಿಸಿರುವ ಉಡುಗೆ ಇದು.
ಕೆಲವು ವರ್ಷಗಳ ಹಿಂದೆ ಬಾಲಿವುಡ್ ನಲ್ಲಿ ಹಾಟ್ ನಟಿಯೆನಿಸಿಕೊಂಡಿದ್ದ ಬಿಪಾಶಾ ಬಸು ನೆನಪಿದ್ದಾರೆ ತಾನೆ? ಅವರನ್ನು ನೀವು ಮರೆತು ಹೋಗಿರುವ ಚಾನ್ಸ್ ಇದೆ. ಇತ್ತೀಚಿಗೆ ಅವರ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. 2016 ರಲ್ಲಿ ಬಿಪಾಶಾ, ನಟ ಕರಣ್ ಸಿಂಗ್ ಗ್ರೋವರ್ ಅವರನ್ನು ಮದುವೆಯಾದ ನಂತರ ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಮತ್ತು ಸಾರ್ವಜನಿಕವಾಗಿಯೂ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಆದರೆ ಒಮ್ಮೆ ಕಾಣಿಸಿಕೊಂಡರೂ ಹಲವಾರು ತಿಂಗಳುಗಳವರೆಗೆ ಮನಸ್ಸಿನಲ್ಲಿ ಉಳಿದುಬಿಡುವ ಸೊಗಸುಗಾತಿ ಬಿಪಾಶಾ. ಹಿಂದೊಮ್ಮೆ ಅವರು ಫುಟ್ಬಾಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ ಅವರನ್ನು ಬಹಿರಂಗವಾಗಿ ಚುಂಬಿಸಿ ಹೆಸರಾಗಿದ್ದು ನಿಮಗೆ ನೆನಪಿರಬಹುದು.
ಮೂಲತಃ ಬಂಗಾಳಿಯಾಗಿರುವ ಅವರು ತಮ್ಮ ಮಾದಕ ಸೌಂದರ್ಯದ ಮೂಲಕ ಅಸಂಖ್ಯಾತ ಜನರ ನಿದ್ರೆಗೆಡಿಸಿದವರು. ಕರಣ್ ರನ್ನು ಮದುವೆಯಾಗುವ ಮೊದಲು ನಟ ಜಾನ್ ಆಬ್ರಹಾಂ ಜೊತೆ ರಿಲೇಶನ್ ಶಿಪ್ ನಲ್ಲಿದ್ದರು. ಇನ್ನೇನು ಅವರು ಮದುವೆಯಾಗುತ್ತಾರೆ ಅನ್ನುವಾಗಲೇ ಸಂಬಂಧದಲ್ಲಿ ಬಿರುಕು ಕಂಡು ಅವರಿಬ್ಬರು ಬೇರೆಯಾದರು.
ಬಹಳ ದಿನಗಳ ನಂತರ ಬಿಪಾಶಾ ಕೆಮೆರಾ ಎದುರು ಪ್ರತ್ಯಕ್ಷರಾಗಿದ್ದಾರೆ. ವಯಸ್ಸು 40 ದಾಟಿದರೂ ಬಿಪಾಶಾ ಸೌಂದರ್ಯ ಮಾಸಿಲ್ಲ. ಇಲ್ಲಿರುವ ತಮ್ಮ ಇಮೇಜನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ತಾನು ದಸರಾ ಹಬ್ಬಕ್ಕೆ ಅಣಿಯಾಗುತ್ತಿರುವುದಾಗಿ ಹೇಳಿದ್ದಾರೆ. ನಿಮಗೆ ಗೊತ್ತಿದೆ, ದಸರಾ ಹಬ್ಬವನ್ನು ಬಂಗಾಳಿ ಜನ ದುರ್ಗಾ ಪೂಜೆ ಅಂತ ಆಚರಿಸುತ್ತಾರೆ ಮತ್ತು ಇದು ಅವರಿಗೆ ಬಹಳ ದೊಡ್ಡ ಹಬ್ಬ.
ದುರ್ಗಾ ಪೂಜೆಗೆಂದೇ ತಯಾರು ಮಾಡಿಕೊಂಡಿರುವ ಈ ಎಥ್ನಿಕ್ ಡ್ರೆಸ್ ನಲ್ಲಿ ಬಿಪಾಶಾ ಮಿಂಚುತ್ತಿದ್ದಾರೆ. ಖ್ಯಾತ ಫ್ಯಾಶನ್ ಡಿಸೈನರ್ ಇಶಾ ಅಮೀನ್ ವಿನ್ಯಾಸಗೊಳಿಸಿರುವ ಉಡುಗೆ ಇದು. ಹಳದಿ ಬಣ್ಣದ ಪ್ರಿಂಟೆಡ್ ಕುರ್ತಾ ಮತ್ತು ಪಲಾಜೋ ಜೊತೆ ಅವರು ಕುರ್ತಾಗೆ ಕಂಟ್ರ್ಯಾಸ್ಟ್ ಆಗಿರುವ ಪಿಂಕ್ ಬಣ್ಣದ ದುಪ್ಪಟ್ಟಾವನ್ನು ಜೊತೆಯಾಗಿಸಿದ್ದಾರೆ.
ಕಾಂಬಿನೇಷನ್ ಅದ್ಭುತವಾಗಿದೆ ಮತ್ತು ದೊಡ್ಡ ಗಾತ್ರದ ಬಿಂದಿ ಅವರ ಸೌಂದರ್ಯ ಮತ್ತು ಲುಕ್ಸ್ಗೆ ಮತ್ತಷ್ಟು ಮೆರಗು ನೀಡಿದೆ. ತಲೆಗೂದಲನ್ನು ಎರಡು ಭಾಗ ಮಾಡಿ ಸುಮ್ಮನೆ ಹಾಗೆಯೇ ಭುಜದ ಮೇಲೆ ಹರವಿಕೊಂಡಿದ್ದಾರೆ. ಉಡುಪಿಗೆ ತಕ್ಕುದಾದ ಸರ (ನೆಕ್ ಪೀಸ್) ಅವರ ಕೊರಳಲ್ಲಿ ನೇತಾಡುತ್ತಿದೆ. ಫ್ಯಾಶನ್ ಮತ್ತು ಸೌಂದರ್ಯದ ಸ್ಟೇಟ್ ಮೆಂಟ್ ಅಂದರೆ ಇದೇ ಇರಬೇಕು!
ಅದಕ್ಕೇ ಹೇಳಿದ್ದು, ಬಿಪಾಶಾ ಸಾರ್ವಜನಿಕವಾಗಿ ಜಾಸ್ತಿ ಕಾಣಿಸಿಕೊಳ್ಳದಿದ್ದರೂ ಚಿಂತೆಯಿಲ್ಲ, ಒಮ್ಮೆ ಹೀಗೆ ಕಾಣಿಸಿಕೊಂಡು ಜನರು ತಮ್ಮನ್ನು ಮರೆಯದಂತೆ ಮಾಡುತ್ತಾರೆ!
ಇದನ್ನೂ ಓದಿ: ‘ಬಾಹುಬಲಿ’ ಸುಂದರಿ ತಮನ್ನಾಳಿಂದ ತೊಟ್ಟ ಉಡುಗೆಯ ಸೊಬಗು ಹೆಚ್ಚುತ್ತದೆ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು!