ಅಕ್ಟೋಬರ್​ನಲ್ಲಿ ಬಿಡುಗಡೆಯಾಗಲಿರುವ ಬಿಗ್​ ಬಜೆಟ್ ಚಿತ್ರಗಳ ಬಗ್ಗೆ ಜಗ್ಗೇಶ್ ಹೇಳಿದ್ದೇನು?; ವಿಡಿಯೋ ನೋಡಿ

ಚಂದನವನದ ಹಿರಿಯ ನಟರಲ್ಲಿ ಒಬ್ಬರಾಗಿರುವ ಜಗ್ಗೇಶ್ ಅಕ್ಟೋಬರ್​ನಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾಗಳಿಗೆ ಶುಭ ಕೋರಿದ್ದಾರೆ. ಈ ವೇಳೆ ಅವರು ಆ ಚಿತ್ರಗಳ ನಿರ್ಮಾಪಕರೊಂದಿಗಿನ ತಮ್ಮ ಸ್ನೇಹವನ್ನು ನೆನಪಿಸಿಕೊಂಡಿದ್ದಾರೆ.

ಅಕ್ಟೋಬರ್​ನಲ್ಲಿ ಬಿಡುಗಡೆಯಾಗಲಿರುವ ಬಿಗ್​ ಬಜೆಟ್ ಚಿತ್ರಗಳ ಬಗ್ಗೆ ಜಗ್ಗೇಶ್ ಹೇಳಿದ್ದೇನು?; ವಿಡಿಯೋ ನೋಡಿ
ಜಗ್ಗೇಶ್ (ಸಂಗ್ರಹ ಚಿತ್ರ)


ನವರಾತ್ರಿಯ ಸಂದರ್ಭದಲ್ಲಿ ತೆರೆ ಕಾಣುತ್ತಿರುವ ಕನ್ನಡದ ಸ್ಟಾರ್ ನಟರಾದ ಸುದೀಪ್, ಶಿವರಾಜ್ ಕುಮಾರ್ ಹಾಗೂ ದುನಿಯಾ ವಿಜಯ್ ಚಿತ್ರಗಳಿಗೆ ನವರಸ ನಾಯಕ ಜಗ್ಗೇಶ್ ಶುಭ ಹಾರೈಸಿದ್ದಾರೆ. ಅವರ ಪುತ್ರ ಗುರುರಾಜ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಕಾಗೆ ಮೊಟ್ಟೆ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ. ಇದೇ ವೇಳೆ ಅಕ್ಟೋಬರ್​ನಲ್ಲಿ ಬಿಡುಗಡೆಯಾಗುತ್ತಿರುವ ದಿಗ್ಗಜ ನಟರ ಚಿತ್ರಗಳಿಗೆ ಒಳ್ಳೆಯದಾಗಲಿ ಎಂದಿದ್ದಾರೆ. ಇದೇ ವೇಳೆ ಅವರು ಆ ಚಿತ್ರಗಳ ನಿರ್ಮಾಪಕರುಗಳೊಡನೆ ತಮಗಿದ್ದ ಸ್ನೇಹವನ್ನು ನೆನಪಿಸಿಕೊಂಡಿದ್ದಾರೆ.

‘ಕೋಟಿಗೊಬ್ಬ 3’ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿದೆ ಎಂದು ಜಗ್ಗೇಶ್ ಹೇಳಿದ್ದಾರೆ. ಹಾಗೆಯೇ ಶಿವರಾಜ್ ಕುಮಾರ್ ತಮ್ಮಗೆ ಅಣ್ಣನಂತೆ ಎಂದೂ ಜಗ್ಗೇಶ್ ನುಡಿದಿದ್ದಾರೆ. ಕೊರೊನಾ ಎಲ್ಲರಿಗೂ ಬದುಕಿನ ಪಾಠ ಕಲಿಸಿದೆ. ಪ್ರಸ್ತುತ ಚಿತ್ರಮಂದಿರಗಳು ಮತ್ತೆ ಶೃಂಗರಿಸಿಕೊಂಡು ಪ್ರೇಕ್ಷಕರನ್ನು ಬರಮಾಡಿಕೊಳ್ಳಲು ಕಾದು ಕುಳಿತಿವೆ. ಎಲ್ಲರೂ ಆಗಮಿಸಿ ಚಿತ್ರಗಳನ್ನು ಗೆಲ್ಲಿಸಿಕೊಡಬೇಕು ಎಂದು ಇದೇ ವೇಳೆ ಜಗ್ಗೇಶ್ ಮನವಿ ಮಾಡಿದ್ದಾರೆ.

ಜಗ್ಗೇಶ್ ಮಾತನಾಡಿರುವ ವಿಡಿಯೊ ಇಲ್ಲಿದೆ:

ಪುತ್ರನ ಬಗ್ಗೆ ಜಗ್ಗೇಶ್ ಹೇಳಿದ್ದೇನು?

ಪುತ್ರ ಗುರುರಾಜ್ ಪ್ರತಿಭೆಯ ಕುರಿತಂತೆ ಮಾತನಾಡಿದ ಜಗ್ಗೇಶ್, ಆತ ನನ್ನ ಮೊದಲ ಪ್ರೇಕ್ಷಕ. ಸಣ್ಣ ವಯಸ್ಸಿನಿಂದಲೂ ನನ್ನನ್ನು ನೋಡಿ ಬೆಳೆದಿದ್ದಾನೆ ಎಂದಿದ್ದಾರೆ. ಪುತ್ರನ ಸಿನಿ ಪಯಣದ ಕುರಿತು ಮಾತನಾಡಿರುವ ಜಗ್ಗೇಶ್, ಪುತ್ರನಿಗೆ ಪರ ಭಾಷೆಯಲ್ಲಿ ಹತ್ತಾರು ಅವಕಾಶಗಳು ಬಂದಾಗಲೂ, ಬೇಡ ಎಂದು ನಿರಾಕರಿಸಿದೆ. ಅದು ಈಗಲೂ ನನ್ನನ್ನು ಕಾಡುತ್ತಿದೆ. ಹಾರುವ ಪಕ್ಷಿಯಂತೆ, ಆತನಿಗೆ (ಗುರುರಾಜ್) ತಡೆಯೊಡ್ಡದೇ ಉಳಿದಿದ್ದರೆ, ಎಲ್ಲಿಗೋ ಹೋಗಿ ತಲುಪುತ್ತಿದ್ದ. ಈಗಲೂ ಅದು ಬಹಳ ಕಾಡುತ್ತದೆ. ನನ್ನ ಜೀವನದ ಅತೀ ದೊಡ್ಡ ತಪ್ಪದು ಎಂದು ಜಗ್ಗೇಶ್ ನುಡಿದಿದ್ದಾರೆ.

ಇದೇ ವೇಳೆ ಜಗ್ಗೇಶ್, ಗುರುರಾಜ್ ಹೇಳಿರುವ ಕತೆ ತನಗೆ ಇಷ್ಟವಾಗಿದೆ ಎಂದಿದ್ದಾರೆ. ಜೊತೆಗೆ ಗುರುರಾಜ್ ಆಕ್ಷನ್ ಕಟ್ ಹೇಳಲಿರುವ ಆ ಚಿತ್ರದಲ್ಲಿ ತಾನು ನಟಿಸಲಿದ್ದೇನೆ ಎಂದೂ ಹೇಳಿದ್ದಾರೆ. ‘ಕತೆ ಬಹಳ ಅದ್ಭುತವಾಗಿದ್ದು, ಜಾಗತಿಕ ಮಟ್ಟದಲ್ಲಿಯೇ ಭಿನ್ನವಾದ ಕತೆಯಾಗಿದೆ. ನಿಜವಾಗಿಯೂ ಅಷ್ಟೊಳ್ಳೆಯ ಕತೆಯನ್ನು ಗುರುರಾಜ್ ಮಾಡಿದ್ದಾನೆ’ ಎಂದು ಜಗ್ಗೇಶ್ ಮಗನಿಗೆ ಭೇಷ್ ಎಂದಿದ್ದಾರೆ. ನಿಧಾನವಾಗಿ ಸಮಯ ತೆಗೆದುಕೊಂಡು ಆ ಚಿತ್ರ ಸೆಟ್ಟೇರಲಿದೆ ಎಂದೂ ಅವರು ಹೇಳಿದ್ದಾರೆ.

‘ಕಾಗೆ ಮೊಟ್ಟೆ’ ಚಿತ್ರದಲ್ಲಿ ಗುರುರಾಜ್ ಜಗ್ಗೇಶ್ ಜೊತೆ ಕೆ. ಮಾದೇಶ್ ಹಾಗೂ ಹೇಮಂತ್ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ತನುಜಾ ಅವರು ಈ ಚಿತ್ರದ ನಾಯಕಿ​. ಸಹ ನಿರ್ಮಾಪಕರಾಗಿ ಸುಬ್ಬರಾಯುಡು ಹಾಗೂ ಹೆಚ್.ಎನ್. ಶ್ರೀನಿವಾಸಯ್ಯ ಇವರ ಜೊತೆ ಕೈಜೋಡಿಸಿದ್ದಾರೆ. ಕೊಳ್ಳೇಗಾಲ, ಚಾಮರಾಜನಗರ ಅಲ್ಲದೆ ಬೆಂಗಳೂರಿನ ಹಲವಾರು ಸ್ಲಂಗಳಲ್ಲಿ ಚಿತ್ರದ ಶೂಟಿಂಗ್ ನಡೆಸಲಾಗಿದ್ದು, ಮೂವರು ಹುಡುಗರಿಗೆ ನಗರದಲ್ಲಿ ಬೆನ್ನೆಲುಬಾಗಿ ನಿಲ್ಲುವ ವೇಶ್ಯೆಯ ಪಾತ್ರವನ್ನು ನಟಿ ಸೌಜನ್ಯ ನಿರ್ವಹಿಸಿದ್ದಾರೆ. ಚಿತ್ರದಲ್ಲಿ 2 ಹಾಡುಗಳಿವೆ. ಶ್ರೀವತ್ಸ ಸಂಗೀತ ನಿರ್ದೇಶನ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ, ಕವಿರಾಜ್ ಸಾಹಿತ್ಯ ರಚಿಸಿದ್ದಾರೆ. ನಟ ಜಗ್ಗೇಶ್ ಒಂದು ಹಾಡು ಬರೆದಿರುವುದು ಮಾತ್ರವಲ್ಲದೆ, ಅದಕ್ಕೆ ತಾವೇ ದನಿಯಾಗಿದ್ದಾರೆ. ಪಿ.ಎಲ್. ರವಿ ಛಾಯಾಗ್ರಹಣ ಮಾಡಿದ್ದಾರೆ.

ಇದನ್ನೂ ಓದಿ:

ಜಗ್ಗೇಶ್​ ಪುತ್ರನ ‘ಕಾಗೆ ಮೊಟ್ಟೆ’ ಸಿನಿಮಾ ರಿಲೀಸ್​ಗೆ ರೆಡಿ; ಗುರುರಾಜ್​ ಚಿತ್ರದಲ್ಲಿ ರಜನಿಕಾಂತ್​ ಸ್ನೇಹಿತ ರಾಜ್ ಬಹದ್ದೂರ್​

Jaggesh: ನವರಸ ನಾಯಕನ ಜೀವನದಲ್ಲಿ ಅತೀ ದೊಡ್ಡ ನೋವೇನು?; ಜಗ್ಗೇಶ್ ಹೇಳಿದ ಸತ್ಯ

Hombale Films: ಹೊಂಬಾಳೆ 12ನೇ ಸಿನಿಮಾ ‘ರಾಘವೇಂದ್ರ ಸ್ಟೋರ್ಸ್’​ಗೆ ಜಗ್ಗೇಶ್​ ಹೀರೋ; ನಿರ್ದೇಶನ ಯಾರದ್ದು?

Click on your DTH Provider to Add TV9 Kannada