ನೀಲಿ ಬಣ್ಣದ ನರಿಯ ಕತೆ ನಿಮಗೆ ಗೊತ್ತಿರಬಹುದು, ಅದರೆ ಅದೇ ಬಣ್ಣದ ನಾಯಿಗಳ ಕತೆ ಪ್ರಾಯಶಃ ಕೇಳಿರಲಾರಿರಿ!
ಮುಚ್ಚಿಹೋದ ಕಾರ್ಖಾನೆಯ ಮ್ಯಾನೇಜರ್ ಒಬ್ಬ ಸ್ಫುಟ್ನಿಕ್ ಸುದ್ದಿ ಸಂಸ್ಥೆಗೆ ನೀಡಿರುವ ಮಾಹಿತಿ ಪ್ರಕಾರ ನಾಯಿಗಳು ತಾಮ್ರದ ಸಲ್ಫೇಟ್ ಸಂಪರ್ಕಕ್ಕೆ ಬಂದಿದ್ದರಿಂದ ಬಣ್ಣ ಬದಲಾಗಿದೆ ಎಂದು ಹೇಳಿದ್ದಾರೆ.
ನಾಯಿಯಂತೆ ಕಾಣುತ್ತಿರುವ ಈ ನೀಲಿಬಣ್ಣದ ಪ್ರಾಣಿಗಳ ಹೆಸರೇನು ಅಂತ ನಿಮಗೆ ಗೊಂದಲವಾಗತ್ತಿದೆಯೇ? ಅವು ನಿಸ್ಸಂದೇಹವಾಗಿ ನಾಯಿಗಳೇ ಮಾರಾಯ್ರೇ! ನೀಲಿ ಬಣ್ಣದ ನಾಯಿಗಳು ಕಂಡಿದ್ದು ಎಲ್ಲಿ ಗೊತ್ತಾ? ರಷ್ಯದ ನಿಝ್ನಿ ನೋವ್ ಗೊರೋಡ್ ಹೆಸರಿನ ಪ್ರಾಂತ್ಯದ ಝರಿಂಕ್ಸ್ ಎಂಬಲ್ಲಿ. ನಾಯಿಗಳ ಇಮೇಜ್ಗಳು ಇಂಟರ್ ನೆಟ್ ನಲ್ಲಿ ವೈರಲ್ ಆಗಿರೋದು ಸಹಜವೇ ತಾನೆ? ನೀಲಿ ಬಣ್ಣದ ನಾಯಿಗಳು ಬೇರೆ ಎಲ್ಲಾದರೂ ಕಾಣಬಹುದೇ? ಅಸಲಿಗೆ ಈ ಜಾಗದಲ್ಲಿ ಹೈಡ್ರೋಸಿಯಾನಿಕ್ ಆಸಿಡ್ ಮತ್ತು ಪ್ಲೆಕ್ಸಿಗ್ಲಾಸ್ ತಯಾರಿಸುವ ಒಂದು ಬೃಹತ್ ರಾಸಾಯನಿಕ ಕಾರ್ಖಾನೆ ಇತ್ತು ಮತ್ತು ಅವುಗಳ ತಯಾರಿಕೆಯಲ್ಲಿ ಉಪಯೋಗಿಸಲ್ಪಡುತ್ತಿದ್ದ ತಾಮ್ರದ ಸಲ್ಫೇಟ್ ರಾಸಾಯನಿಕ ನಾಯಿಗಳ ಬಣ್ಣ ನೀಲಿಯಾಗಿ ಮಾರ್ಪಡಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಆ ಕಾರ್ಖಾನೆಯು 6 ವರ್ಷಗಳ ಹಿಂದೆ ಮುಚ್ಚಿಹೋಗಿದೆ.
ಸ್ಥಳೀಯ ನಿವಾಸಿಗಳು ತೆಗೆದ ಪೋಟೋಗಳು ಬೇರೆಯವರಿಗೆ ಲಬ್ಯವಾಗಿ ಅವು ವೈರಲ್ ಅಗಿವೆ. ಮುಚ್ಚಿಹೋದ ಕಾರ್ಖಾನೆಯ ಮ್ಯಾನೇಜರ್ ಒಬ್ಬ ಸ್ಫುಟ್ನಿಕ್ ಸುದ್ದಿ ಸಂಸ್ಥೆಗೆ ನೀಡಿರುವ ಮಾಹಿತಿ ಪ್ರಕಾರ ನಾಯಿಗಳು ತಾಮ್ರದ ಸಲ್ಫೇಟ್ ಸಂಪರ್ಕಕ್ಕೆ ಬಂದಿದ್ದರಿಂದ ಬಣ್ಣ ಬದಲಾಗಿದೆ ಎಂದು ಹೇಳಿದ್ದಾರೆ.
‘ಬೀದಿನಾಯಿಗಳು ಆ ಪ್ರದೇಶದಲ್ಲಿ ಓಡಾಡುತ್ತಿರುತ್ತವೆ. ಪ್ರಾಯಶಃ ಕಾರ್ಖಾನೆಯ ಯಾವುದೋ ಒಂದು ಕೋಣೆಯಲ್ಲಿ ಬಿದ್ದಿದ್ದ ತಾಮ್ರದ ಸಲ್ಫೇಟ್ ಸಂಪರ್ಕಕ್ಕೆ ಅವು ಬಂದಿರುತ್ತವೆ. ಕೆಲ ವರ್ಷಗಳ ಹಿಂದೆ ನಾಯಿಗಳ ಮೈ ಮೇಲಿನ ಬಣ್ಣ ಬದಲಾಗಿದೆ ಅಂತ ನನಗೆ ಯಾರೋ ಹೇಳಿದ್ದರು. ಅದು ಅವರಿಗೆಲ್ಲ ವಿಚಿತ್ರವಾಗಿ ಕಂಡಿದೆ. ಅದರೆ, ಬೀದಿನಾಯಿಗಳನ್ನು ನಿಯಂತ್ರಿಸುವುದು ಸಾಧ್ಯವೇ?’ ಅಂತ ಆಂದ್ರೇಯಿ ಮಿಸ್ಲಿವೆಟ್ಸ್ ಹೆಸರಿನ ಮ್ಯಾನೇಜರ್ ಹೇಳಿದ್ದಾರೆ.
ದಿವಾಳಿಯೆದ್ದ ತಮ್ಮ ಕಂಪನಿಗೆ ನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸುವುದು ಸಾಧ್ಯವಿರಲಿಲ್ಲ ಅಂತಲೂ ಅವರು ಹೇಳಿದ್ದಾರೆ.
ಇದನ್ನೂ ಓದಿ: ಅಕ್ಟೋಬರ್ನಲ್ಲಿ ಬಿಡುಗಡೆಯಾಗಲಿರುವ ಬಿಗ್ ಬಜೆಟ್ ಚಿತ್ರಗಳ ಬಗ್ಗೆ ಜಗ್ಗೇಶ್ ಹೇಳಿದ್ದೇನು?; ವಿಡಿಯೋ ನೋಡಿ