ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೇ ಹಳಿ ಮೇಲೆ ನಿಂತಿದ್ದ ಯುವತಿಯ ಪ್ರಾಣ ಕಾಪಾಡಿದ ಆಟೋ ಚಾಲಕ; ವಿಡಿಯೋ ವೈರಲ್

Viral Video: ವಿಡಿಯೋದಲ್ಲಿ ಗಮನಿಸುವಂತೆ ಯುವತಿಯು ರೈಲು ಬರುವವರೆಗೆ ಕಾಯುತ್ತಾ ನಿಂತಿರುತ್ತಾಳೆ. ರೈಲಿನ ಶಬ್ದ ಕೇಳುತ್ತಿದ್ದಂತೆಯೇ ಹಳಿ ಮೇಲೆ ಹೋಗಿ ನಿಂತಿದ್ದಾಳೆ.

ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೇ ಹಳಿ ಮೇಲೆ ನಿಂತಿದ್ದ ಯುವತಿಯ ಪ್ರಾಣ ಕಾಪಾಡಿದ ಆಟೋ ಚಾಲಕ; ವಿಡಿಯೋ ವೈರಲ್
ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೇ ಹಳಿ ಮೇಲೆ ನಿಂತಿದ್ದ ಯುವತಿಯ ಪ್ರಾಣ ಕಾಪಾಡಿದ ಆಟೋ ಚಾಲಕ
Follow us
TV9 Web
| Updated By: shruti hegde

Updated on:Sep 29, 2021 | 9:34 AM

ಆತ್ಮ ಹತ್ಯೆ ಮಾಡಿಕೊಳ್ಳಲು ರೈಲ್ವೇ ಹಳಿ ಮೇಲೆ ಹೋಗಿ ನಿಂತ ಯುವತಿಯನ್ನು ಆಟೋ ಚಾಲಕ ರಕ್ಷಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೈಲು ಬರುವುದನ್ನೇ ಕಾಯುತ್ತ ನಿಂತಿದ್ದ ಯುವತಿ ರೈಲಿನ ಶಬ್ದ ಕೇಳುತ್ತಿದ್ದಂತೆಯೇ ಓಡಿ ಹೋಗಿ ರೈಲು ಹಳಿಯ ಮೇಲೆ ನಿಂತಿದ್ದಾಳೆ. ಇದನ್ನು ಗಮನಿಸಿದ ಆಟೋ ಚಾಲಕ ಧೈರ್ಯದಿಂದ ಹೋಗಿ ಆಕೆಯ ಪ್ರಾಣ ಉಳಿಸಿದ್ದಾನೆ.

ವಿಡಿಯೋದಲ್ಲಿ ಗಮನಿಸುವಂತೆ ಯುವತಿಯು ರೈಲು ಬರುವವರೆಗೆ ಕಾಯುತ್ತಾ ನಿಂತಿರುತ್ತಾಳೆ. ರೈಲಿನ ಶಬ್ದ ಕೇಳುತ್ತಿದ್ದಂತೆಯೇ ಹಳಿ ಮೇಲೆ ಹೋಗಿ ನಿಂತಿದ್ದಾಳೆ. ಆಕಾಶ ನೀಲಿ ಬಣ್ಣದ ಉಡುಗೆ ಧರಿಸಿರುವ ಯುವತಿ ಮುಖಕ್ಕೆ ದುಪ್ಪಟ್ಟದಿಂದ ಮುಚ್ಚಿಕೊಂಡಿದ್ದಾಳೆ. ಆಟೋ ಚಾಲಕ ಕೈ ಹಿಡಿದು ಎಳೆಯುತ್ತಿದ್ದಂತೆಯೇ ಜೋರಾಗಿ ಅಳುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಆಟೋ ಚಾಲಕ ಯುವತಿಯನ್ನು ಕಾಪಾಡಿದ್ದಾನೆ. ಬಳಿಕ ಸುತ್ತಲಿದ್ದ ಜನರೆಲ್ಲಾ ಯುವತಿಗೆ ಸಮಾಧಾನ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಹುದು. ವರದಿಗಾರ ರವೀಶ್ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ಆಟೋ ಚಾಲಕನಿಗೆ ಹಲವರು ಧನ್ಯವಾದ ತಿಳಿಸಿದ್ದಾರೆ.

ಉದ್ಯೋಗ ಸಿಗದೇ ಯುವತಿಯು ಚಿಂತೆಗೀಡಾಗಿದ್ದಳು. ಇದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾಳೆ. ಯಾವುದೇ ಸಮಸ್ಯೆಗೆ ಆತ್ಮ ಹತ್ಯೆ ಪರಿಹಾರವಲ್ಲ ಎಂದು ಟ್ವೀಟ್​ನಲ್ಲಿ ಬರೆಯಲಾಗಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಲವರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ಸಮಯಕ್ಕೆ ಸರಿಯಾಗಿ ಹೋಗಿ ಯುವತಿಯನ್ನು ರಕ್ಷಿಸಿದ ಆಟೋ ಚಾಲಕನಿಗೆ ಶ್ಲಾಘನೆ ವ್ಯಕ್ತವಾಗಿದೆ. ಆತ್ಮ ಹತ್ಯೆ ಒಂದೇ ಸಮಸ್ಯೆಗೆ ಪರಿಹಾರವಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ಸಾರಿದ್ದಾರೆ. ಸಮಸ್ಯೆ ಎದುರಾದಾಗ ದುಡುಕುವುದು ತಪ್ಪು, ತಾಳ್ಮೆಯಿಂದಿರಿ ನಿಮಗೂ ಒಳ್ಳೆಯ ಸಮಯ ಬರುತ್ತದೆ ಎಂದು ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಶಾಪಿಂಗ್​ಗೆಂದು 10 ನಿಮಿಷ ಜೀಪ್ ನಿಲ್ಲಿಸಿ ಹೋದ ವ್ಯಕ್ತಿ; ಮರಳಿದಾಗ ಎದುರುಗೊಂಡಿದ್ದು ಜೇನುನೊಣಗಳು!

Viral Video: ರಸ್ತೆ ಗುಂಡಿಗಳ ಸಮಸ್ಯೆಯನ್ನು ಹೀಗೂ ಹೇಳಬಹುದಾ?; ಮಜವಾದ ಈ ವಿಡಿಯೊ ನೋಡಿ

(Women trying to suicide on rail tracks auto driver saves her in Madhya Pradesh viral video)

Published On - 9:28 am, Wed, 29 September 21