ರಾಮನಾಥಪುರ ಪ್ರಸನ್ನ ಶ್ರೀ ಸುಬ್ರಹ್ಮಣ್ಯ ದೇವಾಸ್ಥಾನವು ಕುಕ್ಕೆ ಸುಬ್ರಹ್ಮಣ್ಯ ದೇಗುಲದಷ್ಟೇ ಖ್ಯಾತಿ ಹೊಂದಿದೆ

ರಾಮನಾಥಪುರ ಪ್ರಸನ್ನ ಶ್ರೀ ಸುಬ್ರಹ್ಮಣ್ಯ ದೇವಾಸ್ಥಾನವು ಕುಕ್ಕೆ ಸುಬ್ರಹ್ಮಣ್ಯ ದೇಗುಲದಷ್ಟೇ ಖ್ಯಾತಿ ಹೊಂದಿದೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Sep 29, 2021 | 6:58 PM

ಈ ದೇವಸ್ಥಾನವು, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಅಧೀನದಲ್ಲಿದೆ. ದೇಗುಲದಲ್ಲಿ ಪ್ರತಿಷ್ಠಾಪನೆಗೊಂಡಿರುವ ಸುಬ್ರಹ್ಮಣ್ಯ ವಿಗ್ರಹವೇ ಮೂಲ ವಿಗ್ರಹ ಎಂದು ಹೇಳಲಾಗುತ್ತದೆ.

ಹಾಸನ ಅದ್ಭುತ ಶಿಲ್ಪಕಲೆಯ ಹಲವಾರು ದೇವಸ್ಥಾನಗಳನ್ನು ಹೊಂದಿರುವ ಜಿಲ್ಲೆಯಾಗಿದೆ. ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿರುವ ರಾಮನಾಥಪುರ ಪ್ರಸನ್ನ ಶ್ರೀ ಸುಬ್ರಮಣ್ಯ ದೇವಾಸ್ಥಾನ ಬಹಳ ಪ್ರಸಿದ್ಧಿ ಹೊಂದಿರುವ ದೇಗುಲ. ರಾಮನಾಥಪುರ ಅರಕಲಗೂಡು ತಾಲ್ಲೂಕಿನಲ್ಲಿರುವ ಅತಿ ದೊಡ್ಡ ಹೋಬಳಿಯಾಗಿದೆ. ಶತಮಾನಗಳಿಂದ ಇದು ಪವಿತ್ರ ಸ್ಥಳವೆಂದು ಗುರುತಿಸಿಕೊಂಡಿದ್ದು ಇಲ್ಲಿ ಅಸಂಖ್ಯಾತ ದೇವಸ್ಥಾನಗಳಿವೆ. ಹಾಗಾಗೇ ಇದನ್ನು ದೇವಸ್ಥಾನಗಳ ಊರು ಎಂದು ಕರೆಯುತ್ತಾರೆ. ಮತ್ತೂ ವಿಶೇಷ ಹಾಗೂ ಉಲ್ಲೇಖಾರ್ಹ ಸಂಗತಿಯೆಂದರೆ, ರಾಮನಾಥಪುರವನ್ನು ದಕ್ಷಿಣದ ಕಾಶಿಯೆಂದು ಅಂತ ಕರೆಯುತ್ತಾರೆ. ಸರಿ, ಇನ್ನು ದೇವಸ್ಥಾನಗಳ ವಿಷಯಕ್ಕೆ ಬರೋಣ.

ಆಗಲೇ ಉಲ್ಲೇಖಿಸಿದ ಹಾಗೆ ರಾಮನಾಥಪುರನಲ್ಲಿ ಹಲವಾರು ದೇಗುಲಗಳಿವೆಯಾದರೂ ಅವುಗಳ ಪೈಕಿ ಪ್ರಸನ್ನ ಶ್ರೀ ಸುಬ್ರಹ್ಮಣ್ಯ ದೇವಾಸ್ಥಾನ ಹೆಚ್ಚು ಮಹತ್ವ ಮತ್ತು ಪ್ರಸಿದ್ಧಿ ಪಡೆದಿದೆ. ದಕ್ಷಿಣ ಕರ್ನಾಟಕ ಜನರಿಗೆ ಈ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಷ್ಟೇ ಮಹತ್ವದ್ದು.

ಹಾಗೆ ನೋಡಿದರೆ ಈ ದೇವಸ್ಥಾನವು, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಅಧೀನದಲ್ಲಿದೆ. ದೇಗುಲದಲ್ಲಿ ಪ್ರತಿಷ್ಠಾಪನೆಗೊಂಡಿರುವ ಸುಬ್ರಹ್ಮಣ್ಯ ವಿಗ್ರಹವೇ ಮೂಲ ವಿಗ್ರಹ ಎಂದು ಹೇಳಲಾಗುತ್ತದೆ.

ರಾಮನಾಥಪುರದಲ್ಲಿ ಸುಬ್ರಮಣ್ಯ ದೇವಸ್ಥಾನ ನಿರ್ಮಾಣಗೊಳ್ಳುವ ಹಿಂದೆ ಒಂದು ಕತೆಯಿದೆ. ಸಂಪುಟ ಮಠದ 14 ನೇ ಯತಿಗಳಾದ ಶ್ರೀ ವಿಭುದೇಂದ್ರ ತೀರ್ಥರು ಲೋಕ ಸಂಚಾರ ಮಾಡುತ್ತಾ ಕಾವೇರಿ ನದಿ ದಡದಲ್ಲಿರುವ ರಾಮನಾಥಪುರಕ್ಕೆ ಬಂದು ರಾತ್ರಿ ಹೊತ್ತು ವಿಶ್ರಮಿಸುತ್ತಿದ್ದಾಗ ಕನಸಿನಲ್ಲಿ ದೇವರು ಕಾಣಿಸಿಕೊಂಡು ತನಗೆ ಅಲ್ಲಿ ದೇವಸ್ಥಾನವೊಂದನ್ನು ನಿರ್ಮಿಸುವಂತೆ ಯತಿಗಳಿಗೆ ಹೇಳಿದನಂತೆ.

ಅದೇ ದಿನ, ಆಗ ಈ ಭಾಗದ ಪಾಳೆಯಗಾರನಾಗಿದ್ದ ಹೊಳೆನರಸೀಪುರದ ನರಸಪ್ಪ ನಾಯಕನಿಗೂ ದೇವರು ಕನಸಿನಲ್ಲಿ ಕಾಣಿಸಿಕೊಂಡು, ವಿಭುದೇಂದ್ರ ಯತಿಗಳ ಕನಸನ್ನು ಸಾಕಾಗೊಳಿಸುವಂತೆ ಹೇಳಿದನಂತೆ. ಮರದುದಿನವೇ ನರಸಪ್ಪ ನಾಯಕ ಯತಿಗಳನ್ನು ಕಂಡು ದೇಗುಲ ನಿರ್ಮಾಣ ಕಾರ್ಯ ಆರಂಭಿಸಿದನಂತೆ. ಈ ದೇವಸ್ಥಾನ ಅಸ್ತಿತ್ವಕ್ಕೆ ಬಂದಿದ್ದು ಹಾಗೆ.

ಸಾಲಿಗ್ರಾಮದ ಕಪ್ಪು ಶಿಲೆಯಲ್ಲಿ ಕೆತ್ತಲಾಗಿರುವ ಸುಬ್ರಹ್ಮಣ್ಯ ವಿಗ್ರಹದ ತಲೆ ಮೇಲೆ ಏಳು ಹೆಡೆಗಳ ನಾಗದೇವತೆ ಇದೆ. ಪ್ರತಿ ವರ್ಷದ ಜನೆವರಿ ತಿಂಗಳು ಇಲ್ಲಿ ಜಾತ್ರೆ ನಡೆಯುತ್ತದೆ.

ಇದನ್ನೂ ಓದಿ:  ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೇ ಹಳಿ ಮೇಲೆ ನಿಂತಿದ್ದ ಯುವತಿಯ ಪ್ರಾಣ ಕಾಪಾಡಿದ ಆಟೋ ಚಾಲಕ; ವಿಡಿಯೋ ವೈರಲ್

Published on: Sep 29, 2021 06:58 PM